ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

‘ತಕಧಿಮಿತ’ದಲ್ಲಿ ಮಿಂಚುತ್ತಿರುವ ಕವಿತಾ!

ಬೆಂಗಳೂರು, ಏ.06:

‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯ ಚಿನ್ನು ಪಾತ್ರದ ಮೂಲಕ ಮನೆ ಮಾತಾದ ಮುದ್ದು ಮುಖದ ಚೆಲುವೆಯ ಹೆಸರು ಕವಿತಾ ಗೌಡ. ಮುಂದೆ ಶ್ರೀನಿವಾಸ ಕಲ್ಯಾಣ ಮತ್ತು ಫಸ್ಟ್ ಲವ್ ಚಿತ್ರದಲ್ಲಿ ನಟಿಸಿದ ಚೆಂದುಳ್ಳಿ ಚೆಲುವೆ ಕವಿತಾ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ವಿದ್ಯಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ತದ ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಮನೆ ಮಾತಾಗಿದ್ದ ಕವಿತಾ ಫೈನಲ್ ಹಂತದವರೆಗೂ ಬಂದಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತಿ ದೊಡ್ಡ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತ ದಲ್ಲಿ ಹೆಜ್ಜೆ ಹಾಕುತ್ತಿರುವ ಕವಿತಾ ಗೌಡ ಅವರೊಂದಿಗಿನ ಮತ್ತಷ್ಟು ಮಾತುಕತೆ ಇಲ್ಲಿದೆ.

Image result for kavitha gowda

ಬಣ್ಣದ ಲೋಕದ ಪಯಣದ ಬಗ್ಗೆ ಹೇಳ್ತೀರಾ?

ನಾನು ಮೊದಲ ಬಾರಿ ಬಣ್ಣ ಹಚ್ಚಿದ್ದು ಲಕ್ಷ್ಮಿ ಬಾರಮ್ಮ ಧಾರಾವಾಹಿಗೆ. ಆದರೆ ಅದರ ಮೊದಲೇ ನಾನು ಶ್ರುತಿ ನಾಯ್ಡು ನಿರ್ದೇಶನದ ಪುನರ್ ವಿವಾಹ ಧಾರಾವಾಹಿಗೆ ಆಡಿಶನ್ ಮೂಲಕ ಆಯ್ಕೆ ಆಗಿದ್ದೆ. ನಟನೆಯ ಕುರಿತು ಏನೂ ತಿಳಿಯದ ನಾನು ನಟಿಸೋದಿಲ್ಲ ಎಂದು ಹೇಳಿದೆ. ಮುಂದೆ ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ ಆಫರ್ ಬಂತು. ಆಗಲೂ ನಾನು ನಟಿಸಲು ತಯಾರಾಗಿರಲಿಲ್ಲ. ಮುಂದೆ ಲಕ್ಷ್ಮಿ ಬಾರಮ್ಮ ತಂಡದಿಂದ ಅವಕಾಶ ಬಂದಾಗ ನಿರ್ದೇಶಕರು ನನ್ನನ್ನು ಹುರಿದುಂಬಿಸಿದರು. ನಿನ್ನಿಂದ ಸಾಧ್ಯ ಎಂದರು. ಹಾಗೆ ನನ್ನ ಬಣ್ಣದ ಪಯಣ ಆರಂಭವಾಯಿತು.

ಬಾಲ್ಯದಿಂದಲೂ ನಟನೆಯ ಬಗ್ಗೆ ನಿಮಗೆ ಒಲವಿತ್ತೇ?

ಖಂಡಿತಾ ಇಲ್ಲ. ನಾನು ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಬಂದವಳು. ನನ್ನ ಸ್ನೇಹಿತೆಗೆ  ನಟಿಸಬೇಕು ಎಂಬ ಮಹದಾಸೆ ಇತ್ತು. ಹಾಗೆ ಅವಳು ಆಡಿಶನ್ ಗೆ ಹೋಗುವಾಗ ನಾನು ಹೋದೆ. ಆದರೆ ಅವಳ ಬದಲು ನಾನು ಆಯ್ಕೆ ಆದೆ.

Image result for kavitha gowda

ಲಕ್ಷ್ಮಿ ಬಾರಮ್ಮ ನಂತರ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದೀರಿ?

ಲಕ್ಷ್ಮಿ ಬಾರಮ್ಮ ನಂತರ ತಮಿಳು ಧಾರಾವಾಹಿ ‘ನೀಲಿ’ ಯಲ್ಲಿ ಅಭಿನಯಿಸಿದ್ದೆ. ನಂತರ ‘ಶ್ರೀನಿವಾಸ ಕಲ್ಯಾಣ’ ಮತ್ತು ‘ಫಸ್ಟ್ ಲವ್’ ಸಿನಿಮಾದಲ್ಲಿ ನಟಿಸಿದ್ದೆ. ಮುಂದೆ ‘ವಿದ್ಯಾ ವಿನಾಯಕ’ ದ ವಿದ್ಯಾಳ ಪಾತ್ರಕ್ಕೆ ಜೀವ ತುಂಬಿದೆ. ಅದಾದ ಬಳಿಕ ದೊಡ್ಮನೆ ಬಿಗ್ ಬಾಸ್ ಒಳಗೂ ಹೋಗಿ ಬಂದೆ. ಇದೀಗ ತಕಧಿಮಿತ ಶೋ ದಲ್ಲಿ ಬ್ಯುಸಿಯಾಗಿದ್ದೇನೆ.

ನಟನೆಯ ಬಗ್ಗೆ ತರಬೇತಿ ಪಡೆದಿದ್ದೀರಾ?

ಇಲ್ಲ. ವಿಶೇಷ ತರಬೇತಿ ಏನೂ ಪಡೆದಿಲ್ಲ. ‘ಲಕ್ಷ್ಮಿ ಬಾರಮ್ಮ’ ತಂಡದ ನಿರ್ದೇಶಕರು, ಸಹ ಕಲಾವಿದರಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತೆ.

ಸ್ಫೂರ್ತಿ?

ನನಗೆ ಎಲ್ಲರೂ ಸ್ಫೂರ್ತಿ. ಎಲ್ಲರಲ್ಲೂ ಕೆಲವು ಒಳ್ಳೆಯ ಗುಣಗಳು, ಕೆಟ್ಟ ಗುಣಗಳು ಅಂಥ ಇರುತ್ತೆ. ನಾನು ಎಲ್ಲರಲ್ಲಿನ ಒಳ್ಳೆಯ ವಿಚಾರಗಳನ್ನು ಸ್ವೀಕರಿಸುತ್ತೇನೆ.

ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರಾ?

ಡ್ಯಾನ್ಸ್ ಮಾಡುತ್ತೇನೆ. ನಾನು ಭರತನಾಟ್ಯ ಕಲಾವಿದೆ. ಸೀನಿಯರ್ ಗ್ರೇಡ್ ಆಗಿದೆ. ಮತ್ತೆವರ್ಕ್ ಔಟ್ ಮಾಡ್ತೇನೆ. ಇನ್ನು ಫ್ರೆಂಡ್ಸ್ ಜೊತೆ ಕಾಲ ಕಳೆಯುತ್ತೇನೆ

ಇಂತಹ ಬಹುಮುಖ ಪ್ರತಿಭೆಯ ಮುಂದಿನ ಪಯಣ ಸುಖಮಯವಾಗಿರಲಿ ಎಂದು ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

– ಅನಿತಾ ಬನಾರಿ

Image result for kavitha gowda

ಮನಸೆಳೆವ ನಾಗಲಿಂಗಪುಷ್ಪ

#kavithagowda #sandalwood #kannadamovies #balkaninews #Interview #kavithagowdaserials #kavithagowdamovies

Tags