ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

‘ಮಜಾಭಾರತ’ ದ ಮೂಲಕ ಮನ ಸೆಳೆಯುತ್ತಿರುವ ಡಿಂಪಲ್ ಕ್ವೀನ್!

ಚಂದನವನದ ಡಿಂಪಲ್ ಕ್ವೀನ್ ಎಂದೇ ಹೆಸರು ಗಳಿಸಿರುವ ರಚಿತಾ ರಾಮ್ ಅಭಿಮಾನಿಗಳಿಗೆ ಸಂತಸವೋ ಸಂತಸ! ಅದ್ಯಾಕೆ ಅಂತೀರಾ? ತಮ್ಮ ನೆಚ್ಚಿನ ನಟಿ, ಡಿಂಪಲ್ ಕ್ವೀನ್ ಬೆಡಗಿ ರಚಿತಾ ಅವರನ್ನು ವಾರದ ಐದು ದಿನವೂ ಟಿವಿಯಲ್ಲಿ ನೋಡಬಹುದು. ಅಂದ ಮಾತ್ರಕ್ಕೆ ರಚಿತಾ ಅವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಾ ಎಂದು ಆಶ್ಚರ್ಯ ಪಡಬೇಡಿ.

ರಚಿತಾ ರಾಮ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಿಜ. ಆದರೆ ಜಡ್ಜ್ ಆಗಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ವಾರದ ಐದು ದಿನ ಪ್ರಸಾರವಾಗುತ್ತಿರುವ ಕಾಮಿಡಿ ಶೋ ಮಜಾಭಾರತ ದಲ್ಲಿ ಜಡ್ಜ್ ಆಗಿ ಮನ ಸೆಳೆಯುತ್ತಿರುವ ರಚಿತಾ ರಾಮ್ ನಟಿಯಾಗಿಯೂ ಗಮನ ಸೆಳೆದವರು.

Image may contain: 1 person, smiling, outdoor

ಅರಸಿ ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆ ರಚಿತಾ ರಾಮ್ ಮುಂದೆ ಬುಲ್ ಬುಲ್ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಬುಲ್ ಬುಲ್ ಸಿನಿಮಾದಲ್ಲಿ ಕಾವೇರಿ ಪಾತ್ರಕ್ಕೆ ಜೀವ ತುಂಬಿದ ರಚಿತಾ ಮೊದಲ ಚಿತ್ರಕ್ಕೆ ಪ್ರಶಸ್ತಿ ಪಡೆದ ಕನ್ನಡದ ಹೆಮ್ಮೆಯ ನಟಿಯೂ ಹೌದು. ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

ಮೊದಲ ಸಿನಿಮಾದಲ್ಲಿ ಯಶಸ್ಸು ಕಂಡ ಡಿಂಪಲ್ ಕ್ವೀನ್ ಮತ್ತೆ ತಿರುಗಿ ನೋಡಿದ್ದೇ ಇಲ್ಲ! ಮುಂದೆ ದಿಲ್ ರಂಗೀಲಾ ದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಅಭಿನಯಿಸಿದರು. ನಂತರ ಅಂಬರೀಶ, ರನ್ನ, ರಥಾವರ, ಚಕ್ರವ್ಯೂಹ, ಜಗ್ಗುದಾದ, ಭರ್ಜರಿ, ಪುಷ್ಪಕ ವಿಮಾನ ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ.

Image may contain: 1 person, smiling, closeup

ದರ್ಶನ ತೂಗುದೀಪ್, ಕಿಚ್ಚ ಸುದೀಪ್, ಶ್ರೀಮುರಳಿ, ರಮೇಶ್ ಅರವಿಂದ್, ಗಣೇಶ್, ಧ್ರುವ ಸರ್ಜಾ ಅವರಂತಹ ಮಹಾನ್ ನಟರೊಂದಿಗೆ ತೆರೆಯನ್ನು ಹಂಚಿಕೊಂಡಿರುವ ರಚಿತಾ ರಾಮ್  ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿಯೂ ಹೌದು.ಭರತನಾಟ್ಯ ಕಲಿತಿರುವ ರಚಿತಾ ಅವರು ಸುಮಾರು ನಲವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.

ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಬಣ್ಣದ ಪಯಣ ಮತ್ತಷ್ಟು ಕಲರ್ ಫುಲ್ ಆಗಿ ಸಾಗಲಿ ಎಂಬುದೇ ನಮ್ಮ ಬಾಲ್ಕನಿ ನ್ಯೂಸ್ ಹಾರೈಕೆ!

– ಅನಿತಾ ಬನಾರಿ

Image may contain: 1 person, smiling, standing

Image may contain: 1 person, smiling, standing

Image may contain: 5 people, people smiling

Related image

Image result for rachitha ram in majabharatha reality show

ಜನಪ್ರಿಯ ನಟಿ ಶೃತಿ ಹರಿಹರನ್ ಇದೀಗ ಗರ್ಭಿಣಿ..!!?!!

#balkaninews #rachitharam #rachitharammovies #rachitharamhits #rachitharaminstagram

Tags