ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ತೆಲುಗು ಭಾಷೆಯಲ್ಲಿ ಮಿಂಚುತ್ತಿರುವ ಕಾರವಾರದ ಕುವರ!

ಕರ್ನಾಟಕದ ಕಾಶ್ಮೀರ ಎಂದೇ ಹೆಸರುವಾಸಿಯಾಗಿರುವ ಕಡಲನಗರಿ ಕಾರವಾರದ ಈ ಹುಡುಗನ ಹೆಸರು ಜಯ್ ಡಿಸೋಜಾ. ಯಾರಪ್ಪ ಎಂದು ಯೋಚಿಸುತ್ತಿದ್ದೀರಾ? ಯಾಕೆಂದರೆ ಜಯ್ ಡಿಸೋಜಾ ಹೆಸರು ಹೊಸತೆನಿಸುತ್ತದೆ.  ಬಣ್ಣದ ಲೋಕದಲ್ಲಿ ಇವರು ಸೂರ್ಯ ಎಂದೇ ಪರಿಚಿತ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮನೆದೇವ್ರು’ ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ಮನೆಮಾತಾಗಿರುವ ಜಯ್ ಡಿಸೋಜಾ ತನ್ನ ಅಭಿನಯ ಕೌಶಲ್ಯದಿಂದ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದಾರೆ.

Image result for manedevru kannada serial

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದು ಜಯ್ ಅವರು ಪೈಲಟ್ ಆಗಿ ಬಾನಂಗಳದಲ್ಲಿ ಹಾರಾಡುತ್ತಿದ್ದರು. ಇಂಜಿನಿಯರಿಂಗ್ ಪದವೀಧರರಾದ ಜಯ್ ಅವರನ್ನು ಮಾಡೆಲಿಂಗ್ ಕ್ಷೇತ್ರ ಆಕರ್ಷಿಸಿತು. ನೋಡಲು ಸುಂದರವಾಗಿರುವ ಜಯ್ ಡಿಸೋಜಾ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಬಹು ಬೇಗನೆ ಗುರುತಿಸಿಕೊಂಡರು. ಮುಂದೆ ಜಾಹೀರಾತುಗಳಲ್ಲೂ ನಟಿಸಿರುವ ಜಯ್ ಡಿಸೋಜಾ ಅವರು ಬಣ್ಣದ ಲೋಕದಲ್ಲಿ ಮುಂದುವರಿಯುವ ನಿರ್ಧಾರ ಮಾಡಿದರು. ಮುಂಬೈನ ಅನುಪಮ್ ಖೇರ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನಾ ತರಬೇತಿಯನ್ನು ಪಡೆದ ಅವರು ಯಾವುದೇ ಆಡಿಶನ್ ನಡೆದರೂ ಭಾಗವಹಿಸುತ್ತಿದ್ದರು. ಕಡೆಗೂ ಅದೃಷ್ಟ ಎಂಬಂತೆ ರಾಜ್ ಕುಮಾರ್ ಕುಟುಂಬದ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಮನೆದೇವ್ರು’ ಧಾರಾವಾಹಿಗೆ ಹೀರೋ ಆಗಿ ಸೆಲೆಕ್ಟ್ ಆದರು.

Image may contain: 1 person, smiling, tree and outdoor

ನನ್ನೊಳಗಿನ ನಟನಾ ಕಾವು ಹೆಚ್ಚಾಗಲು ಮನೆದೇವ್ರು ಧಾರಾವಾಹಿಯೇ ಕಾರಣ. ನನ್ನ ಬಣ್ಣದ ಯಾನ ರಾಜ್ ಕುಮಾರ್ ಕುಟುಂಬದ ಬ್ಯಾನರ್ ನ ಧಾರಾವಾಹಿಯಲ್ಲಿ ಆರಂಭವಾದುದು ನನಗೆ ತುಂಬಾ ಖುಷಿ ನೀಡಿತು. ಮಾತ್ರವಲ್ಲ ಸಿಕ್ಕ ಅವಕಾಶವನ್ನು ಕೈ ಬಿಡಲು ಮನಸ್ಸಾಗಲಿಲ್ಲ. ಚೆನ್ನಾಗಿ ನಟಿಸಬೇಕು ಎಂಬ ಛಲ ಹುಟ್ಟಿಕೊಂಡಿತು. ಹೊಸ ಜವಾಬ್ದಾರಿ ಪಡೆದ ಅನುಭವವಾಯಿತು ಎಂದು ಬಣ್ಣದ ಲೋಕದ ಅನುಭವವನ್ನು ಹೇಳಿದರು ಡಿಸೋಜಾ.

ನೂರಕ್ಕೂ ಅಧಿಕ ಶೋಗಳಲ್ಲಿ ಭಾಗವಹಿಸಿರುವ ಡಿಸೋಜಾ ಅವರು ನಟನೆ, ಮಾಡೆಲಿಂಗ್ ನಲ್ಲಿ ಯಾರೂ ರೋಲ್ ಮಾಡೆಲ್ ಇಲ್ಲದೆ ಸ್ವತಃ ತಾವಾಗಿಯೇ ಈ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ತನ್ನ ಸಾಮರ್ಥ್ಯದಿಂದಲೇ ತಾನಿಂದು ತನ್ನಿಷ್ಟದ ಕ್ಷೇತ್ರದಲ್ಲಿ ಮಿಂಚುತ್ತಿದ್ದೇನೆ ಎನ್ನುವ ಜಯ್ ಡಿಸೋಜಾ ಸಾಧಿಸಬೇಕು ಎಂಬ ಛಲ ನನ್ನಲ್ಲಿ ತುಂಬಾ ಇತ್ತು. ಆದ ಕಾರಣ ಯಾವುದೂ ಕಷ್ಟ ಎನಿಸಲಿಲ್ಲ ಎನ್ನುತ್ತಾರೆ.

Image may contain: 1 person, smiling, standing, car and outdoor

ಇಂತಿಪ್ಪ ಕಡಲನಗರಿಯ ಹುಡುಗ ಈಗಾಗಲೇ ಬೆಳ್ಳಿತೆರೆಗೆ ಕಾಲಿಟ್ಟಾಗಿದೆ. ರಾಗ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಯ್ ಡಿಸೋಜಾಗೆ ಇದು ಎರಡನೇಯ ಸಿನಿಮಾ. ಹರ್ಷಿಕಾ ಪೂಣಚ್ಚರೊಂದಿಗೆ ಗುಲಾಬಿ ಸ್ಟ್ರೀಟ್ ಎಂಬ ಚಿತ್ರವೊಂದರಲ್ಲಿ ನಟಿಸಿದ್ದರು. ಆದರೆ ಆ ಚಿತ್ರ ಅರ್ಧದಲ್ಲಿಯೇ ನಿಂತಿತ್ತು.

ಇದರ ಜೊತೆಗೆ ತೆಲುಗು ಭಾಷೆಯ ಧಾರಾವಾಹಿಯಲ್ಲೂ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ಸ್ಟಾರ್ ಮಾ ತೆಲುಗು ವಿನಲ್ಲಿ ಪವಿತ್ರ ಬಂಧನಂ ನಲ್ಲಿ ನಟಿಸಿದ್ದ ಜಯ್ ಇದೀಗ ಈ ಟಿವಿ ತೆಲುಗಿ ವಿಲ್ಲಿ ಅಡಂದೆ ಅಧಾರಂ ಮತ್ತು ಜೆಮಿನಿ ಟಿವಿಯಲ್ಲಿ ಕಲ್ಯಾಣಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಜಯ್ ಅವರ ನಟನಾ ಪಯಣ ಕಲರ್ ಫುಲ್ ಆಗಿ ಸಾಗಲಿ ಎಂಬುದೇ ನಮ್ಮ ಹಾರೈಕೆ

–  ಅನಿತಾ ಬನಾರಿ

ಬಣ್ಣದ ಲೋಕದ ‘ಅನುರೂಪ’ ದ ಹುಡುಗ ರಿಷಿ

#balkaninews #sandalwood #manedevrukannadaserial #archanavignesh #jaidsouza #

 

Tags