ಬಾಲ್ಕನಿ ವಾರ ಭವಿಷ್ಯಬಾಲ್ಕನೀ ಭವಿಷ್ಯವಾರ ಭವಿಷ್ಯ

ಬಾಲ್ಕನಿ ವಾರ ಭವಿಷ್ಯ:14-10-2018 ರ ಭಾನುವಾರ ದಿಂದ 20-10-2018 ಶನಿವಾರದ ತನಕ

ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿ...

14-10-2018 ರ ಭಾನುವಾರ ದಿಂದ 20-10-2018 ಶನಿವಾರದ ತನಕ


ಮೇಷ – ಅತಂತ್ಯ ಜಂಜಾಟದಿಂದ ಪ್ರಾರಂಭವಾಗುವ ವಾರ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ/ಕುಟುಂಬ ವರ್ಗದಲ್ಲಿ ಅನಾರೋಗ್ಯ 
ಹಾಗೂ ಖರ್ಚು. ಸಮಯ ಪರಿಪಾಲನೆಯಲ್ಲಿ ಎಡವುವಿರಿ. ವಸ್ತುಗಳನ್ನು ಖರೀದಿಸುವ ಆಲೋಚನೆಯಲ್ಲಿ ಇರುವ ನೀವು ಮುಂದೂಡಿದರೆ ಒಳಿತು. ವಸ್ತುಗಳು ಕಳುವಾಗಬಹುದು. ವಿಮೆ ಕ್ಲೈಮ್ ಮಾಡುವ ಪ್ರಸಂಗ ಒಂದು ಬರಬಹುದು. ಉತ್ತರಾರ್ಧದಲ್ಲಿ ಕೆಲಸದ ಒತ್ತಡ ನಿಭಾಯಿಸುವಲ್ಲಿ ಎಡವುವಿರಿ. ಉದ್ಯೋಗಸ್ಥರಿಗೆ ಕಛೇರಿಯಲ್ಲಿ ಹಾಗೂ ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಕಿರಿಕಿರಿ. ತಾಳ್ಮೆಯಿಂದಿರಿ. ವಿದ್ಯಾರ್ಥಿಗಳಿಗೆ ಶಿವನ ಆರಾಧನೆಯಿಂದ ಏಕಾಗ್ರತೆ ಹೆಚ್ಚುವುದು.

ವೃಷಭ – ಚಟುವಟಿಕೆಗಳಿಂದ ಕೂಡಿ ಶುಭವಾಗಿ ವಾರ ಪ್ರಾರಂಭವಾದರೂ ಸ್ವಲ್ಪ ಮಟ್ಟಿಗೆ ಮಾನಸಿಕ ಅಶಾಂತಿಯನ್ನು ತಂದುಕೊಳ್ಳುವಿರಿ. ದೂರದ ಸ್ನೇಹಿತರೊಂದಿಗೆ ಅಥವಾ ಸಂಬಂಧಿಗಳೊಂದಿಗೆ ಮಾತುಕತೆ. ಮಕ್ಕಳ ಮೇಲೆ ಅತಿಯಾದ ಶಿಸ್ತನ್ನು ಹೇರಬೇಡಿ. ಜ್ಞಾನಾರ್ಜನೆಯ ವಾರ. ಕುಟುಂಬ ವರ್ಗದವರ ಹಾಗು ಸ್ನೇಹಿತರನ್ನು ಭೇಟಿಯಾಗುವಿರಿ. ವಾರಾಂತ್ಯದಲ್ಲಿ ಸೊಂಟ/ಹೊಟ್ಟೆ ನೋವಿನಿಂದ ಬಳಲುವಿರಿ. ಧನಾರ್ಜನೆಗೆ ತಲೆಕೆಡಿಸಿಕೊಳ್ಳುವಿರಿ ಹಾಗೂ ಪ್ರಯತ್ನಕ್ಕೆ ಉತ್ತಮ ಸಮಯ.

ಮಿಥುನ – ಪ್ರತಿಷ್ಠೆಗಾಗಿ ಖರ್ಚುಗಳು ಹೆಚ್ಚುವವು. ನೀವೆನಿಸಿದಂತೆ ಕೆಲಸ ಕಾರ್ಯಗಳು ಮುಂದುವರೆಯದು. ಸ್ವಲ್ಪ ನಿಧಾನ, ವಿನಾಕಾರಣ ಕೆಲಸದ ಸ್ಥಳಗಳಲ್ಲಿ ಸಿಡಿಮಿಡಿಗೊಳ್ಳುವಿರಿ. ನವ ವಿವಾಹಿತರಲ್ಲಿ ತಾಳ್ಮೆಯಿರಲಿ. ಕುಟುಂಬದಲ್ಲಿ ಅನವಶ್ಯಕ ವಿಷಯಗಳಿಗೆ ಚರ್ಚೆ ಆಗಲಿದೆ, ಸಂಯಮದಲ್ಲಿರಿ. ಉತ್ತರಾರ್ಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಬಾಂಧವ್ಯ ವೃದ್ಧಿ. ವ್ಯಾಪಾರಸ್ಥರಿಗೆ ಸರ್ಕಾರಿ ಮಟ್ಟದಲ್ಲಿ ಲಾಭ. ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರು. ನಿಮ್ಮ ಆರೋಗ್ಯದ ಮೇಲು ಗಮನವಿರಲಿ. ವೈರಸ್ ಜ್ವರ ಬಾಧಿಸಬಹುದು.

ಕಟಕ – ಸ್ನೇಹಗಳು ಪ್ರೀತಿಯಾಗಿ ತಿರುಗುವ ವಾರ, ಮುಂದುವರೆದರೆ ಮದುವೆ ಪ್ರಸ್ತಾಪನೆಯ ಮಾತುಗಳು ಬರಬಹುದು. ರಹಸ್ಯವಾಗಿ ಉಳಿಸಿಕೊಂಡಿದ್ದ ಕೆಲವು ವಿಷಯಗಳು ನಿಮ್ಮ ಕುಟುಂಬಕ್ಕೆ ತಿಳಿಯಪಡುವ ವಾರ. ಕ್ರೆಡಿಟ್ ಕಾರ್ಡ್ ನನ್ನು ಹೆಚ್ಚು ಬಳಸುವ ವಾರ. ಕುಟುಂಬ ವರ್ಗದವರಿಗೆ ನಿಮ್ಮ ಮೇಲೆ ನಂಬಿಕೆ ಹಾಗು ಧೈರ್ಯ ಹೆಚ್ಚಾಗುವ ವಾರ. ಹಾಗಾಗಿಯೂ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ಉತ್ತಮ ವಾರ. ಷೇರು ವ್ಯವಹಾರದವರು ಈ ವಾರ ಹೂಡಿಕೆಯಿಂದ ದೂರವಿರಿ.

ಸಿಂಹ – ಬಹಳ ದಿನಿಗಳಿಂದ ಶುಭ ದಿನಗಳನ್ನು ಎದುರು ನೋಡುತ್ತಿದ್ದ ನಿಮಗೆ ಕೊಂಚ ಮಟ್ಟಿಗೆ ನಿರಾಳವಾಗುವ ವಾರವಾದರೂ ತಾಳ್ಮೆಯಿಂದಿರಿ. ಆತುರದ ನಿರ್ಧಾರ ಸಲ್ಲದು. ಹಣಕಾಸಿನ ವ್ಯವಸ್ಥೆ ಆಗುವುದು. ಕುಟುಂಬ ವರ್ಗದವರಿಗಾಗಿ ಹಣ ಖರ್ಚು. ಮನೆ ಬದಲಾಯಿಸುವಿರಿ ಅಥವಾ ಆಸ್ತಿಯ ವಿಷಯವಾಗಿ ಹೂಡಿಕೆ ಮಾಡಲು ಚರ್ಚೆ ಆಗುವುದು. ಹಿರಿಯರಿಂದ ಆಸ್ತಿ ನಿರೀಕ್ಷಿಸುತ್ತಿದ್ದ ಕೆಲವರಿಗೆ ಶುಭ ಸುದ್ದಿ. ಕೋರ್ಟು ಮೆಟ್ಟಿಲು ಏರಿದ್ದವರಿಗೆ ಶುಭ ಸುದ್ದಿ. ಹಳೆಯ ವಾಹನ ಕೊಳ್ಳಲು ಯೋಚಿಸುವಿರಿ ಅಥವಾ ಹಳೆಯ ವಸ್ತುಗಳನ್ನು ಕೊಳ್ಳುವಿರಿ ಅಥವಾ ಅದರ ರಿಪೇರಿಗಾಗಿ ಹಣ ವ್ಯಯ.

ಕನ್ಯಾ – ಸೋದರ ಮಾವ ಅಥವಾ ಅವರ ಕುಟುಂಬ ವರ್ಗವನ್ನು ಭೇಟಿ ಮಾಡುವಿರಿ. ಸಂಗಾತಿಯ ಅಣತಿಯಂತೆ ಅಥವಾ ಸಲಹೆಯ ಮೇರೆಗೆ ಹೂಡಿಕೆಗೆ ಮುಂದಾಗುವಿರಿ. ನಿಮ್ಮ ಘನತೆಗೆ ತಕ್ಕಂತೆ ನಡೆದು ಕೊಳ್ಳಲು ವಿಫಲರಾಗುವಿರಿ. ವಾರಾಂತ್ಯಕ್ಕೆ ಹಠಾತ್ ಆಗಿ ವೈದ್ಯರನ್ನು ಕಾಣಬೇಕಾಗಬಹುದು. ನಿಮ್ಮ ಸಲಹೆಗಳು ನಿಮ್ಮ ಸ್ನೇಹಿತರಿಗೆ ಅನುಕೂಲವಾಗುವ ವಾರ. ವಾಹನದಿಂದ ಕಿರಿಕಿರಿ ಅಥವಾ ಖರ್ಚು. ಪ್ರೀತಿ-ಪ್ರೇಮದ ವಿಷಯವಾಗಿ ವೃತ ಬೇಸರ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಅಗತ್ಯ. ಏಕಾಗ್ರತೆ ಕಳೆದುಕೊಳ್ಳುವ ವಾರ.

ತುಲಾ – ಕೊಂಚ ಮಟ್ಟಿಗೆ ವಿಶ್ರಾಂತಿ ಹಾಗು ನೆಮ್ಮದಿಯಿಂದ ವಾರ ಪ್ರಾರಂಭವಾದರೂ ವಾರದ ಮಧ್ಯಭಾಗದಲ್ಲಿ ಕುಟುಂಬ, ಉದ್ಯೋಗ ಹಾಗೂ ವ್ಯಾಪಾರ ಸ್ಥಳಗಳಲ್ಲಿ ಕಿರಿಕಿರಿ. ತಾಳ್ಮೆ ಇರಲಿ. ಆತುರದ ನಿರ್ಧಾರಗಳು ಬೇಡ. ಉತ್ತಮ ಧನಾರ್ಜನೆಯ ವಾರ. ಕುಟುಂಬ ಹಾಗೂ ಸ್ನೇಹಿತವರ್ಗವನ್ನು ಭೇಟಿ ಮಾಡುವ ವಾರ. ಹಿರಿಯರೊಬ್ಬರ ಸಹಾಯ/ಮಾರ್ಗದರ್ಶನ ದೊರೆಯುವ ವಾರ. ಸ್ತ್ರೀಯರಿಂದ ಸಮಸ್ಯೆ ಅಥವಾ ಕಿರಿಕಿರಿ ಅನುಭವಿಸುವಿರಿ. ವಾರಾಂತ್ಯಕ್ಕೆ ಹೆಚ್ಚಿನ ಓಡಾಟ ಹಾಗು ವೃಥಾ ಖರ್ಚು. ದೇವಿ ಆರಾಧನೆಯಿಂದ ಒಳಿತು.

ವೃಶ್ಚಿಕ – ಬಹು ದಿನಗಳಿಂದ ಪ್ರಯತ್ನಿಸುತ್ತಿದ್ದ ಕಾರ್ಯವೊಂದು ಕೈಗೂಡಲಿದೆ. ಸುಖ ಹಾಗೂ ಸಂತೋಷದಿಂದ ವಾರ ಪ್ರಾರಂಭವಾದರೂ ಮಧ್ಯ ಹಾಗೂ ವಾರಾಂತ್ಯದಲ್ಲಿ ಕುಟುಂಬ/ಉದ್ಯೋಗ ಸ್ಥಳದಲ್ಲಿ ಮನಸ್ಸಿಗೆ ಕಿರಿಕಿರಿ. ಮೂಳೆ ತಜ್ಞರನ್ನು ಭೇಟಿಮಾಡುವ ವಾರ. ಕೊಟ್ಟಿರುವ ಸಾಲ ಹಿಂದಿರುಗಿ ಬರುವುದೋ ಇಲ್ಲವೋ ಎಂಬ ಆಲೋಚನೆಯಲ್ಲಿ ವಾರವನ್ನೂ ಕಳೆಯುವಿರಿ. ಮಕ್ಕಳ ವಿಷಯ ಈ ವಾರದ ಚರ್ಚೆಯ ವಿಷಯವಾಗಲಿದೆ. ಕುಲ ದೇವರ ಆರಾಧನೆಯಿಂದ ಒಳಿತು. ಹಳೆಯ ವಸ್ತುಗಳನ್ನು ಖರೀದಿಸುವಿರಿ.

ಧನಸ್ಸು – ವಾರದ ಆರಂಭದಲ್ಲಿ ದೇವಾಲಯ/ಧಾರ್ಮಿಕ ಕ್ಷೇತ್ರಗಳು/ಗುರು – ಹಿರಿಯರನ್ನು ಭೇಟಿ ಮಾಡುವಿರಿ. ವಾರದ ಮಧ್ಯದಲ್ಲಿ ವಿನಾಕಾರಣ ಜಗಳಗಳನ್ನು ಮೈಮೇಲೆ ಎಳೆದುಕೊಳ್ಳುವಿರಿ. ಸಂಧಿವಾತ ಹೆಚ್ಚಾಗುವುದು. ಸಹೋದರ ಅಥವಾ ಸಹೋದರಿಗೆ ವ್ಯಾಪಾರದಲ್ಲಿ ಅಥವಾ ಕೆಲಸದಲ್ಲಿ ಹಿನ್ನಡೆ/ಆರೋಗ್ಯದಲ್ಲಿ ಏರುಪೇರು. ಇಷ್ಟುದಿನ ನಿದ್ರಾಹೀನತೆಯಿಂದ ಬಳಲುತ್ತಿದ್ದ ನಿಮಗೆ ಉತ್ತಮ ಶಯನ ಸುಖ ಪ್ರಾಪ್ತಿ. ವಿಮೆಗಳಿಗಾಗಿ ಹಣ ಖರ್ಚು. ಹೊಟ್ಟೆಯ ಸಂಬಂಧಿ ಕಾಯಿಲೆ ಉಲ್ಬಣಿಸುವ ವಾರ. ಕುಟುಂಬಕ್ಕಿಂತ ಹೆಚ್ಚು ಸಮಯ ಸ್ನೇಹಿತರೊಂದಿಗೆ ಕಳೆಯುವಿರಿ.

ಮಕರ – ಕೆಲಸದ ಒತ್ತಡ ಹೆಚ್ಚು. ಕಛೇರಿ ಕೆಲಸಗಳಲ್ಲಿ ಕಿರಿಕಿರಿ. ಕೆಲಸ ಬದಲಿಸುವ ಆಲೋಚನೆಯಲ್ಲಿ ಇರುವಿರಿ. ಕೈಜಾರಿ ಗಾಜೊಂದು ಒಡೆಯ ಬಹುದು. ಜ್ಞಾಪಕ ಶಕ್ತಿ ಕಮ್ಮಿ ಆಗುವ ವಾರ. ಉಸಿರಾಟದ ತೊಂದರೆಯಿಂದ ಬಳಲುವಿರಿ.  ಆರೋಗ್ಯದ ಬಗ್ಗೆ ಗಮನವಿರಲಿ. ಗುರುವಿನ ಪರಿವರ್ತನೆಯಿಂದ ಲಾಭ ಹೆಚ್ಚಿದ್ದರೂ ಖರ್ಚುಗಳ ಬಗ್ಗೆ ನಿಗಾವಹಿಸಿ. ಪ್ರತಿಷ್ಠೆ ತೋರಿಸಲು ಇದು ಸಕಾಲವಲ್ಲ. ವಾಹನಗಳಿಗಾಗಿ ಖರ್ಚು.

ಕುಂಭ – ಕೆಲಸದ ಒತ್ತಡದಿಂದ ವಿರಾಮ ತೆಗೆದುಕೊಳ್ಳಲು ಉತ್ತಮ ಸಮಯ. ಉದ್ಯೋಗದಲ್ಲಿ ಬಡ್ತಿ ವಿಚಾರವಾಗಿ ಚರ್ಚೆ. ಕುಟುಂಬ ಅಥವಾ ಮಿತ್ರವರ್ಗದಲ್ಲಿ ಕೆಲಸಕ್ಕಾಗಿ ಸಹಾಯ ಮಾಡುವಿರಿ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಚರ್ಚೆ ಮತ್ತು ಪ್ರಯತ್ನ. ಕಾಲುಗಳ ಸಂಧಿಬಾಧೆಯಿಂದ ನರಳುವಿರಿ. ಸಹೋದರ/ಸಹೋದರರಿಗಾಗಿ ವೈದ್ಯರನ್ನು ಭೇಟಿ ಮಾಡುವಿರಿ. ಅವರ ಮನೆಯ ರಿಪೇರಿಗಾಗಿ ಹಣ ವ್ಯಯಿಸುವಿರಿ. ನಿಮ್ಮ ಶಿಸ್ತು ಹಾಗೂ ಸಮಯ ಪರಿಪಾಲನೆಗಾಗಿ ಪ್ರಶಂಸೆಗೆ ಒಳಗಾಗುವಿರಿ.

ಮೀನ – ಬಹು ದಿವಸದಿಂದ ಸರಿಯಾದ ಮಾರ್ಗದರ್ಶನವಿಲ್ಲದೆ ಚಡಪಡಿಸುತ್ತಿದ್ದ ನಿಮಗೆ ಒಳ್ಳೆಯ ಮಾರ್ಗದರ್ಶನ ಲಭಿಸಲಿದೆ. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ. ಅನಿರೀಕ್ಷಿತ ಧನಾಗಮ. ಸಾಲದ ಸುಳಿಯಿಂದ ಹೊರ ಬರಲು ಹಲವು ಮಾರ್ಗಗಳು ಕಾಣಿಸುವುದು. ಹೆಂಡತಿಯ ಉದ್ಯೋಗ ಅಥವಾ ವ್ಯಾಪಾರಕ್ಕೆ ನೆರವಾಗುವಿರಿ. ಮನೆ ಬದಲಾವಣೆ ಮಾಡಲು ಆಲೋಚನೆಯಲ್ಲಿರುವವರಿಗೆ ಸೂಕ್ತ ಸಮಯ. ನಾಯಿಗಳಿಂದ ದೂರವಿರಿ. ದೇಹದ ತೂಕವನ್ನು ಕಾಯ್ದುಕೊಳ್ಳಲು ಹರ ಸಹಾಸ ಪಡುವಿರಿ. ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗಿ.

————————***————————-

  • ತೆರಿಗೆ ವಿಷಯಕ್ಕೆ ಸಂಬಂದಿಸಿದಂತೆ ಹಲವರಿಗೆ ತೊಂದರೆ ವಿಶೇಷವಾಗಿ ಪ್ರತಿಷ್ಠಿತ ವ್ಯಕ್ತಿಗೆ ಸಮಸ್ಯೆ ಉಲ್ಬಣಿಸುವುದು.
  • ಮಿಥುನ ಲಗ್ನದ ರಾಜಕಾರಣಿಗೆ ಹಾಗು ಅವರ ಹಿರಿಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ.
  • ಧರ್ನುಲಗ್ನದ ರಾಜಕಾರಣಿಗೆ ಅವಕಾಶಗಳು ಆಶಾದಾಯಕವಾಗಿ ಕಂಡರು ತಾಳ್ಮೆಯಿಂದ ಇರಿ. ನಿಮಗೆ ನಿಮ್ಮವರ ಬೆಂಬಲ ದೊರಕದು.
  • ಕಾನೂನು ಪರಿಪಲಾನೆ ಮಾಡುವವರಿಂದ ಅಚಾತುರ್ಯದ ನಡವಳಿಕೆ ಅಥವಾ ಘನತೆಗೆ ತಕ್ಕದ್ದಲ್ಲದ ನಡವಳಿಕೆಗಳಿಂದ ಮುಜುಗರಕ್ಕಿಡಾಗುವುದು.ಜ್ಯೋತಿಷ  – ರವೀಕೃ., ಬೆಂಗಳೂರು,

     

 

 

Tags

Related Articles