ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಕಿರುತೆರೆಯ ಮಾತಿನ ಮಲ್ಲ ಸೃಜನ್ ಲೋಕೇಶ್

ಕನ್ನಡ ಚಲನಚಿತ್ರ ನಟ, ಬಾಲ ನಟ, ದೂರದರ್ಶನದ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು ಇದು ಸೃಜನ್ ಲೋಕೇಶ್ ಅವರ ಸಂಕ್ಷಿಪ್ತ ಪರಿಚಯ. ಹಿರಿಯ ಕಲಾವಿದರಾದ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ದಂಪತಿಗಳ ಮುದ್ದಿನ ಮಗನಾದ ಸೃಜನ್ ಬಾಲನಟ ನಾಗಿ ಚಂದನವನಕ್ಕೆ ಕಾಲಿಟ್ಟವರು. ಬುಜಂಗಯ್ಯನ ದಶಾವಾತಾರ ಮತ್ತು ವೀರಪ್ಪನ್ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿರುವ ಸೃಜನ್ ನೀಲ ಮೇಘ ಶ್ಯಾಮ ಸಿನಿಮಾದಲ್ಲಿ ಮೊದಲ ಬಾರಿ ನಾಯಕನಾಗಿ ಮಿಂಚಿದರು.

Image may contain: 2 people, people smiling, people standing and indoor

ನೀಲ ಮೇಘ ಶ್ಯಾಮ ಚಿತ್ರದಲ್ಲಿ ಶ್ಯಾಮ ನ ಪಾತ್ರಕ್ಕೆ ಜೀವ ತುಂಬಿದ್ದ ಸೃಜನ್ ಮುಂದೆ ಪೋಷಕ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು!  ಪೊರ್ಕಿ , ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ ೩೦೦, ಪರಮಶಿವ, ಲವ್ ಯೂ ಆಲಿಯಾ, ಜಗ್ಗುದಾದ, ಚಕ್ರವರ್ತಿ, ಭೂತಯ್ಯನ ಮೊಮ್ಮಗ ಅಯ್ಯು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಇದರ ಜೊತೆಗೆ ಆನೆ ಪಟಾಕಿ ಸಿನಿಮಾದಲ್ಲಿ ಬಿರೇಗೌಡ ಪಾತ್ರಧಾರಿಯಾಗಿ ಮಿಂಚಿದ್ದ ಸೃಜನ್ ಟಿಪಿಕಲ್ ಕೈಲಾಸ್ ಎನ್ನುವ ಚಿತ್ರದಲ್ಲಿ ಕೈಲಾಸ್ ಪಾತ್ರಧಾರಿಯಾಗಿ ಗಮನ ಸೆಳೆದಿದ್ದಾರೆ. ಮುಂದೆ ಹ್ಯಾಪಿ ಜರ್ನಿ ಸಿನಿಮಾದಲ್ಲೂ ನಾಯಕನಾಗಿ ನಟಿಸಿರುವ ಸೃಜನ್ ಇದೀಗ ನಿರೂಪಕರಾಗಿಯೂ ಗಮನ ಸೆಳೆದಿದ್ದಾರೆ.

Image may contain: 2 people

ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ರ ಸ್ಫರ್ಧಿಯಾಗಿ ಹೆಸರು ಗಳಿಸಿರುವ ಸೃಜನ್ 2013 ರಲ್ಲಿ ಲೋಕೇಶ್ ಪ್ರೊಡಕ್ಷನ್ಸ್ ಅನ್ನು ಆರಂಭಿಸಿದರು. ಚಾಲೆಂಜ್ , ಛೋಟಾ ಚಾಂಪಿಯನ್ಸ್, ಮಮ್ಮಿ ನಂ 1, ಕಾಸಿಗೆ ಟಾಸು ಎನ್ನುವ ರಿಯಾಲಿಟಿ ಶೋ ಗಳನ್ನು ನಿರ್ಮಿಸಿರುವ ಲೋಕೇಶ್ ಪ್ರೊಡಕ್ಷನ್ಸ್ ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ ಎಂಬ ಧಾರಾವಾಹಿಯನ್ನು ನಿರ್ಮಿಸಿದ್ದಾರೆ.

Image result for srujan lokesh wife greeshma

ಇದರ ಜೊತೆಗೆ ನಿರೂಪಕರಾಗಿಯೂ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸೃಜನ್ ” ಮಾತಿನ ಮಲ್ಲ” ಎಂದೇ ಜನಪ್ರಿಯರು! ಮಜಾ ವಿತ್ ಸೃಜಾ, ಸೈ, ಕಿಚನ್ ಕಿಲಾಡಿಗಳು, ಸ್ಟಾರ್ ಸಿಂಗರ್ ಗ್ರ್ಯಾಂಡ್ ಫಿನಾಲೆ, ಸುವರ್ಣ ಫಿಲ್ಮ್ ಅವಾರ್ಡ್, ಸೈ 2, ಕಾಸ್ ಗೆ ಟಾಸ್, ಡ್ಯಾಡಿ ನಂ 1, ಛೋಟಾ ಚಾಂಪಿಯನ್ ಸೀಸನ್ 1, ಸೀಸನ್ 2 ರ ನಿರೂಪಕರಾಗಿ ಯಶಸ್ವಿಯಾಗಿರುವ ಸೃಜನ್ ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮದ ನಿರೂಪಕರಾಗಿ ಮಿಂಚುತ್ತಿದ್ದಾರೆ. ಅಲ್ಲದೇ ನವಿರಾದ ಹಾಸ್ಯ ನಿರೂಪಣೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಹಾಸ್ಯದ ರಸದೌತಣವನ್ನು ಉಣಬಡಿಸುತ್ತಿದ್ದಾರೆ.

ಇಷ್ಟೇ ಅಲ್ಲದೇ ಸೃಜನ್ ತಮ್ಮ ಪತ್ನಿ ಗ್ರೀಷ್ಮಾ ಹಾಗೂ ಇಬ್ಬರ ಮಕ್ಕಳ ಜೊತೆ ಸಂತಸದ ಜೀವನ ನಡೆಸುತ್ತಿದ್ದಾರೆ. ಇವರ ಪ್ರತಿ ಕೆಲಸ ಕಾರ್ಯಗಳಲ್ಲಿ ಇವರ ಸಹೋದರಿ ಪೂಜಾ ಲೋಕೆಶ್ ಸದಾ ಕಾಲ ಬೆನ್ನೆಲುಬಾಗಿರುತ್ತಾರೆ.

Image result for srujan lokesh sister pooja lokesh

ಒಟ್ಟಾರೆಯಾಗಿ ಮಜಾ ಟಾಕೀಸ್ ನ ಮೂಲಕ ವೀಕ್ಷಕರಿಗೆ ವಾರಂತ್ಯದಲ್ಲಿ ಮಜಾ ದೊರೆಯುವುದಂತೂ ಸತ್ಯ.  ನಿರೂಪಕರಾಗಿ, ನಟರಾಗಿ ಪ್ರಖ್ಯಾತಿ ಪಡೆದಿರುವ ಸೃಜನ್ ಲೋಕೇಶ್ ಅವರ ಪಯಣಕ್ಕೆ ನಮ್ಮ ಬಾಲ್ಕನಿ ನ್ಯೂಸ್ ಆಲ್ ದಿ ಬೆಸ್ಟ್ ಹೇಳುತ್ತಿದೆ.

– ಅನಿತಾ ಬನಾರಿ

‘ನಮ್ಮೂರ ಮಂದಾರ ಹೂವೆ’ ಎಂದು ‘ಹೂಮಳೆ’ ಸುರಿಸಿದ ‘ ಬೆಳದಿಂಗಳ ಬಾಲೆ’ ಸುಮನ್!

#srujanlokesh #balkaninews #sandalwood #srujanlokeshinstagram #srujanlokeshfacebook #interviews

Tags