ದಿನ ಭವಿಷ್ಯಬಾಲ್ಕನೀ ಭವಿಷ್ಯ

ಬಾಲ್ಕನಿ ದಿನ ಭವಿಷ್ಯ: 23 ನವೆಂಬರ್ 2018 ಶುಕ್ರವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ……

ಮೇಷಉಪಾಯದಿಂದ ಅಪಾಯ ತಪ್ಪಿಸಿಕೊಳ್ಳಿ ಎಂಬ ಮಾತು ಚಾಲ್ತಿಯಲ್ಲಿದೆ. ಅಂತೆಯೇ ಭಗವಂತ ನೀಡಿದ ಬುದ್ಧಿ ಚಾತುರ್ಯದಿಂದ ಅಪಾಯ ಸನ್ನಿವೇಶವನ್ನು ಲೀಲಾಜಾಲವಾಗಿ ಎದುರಿಸುವಿರಿ. ಆಹಾರ ವಿಹಾರದ ವಿಚಾರದಲ್ಲಿ ಕ್ರಮತೆ ರೂಢಿಸಿಕೊಳ್ಳಿ. ಉದರಶೂಲೆಗೆ ಸಂಬಂಧಪಟ್ಟಂತೆ ತೊಂದರೆ ಎದುರಿಸಬೇಕಾಗುವುದು. ಮಾತಾ ದುರ್ಗಾದೇವಿ ಮಂತ್ರ ಪಠಿಸಿ. ಮನಸ್ಸಿನಲ್ಲಿ ಭಯಗೊಂಡು ಜ್ವರಗೊಂಡು ಸತ್ತ ಎಂಬ ವ್ಯಾಕರಣ ಸೂತ್ರ ನೆನಪಿರಲಿ. ಜೀವನದಲ್ಲಿ ಭಯಪಟ್ಟರೆ ಹೆದರಿಸುವವರು ಜಾಸ್ತಿ ಜನ ಸಿಗುತ್ತಾರೆ. ನೀವು ಘರ್ಜಿಸಿದರೆ ಅವರು ಸುಮ್ಮನಾಗುವರು. 

ಅದೃಷ್ಟ ಸಂಖ್ಯೆ:2

ವೃಷಭನಿಮ್ಮ ಪರಿಸರದ ಜನರು ನಿಮ್ಮ ಬುದ್ಧಿ ಶಕ್ತಿಯನ್ನು ಕೊಂಡಾಡುವರು. ಮಕ್ಕಳು ನಿಮಗೆ ಸಂತಸ ನೀಡುವ ಸಾಧ್ಯತೆ ಇದ್ದು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.  ಆರ್ಥಿಕ ಸ್ಥಿತಿ ದಿನದಿನಕ್ಕೆ ಕೆಲವು ಅನಗತ್ಯ  ಖರ್ಚುಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ.  ಮನೆಯಲ್ಲಿ ಸಂಗಾತಿಯ ಮಾತುಗಳಿಗೂ ಬೆಲೆ ಕೊಟ್ಟರೆ ಒಳ್ಳೆಯದು.  ಬದುಕಿನ ಎಲ್ಲಾ ಹಾದಿಗಳು ಮುಚ್ಚಿಹೋಗಿವೆ ಎಂಬ ತಲ್ಲಣ ಬೇಡ. ಆದಷ್ಟು ಒಂಟಿಯಾಗಿ ಇರದೆ ನಿಮ್ಮನ್ನು ಇಷ್ಟಪಡುವ ಸ್ನೇಹಿತರೊಂದಿಗೆ ಮಾತನಾಡಿ. ಇದರಿಂದ ನಿಮ್ಮಲ್ಲಿ ನವ ಚೈತನ್ಯ ಮೂಡುತ್ತದೆ. 

ಅದೃಷ್ಟ ಸಂಖ್ಯೆ:1

ಮಿಥುನ
ಕೆಲಸದ ಒತ್ತಡದ ನಡುವೆ ಊಟದ ಕಡೆಗೂ ಗಮನ ಹರಿಸುವುದು ಒಳ್ಳೆಯದು. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಹಾಗಂತ ದೇಹಕ್ಕೆ ಶ್ರಮ ಮಾಡಿಕೊಂಡು ದುಡಿಯುವುದು ಒಳ್ಳೆಯದಲ್ಲ. 
ಎಲ್ಲಾ ಸಂದರ್ಭದಲ್ಲೂ ಕೇವಲ ಮಾತಿನಿಂದ ಕೆಲಸವಾಗಲಾರದು. ಶ್ರಮ ವಹಿಸಿ ದುಡಿದಾಗಲಷ್ಟೆ ಪ್ರತಿಫಲ ಸಿಗುತ್ತದೆ. ನಿಮ್ಮ ಪರವಾಗಿ ಇತರರು ಕೆಲಸ ಮಾಡುತ್ತಾರೆಂಬ ಆಶಾವಾದ ಹುಸಿಯಾಗಲಿದೆ. ಕಠಿಣ ಪರಿಶ್ರಮ ಬಿಟ್ಟರೆ ಅನ್ಯ ಮಾರ್ಗವಿಲ್ಲ. ಎಲ್ಲವೂ ನೀವು ಕೂತಲ್ಲಿಯೇ ದೊರೆಯಬೇಕೆಂದರೆ ಸಿಗಲಾರದು. ಹಾಗಾಗಿ ಹೊರಗೆ ತಿರುಗಾಡಿ ಜ್ಞಾನಾರ್ಜನೆ ಮಾಡಿಕೊಳ್ಳಿ. ಅಂತೆಯೇ ಧನಾರ್ಜನೆಯನ್ನೂ ಮಾಡಿಕೊಳ್ಳಿ. 
ಅದೃಷ್ಟ ಸಂಖ್ಯೆ:4

ಕಟಕಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಈಗ ನಿಮಗೆ ಒಳ್ಳೆಯ ಕಾಲವಿದೆ. ಉದಾಸೀನ ಮಾಡದೆ ಬಂದ ಉತ್ತಮ ಅವಕಾಶವನ್ನು ಉಪಯೋಗಿಸಿಕೊಂಡು ಮುಂದುವರೆಯಿರಿ. ನಿಮ್ಮ ಸಲಹೆ ಸೂಚನೆಗಳು ನಿಮ್ಮ ಬಾಸ್‌ ಗೆ ಇಷ್ಟವಾಗುವ ಕಾರಣ ನಿಮಗೆ ಹೆಚ್ಚು ಸಂತೋಷವಾಗುವುದು. ಇದರಿಂದ ನಿಮ್ಮ ಹೆಸರು ವಿದೇಶದಲ್ಲಿ ಪ್ರಕಟವಾಗುವ ಪುಸ್ತಕದಲ್ಲಿ ಪ್ರಕಟಗೊಳ್ಳುವುದು. ಪರಮಾಪ್ತರೊಬ್ಬರಿಂದ ಆಶ್ಚರ್ಯಕರವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಇದರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. 

ಅದೃಷ್ಟ ಸಂಖ್ಯೆ:6

ಸಿಂಹಗುರುವಿನ ಸ್ಥಾನ ಬದಲಾವಣೆಯು ನಿಮ್ಮ ವೃತ್ತಿಯಲ್ಲೂ ಪ್ರಭಾವ ಬೀರುತ್ತಲಿದೆ. ಬದಲಾದ ವಾತಾವರಣದಲ್ಲಿ ಕೆಲಸ ಮಾಡಲು ತಯಾರಿ ನಡೆಸಿರಿ ಮತ್ತು ನೂತನ ಕಾರ್ಯ ವಿಧಾನಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕಾಗುತ್ತದೆ.  ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭವಿದೆ. ನಿಮ್ಮ ಅಂತಃಶಕ್ತಿಯನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಿ. ಮೇಲಧಿಕಾರಿಗಳಿಂದ ನಿಮಗೆ ಹೆಚ್ಚಿನ ಪ್ರಶಂಸೆ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಧನಕಾರಕ ಗುರುವು ರಿಪು ಸಂಚಾರದಲ್ಲಿ ಸಂಚರಿಸುವುದರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಧನನಾಶಕ್ಕೆ ಕಾರಣವಾಗುವ ಯಾವುದೇ ಕಾರ್ಯಗಳನ್ನು ಹಮ್ಮಿಕೊಳ್ಳದಿರುವುದು ಕ್ಷೇಮ.

ಅದೃಷ್ಟ ಸಂಖ್ಯೆ:4

ಕನ್ಯಾನಿಮ್ಮದು ಚಾಣಾಕ್ಷ ತನದ ಕಾರ್ಯ ವಿಧಾನವಾಗಿದೆ. ಇದಕ್ಕೆ ಪೂರಕವಾಗಿ ಗುರು ಹಿರಿಯರ ಆಶೀರ್ವಾದವೂ ಇರುವುದರಿಂದ, ಹಿಡಿದ ಕೆಲಸವನ್ನು ಅರ್ಧಕ್ಕೆ ಕೈಬಿಡದಿರಿ. ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ನಾಲಿಗೆ ಒಳ್ಳೆಯದಿದ್ದರೆ ನಾಡೇ ಒಳ್ಳೆಯದು ಎನ್ನುವಂತೆ ನೀವು ಆಡುವ ಮಾತು ಪರರನ್ನು ನೋಯಿಸದಿರಲಿ. ಶಾಂತವಾದ ಮಾತುಗಳಿಂದ ಕೆಲಸಗಾರರ ಮನಸ್ಸನ್ನು ಗೆಲ್ಲಿ. ಇದರಿಂದ ನಿಮಗೆ ಒಳಿತಾಗುವುದು. ಪರಾಕ್ರಮ ಶಾಲಿಗೆ ಭಗವಂತ ಸಹಾಯಹಸ್ತ ಚಾಚುವನು. ಅಂತೆಯೇ ಕೆಲಸ ಕಾರ್ಯಗಳನ್ನು ಅರ್ಧ ಮನಸ್ಸಿನಿಂದ ಮಾಡದಿರಿ. ಆತ್ಮಬಲದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ. 
ಅದೃಷ್ಟ ಸಂಖ್ಯೆ:5

ತುಲಾಗುರುವಿನ ಒಲುಮೆ ಇರುವಾಗ ಯಾರು ಮುನಿದರೇನು? ನಿಮ್ಮ ಮೇಲೆ ಎಷ್ಟೇ ಭಾರ ಬಂದರೂ ಅದನ್ನು ನಿಭಾಯಿಸಿ ವರ್ತಮಾನವನ್ನು ನಿಯಂತ್ರಿಸಬಲ್ಲಿರಿ. ಇದರಿಂದ ಕುಟುಂಬ ಸದಸ್ಯರ ಮೆಚ್ಚುಗೆಗೆ ಪಾತ್ರರಾಗುವಿರಿ.  ಅನಗತ್ಯ ಖರ್ಚು ವೆಚ್ಚಗಳು ಜಾಸ್ತಿ ಆಗುವ ಸಂಭವವಿದೆ. ಆದಷ್ಟು ಮಿತವ್ಯಯದ ಕಡೆ ಗಮನ ಹರಿಸಿ. ಮನೆಯಿಂದ ಹೊರಗೆ ಹೊರಡುವಾಗ ಹಿರಿಯರ ಅಪ್ಪಣೆ ಪಡೆದು ಹೊರಡಿ. ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಈದಿನದ ಪರಿಸ್ಥಿತಿ. ನೀವು ಮಾಡದೇ ಇರುವ ಕೆಲಸದ ಬಗ್ಗೆ ಅಪವಾದಗಳನ್ನು ಎದುರಿಸಬೇಕಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ. 
ಅದೃಷ್ಟ ಸಂಖ್ಯೆ:8

ವೃಶ್ಚಿಕದಿನದಿಂದ ದಿನಕ್ಕೆ ನೀವು ನಡೆಯುವ ಹಾದಿ ಕಠಿಣವಾಗಿದೆ. ಆದರೆ ಆ ಹಾದಿಯಲ್ಲಿಯೇ ಸಾಗುವುದು ಅನಿವಾರ್ಯವಾಗಿರುವಾಗ ರಕ್ಷಾ ಕವಚಗಳನ್ನು ಧರಿಸಿಕೊಂಡಂತೆ ಮನದಲ್ಲಿ ಭಗವಂತನ ನಾಮಸ್ಮರಣೆಯಿಂದ ರಕ್ಷಣೆ ಪಡೆಯಿರಿ. ನಿಮ್ಮ ಹೆಚ್ಚಿನ ಶಕ್ತಿಯನ್ನು ಸಕಾರಾತ್ಮಕವಾದ ರೀತಿಯಲ್ಲಿ ಪ್ರದರ್ಶಿಸಲು ಅತ್ಯಂತ ಸೂಕ್ತ ದಿನವಾಗಿದೆ. ನಿಮ್ಮ ಮೇಲೆ ನೀವು ವಿಶ್ವಾಸ ಕಳೆದುಕೊಳ್ಳದಿರಿ. ಎಲ್ಲವೂ ಒಳಿತಾಗುವುದು. ಗುರುವಿನ ರಕ್ಷ ಣೆ ಮಾಡಿ.  ಸೋಲಿಗಾಗಿ ಚಿಂತಿಸದೆ ಹೊಸದಾದ ಒಂದು ಕಾರ್ಯಕ್ರಮ ರೂಪಿಸಿಕೊಳ್ಳುವಿರಿ. ಇದರಿಂದ ನಿಮಗೆ ಒಳಿತಾಗುವುದು ಮತ್ತು ಮನೋ ಅಭಿಲಾಷೆಯು ಪೂರ್ಣಗೊಳ್ಳುವವು. 

ಅದೃಷ್ಟ ಸಂಖ್ಯೆ:5

ಧನುಸ್ಸುನಿಮ್ಮ ನಂಬಿಕೆ ಹಾಗೂ ಸ್ಥೈರ್ಯ ಧೈರ್ಯಗಳು ನಿಮ್ಮ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತವೆ. ಹಾಗಾಗಿ ನೀವು ಸುಲಭವಾಗಿ ಇಚ್ಛಿತ ಗುರಿಯನ್ನು ಮುಟ್ಟಬಲ್ಲಿರಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. 
ನಿಮಗಾಗಿ ಬಹು ಸೂಕ್ತ ಸಮಯದ ಪದೋನ್ನತಿಯೊಂದು ಕಾದಿದೆ. ನಿರಾಳವಾಗಿರಿ. ಮನಸ್ಸಿನ ತುಮುಲಗಳೆಲ್ಲ ತಮ್ಮಷ್ಟಕ್ಕೆ ಕಡಿಮೆ ಆಗುವುದು. ಜಗತ್ತು ಸುಂದರವಾಗಿ ಕಾಣಿಸಿಕೊಳ್ಳುವುದು. ಗುರುಕೃಪೆಯು ತಪ್ಪುತ್ತಿರುವ ಈ ಸಂದರ್ಭದಲ್ಲಿ ಬಹು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕಾಗುವುದು. ಅನಾವಶ್ಯಕ ವಾದ ವಿವಾದಗಳಲ್ಲಿ ಸಿಲುಕದಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ಅದೃಷ್ಟ ಸಂಖ್ಯೆ:8

ಮಕರಜನರಿಗೆ ಸಹಾಯ ಸಲ್ಲಿಸುವ ನಿಮ್ಮ ಮನೋಭಾವದಿಂದಾಗಿ ಎಲ್ಲಾ ರೀತಿಯ ಶ್ಲಾಘನೆ ಪಡೆಯುವಿರಿ. ಗುರುವಿನ ಅನುಗ್ರಹ ಆಗುತ್ತಿರುವುದರಿಂದ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳುವುದು. 
ನಿಮ್ಮ ಬುದ್ಧಿಬಲ ಶಕ್ತಿಯುತವಾದದ್ದು. ಸಂಪನ್ನವಾದ ನಿಮ್ಮ ಊಹೆಗಳು ಕಾರ್ಯರೂಪಕ್ಕೆ ಯಶಸ್ಸನ್ನು ನೀಡುವವು. ಮನೆಯ ಮಡದಿ ಮಕ್ಕಳ ಜೊತೆ ಸ್ವಲ್ಪ ಕಾಲ ಕಳೆಯುವುದು ಒಳ್ಳೆಯದು.  ಅರಿತು ನಡೆಯುವ ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಡುವರು. ನೂತನ ಕಾರ್ಯಯೋಜನೆಗಳಿಗೆ ಬೆಂಬಲ ನೀಡುವರು. ಹಾಗಾಗಿ ನೀವು ವೃತ್ತಿರಂಗದಲ್ಲಿ ಬೆಳೆಯಲು ಸಹಕಾರಿ ಆಗುವುದು. 

ಅದೃಷ್ಟ ಸಂಖ್ಯೆ:9

ಕುಂಭಹೊಸದೇ ಆದ ಜವಾಬ್ದಾರಿಯೊಂದು ನಿಮ್ಮ ಹೆಗಲೇರುವ ಸಾಧ್ಯತೆ ಅಧಿಕವಾಗಿರುವುದು. ಸಮಾಜದಲ್ಲಿ ಪ್ರಭಾವಿ ಜನರ ಸಂಪರ್ಕ ಬೆಳೆಯುವುದರಿಂದ ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಗತಿ ಕಂಡು ಬರುವುದು. ಹಿರಿಯರನ್ನು ದೂರ ಇಡಬೇಡಿರಿ. ಮತ್ತು ಅವರ ದಿನಚರ್ಯೆಗಳನ್ನು ದೂಷಿಸಬೇಡಿರಿ. ಅವರ ಸೇವೆಯನ್ನು ಮಾಡುವ ಮೂಲಕ ಮಹತ್ತರವಾದ ಗೆಲುವನ್ನು ಸಾಧಿಸಲು ಅನುಕೂಲವಾಗುವುದು. ಆಪತ್ ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮ್ಮ ಕಷ್ಟದ ದಿನಗಳಲ್ಲಿ ನಿಮ್ಮ ಮಕ್ಕಳು ಬಂಧು ಬಾಂಧವರು ಸಹಾಯ ಹಸ್ತ ನೀಡುವುದರಿಂದ ಜೀವನದಲ್ಲಿ ಒಂದು ಹೊಸ ಬೆಳಕು ಮೂಡುವುದು. ಜೀವನ ನಡೆಸಲು ಧೈರ್ಯ ಬರುವುದು. 

ಅದೃಷ್ಟ ಸಂಖ್ಯೆ:2

ಮೀನಮೇಲಾಧಿಕಾರಿಯ ಎದುರು, ವಿಷಯ ಗೊತ್ತಿದ್ದರೂ ಮತ್ತು ಮಾಡುವ ಕೆಲಸದಲ್ಲಿ ಅವರ ಸಲಹೆಯನ್ನು ಸ್ವೀಕರಿಸಿ ಮುಂದಡಿ ಇಟ್ಟಲ್ಲಿ ಅವರಿಗೂ ಖುಷಿ ಆಗುವುದು. ಇಲ್ಲವೆ ನಿಮ್ಮ ಬುದ್ಧಿಚಾತುರ್ಯಕ್ಕೆ ಅಸೂಯೆ ಪಡುವರು. 
ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಕ್ಷುಲ್ಲಕರನ್ನು ದೂರವಿಡುವುದೇ ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ನಿಮ್ಮ ಮಾನಹಾನಿಯನ್ನು ಮಾಡುವರು. ಗುರುವಿನ ಸ್ತೋತ್ರವನ್ನು ಮಾಡಿರಿ.  ನಿಮಗೆ ನೀವೇ ಗುರುವಾಗಿ ನಿಮ್ಮ ಮಿತಿಯ ಬಗ್ಗೆ ತಿಳಿಯಿರಿ. ಜನರು ನಿಮ್ಮನ್ನು ಪ್ರಶಂಸಿಸುವಂತಹ ಗುರುವಿನ ಕೃಪೆಗೆ ಪಾತ್ರರಾಗಿರುವುದರಿಂದ ಮುಂದಿನ ದಿನಗಳು ಸಹ ಉತ್ತಮವಾಗಿರುತ್ತದೆ. 
ಅದೃಷ್ಟ ಸಂಖ್ಯೆ:1

……………………………………………………………………………………………………………………………………….

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ,  ದೈವಜ್ಞ ಜ್ಯೋತಿಷಿ 9845743807

Tags

Related Articles