ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನಭವಿಷ್ಯ: 20 ಫೆಬ್ರವರಿ 2019, ಬುಧವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…..

ಮೇಷನಿಮ್ಮ ಚಾಕಚಕ್ಯತೆಯನ್ನು ಗಮನಿಸಿ ಏಕಕಾಲದಲ್ಲಿ ಹಲವಾರು ಕಾರ್ಯಯೋಜನೆಗಳು ನಿಮ್ಮ ಬಳಿ ಬರುವವು. ಅವುಗಳಲ್ಲಿ ಪ್ರಮುಖವಾದ ಕಾರ್ಯಗಳನ್ನು ಆದ್ಯತೆಯ ಮೇಲೆ ಹಮ್ಮಿಕೊಳ್ಳಿ, ಒಳಿತಾಗುವುದು.ಹಲವು ಮನೋಲ್ಲಾಸ ಘಟನೆಗಳು ನಡೆಯುವುದರಿಂದ ಹೆಚ್ಚಿನ ಉತ್ಸಾಹ, ಶಕ್ತಿ ಸಾಮರ್ಥ್ಯ‌ಗಳನ್ನು ಹೊಂದುವಿರಿ. ಹಣಕಾಸು ಕೂಡಾ ವಿವಿಧ ಮೂಲಗಳಿಂದ ಬರುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.

ಅದೃಷ್ಟ ಸಂಖ್ಯೆ:2

ವೃಷಭಈಗಾಗಲೇ ದೂರ ಪ್ರವಾಸವನ್ನು ಹಮ್ಮಿಕೊಂಡಿದ್ದಲ್ಲಿ ಅದನ್ನು ಮುಂದೂಡುವುದು ಒಳ್ಳೆಯದು. ಪ್ರಯಾಣದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಅನಿವಾರ್ಯ ಎಂದಾದಲ್ಲಿ ಶ್ರೀ ಲಕ್ಷ್ಮೀನರಸಿಂಹನನ್ನು ನೆನೆದು ಪ್ರಯಾಣ ಮಾಡಿ.ಜೀವನದ ಮಹತ್ವದ ಕ್ಷ ಣಗಳು ಸದಾಕಾಲ ಬರುವುದಿಲ್ಲ. ಆದರೆ ಆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಅದನ್ನು ತಿರಸ್ಕರಿಸಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ಬಹು ಬದಲಾವಣೆಗಳು ಉಂಟಾಗುವವು.

ಅದೃಷ್ಟ ಸಂಖ್ಯೆ:1

ಮಿಥುನಸಕಾರಾತ್ಮಕ ಚಿಂತನೆಯಿಂದ ಮಹತ್ತರ ಕೆಲಸವನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದು ನಿಮ್ಮ ಪ್ರಸಿದ್ಧಿಗೆ ದಾರಿಯಾಗುವುದು. ಇದರ ಜತೆಗೆ ಖರ್ಚಿನ ದಾರಿ ತೆರೆದುಕೊಳ್ಳುವುದರಿಂದ ಖರ್ಚು ವೆಚ್ಚದ ಕಡೆ ಬಿಗಿ ಹಿಡಿತ ಮಾಡುವುದು ಒಳ್ಳೆಯದು.ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧಾರ ಮಾಡುತ್ತಾರೆಂಬ ಭ್ರಮೆಗೆ ಒಳಗಾಗುವಿರಿ. ಜೀವನದಲ್ಲಿ ಹಲವು ಏರಿಳಿತಗಳನ್ನು ಕಾಣುವಿರಿ. ಮನೋ ನಿಯಾಮಕ ರುದ್ರದೇವರನ್ನು ಭಜಿಸಿ.

ಅದೃಷ್ಟ ಸಂಖ್ಯೆ:2

ಕಟಕಮಾತಾ ದುರ್ಗಾದೇವಿಯನ್ನು ಅನನ್ಯ ಭಕ್ತಿಯಿಂದ ಜಪಿಸಿ. ನಿಮ್ಮ ಇಷ್ಟಾರ್ಥ ಸಿದ್ಧಿಸುವುದು. ಬರುವ ದಿನಗಳಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುವುದು. ಅನಗತ್ಯ ವಿಚಾರಗಳನ್ನು ತಲೆಗೆ ತುಂಬಿಕೊಂಡು ಚಿಂತೆ ಮಾಡಬೇಡಿ.ಸದ್ಯದ ಪರಿಸ್ಥಿತಿಯು ಏಕಾಂತ ಸ್ಥಳವನ್ನು ಬಯಸುತ್ತದೆ. ಅಂತೆಯೇ ಮನಸ್ಸಿನ ನೆಮ್ಮದಿಗಾಗಿ ಅಂತಹ ಸ್ಥಳವನ್ನು ಹುಡುಕಿಕೊಂಡು ಹೋಗುವಿರಿ. ಇದರಿಂದಾಗಿ ಮಾನಸಿಕ ನೆಮ್ಮದಿ ದೊರೆಯುವುದು. ಕಷ್ಟಗಳನ್ನು ಎದುರಿಸುವ ಶಕ್ತಿ ಬರುವುದು.

ಅದೃಷ್ಟ ಸಂಖ್ಯೆ:4

ಸಿಂಹನೀವು ಅಂದುಕೊಂಡಿರುವ ಮಹತ್ತರ ಕೆಲಸಗಳಿಗೆ ಅಡೆ ತಡೆಗಳು ಉಂಟಾಗುವ ಸಾಧ್ಯತೆ ಇದೆ. ಗುರು ಮತ್ತು ಶನಿ ನಿಮ್ಮನ್ನು ವಿವಿಧ ರೀತಿಗಳಿಂದ ಪರೀಕ್ಷಿಸುವರು. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗುರು ಹಿರಿಯರ ಆಶೀರ್ವಾದ ಅಗತ್ಯವಿದೆ.ಹಲವು ವಿಧಗಳಿಂದ ಮಹತ್ತರ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಯಾವುದೇ ಅಡೆತಡೆಗಳಿಲ್ಲದೆ ಮುಗಿಯುವವು. ಬಂಧುಗಳು ಸ್ನೇಹಿತರು ನಿಮಗೆ ಸಹಾಯ ಮಾಡಲು ಮುಂದೆ ಬರುವರು.

ಅದೃಷ್ಟ ಸಂಖ್ಯೆ:6

ಕನ್ಯಾಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮಗಿದೆ. ಸಕಾರಾತ್ಮಕವಾಗಿ ಮುಂದುವರಿಯಿರಿ. ಇದರಿಂದ ನಿಮ್ಮ ಕೀರ್ತಿ ಗೌರವ ಇಮ್ಮಡಿಯಾಗುವವು. ನೀವು ಕೆಲಸ ಮಾಡುತ್ತಿರುವ ಕಚೇರಿಯ ಎಲ್ಲೆಡೆ ನಿಮ್ಮದೇ ಗುಣಗಾನ ಇರುತ್ತದೆ.ಒಂದು ಕಡೆ ಮಾಡಿದ ಸಾಲವನ್ನು ತೀರಿಸಲು ಮತ್ತೊಂದು ಕಡೆ ಸಾಲ ಮಾಡಿದಂತೆ ಒಂದು ಸಮಸ್ಯೆಯಿಂದ ಬಿಡುಗಡೆ ಆಯಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ ಒಳಿತಾಗುವುದು.

ಅದೃಷ್ಟ ಸಂಖ್ಯೆ:8

ತುಲಾನೀವು ಸಮಾಜದ ಎಲ್ಲಾ ಮಂದಿಯ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಗಳಿಸುವಿರಿ. ಇದು ನಿಮ್ಮ ಮುಂದಿನ ರಾಜಕೀಯ ಜೀವನಕ್ಕೆ ಮಹತ್ತರ ಬದಲಾವಣೆ ತಂದುಕೊಡುತ್ತದೆ. ಹಾಗಾಗಿ ಎಲ್ಲರೊಡನೆ ಸಮಾಲೋಚಿಸಿ ನಿರ್ಧಾರ ತಳೆಯಿರಿ.ನಿಮ್ಮ ಮನದಲ್ಲಿನ ದುಗುಡಗಳು ಕಡಿಮೆ ಆಗಿ ಮನಸ್ಸು ಕೊಳದ ನೀರಿನಂತೆ ಪ್ರಶಾಂತವಾಗುವುದು. ಇದರಿಂದ ನಿಮ್ಮ ಮನದಲ್ಲಿ ಉತ್ತಮ ವಿಚಾರಗಳು ಹೊರಹೊಮ್ಮುವವು ಮತ್ತು ನೀವು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವಿರಿ.

ಅದೃಷ್ಟ ಸಂಖ್ಯೆ:6

ವೃಶ್ಚಿಕನಿಮ್ಮ ಒಳ ಮಹತ್ವಾಕಾಂಕ್ಷೆಗಳಾದ ಅಧಿಕಾರ ಮತ್ತು ಜನಪ್ರಿಯತೆಗಳು ನಿಮ್ಮ ಆತುರದಿಂದ ಹಾಳಾಗುವವು. ಆತುರಗಾರನಿಗೆ ಬುದ್ಧಿಮಟ್ಟ ಕಡಿಮೆ ಎಂಬ ಮಾತು ನಿಮಗೆ ಅನ್ವಯಿಸುವುದು. ಸಾವಧಾನವಾಗಿ ತೀರ್ಮಾನ ಕೈಗೊಳ್ಳಿ.ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವುಗಳು ಉಂಟಾದರೂ ಅಂತಿಮವಾಗಿ ನಿಮಗೆ ಗೆಲುವು ನಿಶ್ಚಿತವಾಗಿರುತ್ತದೆ. ಮಾತೆ ದುರ್ಗಾದೇವಿಯನ್ನು ಸ್ಮರಿಸುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ:4

ಧನುಸ್ಸುಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಜಾಣತನದಿಂದ ಯೋಚಿಸಬಹುದಾಗಿದೆ. ಮಗನು ತನ್ನ ಕಾರ್ಯದಲ್ಲಿ ತಲ್ಲೀನನಾಗಿದ್ದು ನಿಮ್ಮ ಹೆಚ್ಚಿನ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಿರುವುದು ನಿಮಗೆ ಹೆಮ್ಮೆ ಎನಿಸುವುದು. ಜೀವವಿಮಾ ವಿಭಾಗದಲ್ಲಿ ಹೆಚ್ಚಿನ ಒಲವು ಯಶಸ್ಸು ದೊರೆಯಲಿದೆ. ಬಹುದಿನದ ಕನಸು ನಿಮ್ಮದಾಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಹೆಚ್ಚಿನ ಸಂಭ್ರಮ ಪಡುವುದು ಬೇಡ. ಕಾರ್ಯ ಪೂರ್ಣವಾದ ಮೇಲೆ ಸಂಭ್ರಮಿಸುವುದು ಇದ್ದೇ ಇರುತ್ತದೆ.

ಅದೃಷ್ಟ ಸಂಖ್ಯೆ:9

ಮಕರಮಾಡುವ ಕೆಲಸ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಮಾಡಿದರೆ ಯಾರಿಂದಲೂ ಟೀಕೆಗೆ ಆಸ್ಪದವಿರುವುದಿಲ್ಲ. ಆದರೆ ನಿಮ್ಮಲ್ಲಿರುವ ಜಡತ್ವವನ್ನು ತೊಡೆದು ಹಾಕಿ ಕಾರ್ಯ ಪ್ರವೃತ್ತರಾದರೆ ಹೆಚ್ಚಿನ ಲಾಭ ಹೊಂದುವಿರಿ.ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ಪ್ರಸಂಗಗಳೇ ಹೆಚ್ಚಾಗುತ್ತಿರುವುದರಿಂದ ಮಾನಸಿಕ ಖಿನ್ನತೆ ಎದುರಾಗುವುದು. ಆಂಜನೇಯ ಸ್ವಾಮಿ ಸ್ತೋತ್ರ ಮತ್ತು ಗುರುವಿನ ಸ್ತೋತ್ರ ಪಠಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ.

ಅದೃಷ್ಟ ಸಂಖ್ಯೆ:8

ಕುಂಭಮಿತ್ರರಾಗಲೀ ನಿಮ್ಮ ಮೇಲಧಿಕಾರಿಗಳಾಗಲಿ ನಿಮ್ಮ ಕಾರ್ಯ ತತ್ಪರತೆಯನ್ನು ಕಂಡು ತಮ್ಮ ಹರ್ಷವನ್ನು ವ್ಯಕ್ತಪಡಿಸುವರು. ವೃತ್ತಿ ಜೀವನದಲ್ಲಿ ಇದು ನಿಮಗೆ ಹೊಸ ದಾರಿಯನ್ನು ತೋರಿಸುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.ಕಬ್ಬಿಣ, ಪ್ಲಾಸ್ಟಿಕ್‌ ಮತ್ತು ಸಿಮೆಂಟ್‌ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಕಂಡು ಬರುವುದು. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಕಂಡು ಬಂದರೆ ಕೆಲವರಿಗೆ ತಾವಿರುವ ಮನೆಯನ್ನು ಬದಲಾಯಿಸುವ ಸಂದರ್ಭ ಬರಲಿದೆ.

ಅದೃಷ್ಟ ಸಂಖ್ಯೆ:2

ಮೀನಆಧ್ಯಾತ್ಮದ ಓದು ಹೊಸ ರೀತಿಯ ಚಿಂತನೆಗಳಿಗೆ ದಾರಿ ಮಾಡಿಕೊಡುವುದು. ಇದರಿಂದ ನೀವು ಆಂತರಿಕವಾಗಿ ಪರಿಶುದ್ಧಗೊಳ್ಳುವಿರಿ. ನಿಮ್ಮ ಆತ್ಮಶಕ್ತಿಯು ಜಾಗೃತವಾಗುವುದು. ನಿಮ್ಮದೆ ಆದ ಅನುಭವಗಳ ಮೂಸೆಯಲ್ಲಿ ಪ್ರಸಿದ್ಧ ವಿಚಾರಗಳು ನಿಮಗೆ ಅನುಕೂಲಕರ ವಾತಾವರಣವನ್ನುಂಟು ಮಾಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವರು.

ಅದೃಷ್ಟ ಸಂಖ್ಯೆ:1

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ, ದೈವಜ್ಞ ಜ್ಯೋತಿಷ್ಯರು 9845743807

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಇಂದಿಗೆ 33 ವರ್ಷಗಳು

#dinabhavishya #varabhavishya #astrology #balkaninews #dailyastrology #weeklyastrology

 

Tags

Related Articles