ಆರೋಗ್ಯ

ಕಾಮಾಲೆಗೆ ಯಾವ ಆಹಾರ ಉತ್ತಮ

ಕಾಮಾಲೆಯಿಂದ ಚರ್ಮ ಮತ್ತು ಕಣ್ಣಿನ ಬಿಳಿಯ ಭಾಗವು ಹಳದಿಯಾಗುವುದು. ಯಾವುದೇ ವಯೋಮಾನದ ವ್ಯಕ್ತಿಯಲ್ಲಿಯಾದರೂ ಈ ರೋಗಲಕ್ಷಣ ಕಾಣಿಸಿಕೊಳ್ಳಬಹುದು. ನವಜಾತ ಶಿಶುಗಳಲ್ಲಿ ಕಾಮಾಲೆಯು ಹೆಚ್ಚು ಕಂಡುಬರುತ್ತದೆ. ಶಿಶುಗಳಲ್ಲಿ ಕಾಣಿಸಿಕೊಳ್ಳುವ ಕಾಮಾಲೆಗೆ ನವಜಾತ ಶಿಶುಗಳ ಕಾಮಾಲೆ ಎಂದು ಕರೆಯುತ್ತಾರೆ. ಅದೆಲ್ಲಾ ಇರಲಿ. ಈಗ ಕಾಮಾಲೆಗೆ ಯಾವುದು ಉತ್ತಮ ಆಹಾರ ಎಂಬುದನ್ನು ತಿಳಿದುಕೊಳ್ಳೋಣ.

*ಎಳನೀರು ಕುಡಿಯುವುದರಿಂದ ದೇಹದ ಉಷ್ಣವನ್ನು ಕಡಿಮೆಗೊಳಿಸಿ ಮೂತ್ರ ವಿಸರ್ಜನೆ ಸರಾಗವಾಗಿ ಆಗುವಂತೆ ಮಾಡುತ್ತದೆ. ಹಾಗಾಗಿ ಈ ಕಾಯಿಲೆ ಬಂದಾಗ ಎಳನೀರು ಕುಡಿಯಬೇಕು.

*ಕಾಮಾಲೆ ರೋಗಿಗಳಿಗೆ ಟೊಮೇಟೊ ಒಂದು ಉತ್ತಮ ಆಹಾರ. ಇದರಲ್ಲಿರುವ ವಿವಿಧ ಆ್ಯಂಟಿ ಆಕ್ಸಿಡೆಂಟುಗಳು ಮತ್ತು ಹೇರಳವಾದ ವಿಟಮಿನ್‌ ಸಿ ಕಾಯಿಲೆಯನ್ನು ಹತೋಟಿಗೆ ತರಲು ನೆರವಾಗುತ್ತದೆ. ಟೊಮೇಟೊ ಹಣ್ಣಿನ ಸಿಪ್ಪೆ ಮತ್ತು ಬೀಜಗಳನ್ನು ತೆಗೆದು ತಿರುಳನ್ನು ಮಿಕ್ಸಿಯಲ್ಲಿ ಹಾಕಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಮಿಕ್ಸಿ ಮಾಡಬೇಕು. ಈ ಜ್ಯೂಸ್‌ ಅನ್ನು ಖಾಲಿ ಹೊಟ್ಟೆಯಲ್ಲಿ ಹನ್ನೆರಡು ದಿನ ಸತತವಾಗಿ ಕುಡಿಯುವುದರಿಂದ ಕಾಮಾಲೇ ಹತೋಟಿಗೆ ಬರುತ್ತದೆ.

*ಕಾಮಾಲೆಗೆ ಕಬ್ಬಿನ ಹಾಲು ಸಹ ಉತ್ತಮವಾದುದು. ದಿನಕ್ಕೊಂದು ಲೋಟ ಕಬ್ಬಿನ ಹಾಲು ಕುಡಿಯುವುದರಿಂದ ಯಕೃತ್‌ ತನ್ನ ಹಿಂದಿನ ಸ್ಥಿತಿಯನ್ನು ಪಡೆಯಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

*ಬಾರ್ಲಿ ನೀರನ್ನು ದಿನನಿತ್ಯ ಕುಡಿಯುವುದಿಂದ ಜೀರ್ಣಾಂಗ ವ್ಯವಸ್ಥೆಯು ಚೆನ್ನಾಗಿ ಕೆಲಸ ಮಾಡಲು ನೆರವಾಗುತ್ತದೆ. 3-4 ಲೀಟರ್‌ ನೀರಿಗೆ ಒಂದು ಕಪ್‌ ಬಾರ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಅಂದರೆ ಬಾರ್ಲಿ ಚೆನ್ನಾಗಿ ಬೇಯಬೇಕು. ಈ ನೀರನ್ನು ನಿಯಮಿತವಾಗಿ ಕುಡಿದರೆ ಕಾಮಾಲೆ ಕಡಿಮೆಯಾಗಿ ದೇಹವು ಮೊದಲಿನ ಸ್ಥಿತಿಗೆ ಬರುವುದು.

*ಕಲ್ಲಂಗಡಿ ತಿನ್ನುವಾಗ ಅಕಸ್ಮಾತ್‌ ಬೀಜ ಹೊಟ್ಟೆಗೆ ಹೋದರೂ ಯೋಚಿಸಬೇಕಿಲ್ಲ. ಇದು ಉರಿಯೂತವನ್ನು ಕಡಿಮೆ ಮಾಡಿ, ಮೂತ್ರವಿಸರ್ಜನೆಗೆ ಸಹಾಯ ಮಾಡುತ್ತದೆ.

 

Tags

Related Articles

One Comment

Leave a Reply

Your email address will not be published. Required fields are marked *