ಬಾಲ್ಕನಿ ರುಚಿಸುದ್ದಿಗಳು

ಕೋರಮಂಗಲದಲ್ಲಿ ಈಗ ಸಿಗಲಿದೆ ರಾಜಸ್ಥಾನದ ರಾಜ ರುಚಿ

ರಾಜಸ್ಥಾನದ ವಿವಿಧ ಬಗೆಯ ಊಟಗಳನ್ನು ಸವಿಯುವ ಮನಸ್ಸು ಆಗಿದಿಯ ? ಹಾಗಿದ್ದರೆ ಕೋರಮಂಗಲದಲ್ಲಿ ಹೊಸದಾಗಿ ಶುರು ಆಗಿರುವ ‘ಖಮ್ಮ ಘನಿ ಸಾ’ಗೆ ತಪ್ಪದೆ ಭೇಟಿ ಕೊಡಿ . ಇಲ್ಲಿ ರಾಜಸ್ಥಾನದ ಶುದ್ಧ ಸಸ್ಯಾಹಾರಿ ಊಟ ಜೊತೆಗೆ ಕೆಲವು ಗುಜುರಾತಿ ಹಾಗೂ ಪಂಜಾಬಿ ಖಾದ್ಯಗಳು ಸಿಗುತ್ತದೆ.

ಬೆಂಗಳೂರಿನ ನಿವಾಸಿ ವಿಜಯ್ ಬತೀಜ ಅವರ ಕನಸಿನ ಕೂಸು ಇದು .”ನನಗೆ ಗ್ಲುಟಿನ್ ಅಂಶ ಇರುವ ಖಾದ್ಯ ದೇಹಕ್ಕೆ ಆಗಿ ಬರಲ್ಲ ‘ಖಮ್ಮ ಘನಿ ಸಾ’ ಶುರು ಮಾಡಲು ಕಿಚ್ಚು ಹತ್ತಿದ್ದೆ  ಈ ಕಾರಣಕ್ಕಾಗಿ ನಮ್ಮಲ್ಲಿ ಗ್ಲುಟಿನ್ ಫ್ರೀ ಫುಡ್ ಸಿಗುತ್ತದೆ’ ಅಂತಾರೆ  ಹೋಟೆಲ್ ನ  ಮಾಲೀಕ ವಿಜಯ್.

ಈ ಹೋಟೆಲ್ ಕನಸಿಗೆ ಅವರಿಗೆ ಸಾಥ್ ನೀಡಿದ್ದು ವಿಜಯ್ ರವರ ಪತ್ನಿ ಶ್ರುತಿ ಹಾಗೂ ಪೂರ್ವೇಶ್ ಜೈನ ಎಂಬ ಸ್ನೇಹಿತ. ಹಾಗೆಯೇ ಈ ಪೂರ್ವೇಶ್ ರವರು ಈ ‘ಖಮ್ಮ ಘನಿ ಸಾ’ಗೆ ಸಹ ಮಾಲೀಕ ಕೂಡ ಹೌದು.

ಈ ಹೋಟೆಲ್ ನ ವಿಶೇಷವೆಂದರೆ ನೀವು ರಾಜಸ್ಥಾನದ ಮನೆ ಊಟ ಸವಿದಂತೆ ಅನುಭವ ಆಗುತ್ತದೆ. ಇನ್ನು ಹೋಟೆಲ್ ಒಳಗೆ ಕೂತರೆ ನೀವು ರಾಜಸ್ಥಾನದ ಮನೆಯೊಂದರೊಳಗೆ ಕುಳಿತ ಅನುಭವ ನಿಮಗೆ ಆಗುತ್ತದೆ. ಅಂದ ಹಾಗೆ ಈ ಹೋಟೆಲ್ ಅಲ್ಲಿ ನೀವು ಮಿಸ್ ಮಾಡದೆ  ತಿನ್ನ ಬೇಕಾದ ಕೆಲವು ತಿನುಸುಗಳು ಹೀಗಿವೆ.

ವೆಜ್ ರಾಯ್ತ , ಪೈನ್ ಆ್ಯಪಲ್ ರಾಯ್ತ, ಬೂಂದಿ ರಾಯ್ತ, ಮೊಸರು, ಬೆಣ್ಣೆ, ದೇಸಿ ತುಪ್ಪ, ಗ್ರೀನ್ ಸಲಾಡ್, ಮಸಾಲ ಪಾಪಡ್, ಮಸಾಲ ರೋಸ್ಟ್ ಪಾಪಡ್, ರೋಸ್ಟ್ ಡ್ ಪಾಪಡ್

ಜೀರಾ ರೈಸ್, ಸ್ಟೀಮ್ ಡ್ ಬಾಸುಮತಿ ಘೀ ರೈಸ್, ಪನೀರ್ ಬಿರಿಯಾನಿ, ವೆಜ್ ಹೈದರಾಬಾ ದಿ ಬಿರಿಯಾನಿ, ವೆಜ್ ಬಿರಿಯಾನಿ, ವೆಜ್ ಪಲಾವ್, ಜೋಧಪೂರಿ ಕಾಬುಲಿ ಚಾವಲ್, ಪಂಚ್ ಮೇಲ್, ದಾಲ್ ತಡ್ಕ ಕಿಚಿಡಿ, ಗಟ್ಟೇಕಿ ಪಲಾವ್

ಮಾರ್ವಾರಿ ಬಾಟಿ ಪ್ಲೇನ್, ಮಾರ್ವಾರಿ ಬಾಟಿ ಮಸಾಲ, ಬಾಜ್ರನ ರೊಟ್ಲ, ಕೋಭಾ ರೋಟಿ, ತುಕ್ಕಡ್ ಪ್ಲೇನ್, ತುಕ್ಕಡ್ ದೇಸಿ ಘೀ, ಪುಲ್ಕ ಪ್ಲೇನ್, ಪುಲ್ಕ ದೇಸಿ ಘೀ, ಪುಲ್ಕ ಬಟರ್, ರೋಟಿ ಪ್ಲಾಟ್ಟರ್ ಹಾಗೆಯೇ ವಿಕ್ರಂ ಬಾಯಿ  ಕಿ  ಚಾಯ್ , ಜಿಲೇಬಿ , ಕಚೋರಿ ಹಾಗೂ ಸಮೋಸ..

ಇನ್ನು ನೀವು ಭೇಟಿ ಕೊಡಬೇಕಾದ ವಿಳಾಸ ಅಂದರೆ Address: Khamma ghani sa KHB Colony, 5th Block, Koramangala, Bengaluru, Karnataka 560095.  +919900002655 Vijay

ದಶಕದ ಸಂಭ್ರಮದಲ್ಲಿ ಕನ್ನಡದ ದೀಪಿಕಾ ಪಡುಕೋಣೆ

#KhammaGhaniSa #KhammaGhaniSaHotel #KannadaSuddigalu

Tags