ಉದಯೋನ್ಮುಖರುಬಾಲ್ಕನಿಯಿಂದ

‘ನಡುವೆ ಅಂತರವಿರಲಿ’ ಎನ್ನುತ್ತಾ ‘ವಾಸ್ತುಪ್ರಕಾರ’ ‘ರಾಕೆಟ್’ ಹಾರಿಸಿದ ‘ಕಾಜಿ’ ಚೆಲುವೆ ಐಶಾನಿ ಶೆಟ್ಟಿ

ಕರಾವಳಿಯ ಸಾಕಷ್ಟು ಪ್ರತಿಭೆಗಳು ಇಂದು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಮಾತ್ರವಲ್ಲ ತಮ್ಮ ನಟನೆಯ ರಸದೌತಣವನ್ನು ವೀಕ್ಷಕರಿಗೆ ಉಣಬಡಿಸುತ್ತಿದ್ದಾರೆ. ಅವರಲ್ಲಿ ಕಡಲನಗರಿಯ ಚೆಲುವೆ ಐಶಾನಿ ಶೆಟ್ಟಿಯೂ ಒಬ್ಬರು.

ಬಾಲ್ಯದಿಂದಲೂ ಸಾಂಸ್ಕೃತಿಕ ಕಲೆಯಲ್ಲಿ ವಿಶೇಷ ಒಲವು ಹೊಂದಿದ್ದ ಐಶಾನಿ ಶೆಟ್ಟಿ ಶಾಲಾ ಕಾಲೇಜುಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದರು. ‘ಜೋತಿ ಆಲಿಯಾಸ್ ಕೋತಿರಾಜು’ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಚಂದನವನಕ್ಕೆ ಕಾಲಿಟ್ಟ ಮುದ್ದು ಮುಖದ ಚೆಲುವೆ ಐಶಾನಿ ಮುಂದೆ ರಕ್ಷಿತ್ ಶೆಟ್ಟಿ ಅಭಿನಯದ ‘ವಾಸ್ತುಪ್ರಕಾರ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು.

Image may contain: 1 person, smiling, car and outdoor

ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತರೆ ಸಾಕು, ಶಿಕ್ಷಣಕ್ಕೆ ಬಾಯ್ ಹೇಳುವವರೇ ಹೆಚ್ಚು. ಆದರೆ ಮಂಗಳೂರಿನ ಚೆಲುವೆ ಹಾಗಲ್ಲ! ಬಣ್ಣದ ಲೋಕದ ಜೊತೆಗೆ ಓದನ್ನು ಮುಂದುವರಿಸಿಕೊಂಡು ಹೋಗಿರುವ ಮುದ್ದು ಮುಖದ ಚೆಲುವೆ ಐಶಾನಿ ಸ್ನಾತಕೋತ್ತರ ಪದವಿಧರೆಯೂ ಹೌದು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಐಶಾನಿ ಮುಂದೆ ನೀನಾಸಂ ಸತೀಶ್ ಅಭಿನಯದ ‘ರಾಕೆಟ್’ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ.

Image may contain: 1 person, smiling, sitting

‘ರಾಕೆಟ್’ ಸಿನಿಮಾದ ನಂತರ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿರುವ ಐಶಾನಿ ಮುಂದೆ ‘ನಡುವೆ ಅಂತರವಿರಲಿ’ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ‘ನಡುವೆ ಅಂತರವಿರಲಿ’ ಸಿನಿಮಾದಲ್ಲಿ ಹದಿಹರೆಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕರಾವಳಿ ಕುವರಿ ನಿರ್ದೇಶನದಲ್ಲೂ ಎತ್ತಿದ ಕೈ. ಅವರ ನಿರ್ದೇಶನದ ಕಿರುಚಿತ್ರ ‘ಕಾಜಿ’ ಗೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ಅವರ ಪ್ರತಿಭೆಗೆ ಸಂದ ಫಲ. ‘ಕಾಜಿ’ ಯು ಹಲವು ವಿದೇಶಿ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದಲ್ಲದೇ  ಪ್ರಶಸ್ತಿಯನ್ನೂ ಬಾಚಿಕೊಂಡಿದೆ.

Image result for aishani shetty

‘ನನಗೆ ಮೊದಲಿನಿಂದಲೂ ನಟನೆಯತ್ತ ವಿಶೇಷ ಆಸಕ್ತಿ. ಸಿನಿಮಾದಲ್ಲಿ ನಟಿಸುವಾಗ ನಿರ್ದೇಶನ ಮಾಡಬೇಕೆಂಬ ಆಸೆ ಶುರುವಾಯಿತು. ಮಾತ್ರವಲ್ಲ ಕಥೆ ಬರೆಯುವ ಹವ್ಯಾಸ ಮೊದಲಿನಿಂದಲೂ ಇತ್ತು. ಹಾಗಾಗಿ ಕಿರುಚಿತ್ರ ನಿರ್ದೇಶಿಸಿದೆ. ಯಾವಾತ್ತಿದ್ದರೂ ನಟನೆಯೇ ನನ್ನ ಮೊದಲ ಆದ್ಯತೆ’ ಎಂದು ನಗುನಗುತ್ತಾ ಹೇಳುವ ಐಶಾನಿ ಶೆಟ್ಟಿ ಇದೀಗ ‘ನಮ್‌ ಗಣಿ ಬಿ.ಕಾಂ ಪಾಸ್‌’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮಾತ್ರವಲ್ಲ ಆ ಚಿತ್ರದಲ್ಲಿ ಅವರು ಎರಡು ಶೇಡ್‌ ಇರುವಂಥ ಪಾತ್ರ ಮಾಡಿದ್ದಾರೆ.

ಬಣ್ಣದ ಲೋಕದಲ್ಲಿ ಮಿಂಚ ಹೊರಟಿರುವ ಕರಾವಳಿಯ ಮುದ್ದು ಮುಖದ ಚೆಲುವೆ ಐಶಾನಿ ಶೆಟ್ಟಿ ಗೆ ನಮ್ಮ ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

– ಅನಿತಾ ಬನಾರಿ

 

Image may contain: 1 person, standing and outdoor

Image may contain: 1 person, standing and outdoor

Image may contain: 1 person

Image may contain: 1 person, smiling, sitting

ಗಾಯಕಿ, ನಾಯಕಿ ಕರಾವಳಿಯ ಈ ಬೆಡಗಿ

#balkaninews #aishanishetty #aishanishettymovies #aishanishettyinstagram #aishanishettyfacebook #aishanishettyshortfilm

Tags