ಬಾಲ್ಕನಿಯಿಂದಸುದ್ದಿಗಳು

ಹೊಸ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ “ಖನನ” 

ಹೊಸಬರ ವಿಭಿನ್ನ ಕಥೆಯುಳ್ಳ ಸಿನಿಮಾ

ಒಂದು ಸಿನಿಮಾ ಮಾಡುವುದೆಂದ್ರೆ ಸುಮ್ಮನೆ ಅಲ್ಲ, ಅದ್ರಲ್ಲೂ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಮನರಂಜನೆಯನ್ನ ಕೊಟ್ಟಾಗ ಮಾತ್ರ ಆ ಚಿತ್ರ ಸಾಕಷ್ಟು ಯಶಸ್ಸು ಕಾಣೋದಕ್ಕೆ ಸಾದ್ಯ ಹಾಗಾಗಿ ಇತ್ತೀಚಿನ ಹೊಸಬರ ಹೊಸ ಹೊಸ ಪ್ರಯತ್ನಗಳು ಪ್ರೇಕ್ಷಕರ ಮನಸನ್ನ ಗೆಲ್ಲುವಂತ ಕಥೆಯೊಂದಿಗೆ ತೆರೆಗೆ ಬರುತ್ತಿವೆ, ಈಗ ಅದೇ ಸಾಲಿಗೆ ಸೇರುವ ಮತ್ತೋಂದು ಚಿತ್ರ ಖನನ. ಖನನ ಸದ್ಯ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಾಗಿದೆ.

ಹೊಸಬರ ವಿಭಿನ್ನ ಕಥೆ

ಖನನ, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸ್ಯಾಂಪಲ್ಸ್ ಮೂಲಕ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಸಿನಿಮಾ.. ಈ ಹಿಂದೆ ಬರಹಗಾರ ಹಾಗೂ ಸಾಕಷ್ಟು ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಕೆಲಸ ಮಾಡಿದ್ದ ರಾಧ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.. ನಟ ಆರ್ಯವರ್ಧನ್ ಅವರು ಮೊದಲ ಬಾರಿಗೆ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ.. ಅವರಿಗೆ ಜೋಡಿಯಾಗಿ ನಟಿ ಕರೀಷ್ಮಾ ಬಣ್ಣ ಹಚ್ಚಿದ್ದಾರೆ.. ಸಂಪೂರ್ಣ ಒಂದು ಹೊಸ ಚಿತ್ರತಂಡ ಈ ಚಿತ್ರವನ್ನ ಮಾಡಿದೆ.. ಸದ್ಯ ತೆರೆಗೆ ಸಿದ್ಧವಾಗಿರುವ ಈ ಚಿತ್ರ ಸ್ಯಾಂಪಲ್ಸ್‌ನಿಂದ ಭಾರೀ ಕುತೂಹಲ ಮೂಡಿಸಿದೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ

ಖನನ ಅನ್ನುವ ಹೆಸರು ಕೇಳ್ತಿದ್ದ ಹಾಗೆ ಇದರ ಅರ್ಥವೇನಿರ್ಬಹುದು ಅನ್ನೋ ಕುತೂಹಲ ಮೂಡೋದು ಸಹಜ.. ಅಂದಹಾಗೆ ಖನನ ಅಂರೆ ತೋಡುವುದು.. ಅಗೆಯುವುದು, ಹೂಳುವುದು ಅಂತ ಅರ್ಥವಂತೆ.. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್‌ನ ಸಿನಿಮಾ.. ಟೀಸರ್ ನೋಡಿದ್ರೇನೇ ಸಿನಿಮಾ ಯಾವ ರೀತಿಯ ಜೋನರ್ ಗೆ  ಸೇರಿದ್ದು ಅನ್ನೋದು ಗೊತ್ತಾಗುತ್ತೆ.. ಟ್ರೇಲರ್‌ನ ಫ್ರೇಮ್ ಟು ಫ್ರೇಮ್‌ನಲ್ಲೂ ಕುತೂಹಲದ ಎಳೆಗಳು ಒಂದೊಂದಾಗಿ ಬಿಚ್ಚಿಕೊಳ್ತಾವೆ.. ಇಲ್ಲಿ ನಾಯಕ ಕಾರ್ಪೆಂಟರ್ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.. ಇನ್ನೊಂದು ಕುತೂಹಲ ಸಂಗತಿ ಅಂದ್ರೆ ಇಲ್ಲಿ ವಿಕ್ಕಿ ಅನ್ನುವ ನಾಯಿ ಕೂಡ ಒಂದು ಮುಖ್ಯವಾಗಿ ಕಾಣಿಸಿಕೊಳ್ತಿದೆ..

ವಾಸ್ತವಿಕ ಸತ್ಯವೇ ಥೀಮ್ ಆದ ಖನನ

ಮನುಷ್ಯನ ಜೀವನ ಅಂದ್ರೆ ಹಾಗೆ ನೋಡಿ, ಒಮ್ಮೆ ಖುಷಿಯಾಗಿದ್ರೆ, ಮತ್ತೊಮ್ಮೆ ಬೇಸರದಲ್ಲಿರ್ತಾನೆ.. ಇನ್ನೂ ಕೆಲವೊಮ್ಮೆಯಂತೂ ಜೀವನವೇ ಸಾಕಾಗಿ ಹೋಗಿ ತಪ್ಪು ನಿರ್ಧಾರಗಳನ್ನ ಕೈಗೊಂಡು ಸಾವಿಗೂ ಶರಣಾಗ್ತಾನೆ.. ಆದ್ರೆ ಈ ಬದುಕಿಗೂ ಒಂದು ಅರ್ಥವಿದೆ.. ನಾಳೆ ಅನ್ನೋದ್ರ ಮೇಲೆ ನಂಬಿಕೆ ಇರ್ಬೇಕು.. ಸಮಸ್ಯೆಗಳಿಗೆ ಪರಿಹಾರಗಳನ್ನ ಹುಡುಕಿಕೊಳ್ಬೇಕೇ ಹೊರತು ಬದುಕನ್ನೇ ಸಮಸ್ಯೆಯನ್ನಾಗಿ ನೋಡ್ಬಾರ್ದು.. ಅಷ್ಟಕ್ಕೂ ನಾವು ಯಾಕೆ ಬದುಕ್ಬೇಕು..? ಯಾವುದಕ್ಕೋಸ್ಕರ ಜೀವಿಸ್ಬೇಕು ಅನ್ನೋ ವಾಸ್ತವಿಕ ಸತ್ಯವನ್ನ ಥೀಮ್ ಆಗಿಟ್ಕೊಂಡು ಖನನ ಸಿನಿಮಾ ಮಾಡಿದ್ದಾರೆ ನಿರ್ದೇಶಕರು..

ತೆಲುಗು, ತಮಿಳು ಭಾಷೆಗಳಲ್ಲೂ ಖನನ 

ಇಂತಹದ್ದೊಂದು ಅರ್ಥಪೂರ್ಣ ಚಿತ್ರಕಥೆಯನ್ನ ಹೊಂದಿರುವ ಖನನ ಸಿನಿಮಾದಲ್ಲಿ ಆರ್ಯವರ್ಧನ್, ಕರೀಷ್ಮಾ ಜೊತೆಗೆ ಯುವ ಕಿಶೋರ್ ಕೂಡ ಮುಖ್ಯ ಪಾತ್ರದಲ್ಲಿಕಾಣಿಸಿಕೊಳ್ತಿದ್ದಾರೆ.. ಜೊತೆಗೆ ಬ್ಯಾಂಕ್ ಜನಾರ್ಧನ್, ಓಂ ಪ್ರಕಾಶ್ ರಾವ್, ಶ್ರೀನಿವಾಸ್ ರಾವ್, ವಿನಯಾ ಪ್ರಸಾದ್, ಮೋಹನ್ ಜುನೇಜಾ, ಹೊನ್ನವಳ್ಳಿ ಕೃಷ್ಣ, ಕೆಂಪೇಗೌಡ ಮುಂತಾದವರು ಸೇರಿದಂತೆ ಅತೀ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ..  ಟೀಸರ್ ಜೊತೆಗೆ ಚಿತ್ರದಲ್ಲಿ ಹಾಡುಗಳೂ ಕೂಡ ಸೊಗಸಾಗಿ ಮೂಡಿಬಂದಿದೆ.. ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಕುನ್ನಿ ಗುಡಿಪಾಥಿ ಅನ್ನುವವರು ಸಂಗೀತ ಸಂಯೋಜನೆ ಮಾಡಿದ್ದಾರೆ.. ವಿಶೇಷ ಅಂದ್ರೆ ಈ ಸಿನಿಮಾ ಕನ್ನಡ ಮಾತ್ರವಲ್ದೆ ತೆಲುಗು, ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗ್ತಿದೆ..

ಸದ್ಯ ಚೀತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ವರ್ಕ್ ಎಲ್ಲವೂ ಮುಗಿದಿದ್ದು, ಇನ್ನೇನು ಅಕ್ಟೋಬರ್‌ಗೆ ಚಿತ್ರವನ್ನ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.. ಎಸ್ ನಲಿಗೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗ್ತಿರುವ ಈ ಚಿತ್ರಕ್ಕೆ ಬಿ.ಶ್ರಿನಿವಾಸ್ ರಾವ್ ಬಂಡವಾಳ ಹೂಡಿದ್ದಾರೆ.. ಪ್ರಥಮ ನಿರೀಕ್ಷೆಗಳನ್ನ ಹುಟ್ಟುಹಾಕಿರುವ ಈ ಸಿನಿಮಾ, ತೆರಕಂಡ ನಂತ್ರ ಯಾವ್ ರೀತಿ ಕಮಾಲ್ ಮಾಡಿಲಿದೆ ಅಂತ ನೋಡ್ಬೇಕು..

 

Tags

Related Articles