ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಬಣ್ಣದ ಲೋಕದ ‘ಅನುರೂಪ’ ದ ಹುಡುಗ ರಿಷಿ

ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದ ಮುದ್ದು ಮುಖದ ಹುಡುಗ ಗುರುತಿಸಿಕೊಂಡದ್ದು ಬಣ್ಣದ ಲೋಕದಲ್ಲಿ! ಆ ಹುಡುಗ ಬೇರಾರು ಅಲ್ಲ.. ಅಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ಚಂದನವನದ ತುಂಬಾ ಸುದ್ದಿ ಮಾಡಿದ ರಿಷಿ.

ಕೆ.ಸಿ. ನಾಗರಾಜ್ ಮತ್ತು ಅನಲ ನಾಗರಾಜ್ ದಂಪತಿಗಳ ಮುದ್ದಿನ ಮಗ ರಿಷಿ ಮಹಾನಗರಿ ಬೆಂಗಳೂರಿನಲ್ಲಿ ಹುಟ್ಟಿದರೂ, ಬೆಳೆದಿದ್ದೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಸಾಂಸ್ಕೃತಿಕ ನಗರಿಯಲ್ಲಿ ಬೆಳೆದ ಕಾರಣವೇನೋ,ರಿಷಿ ಅವರಿಗೆ ಕೊಂಚ ಮಟ್ಟಿಗೆ ನಟನೆಯ ಗೀಳು ಹಚ್ಚಿಕೊಂಡಿತ್ತು. ಅರಮನೆ ನಗರಿ ಮೈಸೂರಿನ ಕೆಲವು ರಂಗತಂಡಗಳಲ್ಲಿ ಕಾಣಿಸಿಕೊಂಡಿರುವ ರಿಷಿ ತಮ್ಮದೇ ಕಾಲೇಜಿನ ನಾಟಕ ತಂಡದ ಜವಾಬ್ದಾರಿಯನ್ನು ಕೂಡಾ ತೆಗೆದುಕೊಂಡಿದ್ದರು!

Image may contain: 1 person, outdoor

ನಾಟಕದ ಹೊರತಾಗಿ ರೇಡಿಯೋ ಜಾಕಿಯಾಗಿ ಪರಿಚಿತರಾಗಿದ್ದ ರಿಷಿ ಮುಂದೆ ಕಿರುತೆರೆಗೂ ಪಾದಾರ್ಪಣೆ ಮಾಡಿದರು. ಕನ್ನಡದ ಹೆಸರಾಂತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಮಹಾಪರ್ವ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ನಟನಾ ರಂಗಕ್ಕೆ ಕಾಲಿಟ್ಟರು ರಿಷಿ. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನುರೂಪ ಧಾರಾವಾಹಿಯಲ್ಲಿ ನಾಯಕ ತೇಜಸ್ವಿ ಪಾತ್ರಕ್ಕೆ ಜೀವ ತುಂಬಿದ್ದರು ಮಾತ್ರವಲ್ಲ ಅನುರೂಪದ ಮೂಲಕ ಕಿರುತೆರೆ ವೀಕ್ಷಕರ ಮನದಲ್ಲಿ ಸ್ಥಾನವನ್ನು ಕೂಡಾ ಪಡೆದಿದ್ದರು. ಸುವರ್ಣ ಪರಿವಾರ ನೀಡುವ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಪಡೆದಿದ್ದೇ ಸಾಕ್ಷಿ!

Image may contain: 2 people, people smiling, people standing

ಇಂತಿಪ್ಪ ಮುದ್ದು ಮುಖದ ಹುಡುಗ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಸಿಂಪಲ್ ಆಗಿ ಲವ್ ಸ್ಟೋರಿ ಖ್ಯಾತಿಯ ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೇ ಆ ಸಿನಿಮಾ ಹೆಸರನ್ನು ಗಳಿಸಿತ್ತು. ಆಪರೇಷನ್ ಅಲಮೇಲಮ್ಮ ದಲ್ಲಿ ಪರಮೇಶಿ ಪಾತ್ರದಲ್ಲಿ ಅಭಿನಯಿಸಿದ್ದ ರಿಷಿ ಸೈಮಾ ಕೊಡುವ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Image may contain: 1 person, smiling, outdoor

ನಂತರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ಸ್ ನಡಿಯಲ್ಲಿ, ಹೇಮಂತ್ ರಾವ್ ನಿರ್ದೇಶನದ ಕವಲು ದಾರಿ ಚಿತ್ರದ ಮೂಲಕ ಮತ್ತೊಮ್ಮೆ ಸಿನಿ ಪ್ರಿಯರ ಮನ ಗೆದ್ದರು ರಿಷಿ. ಕವಲುದಾರಿಯ ನಂತರ ಇದೀಗ ರಾಮನವತಾರ, ಸಾರ್ವಜನಿಕರಿಗೆ ಸುವರ್ಣವಕಾಶ, ಗಾಳಿಪಟ – 2, ಸಿಲ್ಕ್ ಸಿದ್ಧ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗಷ್ಟೇ ಸ್ವಾತಿ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಿಷಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಿಷಿ ಅವರ ದಾಂಪತ್ಯ ಜೀವನ ಮತ್ತು ಬಣ್ಣದ ಪಯಣ ಮತ್ತಷ್ಟು ಸುಂದರವಾಗಿ ಸಾಗಲಿ ಎಂಬುದೇ ನಮ್ಮ ಬಾಲ್ಕನಿ ನ್ಯೂಸ್ ಹಾರೈಕೆ.

– ಅನಿತಾ ಬನಾರಿ

Image may contain: 4 people, people smiling, people standing and closeup

Image may contain: 4 people, people smiling, people standing and outdoor

Image may contain: 5 people, people smiling, people standing

Image may contain: 5 people, people smiling, people standing

ಪಾಕೆಟ್ ಮನಿಗೋಸ್ಕರ ಚಿತ್ರರಂಗಕ್ಕೆ ಬಂದ ಈ ನಟಿ!!

#balkaninews #rishi #actorrishi #rishimovies #interviews

 

Tags