ಬಾಲ್ಕನಿಯಿಂದಸುದ್ದಿಗಳು

ಸೀರೆಯಲ್ಲೇ ರವಿಮಾಮ ರಾಧಿಕಾರನ್ನು ಆಕರ್ಷಕವಾಗಿ ಮೆರೆಸಿದ್ದಾರಂತೆ..!

ಮೂರನೇ ಬಾರಿಗೆ ರವಿಚಂದ್ರನ್ ಜೋಡಿಯಾದ ರಾಧಿಕಾ, ಈಗ ಕಥಕ್ ನೃತ್ಯಾಂಗನೆ!

 

ಬೆಂಗಳೂರು, ಸೆ.8: ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ಚಿತ್ರ ‘ರಾಜೇಂದ್ರ ಪೊನ್ನಪ್ಪ’ ಇನ್ನೇನು ಕೆಲವೇ ವಾರಗಳಲ್ಲೇ ಕನ್ನಡಿಗರ ಕಣ್ಮುಂದೆ ತೆರೆದುಕೊಳ್ಳಲಿದೆ. ತಮ್ಮ ಮೂರನೇ ಇನ್ನಿಂಗ್ಸ್ ನಲ್ಲಿ ಬಹಳಷ್ಟು ಬ್ಯುಸಿಯಾಗಿರುವ  ರಾಧಿಕಾ (ಕುಮಾರಸ್ವಾಮಿ) ಈ ಚಿತ್ರದಲ್ಲಿ ಓರ್ವ ಕಥಕ್ ನರ್ತಕಿಯಾಗಿ ತನ್ನ ಪಾತ್ರದಲ್ಲಿ ಮಿಂಚಿದ್ದಾರಂತೆ. ಹಾಗೆ ನೋಡಿದರೆ, ಮೂರನೇ ಬಾರಿಗೆ ರವಿಮಾಮ ಜೊತೆ ನಟಿಸುತ್ತಿರುವ ರಾಧಿಕಾಳನ್ನು ‘ಹಠವಾದಿ’ ಯಲ್ಲಿ ಕಂಡಷ್ಟು ಸೆಕ್ಸಿಯಾಗಿ ನೀವು ಕಾಣಲಾರಿರಿ ಎಂದರೆ ನಿಮಗೆ ನಿರಾಸೆಯಾಗಬಹುದೇನೋ..!

 

ನರ್ತನವೂ ರಾಧಿಕಾಗೆ ಬಹಳ ಇಷ್ಟ..!

ಇಲ್ಲೇನು ಮೈಚಳಿ ಬಿಟ್ಟು ನರ್ತಿಸುವ ಪ್ರಸಂಗ ಬಂದಿಲ್ಲ. ಕಾರಣ, ಸೀರೆಯಲ್ಲೇ ರವಿಮಾಮ ತನ್ನನ್ನು ಬಹಳಷ್ಟು ಆಕರ್ಷಕವಾಗಿ ಸೆರೆ ಹಿಡಿದಿದ್ದಾರೆ ಎಂದು ಇವರ ಅಂಬೋಣ..! ನಟನೆಯಷ್ಟೇ ನರ್ತನವೂ ರಾಧಿಕಾಗೆ ಬಹಳ ಇಷ್ಟ ಅನ್ನೋ ವಿಚಾರ ನಮಗೆಲ್ಲಾ ತಿಳಿದೇ ಇದೆ. ರಾಧಿಕಾ ಡಾನ್ಸ್ ಮಾಡಲು ತೊಡಗಿದ್ರೆ ಮೈಮರೀತಾರೆ ಅನ್ನೋದು ನಿಮಗೆ ತಿಳಿದಿರಬೇಕು.

ಸಾಂಪ್ರದಾಯಿಕ ಶೈಲಿಯಲ್ಲಿ ಎಂದೂ ನೃತ್ಯ ಕಲಿಯದ ರಾಧಿಕಾ ಈ ಕಥಕ್ ಎಂಬ ಉತ್ತರಭಾರತದ ಶಾಸ್ತ್ರೀಯ ನೃತ್ಯವನ್ನು ಕ್ಯಾಮೆರಾ ಮುಂದೆ ಅಭಿನಯಿಸಿರಬೇಕಾದ್ರೆ ಅವರ ಸ್ಕಿಲ್ ಯಾ ಕ್ಷಮತೆ ಯಾವ ಮಟ್ಟದ್ದು ಎಂಬುದನ್ನೂ ನೀವು ಗಮನಿಸಲೇಬೇಕಾದ ವಿಷಯ.

ಏನೇ ಇರಲಿ , ರವಿಚಂದ್ರನ್ ‘ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ಓರ್ವ ಕ್ರಿಮಿನಲ್ ಲಾಯರ್ ಆಗಿ ತನ್ನ ಮಗಳನ್ನು, ಅವಳ ಬೆಳೆವು-ಸಂಸ್ಕಾರಗಳನ್ನು ಸಮರ್ಥಿಸಿಕೊಳ್ಳುವ  ರವಿಚಂದ್ರನ್ ಗೆ ಸಾಥ್ ನೀಡುವ ನೃತ್ಯಾಂಗನೆಯಾಗಿ ರಾಧಿಕಾ ಉತ್ಕೃಷ್ಟ ಅಭಿನಯ ನೀಡಿದ್ದಾರಂತೆ. ಈಗ ಕಾದು ನೋಡುವ ಸರದಿ ನಿಮ್ಮದು.

 

Tags

Related Articles