ಸುದ್ದಿಗಳು

ರಶ್ಮಿ ಅಯ್ಯರ್ : ಹನುಮಾನ್ ಚಿತ್ರವಿರುವ ಕ್ಯಾಬ್‌ ಚಾಲಕರು ಅತ್ಯಾಚಾರಿಗಳು!

‘ಹಿಂದುತ್ವದ ಸಂಕೇತವಾದ ‘ಜೈ ಹನುಮಾನ್’ ಚಿತ್ರವನ್ನು ಅಂಟಿಸಿಕೊಂಡಿರುವ ಓಲಾ ಹಾಗೂ ಉಬರ್ ಕಂಪನಿಯ ಕ್ಯಾಬ್‌ಗಳಲ್ಲಿ ಪ್ರಯಾಣಿಸಬೇಡಿ. ಅದರ ಚಾಲಕರು ಬಹುಷಃ ಅತ್ಯಾಚಾರಿಗಳಾಗಿರುವ ಸಾದ್ಯತೆ ಇದೆ ಎಂದು ಕೇರಳದ ‘ಕಿಸ್‌ ಆಫ್‌ ಲವ್‌’ ಕಾರ್ಯಕ್ರಮದ ರಶ್ಮಿ ಅಯ್ಯರ್, ತಮ್ಮ ಫೇಸ್‌ಬುಕ್‌ ನಲ್ಲಿ ಹೇಳಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ವೇಶ್ಯಾವಾಟಿಕೆ ಆರೋಪದಡಿಯಲ್ಲಿ ಪತಿ ರಾಹುಲ್ ಪಶುಪಾಲನ್ ಸಮೇತ ರಶ್ಮಿಯನ್ನು ಕೇರಳದ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ಪಡೆದಿರುವ ರಶ್ಮಿ, ಸದ್ಯ ಬೆಂಗಳೂರಿನಲ್ಲೇ ನೆಲೆಸಿರುತ್ತಾರೆ. ಏಪ್ರಿಲ್ 16ರಂದು ‘ರುದ್ರ ಹನುಮಾನ್‌’ ಚಿತ್ರವಿರುವ ಕ್ಯಾಬ್‌ನ ಫೋಟೊ ಸಹಿತ ಪೋಸ್ಟ್‌ ಪ್ರಕಟಿಸಿ ಕ್ಯಾಬ್ ಚಾಲಕರನ್ನು ಅತ್ಯಾಚಾರಿಗಳಿಗೆ ಹೋಲಿಸಿದ್ದಾರೆ. ಪ್ರಸ್ತುತ ಈ ಕುರಿತು  ಸಾಮಾಜಿಕ ಜಾಲತಾಣಗಳಲ್ಲಿ ಪರ– ವಿರೋಧ ಚರ್ಚೆ ನಡೆಯುತ್ತಿವೆ.

‘ನಾನು ಬೆಂಗಳೂರಿನ ಉಬರ್/ಓಲಾ ಕ್ಯಾಬ್ ಬಳಸುತ್ತಿರುವ ಗ್ರಾಹಕಿ. ಸುಮಾರು ಸಲ ನಾನೊಬ್ಬಳೇ ಕ್ಯಾಬ್‌ನಲ್ಲಿ ಪ್ರಯಾಣ ಮಾಡುತ್ತಿರುತ್ತೇನೆ.  ಹಾಗು ನನ್ನ ಜೊತೆ ಕೆಲಸ ಮಾಡಿಕೊಂಡಿರುವ ಮಹಿಳಾ ಸಹೋದ್ಯೋಗಿಗಳು ಕ್ಯಾಬ್‌ನಲ್ಲಿ ಒಬ್ಬೊಬ್ಬರೇ ಪ್ರಯಾಣಿಸುತ್ತಿರುತ್ತಾರೆ’ ಎಂದು ರಶ್ಮಿ ರಶ್ಮಿ ಅಯ್ಯರ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಕೆಲವು ಕ್ಯಾಬ್‌ಗಳ ಮೇಲೆ ಹಿಂದೂತ್ವದ ಸಂಕೇತವುಳ್ಳ ‘ರುದ್ರ ಹನುಮಾನ್’ ಮುಂತಾದ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಸಾಕಷ್ಟು ಹಿಂದೂತ್ವ ಸಂಘಟನೆಗಳು ಮತ್ತು ಮುಖಂಡರು, ಕಠುವಾದಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಪರವಾಗಿ ವಾದಿಸುತ್ತಿದ್ದಾರೆ. ನಾನು ಮತ್ತು ನನ್ನ ಸಹೋದ್ಯೋಗಿಗಳು, ಹಿಂದುತ್ವದ ಸಂಕೇತವುಳ್ಳ ಕ್ಯಾಬ್‌ನಲ್ಲಿ ಪ್ರಯಾಣಿಸಲು ಭಯಪಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.’

‘ಹಿಂದುತ್ವದ ಸಂಕೇತ, ಭಾವಚಿತ್ರಗಳಿರುವ ಕ್ಯಾಬ್‍ಗಳಲ್ಲಿ ನಾನು ಸಂಚರಿಸುವುದಿಲ್ಲ. ಈ ರೀತಿಯ ಕ್ಯಾಬ್‍ಗಳು ಬಂದರೆ, ನನ್ನ ಬುಕ್ಕಿಂಗ್ ರದ್ದು ಮಾಡುತ್ತೇನೆ ಹಾಗು ರದ್ದು ಮಾಡಿದ್ದಕ್ಕೆ ಕಂಪನಿಯವರು ಹಣ ಕೇಳಿದರೆ ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ಏಕೆಂದರೆ, ಅತ್ಯಾಚಾರಿಗಳಿಗೆ ಹಾಗೂ ಅದನ್ನು ಬೆಂಬಲಿಸುವವರಿಗೆ ನನ್ನ ಹಣ ನೀಡಲು ಇಷ್ಟವಿಲ್ಲ’ ಎಂದು ರಶ್ಮಿ ಅಯ್ಯರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

 

Tags

Related Articles

One Comment

  1. ಸಿಕ್ಕಿಬಿದ್ದಿರೋದೇ ಸೆಕ್ಸ್ ರಾಕೆಟ್ ನಡೆಸುವಾಗ. ಹಣಕ್ಕೆ ದೇಹವನ್ನೇ ಮಾರಿಕೊಳ್ಳೋ ಬೀದಿನಾಯಿ ನಮ್ಮ ಧರ್ಮದ ಬಗ್ಗೆ ಮಾತನಾಡ್ತಾಳೆ. ನಿಜವಾದ ರೇಪಿಸ್ಟ್ ನಿನ್ನಂತಹ ಜನರು. ಅದೆಷ್ಟು ಜನರ ಬಾಳು ಹಾಳು ಮಾಡಿದೀರೋ ಲೆಕ್ಕವೇ ಇಲ್ಲ ಬಿಡು.

Leave a Reply

Your email address will not be published. Required fields are marked *