ಬಾಲ್ಕನಿಯಿಂದಸಂದರ್ಶನ

ನಟನಾ ಲೋಕದಲ್ಲಿ ಮಂಜಿನ ನಗರಿಯ ಚೆಲುವೆ

ಬೆಂಗಳೂರು, ಏ.17:

ಮಂಜಿನ ನಗರಿಯ ಮುದ್ದು ಮುಖದ ಚೆಲುವೆಯ ಹೆಸರು ಅನು ಪೂವಯ್ಯ. ‘ಕರ್ವ’ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡುವ ಮೂಲಕ ಚಂದನವನಕ್ಕೆ ಕಾಲಿಟ್ಟ ಕೊಡಗಿನ ಕುವರಿ ಅನು ಪೂವಯ್ಯ, ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮುದ್ದುಲಕ್ಷ್ಮೀ’ ಧಾರಾವಾಹಿಯಲ್ಲಿ ನೆಗೆಟಿವ್‌ ಶೇಡ್‌ ಇರುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೊಡಗಿನ ಬೆಡಗಿ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾದರೂ, ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ಅನುಭವ ಅವರಿಗಿದೆ.

Image may contain: 1 person, smiling, tree, outdoor, closeup and nature

ಎಂಬಿಎ ಮುಗಿಸಿ ಮಲ್ಟಿ ನ್ಯಾಷನಲ್‌ ಕಂಪನಿಯೊಂದರಲ್ಲಿ ಎಚ್‌ ಆರ್‌ ಆಗಿದ್ದ ಅನು ಪೂವಯ್ಯ ಮಾಡೆಲಿಂಗ್ ಕ್ಷೇತ್ರದಲ್ಲಿ ಕೇಳಿ ಬರುತ್ತಿದ್ದ ಹೆಸರು. ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮಿಂಚಿದ್ದ ಅನು ಅವರನ್ನು ನಟನಾ ಲೋಕ ಕೈ ಬೀಸಿ ಕರೆಯಿತು.  ಒಲ್ಲೆ ಎನ್ನಲಾಗದ ಅನು ಕೆಲಸಕ್ಕೆ ರಾಜೀನಾಮೆ ನೀಡಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟದ್ದೂ ಆಯಿತು‌ . ಮೊದಲ ಬಾರಿಗೆ ಕರ್ವ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡ ಚೆಂದುಳ್ಳಿ ಚೆಲುವೆ ಮುಂದೆ ‘ಕಥಾ ವಿಚಿತ್ರ’, ‘ಲೈಫ್‌ ಸೂಪರ್‌’, ‘ಪಾನೀಪೂರಿ’ ಚಿತ್ರದಲ್ಲಿ ನಟಿಸಿರುತ್ತಾರೆ. ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರದಲ್ಲಿಯೂ ನಟಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ಇದೀಗ ನಟನೆಯಲ್ಲಿ ಬೇರೆ ರೀತಿಯ ಅನುಭವ ಪಡೆಯುವ ಸಲುವಾಗಿ ಮುದ್ದು ಲಕ್ಷ್ಮೀ ಸೀರಿಯಲ್‌ ನನ್ನು ಅವರು ಒಪ್ಪಿಕೊಂಡಿದ್ದಾರೆ.

Image may contain: 1 person

“ಮುದ್ದು ಲಕ್ಣ್ಮೀ ಸೀರಿಯಲ್‌ ನಲ್ಲಿ ನಾನು ನೆಗೆಟಿವ್‌ ರೋಲ್‌ನಲ್ಲಿ ನಟಿಸುತ್ತಿದ್ದೇನೆ. ಈ ಸೀರಿಯಲ್ ನಲ್ಲಿ ನಾನು ಕೂಡ ನಾಯಕಿಯಾಗಿ ನಟಿಸಿದ್ದೇನೆ‌. ಕಿರುತೆರೆ ನನಗೆ ಹೊಸತು. ಕಳೆದ ಮೂರು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸಿದ್ದೇನೆ. ಈಗ ಆ್ಯಕ್ಟಿಂಗ್‌ ನಲ್ಲಿ ಇನ್ನೂಹೆ ಚ್ಚಿನದ್ದನ್ನು ಕಲಿಯುವ ಸಲುವಾಗಿ ಸೀರಿಯಲ್‌ನಲ್ಲಿ ನಟಿಸಲು ಆರಂಭಿಸಿದ್ದೇನೆ. ಸಿನಿಮಾ ಒಂದು ರೀತಿಯ ಅನುಭವವಾದರೆ, ಸೀರಿಯಲ್‌ ಇನ್ನೊಂದು ರೀತಿಯ ಅನುಭವ ನೀಡುತ್ತದೆ,’ಎನ್ನುತ್ತಾರೆ ಮಂಜಿನ ನಗರಿಯ ಬೆಡಗಿ ಅನು ಪೂವಯ್ಯ.

ಮದುವೆಯ ವಿಚಾರಕ್ಕೆ ಬರುವುದಾದರೆ ಅನು ಕೆಲದಿನಗಳ ಹಿಂದೆಯಷ್ಟೇ ಕ್ರಿಕೆಟರ್ ಮತ್ತು ಬಿಗ್ ಬಾಸ್ ಸ್ಪರ್ಧಿ ಎನ್ ಸಿ ಅಯ್ಯಪ್ಪ ಶಾಸ್ರೋಸ್ತ್ರವಾಗಿ ವರಿಸಿದ್ದಾರೆ. ಇನ್ನು ಡಾನ್ಸ್‌ ಕ್ಲಾಸ್‌ಗೆ ಹೋಗಿರುವುದು ಬಿಟ್ಟರೆ ನಟನೆಯ ಬಗ್ಗೆ ಯಾವುದೇ ಅನುಭವವಿಲ್ಲ ಹಾಗೂ ಅಲ್ಲದೇ ಯಾವುದೇ ರೀತಿಯ ತರಬೇತಿಯನ್ನು ಕೂಡ ಪಡೆಯದ ಅನು ಇಲ್ಲಿಯ ತನಕ ಎಲ್ಲವನ್ನೂ ಆಸಕ್ತಿಯಿಂದ ಕಲಿತುಕೊಂಡವರು. ಇಂತಿಪ್ಪ ಚೆಲುವೆಗೆ ನೆಗೆಟಿವ್‌ ಶೇಡ್‌ ಇರುವ ಪಾತ್ರಗಳಲ್ಲಿ ನಟಿಸಲು ತುಂಬಾ ಇಷ್ಟ. ಮಾತ್ರವಲ್ಲ ಅದು ಸ್ವಲ್ಪ ಸುಲಭವೂ ಹೌದು ಎನ್ನುತ್ತಾರೆ.

Image may contain: 2 people, people smiling

ಸಿನಿಮಾಗಿಂತಲೂ ಸೀರಿಯಲ್‌ ಕಲಾವಿದರಿಗೆ ಸಾಕಷ್ಟು ಹೆಸರು  ತಂದುಕೊಡುತ್ತದೆ. ನಾನು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇನೆ.  ಜನರು ಈಗಾಗಲೇ ನನ್ನನ್ನು ಮುದ್ದು ಲಕ್ಷ್ಮೀ  ಸೀರಿಯಲ್‌ ನ ಐಶ್ವರ್ಯಾ ಪಾತ್ರದಿಂದ ಗುರುತಿಸಲು ಆರಂಭಿಸಿದ್ದಾರೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ಸಂತೋಷ ಬೇರೇನಿದೆ” ಎನ್ನುತ್ತಾರೆ ಅನು.

ಮುದ್ದು ಲಕ್ಷ್ಮೀ  ಸೀರಿಯಲ್‌ ನನ್ನು ಒಪ್ಪಿಕೊಳ್ಳಲು ಅದರ ಕತೆಯೇ ಮುಖ್ಯ ಕಾರಣ. ಇನ್ನು ನನಗೆ ಈ ಸೀರಿಯಲ್‌ ಸೆಟ್‌ ಒಂದು ರೀತಿಯಲ್ಲಿ ಮನೆ ಎಂಬ ಫೀಲ್‌ ಕೊಡುತ್ತದೆ ಎನ್ನುವ ಅನು ಪೂವಯ್ಯ ರ ಬಣ್ಣದ ಪಯಣಕ್ಕೆ ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

– ಅನಿತಾ ಬನಾರಿ

Image may contain: 1 person, standing

Image may contain: 1 person

ಬಣ್ಣದ ಲೋಕದ ಸ್ಟೈಲ್ ಕ್ವೀನ್ ಅಮಿತಾ ಕುಲಾಲ್

#anupoovamma #sandalwood #kannadamovies #ncayyappa

Tags

Related Articles