ಸುದ್ದಿಗಳು

ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿಯೂ “ಯಜಮಾನ” ನದ್ದೇ ಕಾರುಬಾರು

ಬೆಂಗಳೂರು, ಫೆ.11:

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾ ಅಭಿಮಾನಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನದನ್ನೇ ಟ್ರೇಲರ್ ಮೂಲಕ ನೀಡಿದ್ದಾರೆ. ದರ್ಶನ್ ನ ವಿಭಿನ್ನ ಗೆಟಪ್ ಗೆ ಅಭಿಮಾನಿಗಳು ಶಿಳ್ಳೆ ಕೇಕೆ ಹಾಕುವಂತಾಗಿದೆ. ಯಜಮಾನ ಸೆಟ್ಟೇರಿದಾಗಿನಿಂದಲೂ ಕೂಡ ಅಭಿಮಾನಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಿಹಿಯನ್ನು ನೀಡುತ್ತಿದೆ. ಅಷ್ಟೇ ಅಲ್ಲ ಈ ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇದೀಗ ಈ ಸಿನಿಮಾ ಟ್ರೇಲರ್ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಇದೀಗ ಈ ಟ್ರೇಲರ್ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದೆ.

ಟ್ರೆಂಡಿಂಗ್ ನಲ್ಲಿ ನಂಬರ್ 1

‘ಯಜಮಾನ’ ಟ್ರೇಲರ್ ಇದೀಗ ಬಾರೀ ಕ್ರೇಜ್ ನನ್ನೇ ಹುಟ್ಟು ಹಾಕಿದೆ. ಅಷ್ಟೇ ಅಲ್ಲ ಈ ಟ್ರೇಲರ್ ನಲ್ಲಿ ಯಜಮಾನ ಅದ್ಬುತವಾಗಿ ನಟಿಸಿದ್ದಾರೆ. ಶತ್ರುಗಳನ್ನು ಹುಟ್ಟು ಅಡಗಿಸುವ ರೀತಿ, ಫೈಟಿಂಗ್, ಮಾಸ್ ಲುಕ್, ಹಳ್ಳಿಯ ವಾತಾವರಣ ಹೀಗೆ ಎಲ್ಲವೂ ಕೂಡ ಸೂಪರ್ ಆಗಿ ಮೂಡಿ ಬಂದಿದೆ. ಕೌಟುಂಬಿಕ ಕಥೆಯನ್ನೊಳಗೊಂಡ ಯಜಮಾನ ಟ್ರೇಲರ್ ಗೆ ಅಭಿಮಾನಿಗಳು ಫಿದಾ ಆಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಮಾರ್ಚ್ 1 ರಂದು ತೆರೆಗೆ

ಹೌದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರೇಲರ್ ಮಿಲಿಯನ್ ಗೂ ಅಧಿಕ ವೀವ್ಸ್ ಪಡೆದುಕೊಂಡು ನಂ 1 ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲ ಅಭಿಮಾನಿಗಳು ಮತ್ತೆ ಮತ್ತೆ ಈ ಟ್ರೇಲರ್ ನೋಡುವಂತೆ ಮಾಡಿದೆ. ಈ ಮೂಲಕ ಸಿನಿಮಾ  ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗಾಗಲೇ 6 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಇದೇ  ಮಾರ್ಚ್ 1 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮೊದಲೇ “ಯಜಮಾನ” ನಿಗೆ ಹಾರ ತುರಾಯಿ

#yajamana #yajamanakannadamovie #yajamanakannadamovietrailer #balkaninews #darshanyajamana #darshanandrashmikamandanna

Tags

Related Articles