ಬಾಲ್ಕನಿಯಿಂದಸಂದರ್ಶನ

ಸ್ವಚ್ಛ ಮನಸ್ಸಿನ, ಉಚ್ಚ ಸಂಸ್ಕಾರದ, ಅಚ್ಚ ತುಳುನಾಡಿನ ಬೆಡಗಿ, ಈ ಮೂನ್ಲೈಟ್..!!

‘…ಹೊಳೆವ ಗೌರ ವರ್ಣದ ನೀಳ ಕಾಯ…ತೀಕ್ಷ್ಣ ಕಂಗಳ ಸೊಂಪಾದ, ದಟ್ಟ ಕೇಶರಾಶಿ, ಬಾಲಿವುಡ್ ಬೆಡಗಿಯೋ ಎನ್ನುವಷ್ಟು ಸ್ಮಾರ್ಟ್..ಈಕೆ..! ಯಾವುದೇ ಧಾವಂತರಹಿತ ಮಾತು, ಮಿತವಾಗಿ ಹಿತವಾಗಿ ನಗುವ ಚಂದ್ರಚಕೋರಿ.. ಈ ಪೋರಿ..!!

‘ಬಾಳೊಂದು.. ಭಾವಗೀತೆ…, ಆನಂದ ತುಂಬಿದ ಕವಿತೆ..’, ಕೆಲವರಿಗೆ ಮಾತ್ರ ಜೀವನ ಯಾತ್ರೆಯಲ್ಲಿ ತಾವು ಬಯಸಿದ್ದೆಲ್ಲಾ ಈಡೇರಿಸಿಕೊಳ್ಳುವ ಶಕ್ತಿ-ಯುಕ್ತಿ ಒಲಿದಿರುತ್ತೆ. ನೀ ಏನೇ ಮಾಡುತ್ತಿರು…, ಮುಟ್ಟಬೇಕಾದ ಗುರಿಯನ್ನು ಮಾತ್ರ ಮರೆಯದಿರು… ಎಂದು ಸದಾ ಕನ್ನಡ ಚಂದನವನದ ಬಿಡುವಿಲ್ಲದ ನಟಿಯಾಗಬೇಕೆಂಬ ಮಹದಾಸೆ ಹೊತ್ತು ತನ್ನೊಳಗೇ ಸಾಧನೆಗಳ ಕ್ರೋಢೀಕರಿಸುತ್ತಿರುವ ಕೆಲವೇ ರೂಪಸಿಯರಲ್ಲಿ ಒಬ್ಬರು ತುಳುನಾಡಿನ ಈ ಬೆಡಗಿ.

ನಾನು, ನನ್ನ ಸ್ವಭಾವ, ಹಾವ-ಭಾವಗಳ ನಾನೇ ಗಮನಿಸಿದರೆ ನನಗೇ ಅನ್ನಿಸಿದ ಸತ್ಯಗಳೇನೆಂದರೆ ನನ್ನಲ್ಲಿ ಬಹಳಷ್ಟು ಅಧ್ಯಾತ್ಮ ಚಹರೆಗಳಿವೆ..!!!! ಎಂದು ಕೇಳುಗರ ಆವಾಕ್ಕಾಗಿಸುವ ನಿಜ ರೂಪಸಿ ಚಾಂದಿನಿ ಆಂಚನ್ ಇದೀಗ ರಿಯಲ್ ಸ್ಟಾರ್ ಉಪ್ಪಿಯ ‘ಹೋಮ್ ಮಿನಿಸ್ಟರ್’! ಹೌದು ಇನ್ನೇನು ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಚಿತ್ರದಿಂದ ತಮ್ಮ ಬಲುದಿನಗಳ ಕನಸು ನನಸಾಗಬಹುದೆಂಬ ನಂಬಿಕೆ ವ್ಯಕ್ತಪಡಿಸಿದರು ಮೊನ್ನೆ ಬಾಲ್ಕನಿ ಜೊತೆ ನಡೆಸಿದ ಸುದೀರ್ಘ ಸಂಭಾಷಣೆಯಲ್ಲಿ….

ಬಾಲ್ಕನಿಗಾಗಿ ಒಂದು ಹಾಡು ಹಾಡಿ ಎಂದಾಗ ಚಾಂದಿನಿ..ಹಾಡಲಾರಂಭಿಸಿದರು.. ಲಂಬೋದರ ಲಕುಮಿಕರ.. ಅಂಬಾಸುತ ಅಮರವಿನುತ…, ಆಹಾ! ದಾಸ ಶ್ರೇಷ್ಠ ಪುರಂದರದಾಸರ ಈ ಗೀತೆ ಚಾಂದಿನಿಯವರ ಕಂಠದಲ್ಲಿ ಸುಶ್ರಾವ್ಯವಾಗಿ, ಶೃತಿಬದ್ಧವಾಗಿ ಮೂಡಿತ್ತು. ಭಾರತೀಯತೆಯನ್ನೇ ತಿರಸ್ಕರಿಸಿ ಪಾಶ್ಚಾತ್ಯ ಅಂಧಾನುಕರಣೆ ಮಾಡುವ ಸಾವಿರಾರು ಯುವಕ-ಯುವತಿಯರಿಗೆ ಮಾದರಿ ಯಾಗುತ್ತಾರೆ ಈ ಚೆಲುವೆ. ಇದಕ್ಕೆ ಕಾರಣ ಅವರಿಗೆ ಬಾಲ್ಯದಿಂದಲೂ ತಮ್ಮ ಮನೆಯಿಂದ , ತಾಯಿಯಿಂದ ದೊರೆತ ಸತ್ಸಂಪ್ರದಾಯ, ಸದಾಚಾರ..!

ಮಂಗಳೂರಿನ ಸರಳಾದೇವಿ ಆಂಚನ್ – ಸುಂದರ್ ರವರ ಮಗಳು ಚಾಂದಿನಿ, ಈ ಮುದ್ದು ಹುಡುಗಿಗೊಬ್ಬ ತಂಗಿ, ಆಕೆಯ ಹೆಸರು ಪ್ರಕೃತಿ ಆಂಚನ್ . ಇವರಿಬ್ಬರೂ ಲಲನೆಯರೂ ಹುಡುಗರಿಗಿರುವ ಧೈರ್ಯ, ಮುನ್ನುಗ್ಗುವಿಕೆ ಹೊತ್ತೇ ಚಿತ್ರರಂಗಕ್ಕಿಳಿದವರು.

ಆರ್. ಬಿ.ಚೌಧರಿ ಅವರ ಪ್ರೊಡಕ್ಷನ್ಸ್ ಹೌಸ್ ನಲ್ಲಿ ಎಚ್. ವಾಸು ನಿರ್ದೇಶನದ ‘ಪುಂಡ’ ಸಿನೆಮಾದಲ್ಲಿ ಪ್ರಕೃತಿ ಆಂಚನ್ ರವರದು, ಲೂಸ್ ಮಾದ ಯೋಗಿಯ ತಂಗಿಯ ಪಾತ್ರ..! ಇದಾಗಿದ್ದು 2008ರಲ್ಲಿ. ಈ ನಿಟ್ಟಿನಲ್ಲಿ ನಮ್ಮ ಬದುಕು ಸಾಗಿದ್ದಾಗ ನನಗೆ ‘ಚಂದನವನ’ ದ ನಿಜ ಪರಿಚಯ ಆಯ್ತು.

ಇದಕ್ಕೇ ಹೇಳುವುದು ವಿಧಿಯ ಮಾಯೆ…! ಒಂದೆಡೆ ಅವರ ಕುಟುಂಬವೇ ಮಂಗಳೂರಿನಿಂದ ಬೆಂಗಳೂರಿಗೆ ರವಾನೆಯಾಗಿ ಅವರ ನಟನಾ ವೃತ್ತಿಗೆ ಇಂಬಾಗಿ ನಿಲ್ಲುತ್ತಿರುವಲ್ಲಿ ಅಕ್ಷರಶಃ ಮೊದಲ ಆದ್ಯತೆಯಲ್ಲಿ ತಮ್ಮ ತಂಗಿಗೇ ಸ್ಯಾಂಡಲ್ ವುಡ್ ನಲ್ಲಿ ಪ್ರಥಮವಾಗಿ ನಟಿಸುವ ಅವಕಾಶ ದೊರಕಿತ್ತು.

‘…ಹೊಳೆವ ಗೌರ ವರ್ಣದ ನೀಳ ಕಾಯ…ತೀಕ್ಣ ಕಂಗಳ ಸೊಂಪಾದ, ದಟ್ಟ ಕೇಶರಾಶಿ, ಬಾಲಿವುಡ್ ಬೆಡಗಿಯೋ ಎನ್ನುವಷ್ಟು ಸ್ಮಾರ್ಟ್..ಈಕೆ, ಯಾವುದೇ ಧಾವಂತರಹಿತ ಮಾತು, ಮಿತವಾಗಿ ಹಿತವಾಗಿ ನಗುವ ಚಂದ್ರಚಕೋರಿ.. ಈ ಪೋರಿ..’ ಮಾಡೆಲ್ ಆಗಿ ಮೈ ಕುಣಿಸುತ್ತಾ ನಡೆದು ಬಂದು ಕತ್ತು ಕೊಂಕಿಸಿ ಒಮ್ಮೆ ನಿಲ್ಲುವ ವರಸೆ ನೋಡಿದ ನಮ್ಮ ಚಿತ್ರರಂಗದ ಮಂದಿ ಕೆಲವೇ ದಿನಗಳಲ್ಲಿ ಕಾಲ್ ಶೀಟ್ ಹಿಡಿದು ಫೋನ್ ಕಾಲ್ ಮಾಡಿಯೇ ಬಿಟ್ಟಿರು.

ಅಂತೂ ಫಲಿಸಿದ ಬಹುಕಾಲದ ಆಸೆ..!

ಕನ್ನಡದಲ್ಲಿ ಅತೀ ಶೀಘ್ರ ಸೂಪರ್ ಸ್ಟಾರ್ ಉಪೇಂದ್ರರೊಂದಿಗೆ ನಟಿಸುವ ಬಯಕೆ ಈಡೇರಿದ್ದೂ 2018ರಲ್ಲೇ. ತೆಲುಗಿನಲ್ಲಿ ಚಾಂದಿನಿ ನಟನೆ ಕಂಡ ನಿರ್ದೇಶಕ ಹರಿ ಅವರು ತಮ್ಮ ಕನ್ನಡ ಸಿನೆಮಾಕ್ಕೆ ಚಾಂದಿನಿ ಫಿಕ್ಸ್ ಮಾಡಿಕೊಂಡು ‘ನೀವು ಉಪ್ಪಿಯೆದುರು ನಟಿಸಬೇಕು..’ ಎಂದಾಗ ಚಾಂದಿನಿಗೆ ಸ್ವರ್ಗ ಮೂರೇ ಗೇಣು..!! ‘ಹೋಮ್ ಮಿನಿಸ್ಟರ್’ ಈ ಚಿತ್ರದ ಹೆಸರು. ಮೊದಲ ದಿನ ವೈಯ್ಯಾರವಾಗಿ ಸಿಂಗರಿಸಿ ಉಪೇಂದ್ರರ ಕಣ್ಣಲ್ಲಿ ಕಣ್ಣಿಟ್ಟು ನಟಿಸಿದಾಗ ಬೆವೆತಿದ್ದರಂತೆ.

‘ಹೋಮ್ ಮಿನಿಸ್ಟರ್’ ಚಿತ್ರೀಕರಣವೇನೋ ಆರಂಭಿಸಿದ್ದವರು ತೆಲುಗಿನ ನಿರ್ದೇಶಕ ಹರಿ. ನಡುವೆ ಅವರ ಅನಾರೋಗ್ಯದ ಕಾರಣ ಉಪ್ಪಿಯವರೇ ನಿರ್ದೇಶಕನ ಪಾತ್ರವನ್ನೂ ವಹಿಸಿದ್ದರು. ಏನೇ ಇರಲಿ ನನ್ನ ಮೊದಲ ಕನ್ನಡ ಚಿತ್ರ ಸೂಪರ್ ಸ್ಟಾರ್ ಉಪ್ಪಿಯವರೊಡನೆ ಆರಂಭವಾಗಿದ್ದು ನನ್ನ ಅದೃಷ್ಟ..!

ಸೃಜನಶೀಲತೆಗೆ ಹೆಸರಾದ ಉಪ್ಪಿ ಚಾಂದಿನಿಯನ್ನು ಬಲು ಹಿತವಾಗಿ ನಡೆಸಿಕೊಂಡು ಕಿರಿಯಳಾದರೂ ನಟನೆಯಲ್ಲೂ ಮಾರ್ಗದರ್ಶನ ನೀಡುತ್ತಲೇ ಒಳ್ಳೆಯ ಕೆಲಸ ತೆಗೆದುಕೊಂಡಿದ್ದಾರೆ ಓರ್ವ ನಿರ್ದೇಶಕರಾಗಿ, ನಾಯಕರಾಗಿ..! ಎಂಬುದು ಚಾಂದಿನಿ ಅಂಬೋಣ..

ಹಾಡು, ನೃತ್ಯದ ಮೂಲಕ ಶುರುವಾದ ಸಿನೆಮಾ ಗೀಳು (ಫ್ಲ್ಯಾಷ್ ಬ್ಯಾಕ್)

2008ರಲ್ಲಿ ತುಳುನಾಡಲ್ಲಿ ಆಲ್ಬಮ್ ಗಳ ಭರಾಟೆಯೇ ಹೆಚ್ಚು. ‘..ಶುರುವಿನಲ್ಲಿ ಮ್ಯೂಸಿಕ್ ಆಲ್ಬಮ್ ಮೂಲಕವೇ ಬಣ್ಣ ಹಚ್ಚಲು ಆರಂಭಿಸಿದ್ದು ನಾನು..’ ಒಂದರ ಹಿಂದೊಂದರಂತೆ ‘ಅರಳಿಂಡ್ ಮನಸ್’, ‘ಮೊಕ್ಕೆತ ಮಗಳ್’, ‘ಸುರ್ಮತ ಕಣ್ಣ್’ ಹೀಗೆ ಮೂರು ಮ್ಯೂಸಿಕ್ ಆಲ್ಬಮ್ ಗಳಲ್ಲಿನಟಿಸಿದರು ಚಾಂದಿನಿ!

ಈಗಂತೂ ತುಳುನಾಡಿನಲ್ಲಿ ತಮ್ಮದೇ ಆದ ಫಿಲಂ ಇಂಡಸ್ಟ್ರಿ ನೆಲೆಯೂರಿದೆ. ಅಲ್ಲೂ ಅವಕಾಶಗಳಿವೆ. ನೆರೆಯ ಮಲಯಾಳಂ ಚಿತ್ರಗಳೂ ಸ್ವಾಭಾವಿಕವಾಗಿ ಇವರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಸ್ಯಾಂಡಲ್ ವುಡ್ ಗೆ ಬರಬೇಕಾದರೆ ರಾಜಧಾನಿಗೇ ಬಂದು ನೆಲೆಸಬೇಕು ಎಂದ ಕೆಲವು ನಿರ್ಮಾಪಕರ ಕಟ್ಟಪ್ಪಣೆಗೆ ಶರಣಾಗಿತ್ತು ಇಡೀ ಕುಟುಂಬ..!

2010ರಲ್ಲಿ ಬೆಂಗಳೂರಿಗೆ ಕುಟುಂಬ ಸಹಿತ ಸ್ಥಳಾಂತರ

ಚಂದನವನ..! ..ಅದೇ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಬೇಕೆಂಬ ಆಸೆ ಬಲವಾಗಿದ್ದರೆ ಬೆಂಗಳೂರಿಗೆ ಬಂದು ನೆಲೆಸಿ.. ಎಂದ ಇಂಡಸ್ಟ್ರಿಯವರ ಕಿವಿಮಾತೇ ಸಾಕಾಯ್ತು ತಾಯಿ-ತಂಗಿ ಪ್ರೀತಿ ಆಂಚನ್ ರೊಡನೆ ಚಾಂದಿನಿ ರಾಜಧಾನಿಯಲ್ಲೇ ಝಾಂಢಾ ಊರಲು..!

ಇತ್ತ ಚಾಂದಿನಿ ನಟಿಯಾಗಲು ಪ್ರಯತ್ನ ನಡೆದಿರಲು, ಮಾಡೆಲ್ ಆಗು ಬಾ..ಹಾಗಾದರೆ ನಟಿಯಾಗಲು ಸಾಧ್ಯ..ಎಂದ ಕೆಲವು ಪಂಟರ್ ರ ಮಾತು ಕೇಳಿ ರೂಪದರ್ಶಿಯೂ ಆಗಿಬಿಟ್ಟರು ಚಾಂದಿನಿ..!!

2013 ಆನಂತರ ಶುರುವಾಯ್ತು ನನ್ನ ರೂಪದರ್ಶಿಯ ವೃತ್ತಿ.. ಮುಂದಿನ ಒಂದೇ ವರ್ಷದಲ್ಲಿ ಅಂದರೆ, 2014ರಲ್ಲಿ ನವದೆಹಲಿಯಲ್ಲಿ ನಡೆದ ಮಾಡೆಲಿಂಗ್ ಸ್ಫರ್ಧೆಯಲ್ಲಿ ಭಾಗವಹಿಸಿ ನಾನು ಪ್ರಥಮ ಯಶಸ್ಸು ಕಂಡೆ. ಈ ಮಾಡೆಲಿಂಗ್ ಯಾ ಫ್ಯಾಷನ್ ಶೋನಲ್ಲಿ ನಾನು ಮಿಸ್ ಇಂಡಿಯಾ ಗ್ಲೋರಿ ಪಟ್ಟಕ್ಕೇರಿದ್ದೇ ತಡ ನಮ್ಮ ರಾಜಧಾನಿಯ ಒಂದು ಆಂಗ್ಲ ಪತ್ರಿಕೆಯ ಕವರ್ ಪೇಜ್ ಗರ್ಲ್ ‘ಸಖೀ’ ಯಲ್ಲಿ ನನ್ನ ಮಾಡೆಲಿಂಗ್ ಕುರಿತಾದ ಲೇಖನ ಪ್ರಕಟಗೊಂಡಿತ್ತು. ಇಂದಿಗೂ ನನ್ನ ಬಳಿ ಅದರ ಪ್ರತಿ ಇದೆ. ತನ್ಮೂಲಕ ಒಂದು ತೆಲುಗು ಪಿಕ್ಚರ್ ಗೆ ಆಯ್ಕೆಯಾದೆ.

ಅತ್ತ ತೆಲುಗಿನಿಂದಲೂ ಆರಂಭವಾದ ಆಫರ್:

ಆ ಹೊತ್ತಿಗಾಗಲೇ ತೆಲುಗಿನ ನಿರ್ಮಾಪಕರಾದ ರಾಜಶೇಖರ ರೆಡ್ಡಿ ತಮ್ಮ ಚೊತ್ರ ‘ರುದ್ರ ಐಪಿಎಸ್’ ಗಾಗಿ ನಾಯಕಿಯ ಶೋಧದಲ್ಲಿದ್ದರು. ಅವರೊಡನೆ ಎರಡನೇ ನಾಯಕಿಯಾಗಿ ನಾನು ನಟಿಸಿ ಸೈ ಎನಿಸಿಕೊಂಡೆ. 2016ರಲ್ಲಿ ತೆರೆಕಂಡ ‘ರುದ್ರ ಐಪಿಎಸ್’ ಬಳಿಕವೂ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೆ.

ನನಗೆ ಗಣಪತಿಯೇ ಆರಾಧ್ಯ ದೇವರು..

ನಾನು ಪೂಜಿಸುವ ದೇವರು ಗಣೇಶ-ಶಿವ-ವಿಷ್ಣು ಅನುಗ್ರಹದಿಂದಲೇ ಇದೆಲ್ಲಾ ನನ್ನ ಬದುಕಿನಲ್ಲಿ ಫಲಿಸುತ್ತಿದೆ ಎಂದು ಅವಲೋಕಿಸುವ ಚಾಂದಿನಿ ತಮ್ಮನ್ನು ಓರ್ವ ಅಧ್ಯಾತ್ಮಿಕ ತತ್ವಗಳಿಗೆ ಶರಣಾದ ವ್ಯಕ್ತಿಯೆಂದು ಬಣ್ಣಿಸಿಕೊಳ್ಳುತ್ತಾರೆ.

ಸದ್ಯ ಚಾಂದಿನಿಗೆ ತಮಿಳು, ಮಲಯಾಳಂ ಚಿತ್ರರಂಗದಲ್ಲೂ ನಟಿಸಲು ಆಹ್ವಾನ ಬರುತ್ತಿದೆಯಂತೆ. ತಮ್ಮ ಮಾತೃಭಾಷೆ ತುಳುವಿನಲ್ಲೇ ಹೊಸ ಚಿತ್ರ ಸೆಟ್ಟೇರಿದೆ. ‘ಕಾರ್ಣಿಕ ಕಲ್ಲುಟ್ಟಿ’ ಎಂಬ ಚಿತ್ರದಲ್ಲಿ ದೇವಿಯ ಪಾತ್ರದಲ್ಲಿ ಮಿಂಚಲಿರುವ ಈ ಸುಂದರಿಗೆ ಭಾರತದ 8 ಭಾಷಾಚಿತ್ರಗಳಲ್ಲಿ ನಟಿಸುವ ಮಹದಾಸೆ. ಮುಂದೊಂದು ದಿನ ಮಾಧ್ಯಮದ ಮಂದಿ ಚಾಂದಿನಿ ಎಂಬ ಅಭಿನೇತ್ರಿಯನ್ನು ‘ಅಷ್ಟಭಾಷಾ ತಾರೆ’ ಎಂದು ಉಲ್ಲೇಖಿಸುವ ದಿನ ಬಂದೊದಗಲೆಂದು ಬಾಲ್ಕನಿ ನ್ಯೂಸ್ ವತಿಯಿಂದ ಸದಾಶಯ. . “ನಾನು ನಂಬಿದ ದೈವ ನನ್ನನ್ನು ಬಾಲಿವುಡ್ ಗೂ ಕರೆದೊಯ್ಯುವ ಸಾಧ್ಯತೆಯಿದೆ” ಎಂದುಲಿಯುವ ಈ ಮೂನ್ ಲೈಟ್ (ಚಾಂದಿನಿ) ತುಳುನಾಡಿನ ಅಪ್ಸರೆಯರಾದ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿಯರಂತೆ ಬಾಲಿವುಡ್, ಹಾಲಿವುಡ್ ಗಳಲ್ಲಿ ತಮ್ಮ ಛಾಪು ಸಾಧಿಸಲಿ… ಎಂದು ಹಾರೈಸಿ ಪ್ರಿಯ ಓದುಗರೇ..!

ಡಾ. P.V. ಸುದರ್ಶನ ಭಾರತೀಯ , editor@balkaninews.com

Tags