ಬಾಲ್ಕನಿ ವಾರ ಭವಿಷ್ಯ

ಬಾಲ್ಕನಿ ವಾರ ಭವಿಷ್ಯ-2

ಈ ವಾರದ ಆಗು-ಹೋಗು ನಿಮ್ಮ ಕೈಯಲ್ಲಿ..

                           19-08-2018 ಭಾನುವಾರ ದಿಂದ 25-08-2018 ಶನಿವಾರದ ತನಕ

ಮೇಷ ಪೂರ್ವಾರ್ಧದಲ್ಲಿ ಆಜೀರ್ವವ್ಯಾಧಿಯ ಭಾಧೆ. ಕಾಲುಗಳಲ್ಲಿ ನೋವಿನ ಭಾಧೆ, ಸ್ವಲ್ಪ ಸೋಮಾರಿತನವು, ಮನಸ್ತಾಪ, ಬುದ್ಧಿ ಚಾಂಚಲ್ಯತೆ. ಇತರರ ತಪ್ಪಿನಿಂದ ತೊಂದರೆಗೆ ಸಿಲುಕುವಿರಿ.

 

ವೃಷಭ ಅಕಾಲಿಕ ಭೋಜನ, ಪ್ರಯಾಣದಲ್ಲಿ ತೊಂದರೆ. ಬಹು ದಿನಗಳಿಂದ ನೀರಿಕ್ಷಿಸಿದ ಸಹಾಯ ಹಸ್ತ ದೊರೆಯುವುದು. ಇಷ್ಟ ಪಟ್ಟ ವಸ್ತುಗಳನ್ನು ಖರೀದಿಸುವ ವಾರ. ತಾಳ್ಮೆ ಹಾಗು ಸಂಯಮದಿಂದ ಇರುವ ವಾರ.

 

ಮಿಥುನ ಸ್ಥಾನದ ಅಭದ್ರತೆ ಕಾಡುವುದಾದರು ಯಶಸ್ಸು ವೃದ್ದಿಯಾಗುವುದು. ಧರ್ಮಕಾರ್ಯ ನೆರವೇರುವುದು. ಪೂರ್ವಾರ್ಧದಲ್ಲಿ ಆರೋಗ್ಯದಲ್ಲಿ ಸುಖವಿರುವುದು. ಧನಲಾಭಾವು, ಇಷ್ಟಾರ್ಥವು ಸಿದ್ದಿಸುವುದಾದರು, ಉತ್ತರಾರ್ಧದಲ್ಲಿ ಇದರ ವ್ಯತಿರಿಕ್ತ ಫಲವು.

 

ಸಿಂಹ ಶಾರೀರಿಕ ತೊಂದರೆ,ಮನಸ್ಸಿನ ಸಂತಾಪವು, ಸರಿಯಾದ ವೇಳೆಗೆ ಊಟಮಾಡದಿರುವುದು. ಸುತ್ತಲಿನ ಜನ, ಬಂಧು-ಮಿತ್ರ, ಸಜ್ಜನರಲ್ಲಿ ವಿರೋಧ  ಏರ್ಪಡುವುದು.

 

ಕನ್ಯಾ ಧನವ್ಯಯದ ವಾರ, ಪೂರ್ವಾರ್ಧದಲ್ಲಿ ಕೊಂಚಮಟ್ಟಿಗೆ ಮನಸ್ಸಿಗೆ ಸೌಖ್ಯವು, ಧೈರ್ಯ, ವಸ್ತ್ರಲಾಭವು ಆಗುವುದು. ಉತ್ತರಾರ್ಧದಲ್ಲಿ ಬಂಧು ಇಷ್ಟರ ಜೊತೆಗೆ ವೈರತ್ವ, ಮನಸ್ಸಿನಲ್ಲಿ ಚಂಚಲತೆ, ತಂದೆಯೊಂದಿಗೆ ಮನಸ್ಥಾಪ ಅಥವಾ ತಂದೆಗೆ ಅನಾರೋಗ್ಯ.

 

ತುಲಾ ಮನಸ್ಸಿಗೆ ಕ್ಲೇಶ, ಧನ ವ್ಯಯ, ವಸ್ತುಗಳ ಹಾನಿ, ಉತ್ತರಾರ್ಧದಲ್ಲಿ ಧನಾರ್ಜನೆಯಾಗುವುದು. ಧೈರ್ಯ, ಆಚಾರ ವಿಚಾರಗಳನ್ನು ಪಾಲಿಸುವುದು, ಉತ್ತಮವಾದ ಆಹಾರ ಸೇವನೆ.

 

ವೃಶ್ಚಿಕ ನೆರೆಹೊರೆ, ಬಂಧು – ಮಿತ್ರರ ಜೊತೆಗೆ ಪ್ರೀತಿ, ವಿಶ್ವಾಸದಿಂದಿರುವುದು. ರಾಜ ದರ್ಶನ, ರಾಜ ಸಂಭಾಷಣೆ, ಸುಖ -ಗೌರವ. ಉತ್ತರಾರ್ಧದಲ್ಲಿ ಕುಟುಂಬದಲ್ಲಿ ಅಶಾಂತಿ.

 

ಧನಸ್ಸು ಮನಸ್ಸಿಗೆ ವ್ಯಾಕುಲತೆ, ಮಾನ ಹಾನಿ, ಬಂಧು ಇಷ್ಟರ ಜೊತೆಗೆ ವೈರತ್ವ, ಧನ ಕ್ಷಯ, ಶರೀರಾಲಾಸ್ಯ, ನಿಮ್ಮದಲ್ಲದ ತಪ್ಪಿನಿಂದ ಧನವ್ಯಯವು ಮತ್ತು ಲಾಭಗಳು ಕ್ಷೀಣಿಸುವುದು.

 

ಮಕರ ಪೂರ್ವಾರ್ಧದಲ್ಲಿ ಮನಸ್ಸಿಗೆ ನೆಮ್ಮದಿ, ಸುಖ, ಸದಾ ಆನಂದ, ಭೋಜನ ಸುಖ, ಧನಲಾಭವಾಗುವುದು. ವಾರದ ಮಧ್ಯೆ ಮತ್ತು ಉತ್ತರಾರ್ಧದಲ್ಲಿ ಧನ ಕ್ಷಯ, ಶತ್ರುಗಳ ಜೊತೆವಾದಗಳು, ಪ್ರಯಾಣಗಳಲ್ಲಿ ಕಷ್ಟಗಳು, ದುಃಖದ ವಾರ್ತೆ.

 

ಕುಂಭ ಬಂಧು ಇಷ್ಟರ ಜೊತೆಗೆ ವಾದ ಅಥವಾ ವೈರತ್ವ. ಭೋಜನ ಸುಖ, ಧನ-ಧಾನ್ಯ ಲಾಭವಾಗುವುದು. ಹೆಚ್ಚಿನ ಹೂಡಿಕೆಗಳು ಈ ವಾರ ಬೇಡ. ಮಗ ಅಥವಾ ಮಗಳಿಗೆ ಶುಭ ಸುದ್ದಿ. ವಾರಾಂತ್ಯದಲ್ಲಿ ದೇವತಾ ಆರಾಧನೆ,ದರ್ಶನ.

 

ಮೀನ ವ್ಯವಹಾರ ವಿಸ್ತರಿಸಲು ಅವಕಾಶವಿದ್ದರೂ ಆತುರ ಸಲ್ಲದು. ಉದ್ಯೋಗದಲ್ಲಿ ವಾಗ್ವದ ಬೇಡ. ವಾರಾಂತ್ಯದಲ್ಲಿ ಹೆಚ್ಚಿನ ಲವಲವಿಕೆಯಿಂದ ಓಡಾಡುವ ವಾರ.

 

ಬ್ರೇಕಿಂಗ್  ಬುಲೆಟಿನ್

ರವಿಯ ಸಂಕ್ರಮಣದಿಂದ ಮಳೆಯ ಪ್ರಮಾಣದಲ್ಲಿ ತುಸು ಕಡಿಮೆಯಾದರೂ ಸೆಪ್ಟೆಂಬರ್ 5ರ ತನಕ ಮಳೆ ಮುಂದುವರೆಯುವುದು. ಚಂದ್ರ ಗ್ರಹಣದ ವ್ಯತಿರಿಕ್ತ ಪರಿಣಾಮಗಳನ್ನು ಕೆಳಗೆ ಹೇಳಲಾಗಿದೆ

1ಪಾಶ್ಚಿಮಾತ್ಯ ದೇಶಗಳ ಸಾರ್ವಜನಿಕ ಸ್ಥಳಗಳಲ್ಲಿ ಶೂಟೌಟ್ ಪ್ರಕರಣಗಳು ಸಂಭವಿಸಬಹುದು.
2ಹೊಸದಾದ ಕಂಪ್ಯೂಟರ್ ವೈರಸ್ ಉಂಟಾಗಬಹುದು.
3ಪ್ರತಿಷ್ಠಿತ ಕಂಪನಿಗಳ ವೆಬ್ ಸೈಟ್ಗಳು ಹ್ಯಾಕ್ ಆಗಬಹುದು.
4ಉತ್ತರ ಭಾರತದ ಪ್ರಸಿದ್ಧ ತಿರ್ಥಕ್ಷೇತ್ರಗಳಲ್ಲಿ ಯಾವುದಾದರು ಒಂದಕ್ಕೆ ಅಪಾಯ ಹೆಚ್ಚು.
  • ಜ್ಯೋತಿಷ  – ರವೀ. ಕೃ., ಬೆಂ.
Tags

Related Articles