ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನಭವಿಷ್ಯ: 20 ಏಪ್ರಿಲ್ 2019, ಶನಿವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

ಮೇಷ

ಯಾವುದೇ ರೀತಿಯ ವ್ಯರ್ಥ ಚರ್ಚೆಗಳನ್ನು ಮುಂದುವರೆಸದೆ ಇರುವುದು ಒಳ್ಳೆಯದು. ನಿಮ್ಮ ಸೋಲು ಇತರರಿಗೂ ಪಾಠ ಕಲಿಸಿದೆ. ಮುಂದಿನ ದಿನಗಳಲ್ಲಿ ಹೇಗೆ ಕಾರ್ಯ ಹಮ್ಮಿಕೊಳ್ಳಬೇಕು ಎಂದು ಸಾವಧಾನದಿಂದ ಚಿಂತಿಸಿ. ಯಾರೊಡನೆಯೂ ಮುಖ ಗಂಟಿಕ್ಕಿ ಮಾತನಾಡದಿರಿ. ಮುಖಕ್ಕೆ ನಗುವೇ ಶೃಂಗಾರ. ಹಾಗಾಗಿ ಎದುರಾದ ಜನರನ್ನು ನಗುನಗುತ್ತಲೇ ಮಾತನಾಡಿಸಿ ಮತ್ತು ಮಾತಿನ ನಾಜುಕೂತನದಿಂದಲೇ ಪರರ ತಪ್ಪನ್ನು ಎತ್ತಿ ತೋರಿಸಿ.

ಅದೃಷ್ಟ ಸಂಖ್ಯೆ:2

ವೃಷಭ

ಸಿನಿಮಾ, ನೃತ್ಯ, ನಾಟಕ ಅಥವಾ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಜನರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ಅವರ ಬಹುದಿನದ ಬೇಡಿಕೆಗಳು ಈಡೇರುವ ಸಾಧ್ಯತೆ ಇದೆ. ಅಲ್ಲಿ ಚುನಾವಣೆ ನಡೆದಲ್ಲಿ ಅದರಲ್ಲಿ ಪಾಲ್ಗೊಳ್ಳುವ ಅವಕಾಶ ಇರುತ್ತದೆ. ಮನೆಯ ವಾತಾವರಣವನ್ನು ನೀವು ದೂರ ಮಾಡಿಕೊಳ್ಳದಿರಿ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮೊದಲು ಮನೆಯ ಸದಸ್ಯರ ವಿಶ್ವಾಸವನ್ನು ಪಡೆದುಕೊಂಡು ಹೊರ ಜಗತ್ತಿನಲ್ಲಿ ವ್ಯವಹರಿಸಿ.

ಅದೃಷ್ಟ ಸಂಖ್ಯೆ:1

ಮಿಥುನ

ನೀವು ಮಾಡುತ್ತಿರುವ ಕೆಲಸಕ್ಕೆ ಸರಿಯಾದ ಸಂಬಳ ಅಥವಾ ಗೌರವ ದೊರೆಯುತ್ತಿಲ್ಲ ಎಂಬುದು ನಿಜವೇ. ಆದರೆ, ನೀವು ಅತ್ಯಂತ ಸ್ವಾಭಿಮಾನಿಯಾದ್ದರಿಂದ ಸಂಬಳ ಹೆಚ್ಚು ಮಾಡಿ ಎಂದು ನಿಮ್ಮ ಬಾಸಿನ ಹತ್ತಿರ ಹೇಳಿಕೊಳ್ಳಲು ಸಂಕೋಚ ಪಡದಿರಿ. ಹೊಸ ರೀತಿಯ ನಿಮ್ಮ ಕನಸನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ತರಲು ಹೇರಳ ಅವಕಾಶಗಳು ದೊರೆಯುವವು. ನಿಮಗೆ ಒದಗಿ ಬರುವ ಮಹತ್ತರ ಕಾಲಾವಕಾಶವನ್ನು ವ್ಯರ್ಥಮಾಡಿಕೊಳ್ಳದಿರಿ.

ಅದೃಷ್ಟ ಸಂಖ್ಯೆ:2

ಕಟಕ

ಕೆಲವು ದಿನಗಳಿಂದ ನಿಮ್ಮ ಬಾಸ್‌ ನಿಮ್ಮ ಕೆಲಸದಿಂದ ಸಂತೃಪ್ತಿಗೊಂಡಿದ್ದಾರೆ. ಇದು ನಿಮ್ಮ ಮುಂದಿನ ಭವಿಷ್ಯದ ಭದ್ರ ಬುನಾದಿಗೆ ಕಾರಣವಾಗುವುದು. ಮನೆಯಲ್ಲಿ ಮಡದಿ ಮಕ್ಕಳ ಸಹಕಾರವು ನಿಮಗೆ ನೆಮ್ಮದಿ ತರುವುದು.  ಬಾಳಸಂಗಾತಿಯ ಆರೋಗ್ಯದಲ್ಲಿ ಏರು ಪೇರುಗಳುಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯ ಸದಸ್ಯರ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:4

ಸಿಂಹ

ಸಾರ್ವಜನಿಕ ಜೀವನದಲ್ಲಿ ಜನಾನುರಾಗಿ ಎನಿಸಲಿದ್ದೀರಿ. ಮಾತಿನ ಚಾತುರ್ಯವು ನಿಮಗೆ ದೊಡ್ಡ ಆಸ್ತಿ ಆಗಲಿದೆ. ಆಂಜನೇಯ ಸ್ವಾಮಿಯನ್ನು ಅನನ್ಯ ಭಕ್ತಿಯಿಂದ ಪೂಜಿಸಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.  ಯಾರದೋ ಮಾತು ಕೇಳಿ ಇನ್ಯಾರ ಬಗೆಗೋ ತಪ್ಪು ಕಲ್ಪನೆ ಹೊಂದದಿರಿ. ತಪ್ಪು ಕಲ್ಪನೆ ತಾಳಿದ ವ್ಯಕ್ತಿಯಿಂದಲೇ ನಿಮಗೆ ಹೆಚ್ಚಿನ ಸಹಾಯ ಸಿಗುವುದು. ಹಾಗಾಗಿ ಸುಖಾಸುಮ್ಮನೆ ಮತ್ತೊಬ್ಬರ ಗುಣಾವಗುಣಗಳನ್ನು ತುಲನೆ ಮಾಡದಿರಿ.

ಅದೃಷ್ಟ ಸಂಖ್ಯೆ:5

ಕನ್ಯಾ

ಶಂಕರನ ಸ್ಮರಣೆಯಿಂದ ನಿಮ್ಮ ಕೆಲಸವು ಪುಟಕ್ಕಿಟ್ಟ ಬಂಗಾರದಂತೆ ಶೋಭಿಸುವುದು. ನಿಮ್ಮ ಮೇಲಧಿಕಾರಿಯು ನಿಮ್ಮ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡುವರು. ಶಂಭು ಶಿವನ ಆರಾಧನೆಯಿಂದ ಮಾನಸಿಕ ಬೇಗುದಿ ತಲ್ಲಣಗಳು ಒಂದು ಹಂತದ ನಿಯಂತ್ರಣಕ್ಕೆ ಬರುವವು. ಹಣಕಾಸಿನ ಏರುಪೇರಿನ ಸ್ಥಿತಿಯು ನಿಮ್ಮ ಮನಸ್ಸನ್ನು ಕಂಗೆಡಿಸುವುದು. ಈ ಬಗ್ಗೆ ಹೆಚ್ಚು ಚಿಂತೆ ಬೇಡ.

ಅದೃಷ್ಟ ಸಂಖ್ಯೆ:4

ತುಲಾ

ನಿಮ್ಮ ಸಮಸ್ಯೆಗಳಿಗೆ ಆತ್ಮೀಯರಿಂದ ಉತ್ತಮ ಸಲಹೆ ಸಿಗುವುದು. ಖಾಸಗಿ ಕಂಪನಿ ನೌಕರರಿಗೆ ಸಂತಸದ ಸುದ್ದಿ ದೊರೆಯುವುದು. ತಾಯಿ ಕಡೆಯಿಂದ ಆರ್ಥಿಕ ನೆರವು ಸಿಗಲಿದೆ. ಆರ್ಥಿಕ ಸಮಸ್ಯೆಗಳು ಒಂದು ತಾತ್ವಿಕ ಕೊನೆ ಕಾಣಲಿದೆ. ಬಂಧುಗಳ ಮನೆಯಲ್ಲಿ ನಡೆಯುವ ಮಂಗಳ ಕಾರ್ಯಕ್ಕೆ ಪರಿವಾರ ಸಮೇತ ತೆರಳುವಿರಿ. ಶತ್ರುಗಳ ಭೀತಿ ದೂರವಾಗಲಿದೆ. ಮನೆಯಲ್ಲಿ ಹಿರಿಯರ ಕಡೆಯಿಂದ ವಿವಾಹ ವಿಷಯ ಪ್ರಸ್ತಾಪವಾಗುವುದು.

ಅದೃಷ್ಟ ಸಂಖ್ಯೆ:2

ವೃಶ್ಚಿಕ

ಆಮೆ ವೇಗದಲ್ಲಿ ಸಾಗುತ್ತಿದ್ದ ಕೆಲಸಗಳು ವೇಗ ಹೆಚ್ಚಿಸಿಕೊಳ್ಳುವವು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಬರುವುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ಕಡಿಮೆ ಆಗುವುದು. ಬಂಧುಗಳೊಡನೆ ಸಂಬಂಧ ಗಟ್ಟಿಗೊಳ್ಳುವುದು.ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ಕೊಟ್ಟ ಸಾಲ ಭಾಗಶಃ ವಸೂಲಾಗುವ ಸಾಧ್ಯತೆಯಿದೆ. ಆದಾಯ ಮೂಲಗಳು ಹೆಚ್ಚಾಗುವವು. ಖರ್ಚು ವೆಚ್ಚಗಳಿಗೆ ಸರಿಯಾದ ಲೆಕ್ಕವಿಡುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:6

ಧನುಸ್ಸು

ಆಸ್ತಿ ಪಾಲು ಕುರಿತು ಚರ್ಚೆಯಾಗಲಿದೆ. ಕುಟುಂಬದಲ್ಲಿ ಒಗ್ಗಟ್ಟು ಮೂಡಲಿದೆ. ಪತ್ನಿಯ ಆರೋಗ್ಯ ಸುಧಾರಣೆಯಿಂದ ನೆಮ್ಮದಿ ಎನಿಸುವುದು. ಹಿಡಿದ ಕೆಲಸ ಕೈಗೂಡಲು ನವಗ್ರಹಾರಾಧನೆ ಮಾಡಿ. ನೀವು ಊಹಿಸದ ರೀತಿಯಲ್ಲಿ ಸಹೋದ್ಯೋಗಿಗಳು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯಿದೆ. ನೀವು ಸಂಧಾನ ಚತುರರಾಗಿರುವ ಕಾರಣ ಅದನ್ನು ಸಮರ್ಥವಾಗಿ ಎದುರಿಸುವಿರಿ. ನಿಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ.

ಅದೃಷ್ಟ ಸಂಖ್ಯೆ:5

ಮಕರ

ಪರಿವಾರದವರೊಂದಿಗೆ ವಿಹಾರಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ವಾಹನ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ನಿಮ್ಮ ಧೈರ್ಯ ಸ್ವಭಾವ ಎಲ್ಲರ ಮೆಚ್ಚುಗೆಪಡೆಯಲಿದೆ. ಅನಿರೀಕ್ಷಿತವಾಗಿ ಪ್ರೀತಿ ಪಾತ್ರರನ್ನು ಭೇಟಿಯಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಲ್ಪ ನಷ್ಟ ಕಂಡುಬರುವುದು. ಹಿರಿಯರ ಮೇಲೆ ವಿನಾಕಾರಣ ಮುನಿಸು ತೋರಿಸಬೇಡಿ. ಪ್ರೇಮ ಪ್ರಕರಣಗಳಿಂದ ದೂರವಿರುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:6

ಕುಂಭ

ರಾಜಕಾರಣಿಗಳ ಸಹವಾಸದಿಂದ ದೂರವಿರುವುದು ಉತ್ತಮ. ಇಲ್ಲವಾದರೆ ಅವರಿಂದ ಮಾನಸಿಕ ಕಿರುಕುಳ ಆನುಭವಿಸಬೇಕಾಗುವುದು. ಪಾಲುದಾರರ ಇಬ್ಬಗೆಯ ನೀತಿಯಿಂದಾಗಿ ವ್ಯವಹಾರದಲ್ಲಿ ನಷ್ಟಅನುಭವಿಸಬೇಕಾದೀತು. ಪೂರ್ವ ಸಿದ್ಧತೆ ಇಲ್ಲದೆ ಪ್ರಯಾಣ ಮಾಡ ಬೇಡಿ. ತಾಂತ್ರಿಕ ಪರಿಣಿತರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಸರ್ಕಾರಿ ನೌಕರರಿಗೆ ಅನಿರೀಕ್ಷಿತವಾಗಿ ಅಸ್ಥಿರತೆ ಕಾಣುವುದು. ಕುಲದೇವರ ಪ್ರಾರ್ಥನೆ ಮಾಡಿ.

ಅದೃಷ್ಟ ಸಂಖ್ಯೆ:2

ಮೀನ

ಆರ್ಥಿಕ ಪರಿಸ್ಥಿತಿ ಸ್ವಲ್ಪ ಬಿಗಡಾಯಿಸಬಹುದು. ಲೇವಾದೇವಿ ವ್ಯವಹಾರಕ್ಕೆ ಕೊಂಚ ಹಿನ್ನಡೆಯುಂಟಾಗುವುದು. ಮಾಧ್ಯಮದವರಿಗೆ ಸರ್ಕಾರದಿಂದ ಸವಲತ್ತುಗಳು ದೊರೆಯುತ್ತವೆ.  ಹೊಸ ವ್ಯವಹಾರದ ಆರಂಭವನ್ನು ಮುಂದೂಡುವುದು ಉತ್ತಮ. ಯೋಚಿಸಿ ಮಾತನಾಡಿ. ಅನವಶ್ಯಕ ಘರ್ಷಣೆ ಬೇಡ. ಅವಿವಾಹಿತ ಕನ್ಯೆಗೆ ಯೋಗ್ಯ ವರ ದೊರೆಯುವನು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ.

ಅದೃಷ್ಟ ಸಂಖ್ಯೆ:1

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿ ಯೋಗ ,ಅನಾರೋಗ್ಯ, ಮನೆಕಟ್ಟುವಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ, ದೈವಜ್ಞ ಜ್ಯೋತಿಷ್ಯರು 9845743807

ಹಾಗಲಕಾಯಿ ಫೇಸ್ ಪ್ಯಾಕ್ ಬಗ್ಗೆ ಕೇಳಿದ್ದೀರಾ?

#dinabhavishya #varabhavishya #jotishya #astrology #bhavishya #balkaninews

Tags