
ಸುದ್ದಿಗಳು
ಕವಿತಾ ಗೌಡ ದೂರಿನನ್ವಯ ಆ್ಯಂಡಿ ಪರ ಬ್ಯಾಟ್ ಬೀಸಿದ ಮುರುಳಿ
ಬೆಂಗಳೂರು, ಫೆ.12:
ಬಿಗ್ ಬಾಸ್ ಮನೆ ಒಳಗೆ ಆಗಿದ್ದ ಜಗಳ ಇದೀಗ ಬೀದಿಗೆ ಬಿದ್ದು, ದೂರು ಕೊಡುವವರೆಗೂ ಹೋಗಿದೆ. ಆ್ಯಂಡಿ ನಟಿ ಕವಿತಾ ಗೌಡಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಮಾಡುತ್ತಿದ್ದಾರೆಂದು ಆರೋಪಿಸಿ ನಿನ್ನೆಯಷ್ಟೆ ಈ ನಟಿ ಮಹಿಳಾ ಆಯೋಗಕ್ಕೆ ದೂರು ದಾಖಲು ಮಾಡಿದ್ದರು. ಇದೀಗ ಆ್ಯಂಡಿ ಪರವಾಗಿ ಒಗ್ಗರಣೆ ಡಬ್ಬಿ ಮುರುಳಿ ಬ್ಯಾಟ್ ಬೀಸುವ ಮೂಲಕ ಆ್ಯಂಡಿ ತಪ್ಪೆನು ಇಲ್ಲ ಅನ್ನೋ ಮಾತನ್ನು ಆಡಿದ್ದಾರೆ.
ಆ್ಯಂಡಿ ಪರ ಮಾತನಾಡಿದ ಪ್ರತಿಸ್ಪರ್ಧಿ
ಹೌದು, ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು ದಾಖಲು ಮಾಡಿರುವುದರಿಂದ ಆ್ಯಂಡಿ ವಿಚಾರಣೆ ಅಗತ್ಯ ಇದೆ ಅಂತಾ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಕೂಡ ಹೇಳಿದ್ದರು. ಇದೀಗ ಈ ಬೆನ್ನಲ್ಲೇ ಆ್ಯಂಡಿ ಕೂಡ ತಮ್ಮ ಮೇಲಿನ ದೂರು ವಿಚಾರವಾಗಿ ನನ್ನದೇನು ತಪ್ಪಿಲ್ಲ ಅಂತಾ ಮಾತನಾಡಿದ್ದರು. ಇದೀಗ ಆ್ಯಂಡಿ ಪರ ಮುರುಳಿ ಮಾತನಾಡಿದ್ದು ಆತ ಆತರಹದ ಹುಡುಗ ಇವರಲ್ಲ ಎಂದು ಹೇಳಿದ್ದಾರೆ.
ಆ್ಯಂಡಿ ಒಳ್ಳೆಯ ಹುಡುಗ ಎಂದ ಮುರುಳಿ
ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಮುರುಳಿ, ಆ್ಯಂಡಿ ಅಂಥಹ ಹುಡುಗನಲ್ಲ. ಕಪ್ಪಗೆ ದಪ್ಪಗೆ ಇದ್ದಾನೆ ಅಂದ ಮಾತ್ರಕ್ಕೆ ಈ ರೀತಿ ಮಾತನಾಡುವುದು ತಪ್ಪಾಗುತ್ತದೆ. ಯಾವತ್ತೋ ನಡೆದಿರುವುದನ್ನು ಇಂದು ಆರೋಪ ಮಾಡುವುದು ತಪ್ಪಾಗುತ್ತದೆ. ತಪ್ಪನ್ನು ತಿದ್ದಿದ್ದಾರೆ. ಅಷ್ಟೇ ಅಲ್ಲ ಅಲ್ಲಿ ನಡೆದಿದ್ದು ಆಕಸ್ಮಿಕ, ಹಾಗಂತ ಹೀಗೆ ಮಾಡುವುದು ತಪ್ಪು. ಆಟವನ್ನು ಗೆಲ್ಲಬೇಕೆಂದರೆ ಎಲ್ಲರು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದರು. ಆ್ಯಂಡಿ ಕಷ್ಟಗಳನ್ನು ನೋಡಿದ್ದವರು. ಅವರು ಹೀಗೆ ಮಾಡಲು ಸಾಧ್ಯವಿಲ್ಲ. ಶೋ ಮುಗಿದು ತುಂಬಾ ದಿನಗಳಾಗಿವೆ. ಆದರೆ ಈಗ ಆರೋಪ ಮಾಡುವುದು ತಪ್ಪು. ಆ್ಯಂಡಿ ಒಳ್ಳೆಯವರು ಎನ್ನುವ ಮೂಲಕ ಆ್ಯಂಡಿ ಪರ ಮಾತನಾಡಿದ್ದಾರೆ ಮುರುಳಿ.
#biggbossseason6kannada #biggboss #sandalwood #kavithagowda #kavithagowdaandandy #oggaranedabbimurali #balkaninews