ದಿನ ಭವಿಷ್ಯಬಾಲ್ಕನಿಯಿಂದ

ಬಾಲ್ಕನಿ ದಿನಭವಿಷ್ಯ: 9 ಏಪ್ರಿಲ್ 2019, ಮಂಗಳವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

ಮೇಷ

ನಿಮ್ಮ ಯೋಜನೆಗಳನ್ನು ಹಿತಮಿತವಾಗಿ ಹಾಕಿಕೊಳ್ಳಿ. ‘ಲಾಭ ಮತ್ತು ನಷ್ಟದ ವಿಚಾರದಲ್ಲಿ’ ಸ್ಥಿತಪ್ರಜ್ಞನಾಗಿರು ಎಂದು ಗೀತೆಯು ಬೋಧಿಸುವುದು. ಗುರುವಿನ ಕೃಪೆಯನ್ನು ಹೊಂದುವುದು ಅನಿವಾರ್ಯ. ನವಮ ಭಾಗ್ಯದ ಶನಿ ಪಿತೃ ಆರೋಗ್ಯದಲ್ಲಿ ತೊಂದರೆ ಕೊಡುವ ಸಾಧ್ಯತೆ ಇದೆ. ಅಷ್ಟಮ ಶನಿಯ ಕಾಟವು ನಿಮಗೆ ಸೋಲನ್ನು ಉಂಟು ಮಾಡುವ ಸಾಧ್ಯತೆ ಇದೆ. ನಿರ್ವಿಘ್ನಗಳನ್ನು ತರದಂತೆ ಗಣಪತಿಯನ್ನು ಮತ್ತು ದುರ್ಗೆಯನ್ನು ಆರಾಧಿಸಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತನ್ನು ಕೇಳಿದಲ್ಲಿ ಹೆಚ್ಚಿನ ತೊಂದರೆ ಎದುರಾಗುವುದಿಲ್ಲ.

ಅದೃಷ್ಟ ಸಂಖ್ಯೆ:2

ವೃಷಭ

ಬೌದ್ಧಿಕ ಚಾತುರ್ಯ ಪ್ರವೀಣರಾದ ನಿಮಗೆ ಬಾಳಿನಲ್ಲಿ ಸಂತಸದ ಕ್ಷ ಣಗಳನ್ನು ಆಸ್ವಾದಿಸಲು ಸಾಕಷ್ಟು ಸಮಯ ದೊರೆಯುವುದು. ಹಳಿ ತಪ್ಪದ ರೈಲು ಸರಾಗವಾಗಿ ಓಡುತ್ತದೆ. ಆದರೆ ನಾಲಿಗೆ ತಪ್ಪಿ ಮಾತನಾಡಿದಾಗ ಅವಘಡಗಳು ಜಾಸ್ತಿ, ಮಾತಿನಲ್ಲಿ ಮೃದುತ್ವ ಇರಲಿ. ನಿಮ್ಮ ವಿಚಾರದಲ್ಲಿ ನೇರವಾಗಿಯೇ ಕಿರುಕುಳ ಕೊಡುವವರು ಕೆಲ ಜನ ಇರುತ್ತಾರೆ. ಆದರೆ ಗುರುವಿನ ಕೃಪೆ ನಿಮ್ಮ ಮೇಲೆ ಇದೆ. ಗುರು ಒಲಿದರೆ ಕೊರಡು ಕೊನರುವುದಯ್ಯಾ ಎನ್ನುವಂತೆ ಅವರೆಲ್ಲರ ಕಿರುಕುಳ ನಿಮಗೆ ಪುಷ್ಪವೃಷ್ಟಿಯನ್ನು ಮಾಡುವಂತೆ ಆಗುತ್ತದೆ. ಧೈರ್ಯದಿಂದಿರಿ.

ಅದೃಷ್ಟ ಸಂಖ್ಯೆ:1

ಮಿಥುನ

ಧೈರ್ಯದಿಂದ ಗೆಲ್ಲುವ ಕಾಲ ವಿರೋಧಿಗಳಿಂದಲೇ ಬರುವ ಸಂಭವವಿದೆ. ವ್ಯಯಸ್ಥಾನದ ರಾಹುವಿನ ಪ್ರಭಾವದಿಂದ ಕೆಲಕಾಲ ಊರನ್ನು ಬಿಡಿಸುವ ಸಾಧ್ಯತೆ ಇದೆ. ಆದರೆ ಇದರಿಂದ ನಿಮಗೆ ಲಾಭವೇ ಆಗುವುದು. ದಿವ್ಯವಾದ ಶಕ್ತಿಯ ಸಂಪಾದನೆಗೆ ದಾರಿ ಆಗುವುದು. ಅದರಿಂದ ಮನಸ್ಸು ಪ್ರಫುಲ್ಲವಾಗುವುದು. ಸಾಲದ ಬಾಧೆಯಿಂದ ಮುಕ್ತನಾಗಲು ಹೊಸ ಸಾಲ ಮಾಡುವುದು ತರವಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಿ, ನಿಮ್ಮನ್ನು ಬಾಧಿಸಲು ಹಠ ಹೊತ್ತಿರುವ ಜನರ ವಿರುದ್ಧ ಸಾತ್ವಿಕ ಹೋರಾಟ ಮಾಡಿ. ಕೆಲವೊಂದು ಅಗೋಚರ ಶಕ್ತಿಯು ನೀವು ಗೆಲ್ಲುವಂತೆ ಮಾಡುವುದು. ಭಗವಂತನಿಗೆ ಶರಣು ಹೋಗಿ.

ಅದೃಷ್ಟ ಸಂಖ್ಯೆ:4

ಕಟಕ

ನಯವಂಚಕರನ್ನು ನಯವಾಗಿಯೇ ನಿಯಂತ್ರಿಸಿ. ಅನೇಕ ರೀತಿಯ ಒಳಿತುಗಳನ್ನು ಸಾಧಿಸಿಕೊಳ್ಳಲು ಕಾಲ ಪಕ್ವವಾಗಿದೆ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯಿರಿ. ಆದರೆ ಅವರು ನಿಮ್ಮ ಹೇಗಲೇರಿ ಕುಳಿತುಕೊಳ್ಳದಂತೆ ನಿಗಾ ವಹಿಸಿ. ನಿಮ್ಮ ಸ್ವಂತ ಶಕ್ತಿಯಿಂದ ಲಾಭವುಂಟಾಗುವುದು.ಹೊಯ್ದಾಡುವ ಮನಸ್ಸು ಅಪಾಯಕಾರಿ. ಬಹುಮುಖ್ಯವಾದುದನ್ನು ಮಾಡಿ ಮುಗಿಸಬೇಕೆಂಬ ಸಂಕಲ್ಪದೊಂದಿಗೆ ಕೆಲಸ ಆರಂಭಿಸಿ. ಆಗ ನಿಮ್ಮ ಕಾರ್ಯಗಳಲ್ಲಿ ಜಯ ಹೊಂದಲು ಸಾಧ್ಯವಾಗುವುದು. ಬಹು ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ವಿಳಂಬವಾದರೂ ಕಾರ್ಯಸಿದ್ಧಿ ಆಗುವುದು.

ಅದೃಷ್ಟ ಸಂಖ್ಯೆ:6

ಸಿಂಹ

ಬಹು ಖರ್ಚಿನ ಬಾಬ್ತುಗಳ ಬಗ್ಗೆ ವಿಚಾರ ಮಾಡದೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಮುಂದಾಗದಿರಿ. ಗುರುವಿನ ಅನುಗ್ರಹ ಮತ್ತು ಆಂಜನೇಯನ ಕೃಪಾಶೀರ್ವಾದಕ್ಕಾಗಿ ಹನುಮಾನ್‌ ಚಾಲೀಸಾ ಪಠಣ ಮಾಡಿ. ಪ್ರಯಾಣ ಕಾಲದಲ್ಲಿ ತುಸು ಎಚ್ಚರಿಕೆ ಅಗತ್ಯ.ಅಧಿಕಾರವನ್ನು ಪಡೆಯಲು ಮತ್ತು ಮಹತ್ವದ ಪುರಸ್ಕಾರ ಪಡೆಯಲು ಲಾಭದಾಯಕ ವ್ಯವಹಾರದಲ್ಲಿ ಕೈಹಾಕಲು ಇದು ಉತ್ತಮ ಅವಧಿ. ನೀವು ಬುದ್ಧಿವಂತರು ಎಂಬುದಕ್ಕೆ ಎರಡು ಮಾತಿಲ್ಲ. ಆದರೆ ಅನ್ಯರನ್ನು ಅಳೆದು ಅವರ ಶಕ್ತಿ ತಿಳಿಯಲು ತಾಳ್ಮೆ ಇರಲಿ. ಧೈರ್ಯಹೀನರಾಗದಿರಿ.

ಅದೃಷ್ಟ ಸಂಖ್ಯೆ:6

ಕನ್ಯಾ

ಕೆಲಸ ಕಾರ್ಯಗಳು ಜಯ ತರುತ್ತದೆಯಾದರೂ ಖರ್ಚಿಗೂ ಅನೇಕ ದಾರಿಗಳಿವೆ. ಗಣಪತಿ ಆರಾಧನೆಯಿಂದ ವ್ಯರ್ಥ ಕಸರತ್ತುಗಳಿಗೆ ಅಡೆತಡೆಗಳು ಬೀಳುತ್ತವೆ. ಸ್ವಯಂ ಉದ್ಯೋಗಿಗಳು ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ಫಲ ದೊರೆಯಲಿದೆ.ಅಂದುಕೊಂಡ ವೇಗದಲ್ಲಿ ಹೆಜ್ಜೆ ಇಡಲು ಸಾಧ್ಯವಾಗದು. ಏನೋ ಒಂದು ತಡೆಯುತ್ತಿರುವಂತೆ ಜಡತೆ ಬಂದು ಕಿರಿಕಿರಿ ಎನಿಸುವ ವರ್ತಮಾನವನ್ನು ಎದುರಿಸಬೇಕಾಗುವುದು. ಮನೆಯ ಸಮಸ್ಯೆಗಳನ್ನು ಹೊರಗಡೆ ಚರ್ಚೆ ಮಾಡುವುದು ಸೂಕ್ತವಲ್ಲ.

ಅದೃಷ್ಟ ಸಂಖ್ಯೆ:4

ತುಲಾ

ಟೀಕೆ ಟಿಪ್ಪಣಿಗಳಿಗೆ ಹೆದರದಿರಿ. ಹಾಗಂತ ಭಂಡತನ ಪ್ರದರ್ಶನ ಮಾಡಬೇಡಿ. ಅಪರೂಪದ ವಿಷಯವೊಂದು ಸಿದ್ಧಿಸಲಿದೆ. ಕೆಲಸವನ್ನು ಬಹು ಎಚ್ಚರಿಕೆಯಿಂದ ಮಾಡಿ. ಗೆಲುವಿಗೆ ಹಲವು ದಾರಿಗಳಿವೆ.ಬಂಧುಗಳು, ಹಿತೈಷಿಗಳು ನಿಮ್ಮನ್ನು ಕೊಂಡಾಡುವರು. ಮಗನ ಮದುವೆ ಮಾತುಕತೆಗಾಗಿ ಕೆಲವು ಹೆಣ್ಣಿನ ಜಾತಕಗಳ ಮಾಹಿತಿ ನೀಡುವರು. ಆದರೆ ಎಲ್ಲವೂ ಕಾಲವೇ ನಿರ್ಧರಿಸುವುದರಿಂದ ನೀವು ಮೂಕ ಪ್ರೇಕ್ಷ ಕನಂತೆ ವರ್ತಿಸಬೇಕಾಗುವುದು.

ಅದೃಷ್ಟ ಸಂಖ್ಯೆ:9

ವೃಶ್ಚಿಕ

ವಿನಾಕಾರಣ ವೈರ ಸಾಧಿಸುವ ಛಲ ಬೇಡ. ಬಾಳು ಮೂರು ದಿನದ್ದು ಹಾಗಾಗಿ ಯಾರಲ್ಲಿಯೂ ದ್ವೇಷ ಸಾಧಿಸದೆ ಸ್ನೇಹ ಪ್ರೀತಿಯ ಮೂಲಕ ಔದಾರ್ಯ ಮೆರೆಯಿರಿ. ಇದರಿಂದ ನಿಮಗೆ ಸಮಾಜದಲ್ಲಿ ಹೆಚ್ಚಿನ ಮನ್ನಣೆ ದೊರೆಯುವುದು. ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಇದೆ. ಸಕಲವನ್ನು ಗೆಲ್ಲಬಲ್ಲೆ ಎಂಬ ಆತ್ಮವಿಶ್ವಾಸ ಇದೆ. ಅದಕ್ಕೆ ಪೂರಕವಾಗಿ ಬಂಧುಬಾಂಧವರು ಸಹಕರಿಸುವರು. ಹಾಗಾಗಿ ಅತ್ಯಂತ ಹರ್ಷದಾಯಕವಾದ ದಿನವಾಗಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಉಂಟಾಗುವುದು.

ಅದೃಷ್ಟ ಸಂಖ್ಯೆ:6

ಧನುಸ್ಸು

ನಿಮ್ಮನ್ನು ಹಣಕಾಸಿನ ವಿಷಯದಲ್ಲಿ ಕಟ್ಟಿ ಹಾಕಲು ಷಡ್ಯಂತ್ರ ನಡೆಯಲಿದೆ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಫಲವಾಗಿ ನಿಮ್ಮನ್ನು ಬ್ಲಾಕ್‌ ಮೇಲ್‌ ಮಾಡುವ ಎಲ್ಲಾ ಸಾಧ್ಯತೆ ಇದ್ದು ಅದಕ್ಕೆ ಪೂರಕವಾದ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳುವುದು ಕ್ಷೇಮ.ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡಿ. ಆದರೆ ಒರಟುತನದಿಂದ ಪ್ರಶ್ನಿಸುವುದು ಮತ್ತು ಉತ್ತರಿಸುವುದು ಜ್ಞಾನವಂತರ ಲಕ್ಷ ಣವಲ್ಲ. ಆದಷ್ಟು ಸಾವಧಾನದಿಂದ ಗ್ರಾಹಕರೊಂದಿಗೆ ವ್ಯವಹರಿಸಿ. ಯಶಸ್ಸಿಗೆ ದಾರಿ ಸುಗಮವಾಗುವುದು.

ಅದೃಷ್ಟ ಸಂಖ್ಯೆ:8

ಮಕರ

ನಿಮ್ಮ ಅತಿ ಮುಂಗೋಪವೇ ಎಲ್ಲಾ ಅನರ್ಥಕ್ಕೆ ಕಾರಣವಾಗುವುದು. ಇದನ್ನೇ ಮುಂದು ಮಾಡಿಕೊಂಡು ನಿಮ್ಮ ಬಾಳಸಂಗಾತಿಯು ಮನೆ ತೊರೆಯುವ ಬೆದರಿಕೆ ಹಾಕುವ ಸಾಧ್ಯತೆ ಇದೆ. ಆದಷ್ಟು ಸಮಾಧಾನದಿಂದ ವ್ಯವಹರಿಸಿ. ಹೆಚ್ಚಿನ ಹಾನಿಯನ್ನು ತಡೆಗಟ್ಟಿ. ಪಾರ್ಟನರ್‌ಶಿಪ್‌ ವ್ಯವಹಾರಗಳಿಗೆ ಕೈಹಾಕಿದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಸಂಶಯಾತ್ಮ ವಿನಶ್ಯಾಂತಿ ಎನ್ನುವಂತೆ ಸಂಶಯ ನಿಮ್ಮ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಇದರಿಂದ ಆರ್ಥಿಕ ಹೊರೆ ಎದುರಿಸಬೇಕಾಗುವುದು.

ಅದೃಷ್ಟ ಸಂಖ್ಯೆ:4

ಕುಂಭ

ನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿರುತ್ತದೆ. ಅಪರೂಪದ ಪ್ರಭಾವಿ ಜನರು ನಿಮ್ಮಿಂದ ಸಹಾಯ ಬಯಸಿದ್ದಾರೆ. ನೀವು ಅವರಿಗೆ ಸಹಾಯ ಮಾಡುವುದರಿಂದ ಮುಂದೆ ಅವರಿಂದ ನಿಮಗೆ ವಿಶೇಷ ಸಹಕಾರ ದೊರೆಯುವುದು.ಹೊಸ ಸ್ನೇಹಿತ ವಲಯವೊಂದನ್ನು ನೀವು ಸಂಪಾದಿಸಲಿದ್ದೀರಿ. ಗೌರವಾನ್ವಿತ ವ್ಯಕ್ತಿಗಳು ನಿಮ್ಮ ಸ್ನೇಹಕ್ಕಾಗಿ ಕೈ ಚಾಚುವರು. ಇದರಿಂದ ನಿಮ್ಮ ಗೌರವ ಘನತೆ ಹೆಚ್ಚಾಗುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಅದೃಷ್ಟ ಸಂಖ್ಯೆ:2

ಮೀನ

ಕಾರ್ಯವಾಸಿ ಕತ್ತೆಕಾಲು ಹಿಡಿ ಎನ್ನುವಂತೆ ನಿಮಗೆ ಬೇಡದೆ ಇದ್ದರೂ ನಿಮ್ಮ ಕಾರ್ಯ ಸಾಧನೆಗಾಗಿ ವಿರೋಧಿಯ ಸಹಕಾರವನ್ನು ಪಡೆಯಬೇಕಾಗುವುದು. ಮೇಲಧಿಕಾರಿಗಳ ಸಹಕಾರ ನಿಮಗೆ ದೊರೆಯಲಿದೆ. ನಿಮ್ಮ ಹಿತೈಷಿಗಳು ಬಂಧುಗಳು ನಿಮ್ಮನ್ನು ಸುತ್ತುವರೆಯುವರು. ನೀವು ಹಮ್ಮಿಕೊಂಡ ಕಾರ್ಯಗಳು ಸರಾಗವಾಗಿ ನಡೆಯುವವು. ಮಗನ ಮಾತು ನಿಮಗೆ ಅಲ್ಪ ಬೇಸರ ಉಂಟು ಮಾಡುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ:1

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನ ಕೊರತೆ , ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ, ದೈವಜ್ಞ ಜ್ಯೋತಿಷ್ಯರು 9845743807

ಸುಮಲತ ಬಳಿಕ ಬಿಜೆಪಿ ಅಭ್ಯರ್ಥಿ ಪರ ಬೆಂಗಳೂರು ಕೇಂದ್ರದಲ್ಲಿ ದಚ್ಚು ಪ್ರಚಾರ…!!!

#balkaninews #astrology #dinabhavishya #varabhavishya #astrology

Tags

Related Articles