ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಕಿರುತೆರೆಯ ಮೂಲಕ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾದೆ : ಭವಾನಿ ಸಿಂಗ್

ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ಗುರುಮೂರ್ತಿ ಆಲಿಯಾಸ್ ಗ್ಯಾರಿ ಆಗಿ ಕಿರುತೆರೆ ಪ್ರಿಯರ ಮನ ಕದ್ದ ಭವಾನಿ ಸಿಂಗ್ ಇದೀಗ ಹೊಸ ಪಾತ್ರದ ಮೂಲಕ ಮತ್ತೊಮ್ಮೆ ವೀಕ್ಷಕರನ್ನು ರಂಜಿಸಲು ತಯಾರಾಗುತ್ತಿದ್ದಾರೆ. ಹೌದು! ಕಿರುತೆರೆಯ ಮುದ್ದಾದ ಹುಡುಗ ಭವಾನಿ ಸಿಂಗ್ ಅಣ್ಣನಾಗಲಿದ್ದಾರೆ! ಅರ್ಥಾತ್ ಅಣ್ಣನ ಅವತಾರದಲ್ಲಿ ಕಿರುತೆರೆ ವೀಕ್ಷಕರ ಮನ ಸೆಳೆಯಲು ಬರುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ರಕ್ಷಾಬಂಧನ ಧಾರಾವಾಹಿಯಲ್ಲಿ ಭವಾನಿಸಿಂಗ್ ಜವಾಬ್ದಾರಿಯುತ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಕ್ಷಾ ಬಂಧನ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರಕ್ಕೆ ಜೀವ ತುಂಬಲಿರುವ ಭವಾನಿ ಸಿಂಗ್ ವಿಭಿನ್ನ ಪಾತ್ರದ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ. ಮನೆಯ ಸಂಪೂರ್ಣ ಹೊಣೆ ಹೊಂದಿರುವ ಕಾರ್ತಿಕ್ ಗೆ ಮೂರು ಜನ ತಂಗಿಯಂದಿರು. ತಂಗಿಯಂದಿರ ಯೋಗಕ್ಷೇಮ ನೋಡಿಕೊಳ್ಳುವ ಕಾರ್ತಿಕ್ ಗೆ ತಂಗಿಯರೆಂದರೆ ಜೀವ. ತಂಗಿಯಂದಿರ ತಂಟೆಗೆ ಯಾರಾದರೂ ಬಂದರೆ ಅವರೆ ಕಥೆ ಮುಗಿದಂತೆಯೇ! ಒಟ್ಟಿನಲ್ಲಿ ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮುಂದೆ ಬರುತ್ತಿದ್ದಾರೆ ಭವಾನಿ ಸಿಂಗ್.

ಬಿಬಿಎಂ ಪದವೀಧರರಾಗಿರುವ ಭವಾನಿ ಸಿಂಗ್ ಬಣ್ಣದ ಬದುಕಿಗೆ ಕಾಲಿಟ್ಟ ಸಂಗತಿ ಬಲು ರೋಚಕ. ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭವಾನಿ ಸಿಂಗ್ ಗೆ ಅದು ಯಾವಾಗ ನಟನಾ ರಂಗದಲ್ಲಿ ಕಾಣಿಸಿಕೊಳ್ಳುವ ಆಸೆಯಾಯತೋ, ಕೆಲಸಕ್ಕೆ ಬಾಯ್ ಅಂದರು. ನಟನೆಯ ರೀತಿ ನೀತಿಗಳನ್ನು ಕಲಿಯುವ ಸಲುವಾಗಿ ಅಭಿನಯ ತರಂಗ ಸಂಸ್ಥೆ ಸೇರಿದರು. ಅದಕ್ಕೆ ಕಾರಣ ತಮ್ಮ ಬಾಲ್ಯದ ಬಯಕೆ! ಹೌದು. ಭವಾನಿ ಸಿಂಗ್ ಅವರಿಗೆ ಬಾಲ್ಯದಿಂದಲೂ ತಾವು ಒಬ್ಬ ನಟನಾಗಿ ಗುರುತಿಸಿಕೊಳ್ಳುವ ಬಯಕೆ. ಎಲೆ ಮರೆ ಕಾಯಿಯಂತೆ ಇದ್ದ ಆ ಬಯಕೆ ಗಟ್ಟಿ ಯಾಗಿದ್ದು ಕಭೀ ಕುಷಿ ಕಭೀ ಗಮ್ ಚಿತ್ರದ ನೋಡಿದ ನಂತರವೇ.

Image may contain: 1 person, standing, on stage and child

ಚರಣದಾಸಿಯ ಕಾರ್ತಿಕ್ ನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಭವಾನಿ ಸಿಂಗ್ ಮತ್ತೇ ತಿರುಗಿ ನೋಡಿದ್ದೇ ಇಲ್ಲ. “ಚರಣದಾಸಿಯಲ್ಲಿ ನಾನು ಮುಗ್ಧ ಹುಡುಗನ ಪಾತ್ರದಲ್ಲಿ ನಟಿಸಿದ್ದೆ. ಚರಣದಾಸಿಯ ನಂತರ ಹಿಂದಿಯ ಆಶಾಯ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅದು ನೆಗೆಟಿವ್ ರೋಲ್! ನನಗೆ ನಿರರ್ಗಳವಾಗಿ ಹಿಂದಿ ಮಾತನಾಡಲೂ ಬರುತ್ತಿದ್ದ ಕಾರಣ ಧಾರವಾಹಿಯಲ್ಲಿ ನಟಿಸಲು ಸುಲಭವಾಯಿತು. ಜೊತೆಗೆ ಹಿಂದಿಯ ಕ್ರೈಂ ಪೆಟ್ರೋಲ್ ಗೆ ಕ್ರಿಯೆಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೆ. ಜೊತೆಗೆ ಕೆಲವೊಂದು ಎಪಿಸೋಡ್ ಗಳಲ್ಲಿ ಅಭಿನಯಿಸಿದ್ದೆ. ನಂತರ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ರೊಮ್ಯಾಂಟಿಕ್, ಕೋಪ, ಕಾಮಿಡಿಯನ್ ಆಗಿರುವ ಗುರುಮೂರ್ತಿ ಪಾತ್ರದಲ್ಲಿ ನಟಿಸಿದ್ದೇನೆ” ಎಂದು ಕಿರುತೆರೆ ಜರ್ನಿ ಬಗ್ಗೆ ಸವಿವರವಾಗಿ ವಿವರಿಸುತ್ತಾರೆ ಭವಾನಿ ಸಿಂಗ್.

“ಬಾಲ್ಯದ ಆಸೆಯಂತೆ ನಟನಾ ಕೇತ್ರಕ್ಕೆ ಬಂದಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ. ಕಿರುತೆರೆಯ ಮೂಲಕ ನಾನು ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಶ್ರದ್ಧೆ ಇದ್ದರೆ ಮಾತ್ರ ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎನ್ನುವ ರಾಜಸ್ಥಾನದ ಕುವರ ಇದೊಂದು ಕ್ರಿಯೇಟಿವ್ ಫೀಲ್ಡ್. ಇಲ್ಲಿ ಮುಂದುವರಿಯಬೇಕು ಎಂದರೆ ಶಿಸ್ತು ಅತೀ ಮುಖ್ಯವಾಗುತ್ತದೆ” ಎಂದು ನಗುಮುಖದಿಂದ ನುಡಿಯುತ್ತಾರೆ.

Image result for subbalakshmi samsara

ಗುರುಮೂರ್ತಿ ಆಲಿಯಾಸ್ ಗ್ಯಾರಿ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಅದಕ್ಕೆ ಕಾರಣ ವರ್ಕ್ ಲೋಡ್ ಸಮಸ್ಯೆ! ಗ್ಯಾರಿ ಆಗಿ ಮನ ಸೆಳೆಯುತ್ತಿರುವ ಭವಾನಿ ಸಿಂಗ್ ಗೆ ವಿಪರೀತ ವರ್ಕ್ ಲೋಡ್. ವರ್ಕ್ ಲೋಡ್ ನ ಬಗ್ಗೆ ಭವಾನಿ ಸಿಂಗ್ ಪ್ರೊಡಕ್ಷನ್ ಟೀಂ ನ ಬಳಿ ಇದರ ಬಗ್ಗೆ ಕೇಳಿದರು. ಆಗ ಪ್ರೊಡಕ್ಷನ್ ಟೀಂ ನವರು ಕಿರಿಕಿರಿ ಮಾಡಿದರು. ಅದೇ ಕಾರಣದಿಂದ ಭವಾನಿ ಸಿಂಗ್ ಇದೀಗ ಗುರುಮೂರ್ತಿ ಪಾತ್ರ ಮಾಡುತ್ತಿಲ್ಲ. ಇದರಿಂದ ಬೇಸರಗೊಂಡಿರುವ ಭವಾನಿ ಸಿಂಗ್ ಅವರು ಕಾನೂನು ರೀತಿಯಲ್ಲಿ ಮುಂದುವರಿಯುವ ನಿರ್ಧಾರ ತೆಗೆದುಕೊಂಡರು. ಮಾತ್ರವಲ್ಲ ನೋಟೀಸ್ ಕೂಡಾ ಕಳಿಸಿದ್ದಾರೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುತ್ತಾರಲ್ಲಾ! ಅದೇ ರೀತಿ ನಿಮ್ಮ ಗ್ಯಾರಿಯ ವಿಭಿನ್ನ ರೂಪ ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಅನಾವರಣಗೊಳ್ಳಲಿದೆ!

ನಟನೆಯ ಜೊತೆಗೆ ಮಾಡೆಲಿಂಗ್ ನಲ್ಲೂ ಸೈ ಎನಿಸಿಕೊಂಡಿರುವ ಚಾಕಲೇಟ್ ಹುಡುಗ ಹಲವು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಮಿಂಚಿದ್ದಾರೆ. ಜೊತೆಗೆ ಹಲವು ಫ್ಯಾಷನ್ ವೇದಿಕೆಗಳಲ್ಲಿ ರ್ಯಾಂಪ್ ವಾಕ್ ಕೂಡ ಮಾಡಿರುತ್ತಾರೆ. ರಾಜ್ ಕುಮಾರ್, ವಿಷ್ಣುವರ್ಧನ್, ಅಮಿತಾಬ್ ಬಚ್ಚನ್ ಅವರೇ ನನಗೆ ಪ್ರೇರಣೆ ಎನ್ನುವ ಭವಾನಿ ಸಿಂಗ್ ಗೆ ಹಾಡು ಮತ್ತು ಡ್ಯಾನ್ಸ್ ಎಂದರೆ ತುಂಬಾ ಇಷ್ಟ.

– ಅನಿತಾ ಬನಾರಿ

Image may contain: 1 person, standing

Image may contain: 1 person, beard

 

ಸಾಹೋ ಟೀಸರ್ ನಲ್ಲಿ ಪ್ರಭಾಸ್ ಗೆ ‘ಡೈ ಹಾರ್ಡ್ ಫ್ಯಾನ್ಸ್’ !! ಟೀಸರ್ ಚಿಂದಿ ಉಢೀಸ್!!

#balkaninews #bhavanisingh #bhavanisinghmovies #bhavanisinghphotoshoot #bhavanisinghphotoshoot #bhavanisinghserials

Tags