ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಸಕಲಕಲಾವಲ್ಲಭೆ ಅನುಷಾ ಹೆಗ್ಡೆ

ಬೆಂಗಳೂರು, ಏ.30:

ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಅನುಷಾ ಹೆಗ್ಡೆ ಇಂದು ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸುವ ಅವರು ತನ್ನ ಮೊದಲ ಧಾರಾವಾಹಿಯಲ್ಲೇ ವಿಲನ್ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.

Image may contain: 1 person, flower and closeup

ನೃತ್ಯ ತನ್ನ ಆಸಕ್ತಿಯ ಕ್ಷೇತ್ರ ಎನ್ನುವ ಅನುಷಾ ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿದ್ದಾರೆ. “ನೃತ್ಯದಲ್ಲಿ ಮುಖದ ಭಾವನೆ ಮುಖ್ಯ. ನವರಸಗಳು ಅದರಲ್ಲಿ ಕೂಡಿರುತ್ತವೆ. ನೆಗೆಟಿವ್ ಪಾತ್ರಕ್ಕೂ ಅಷ್ಟೇ. ಮುಖದ ಭಾವನೆಯೇ ಮುಖ್ಯವಾಗುತ್ತದೆ. ಈಗಾಗಲೇ ಭರತನಾಟ್ಯ ಕಲಿತಿರುವ ನನಗೆ ನವರಸಗಳನ್ನು ಸಲೀಸಾಗಿ ಮುಖದಲ್ಲಿ ಮೂಡಿಸಲು ಸಾಧ್ಯವಾಗುತ್ತದೆ. ಹಾಗಾಗಿ ನಟಿಸಲು ಕಷ್ಟವಾಗಲಿಲ್ಲ ಎನ್ನುವ ಅನುಷಾ ಇಂದು ದೀಪಿಕಾ ಪಾತ್ರದ ಮೂಲಕ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ನಿರ್ದೇಶಕ ಶಿವು ಅವರು ಕಾರಣ. ಅವರ ಮಾರ್ಗದರ್ಶನದಿಂದ ಇದೆಲ್ಲಾ ಸಾಧ್ಯವಾಯಿತು ಎಂದು ಸಂತೋಷದಿಂದ ಹೇಳುತ್ತಾರೆ ಅನುಷಾ.

Image may contain: 2 people, people smiling, people standing

ಈಗಾಗಲೇ ಸುಮಾರು 800ಕ್ಕೂ ಹೆಚ್ಚು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿರುವ ಅನುಷಾ ಬಣ್ಣ ಬಣ್ಣದ ಬದುಕು ಚಿತ್ರದಲ್ಲಿ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಮಾತ್ರವಲ್ಲ ಅತಿಥಿ ಕಲಾವಿದೆಯಾಗಿಯೂ ಬಣ್ಣ ಹಚ್ಚಿದ್ದಾರೆ. ಎನ್. ಎಚ್ 37 ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅವರು ಎಂದೂ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕು ಎಂದು ಅಂದುಕೊಂಡವರೇ ಅಲ್ಲ. ಅದು ಅವರಿಗೆ ಆಕಸ್ಮಿಕವಾಗಿ ದೊರೆತ ಅವಕಾಶ. ಮೊದಲ ಸಂದರ್ಶನದಲ್ಲೇ ಎನ್ ಎಚ್ 37ನ ಚಿತ್ರಕ್ಕೆ ಆಯ್ಕೆಯಾದ ಅವರು ಸದ್ಯ ಕಿರುತರೆಯಲ್ಲಿ ಬ್ಯುಸಿ.

ಭರತನಾಟ್ಯ ಕಲಾವಿದೆಯಾಗಿರುವ ಕಾರಣ ಧಾರಾವಾಹಿ ಮತ್ತು ಸಿನಿಮಾದಲ್ಲಿ ನಟಿಸಲು ಸಾಧ್ಯವಾಯಿತು. ಇನ್ನೂ ಅವಕಾಶಗಳು ಬರುತ್ತಿವೆ. ಸಿನಿಮಾ ಮತ್ತು ಕಿರುತೆರೆಯಲ್ಲಿ ಮುಂದುವರಿಯುತ್ತೇನೆ. ಆದರೆ ನೃತ್ಯವನ್ನು ಎಂದಿಗೂ ಬಿಡುವುದಿಲ್ಲ. ಅವಕಾಶ ಸಿಕ್ಕಾಗ ಕಾರ್ಯಕ್ರಮ ನೀಡುತ್ತೇನೆ ಎನ್ನುವ ಚೆಲುವೆ ಹಾಡುಗಾರ್ತಿಯೂ ಹೌದು. ಅದರ ಜೊತಗೆ ಯೋಗಭ್ಯಾಸದಲ್ಲೂ ಪರಿಣಿತಿ ಪಡೆದಿರುತ್ತಾರೆ. ಇಂತಹ ಮುದ್ದು ಕಲಾವಿದೆಯ ಮುಂದಿನ ಜೀವನ ಸುಖಮಯವಾಗಿರಲೆಂದು ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

–  ಅನಿತಾ ಬನಾರಿ

Image may contain: 1 person

Image may contain: 1 person, closeup

 

Image may contain: 1 person, text

Related image

ಒಡವೆಯ ಗೊಡವೇ, ಮರುಗೋದು ತರವೇ

#anushahegde #radharamanaserial #balkaninews #sandalwood #anushkahegeserials #anushahegdemovies

Tags