ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಅತ್ಯದ್ಭುತ ನಿರೂಪಕಿ ಮಜಾ ಟಾಕೀಸ್ ನ ರಾಣಿ!

ನಿರೂಪಣೆ ಮೂಲಕ ಗಮನ ಸೆಳೆದ ಈ ಚೆಂದುಳ್ಳಿ ಚೆಲುವೆ ಮಂಜಿನ ನಗರಿ ಮಡಿಕೇರಿಯ ಹುಡುಗಿ. ಸೋಮವಾರಪೇಟೆಯ ಚೆಂಗಪ್ಪ ಮತ್ತು ತಾರಾ ದಂಪತಿಗಳ ಮುದ್ದಿನ ಮಗಳು ಶ್ವೇತಾ ಚೆಂಗಪ್ಪ ಹುಟ್ಟಿ ಬೆಳೆದಿದ್ದೆಲ್ಲಾ ಮಹಾನಗರಿ ಬೆಂಗಳೂರಿನಲ್ಲಿ.

ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ನಿರೂಪಣೆ ಮಾಡುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದಿರುವ ಕೊಡಗಿನ ಕುವರಿ ಶ್ವೇತಾ ಸದ್ಯ ರಾಣಿ ಎಂದೇ ಪರಿಚಿತ. ಕಲರ್ಸ್ ಸೂಪರ್ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಎಂಬ ಹೆಸರಾಂತ ರಿಯಾಲಿಟಿ ಶೋ ವಿನಲ್ಲಿ ರಾಣಿ ಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ‌.

Image result for shwetha chengappa

ಶ್ವೇತಾ ಅವರು ಪದವಿ ಓದುತ್ತಾ ಇರುವ ಸಮಯದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟರು‌. ಬಿಕಾಂ ಪದವಿ ಪಡೆಯುತ್ತಿದ್ದ ಸಂದರ್ಭದಲ್ಲಿ ಆಡಿಶನ್ ತೆಗೆದುಕೊಳ್ಳಲು ನಿರ್ದೇಶಕರು ಹುಡುಕಾಡುತ್ತಿದ್ದರು.  ‘ಸುಮತಿ’ ಧಾರಾವಾಹಿಯ ಪಾತ್ರಕ್ಕೆ ಒಬ್ಬ ನಟಿಯ ಅವಶ್ಯಕತೆ ಅವರಿಗಿತ್ತು. ಅದಕ್ಕೆ ಆಯ್ಕೆಯಾದವರೇ ಮಂಜಿನ ನಗರಿ ಚೆಲುವೆ ಶ್ವೇತಾ.

ಮುಂದೆ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಶ್ವೇತಾ ಒಂದುವರೆ ಪುಟದ ಡೈಲಾಗ್ ನ್ನು ಕೂಡಾ ನಿರರ್ಗಳವಾಗಿ ಹೇಳಿದರು. ಎಸ್. ನಾರಾಯಣ್ ನಿರ್ದೇಶನದ ಸುಮತಿ ಧಾರಾವಾಹಿಯಲ್ಲಿ ಸುಮತಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಶ್ವೇತಾ ಮುಂದೆ ಕಿರುತೆರೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡರು.

ಸುಮತಿಯ ಬಳಿಕ ಬಾಲಾಜಿ ಟೆಲಿಫಿಲಂಸ್ ಅವರ ಕಾದಂಬರಿ ಧಾರಾವಾಹಿಯಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದ ಶ್ವೇತಾ ಮುಂದೆ ಸುಕನ್ಯಾ, ಪುನರ್ಜನ್ಮ, ಅರುಂಧತಿ, ಗೆಜ್ಜೆನಾದ ಮತ್ತು ಬಾ ನನ್ನ ಸಂಗೀತ ಧಾರಾವಾಹಿಯಲ್ಲಿ ಅಭಿನಯಿಸಿರುವ ಶ್ವೇತಾ ಚೆಂಗಪ್ಪ ಅರುಂಧತಿ ಧಾರಾವಾಹಿಯಲ್ಲಿ ಅರುಂಧತಿ – ನಂದಿನಿ ದ್ವಿಪಾತ್ರದಲ್ಲಿ ಅಮೋಘವಾಗಿ ನಟಿಸಿ ವೀಕ್ಷಕರ ಮನಸೆಳೆದಿದ್ದಾರೆ.

Image may contain: 1 person, smiling, closeup

ಝೀ ಕನ್ನಡದ ಯಾರಿಗುಂಟು ಯಾರಿಗಿಲ್ಲ ಎಂಬ ರಿಯಾಲಿಟಿ ಶೋ ವಿನ ನಿರೂಪಕಿಯಾಗಿ ಗಮನ ಸೆಳೆದಿರುವ ಶ್ವೇತಾ ಚೆಂಗಪ್ಪ ನಂತರ ಕುಣಿಯೋಣ ಬಾರಾ, ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್ ನಿರೂಪಕಿಯಾಗಿ ಕಿರುತೆರೆ ವೀಕ್ಷಕರ ಮನ ಕದ್ದಿರುವ ಈಕೆ ಸದ್ಯ ಮಜಾ ಟಾಕೀಸ್ ನ ರಾಣಿ ಯಾಗಿ ಮಿಂಚುತ್ತಿದ್ದಾರೆ‌.

ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ರ ಸ್ಫರ್ಧಿಯಾಗಿ ಗಮನ ಸೆಳೆದಿರುವ ಶ್ವೇತಾ ಚೆಂಗಪ್ಪ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಿರೂಪಣೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿರುವ ಶ್ವೇತಾ ದರ್ಶನ್ ತೂಗುದೀಪ ಅವರ ತಂಗಿಗಾಗಿ ಮತ್ತು ವಿಷ್ಣುವರ್ಧನ್ ಅವರ ವರ್ಷ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಝೀ ಕನ್ನಡದ ಝೀ ಕುಟುಂಬ ಅವಾರ್ಡ್ ಸಮಾರಂಭದಲ್ಲಿ ಸತತ ಎರಡು ಬಾರಿ ಬೆಸ್ಟ್ ಆ್ಯಂಕರ್ ಅವಾರ್ಡ್ ಪ್ರಶಸ್ತಿಯನ್ನು ಶ್ವೇತಾ ಪಡೆದಿರುತ್ತಾರೆ. ಇದು ಅವರ ಅತ್ಯದ್ಭುತ ನಿರೂಪಣೆಗೆ ಸಾಕ್ಷಿ. ಜೊತೆಗೆ 2013ರಲ್ಲಿ ಅರುಂಧತಿ ಧಾರಾವಾಹಿಯ ನಟನೆಗಾಗಿ ಸರಕಾರದಿಂದ ವತಿಯಿಂದ ಕೊಡಮಾಡುವ ಮಾಧ್ಯಮ ಸನ್ಮಾನ ದ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಕೂಡ ಪಡೆದಿದ್ದಾರೆ.

ಸದ್ಯ ಮಜಾ ಟಾಕೀಸ್ ನ ರಾಣಿ ಆಗಿ ಹೆಸರುಗಳಿಸಿರುವ ಕೊಡಗಿನ ಕುವರಿಗೆ ನಮ್ಮ ಬಾಲ್ಕನಿ ನ್ಯೂಸ್  ಶುಭಹಾರೈಸುತ್ತದೆ.

– ಅನಿತಾ ಬನಾರಿ

Image may contain: 2 people, people smiling, people standing and indoor

ಆರಡಿ ಹೈಟ್, ನಿಂತ್ರೆ ಫೈಟ್… ಎಂದು ಘರ್ಜಿಸುತ್ತಿರುವ “ಒಂಟಿ” ಹುಡುಗ ಆರ್ಯವರ್ಧನ್

#balkaninews #shwethachengappainstagram #shwethachengappaserials

 

Tags