ಬಾಲ್ಕನಿ ವಾರ ಭವಿಷ್ಯವಾರ ಭವಿಷ್ಯ

ಬಾಲ್ಕನಿ ವಾರ ಭವಿಷ್ಯ-7

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

                              23-09-2018 ಭಾನುವಾರ ದಿಂದ 29-09-2018 ಶನಿವಾರದ ತನಕ        

ಮೇಷಪೂರ್ವಾರ್ಧದಲ್ಲಿ ಮನಸ್ಸಿಗೆ ನೆಮ್ಮದಿ, ಸುಖ,ಪ್ರಯಾಣ, ಧನ-ಧಾನ್ಯ ಲಾಭ ಮತ್ತು ಆತ್ಮವಿಶ್ವಾಸದಿಂದ ಭೀಗುವಿರಿ. ಯತೇಚ್ಚ ಮಾತು, ಶುಭ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗುವಿರಿ ಅಥವಾ ಒಡಾಡುವಿರಿ. ಮಧ್ಯಭಾಗದಲ್ಲಿ ಹಾಗು ಉತ್ತರಾರ್ಧದಲ್ಲಿ ಅತೀವ ಕೆಲಸದ ಒತ್ತಡದಿಂದ ಇರುವ ನಿಮಗೆ ಅಡ್ಡಿ-ಆತಂಕಗಳು ಬಂದೊದಗಲಿದೆ. ಅನಾರೋಗ್ಯದಿಂದ ಬಳಲುವಿರಿ. ಗುರುಹಿರಿಯರ ಆರ್ಶೀವಾದ ನಿಮಗಿದೆ. ವಿದ್ಯಾರ್ಥಿಗಳಿಗೆ ಉತ್ತಮವಾರ. ವೈದ್ಯರಿಗೆ, ಧಾರ್ಮಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿರುವವರಿಗೆ ಉತ್ತಮ ವಾರ.
ವೃಷಭ ಪೂರ್ವಾರ್ಧದಲ್ಲಿ ಆಲೋಚಿಸಿದ ಕಾರ್ಯಸಿದ್ದಿ, ಆರೋಗ್ಯವಂತ ದೇಹ, ಬಂಧುಗಳಿಂದ ವಾರ್ತೆ. ಇಷ್ಟಪಟ್ಟವರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಉತ್ತರಾರ್ಧದಲ್ಲಿ ಅತಿಯಾದ ಕೆಲಸದ ಒತ್ತಡ ಎದುರಿಸುವಿರಿ. ಕುಂಟುಬದಲ್ಲಿ ವಿಭಿನ್ನ ಅಭಿಪ್ರಾಯಗಳು ಮೂಡುವುದು. ಉದ್ಯೋಗ ಅಥವಾ ವ್ಯವಹಾರಗಳಲ್ಲಿ ಕೊಂಚ ಹಿನ್ನಡೆ. ಬೆನ್ನು ಹಾಗು ಕಾಲುಗಳ ನೋವಿನ ಸಮಸ್ಯೆ ಕಾಡಬಹುದು. ಮಕ್ಕಳ ವಿಷಯದಲ್ಲಿ ಅತಿಯಾದ ಶಿಸ್ತನ್ನು ಹೇರಬೇಡಿ. ಅನವಶ್ಯಕ ವಿಷಯಗಳಿಂದ ಮನಸ್ಸಿಗೆ ವ್ಯಾಕುಲತೆ. ದೇವಿ ಆರಾಧನೆಯಿಂದ ಒಳಿತು. ಹಿತ ಶತ್ರುಗಳಿಂದ ತೊಂದರೆ. ಆತುರತೆ ನಿರ್ಧಾರ ಸಲ್ಲದು. ಕೊಂಚ ತಾಳ್ಮೆಯಿಂದ ಇರಿ.
ಮಿಥುನ ಪೂರ್ವಾರ್ಧದಲ್ಲಿ ಎಂದಿನಂತೆ ಸ್ವಲ್ಪ ಸೋಮರಿತನ ನಿಮ್ಮನ್ನು ಆವರಿಸಿದರೂ ನಿಮ್ಮ ಚಾಣಾಕ್ಯತನದಿಂದ ಎಲ್ಲಾವನ್ನು ನಿಭಾಯಿಸುವಿರಿ. ಷೇರು ವ್ಯವಹಾರದಲ್ಲಿ ಹೂಡಿಕೆ ಮಾಡುವವರು ಸ್ವಲ್ಪ ತಾಳ್ಮೆಯಿಂದ ಇರಿ. ಇದು ಸೂಕ್ತ ಸಮಯವಲ್ಲ. ಉದ್ಯೋಗದಲ್ಲಿ ಕಿರಿಕಿರಿ. ಸ್ವಂತ ವ್ಯವಹಾರದವರಿಗೆ ಸ್ವಲ್ಪ ವಿಂಳಬವಾದರೂ ಮಧ್ಯಭಾಗದಲ್ಲಿ ಚುರುಕಾಗುವುದು. ಶೀತ – ಬಳಲುವಿರಿ. ಮಂಡಿ ನೋವು ಕಾಡಬಹುದು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಪ್ರಗತಿ. ಉತ್ತರಾರ್ಧದಲ್ಲಿ ಖರ್ಚು ಹೆಚ್ಚಾಗುವುದು. ಸೇವಕರಿಂದ ಕಿರಿಕಿರಿ, ಅನವಶ್ಯಕ ಮಾತಿಗೆ ಸಿಲುಕುವಿರಿ.
ಕಟಕ- ಪೂರ್ವಾರ್ಧದಲ್ಲಿ ಅನಾರೋಗ್ಯದ ತೊಂದರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಹಸ ಪಡುವಿರಿ. ಮಧ್ಯಭಾಗದಲ್ಲಿ ಹಾಗು ಉತ್ತರಾರ್ಧದಲ್ಲಿ ಚುರುಕಿನಿಂದ ಒಡಾಡುವಿರಿ. ಸಾಮಾಜಿಕ ಕಳಕಳಿಯಿರುವ ನೀವು ಕೀರ್ತಿಯನ್ನು ಪಡೆಯುವ ವಾರ. ವಿದ್ಯಾರ್ಥಿಗಳಿಗೆ ಉತ್ತಮ ವಾರ. ಉನ್ನತ ವ್ಯಾಸಂಗದ ನಿರೀಕ್ಷೆಯಲ್ಲಿ ಇರುವವರಿಗೆ ಉತ್ತಮ ಮಾರ್ಗದರ್ಶನ ಸಿಗುವುದು. ಆದರೆ ಮಧ್ಯ
ವರ್ತಿಗಳಿಂದ ಜಾಗರೂಕರಾಗಿರಿ. ವಕೀಲ ವೃತ್ತಿ, ವೈದ್ಯ ವೃತ್ತಿ, ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಎಂದಿನಂತೆ ಉತ್ತಮವಾರ. ಗುರುಗಳು ಹಾಗು ಶಿಕ್ಷಕರಿಗೆ ಅಷ್ಟು ಉತ್ತಮವಲ್ಲ.
ಸಿಂಹ ವಿನಾಕಾರಣ ಮತ್ತೊಬ್ಬರ ವಿಷಯದಲ್ಲಿ ತಲೆಹಾಕುವಿರಿ. ಸ್ವಂತ ವಸ್ತುಗಳನ್ನು ಕಳೆದುಕೊಳ್ಳಬಹುದು ಅಥವಾ ವಸ್ತುಗಳು ನಾಶವಾಗಬಹುದು. ಎಂದಿನಂತೆ ಜೀವನವು ಸ್ವಲ್ಪ ಮಟ್ಟಿಗೆ ಆಮೆಗತಿಯಲ್ಲಿ ಸಾಗಿದ ಅನುಭವ. ಮುಂದಿನ ದಿನಗಳನ್ನು ನೆನೆದು ಗಾಬರಿ ಬೇಡ. ಎಲ್ಲಾವೂ ಸರಿಹೋಗುವುದು. ನಿಮ್ಮ ಆಹಾರದ ಬಗ್ಗೆ ಗಮನವಿರಲಿ. ಉತ್ತಮ ಅಭ್ಯಾಸ ರೂಡಿಸಿಕೊಳ್ಳ, ಇಲ್ಲವಾದಲ್ಲಿ ಅನಾರೋಗ್ಯದ ಸಮಸ್ಯೆ ಆಗಬಹುದು. ಯಾವುದೇ ಆತುರದ ನಿರ್ಧಾರಬೇಡ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದ ಅಗತ್ಯತೆ ಇದೆ. ವಾಹನಗಳ ಮೂಖೇನ ಮಕ್ಕಳಿಂದ ತೊಂದರೆ.
ಕನ್ಯಾ- ನಿಮ್ಮ ಸುತ್ತ ಮುತ್ತಲು ನಿಮ್ಮ ಮಾತಿಗೆ ಬೆಲೆ ಬರುವುದು. ಉತ್ತಮ ಧನಾಗಮನವಾದರೂ ಮನೆಯ ವಿಷಯವಾಗಿ ಅಥವಾ ಗೃಹಾಲಂಕಾರ ವಿಷಯವಾಗಿ ಅಧಿಕ ಖರ್ಚು. ಗುರು ಹಿರಿಯರು, ಕುಂಟುಂಬ ವರ್ಗದ ಸಹಾಯ ಹಸ್ತ ದೊರಕುವುದು. ಹೊಸ ಸಂಬಂಧದ ಅಪೇಕ್ಷೆ ಇರುವವರಿಗೆ ಆಶಾದಾಯಕವಾರ. ಬ್ಯಾಂಕಿಂಗ್ ಕ್ಷೇತ್ರ, ವಾಣಿಜ್ಯ ಕ್ಷೇತ್ರ, ಸಿ.ಎ. ಸಿ.ಸ್. , ವೈದ್ಯರಿಗೆ ಉತ್ತಮವಾರ. ರಿಸರ್ಚ್ ಮತ್ತು ಡೆವಲಪ್ ಮೆಂಟ್ ಕ್ಷೇತ್ರದಲ್ಲಿ ಇರುವವರಿಗೆ ಮುನ್ನಡೆ ಸಿಗುವುದು.
ತುಲಾ- ನಿಮ್ಮ ಬಹುದಿನದ ಕನಸುಗಳಿಗೆ ರೆಕ್ಕೆಗಳು ಬೆಳೆಯುವವಾರ. ನಿಮ್ಮಶ್ರಮ ಹಾಗು ಲೆಕ್ಕಚಾರಗಳಿಗೆ ಶಕ್ತಿ ಸಿಗುವವಾರವಾದರೂ ಅನಾರೋಗ್ಯ ಕೊಂಚ ಹಿನ್ನಡೆ ತರಬಹುದು. ಶಿಸ್ತಿನಲ್ಲಿ ಯಾವುದೇ ರಾಜಿ ಬೇಡ. ಅತಿಯಾದ ಮಾತು ಬೇಡ, ಬರುತ್ತಿರುವ ಅಥವಾ ಬರುವ ಅವಕಾಶಗಳನ್ನು ಬಳಸಿಕೊಳ್ಳಿ. ಮುಂದೊಂದು ದಿನ ಪ್ರಯೋಜನವಾದೀತು. ವಾಸ್ತವ ಬದುಕಿನಿಂದ ದೂರಹೊಗುವಿರಿ. ವಿದ್ಯಾರ್ಥಿಗಳು ದ್ವಂದ್ವಕ್ಕೆ ಸಿಲುಕದೆ, ಹೆಚ್ಚಿನ ಪರಿಶ್ರಮ ಹಾಕಿ. ಉತ್ತರಾರ್ಧದಲ್ಲಿ ಕೊಂಚ ಬೇಸರ ತರುವುದಾದರೂ ತಾಳ್ಮೆಯಿಂದ ಇರಿ.
ವೃಶ್ಛಿಕ ಕಳೆದ ಮೂರು – ನಾಲ್ಕು ವಾರಗಳಿಂದ ಇದ್ದ ದ್ವಂದ್ವ ಹಾಗು ಆತಂಕ ಇಲ್ಲೂ ಮುಂದುವರೆಯುವುದು. ಅತಿಯಾದ ಕೆಲಸದ ಒತ್ತಡವಿದ್ದರೂ ಪೂರ್ವಾರ್ಧದಲ್ಲಿ ಶುಭ ಕಾರ್ಯದಲ್ಲಿ ಭಾಗಿಯಾಗುವಿರಿ ಅಥವಾ ಬಂಧು ಬಳಗದವರ ಭೇಟಿ. ನಿಮ್ಮ ಕೆಲಸದ ಹಸಿವು ನಿಮ್ಮನ್ನು ಜಾಗೃತವಾಗಿ ಇಡಲಿದೆ. ಹಿತಶತ್ರುಗಳಿಂದ ದೂರವಿರಿ. ನಿಮ್ಮ ಸ್ವಂತ ನಿರ್ಧಾರಗಳು ನಿಮ್ಮ ತನವನ್ನು ಉಳಿಸಲಿದೆ. ಇತರರ ಕೊಂಕು ಮಾತಿಗೆ ತಲೆಕೆಡಿಸಿಕೊಳ್ಳದಿರಿ. ಹನುಮನ ಆರಾಧನೆಯಿಂದ ಒಳಿತಾಗುವುದು.
ಧನಸ್ಸು- ಪೂರ್ವಾರ್ಧದಲ್ಲಿ ಮನಸ್ಸಿಗೆ ಉಲ್ಲಾಸ, ಕಾರ್ಯಗಳು ಕೈಗೆಟಕುವಂತೆ ಕಂಡರೂ ನಿಮ್ಮ ಆಲೋಚನೆಗೆ ಪೂರಕವಾಗಿ ಸಹಾಯ ಹಸ್ತ ದೊರೆಯದು. ಕುಂಟುಂಬದವರೊಂದಿಗೇ ಇದ್ದರೂ ಮಾನಸಿಕವಾಗಿ ದೂರ ಇದ್ದಂತೆ ಭಾಸವಾಗುವುದು. ಅನವಶ್ಯಕ ಖರ್ಚುಗಳು ಹೆಚ್ಚಾಗುವುದು. ಪೂರ್ವಾರ್ಧದಲ್ಲಿ ಹಾಗು ಮಧ್ಯಭಾಗದಲ್ಲಿ ದೇವತಾ ದರ್ಶನ, ಗುರು ಹಿರಿಯರ, ಬಂಧು ಬಾಂಧವರ ಭೇಟಿ. ಹಳೆಯ ಸಮಸ್ಯೆಯೊಂದು ಮರುಕಳಿಸುವ ವಾರ.
ಮಕರ- ಅತಿಯಾದ ಕೆಲಸದ ಒತ್ತಡ ಇಲ್ಲೂ ಮುಂದುವರೆಯುವುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ತಂದೆಯ ಜೊತೆ ಉತ್ತಮ ಬಾಂಧವ್ಯ ಇಲ್ಲದವರು ನೆನೆಯುವ ವಾರ. ನಿಮ್ಮ ಮಾತಿಗೆ ಮನ್ನಣೆ ಸಿಗುವುದರಿಂದ ಅತಿಯಾದ ಉತ್ಸಾಹದಲ್ಲಿ ಇರುವಿರಿ. ಆದರೆ ಅದನ್ನು ಹತೋಟಿಯಲ್ಲಿ ಇಡಿ. ನಿದ್ರಾಹೀನತೆ ಕಾಡುವುದು, ದೃಷ್ಟಿ ತೊಂದರೆಗೆ ಇಡಾಗುವಿರಿ. ದೂರದ ಊರಿಂದ ಸುದ್ದಿ ಸಿಗುವ ವಾರ. ಶಿವನ ಆರಾಧನೆ ಒಳಿತು.
ಕುಂಭ ಹೊಟ್ಟೆಯ ಸಮಸ್ಯೆಯಿಂದ ಬಳಲುವಿರಿ. ಗ್ಯಾಸ್ಟ್ರಿಕ್ ಹಾಗು ಬೆನ್ನು ನೋವು ಕಾಣಿಸಬಹುದು. ಕುಲಬಾಂಧವರನ್ನು ಅಥವಾ ಗುರು ಹಿರಿಯರನ್ನು ಅಥವಾ ಸ್ನೇಹಿತರನ್ನು ಭೇಟಿ ಮಾಡುವ ವಾರ. ಮನೆ ನಿರ್ಮಿಸಲು ಹೊರಟ್ಟಿದ್ದರೆ ಕಟ್ಟಡದ ವಿನ್ಯಾಸಕನನ್ನು ಭೇಟಿಮಾಡಲು ಸಕಾಲ. ವಾಹನ ಖರೀದಿಯ ಆಲೋಚನೆ ಇರುವವರು, ಸಿದ್ಧತೆ ಮಾಡಿಕೊಳ್ಳುವಿರಿ ಅಥವಾ ಮಾರ್ಗದರ್ಶನ ಪಡೆಯುವಿರಿ. ಧಾರವಾಹಿ ನಿರ್ಮಾಣ, ನಾಟಕ, ಸಿನಿಮಾವಲಯದಲ್ಲಿ ಇರುವವರಿಗೆ ಉತ್ತಮ ವಾರ. ಅವಕಾಶಗಳು ಹೆಚ್ಚುವುದು. ವಿದೇಶ ಪ್ರಯಾಣದ ವಿಷಯವಾಗಿ ಚರ್ಚೆ.
ಮೀನ ಆರ್ಥಿಕಮುಗ್ಗಟ್ಟು ಎದುರಿಸುತ್ತಿರುವವರಿಗೆ ಆಕಸ್ಮಿಕ ಖರ್ಚೊಂದು ಎದುರು ಬರುವುದು. ಮೂಲವ್ಯಾಧಿ ಸಮಸ್ಯೆ ಅಥವಾ ಮಧುಮೇಹ ಕಾಡಬಹುದು. ಸ್ತ್ರೀಯರಿಗೆ ಥೈರಾಯ್ಡ್ ಕಾಯಿಲೆ ಬಾದಿಸುವ ವಾರ. ಅನಿವಾರ್ಯವಾಗಿ ದೇವರ ಮೊರೆ ಹೋಗುವಿರಿ. ಸರ್ಕಾರ ಅಥವಾ ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ತೊಂದರೆ. ಪ್ರತಿಷ್ಠೆಗಾಗಿ ಖರ್ಚು ಮಾಡಬೇಕಾದೀತು. ಸಂತಾನದ ಅಪೇಕ್ಷೆ ಇದ್ದವರಿಗೆ ನಿರಾಶಾದಾಯಕ ವಾರ. ಪಾರ್ವತಿಯ ಆರಾಧನೆಯಿಂದ ಒಳಿತು.
  • ಧರ್ನುಲಗ್ನದ ರಾಜಕಾರಿಣಿಗೆ ಸ್ವಜನಗಳಿಂದ ವೈರತ್ವ. ಆಶಾಕಿರಣ ಕಾಣಿಸಿದರೂ ನಿರಾಶಾದಾಯಕವಾಗಿ ಕಾಣಿಸುವುದು.
  • ಮಿಥುನಲಗ್ನದ ರಾಜಕಾರಿಣಿಗೆ ಆತಂಕವಿದ್ದರೂ ಹಿರಿಯರ ಸಹಾಯದಿಂದ ನಿಟ್ಟುಸಿರು ಬಿಡುವಿರಿ. ಹಾಗಾಗಿಯೂ ಆರೋಗ್ಯದ ಕಡೆ ಗಮನವಿರಲಿ.

ಜ್ಯೋತಿಷ  – ರವೀ. ಕೃ., ಬೆಂ.

Tags

Related Articles