ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಅಂದು ಮಾಧವನ ಮೀರಾ, ಇಂದು ರಮಣನ ಆರಾಧನಾ..!!!

ಬೆಂಗಳೂರು, ಮೇ.13:

ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ನಟಿಯಾಗಿ ಗುರುತಿಸಿಕೊಂಡಿರುವ ಪ್ರತಿಭೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೀರಾ ಮಾಧವ ಧಾರಾವಾಹಿಯ ಮೀರಾ ಪಾತ್ರಧಾರಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆಯ ಹೆಸರು ಕಾವ್ಯಾ ಗೌಡ.

ತಮ್ಮ ಮೊದಲ ಧಾರಾವಾಹಿಯಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಮುದ್ದು ಮುಖದ ಚೆಲುವೆ ಕಾವ್ಯಾ ಭರವಸೆ ಮೂಡಿಸುವ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮುಂದೆ ಶುಭವಿವಾಹ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಮಿಂಚಿದ್ದ ಕಾವ್ಯಾ ಗೌಡ ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಾಂಧಾರಿ ಚಿತ್ರದ ಮೂಲಕ ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಿದರು.

Image may contain: 1 person, smiling, standing and outdoor

ಗಾಂಧಾರಿ ಧಾರಾವಾಹಿಯಲ್ಲಿ ದೀಪ್ತಿ, ದೃಷ್ಟಿ ಎನ್ನುವ ದ್ವಿಪಾತ್ರದಲ್ಲಿ ಕಾವ್ಯ ಕಾಣಿಸಿಕೊಂಡಿದ್ದರು. ಒಬ್ಬರೇ ಒಂದು ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸುವುದು ತುಂಬಾ ಕಷ್ಟ. ದೀಪ್ತಿ ಮುಗ್ದೆ ಆದರೆ, ದೃಷ್ಟಿ ಬಬ್ಲಿ. ಎರಡು ಭಿನ್ನ ರೀತಿಯ ಪಾತ್ರ. ” ಪ್ರಾರಂಭದಲ್ಲಿ ಪಾತ್ರ ಒಪ್ಪಿಕೊಂಡಾಗ ತುಂಬಾ ಕಷ್ಟಪಟ್ಟಿದೆ. ಒಂದು ಪಾತ್ರದಲ್ಲಿ ಅಭಿನಯಿಸದ ಕೂಡಲೇ ಇನ್ನೊಂದು ಪಾತ್ರಕ್ಕೆ ತಯಾರಿ ಮಾಡಿಕೊಳ್ಳಬೇಕಿತ್ತು. ಪಾತ್ರದಲ್ಲೂ ಅಷ್ಟೇ! ಸಾಕಷ್ಡು ಬದಲಾವಣೆ ಇದ್ದ ಕಾರಣದಿಂದ ತಕ್ಷಣ ಕ್ಯಾಮರಾ ಎದುರಿಸುವುದು ಕಷ್ಟವೇ ಆಗಿತ್ತು. ಆದರೆ ತುಂಬಾ ಶ್ರದ್ಧಯಿಂದ ನಾನು ಈ ಪಾತ್ರ ನಿಭಾಯಿಸಿದೆ. ಜನರು ಅದನ್ನು ಸ್ವೀಕರಿಸಿದರು” ಎಂದು ಸಂತೋಷದಿಂದ ಹೇಳುತ್ತಾರೆ ಕಾವ್ಯ ಗೌಡ.

” ಪದವಿ ಓದುತ್ತಿದ್ದ ಸಮಯ. ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಮನೆಯವರ ಸಲಹೆ ಮತ್ತು ಒಪ್ಪಿಗೆ ಪಡೆದು ಭಾಗವಹಿಸಿದೆ. ಅದರೊಂದಿಗೆ ಓದನ್ನು ನಿಭಾಯಿಸಿದೆ. ಆಗ ಮೀರಾ ಮಾಧವ ಧಾರಾವಾಹಿಯಲ್ಲಿ ನಟಿಸಲು ಆಫರ್ ಬಂತು. ನಟನೆಯ ಗಂಧ ಗಾಳಿಯೇ ನನಗೆ ಗೊತ್ತಿರಲಿಲ್ಲ. ನಟಿಸೋದಿಲ್ಲ ಎಂದೆ. ನಿರ್ದೇಶಕರ ಒತ್ತಾಯದ ಮೇರೆಗೆ ಒಪ್ಪಿಕೊಂಡೆ” ಎನ್ನುತ್ತಾ ತಮ್ಮ ನಟನಾ ಪಯಣವನ್ನು ವಿವರಿಸುತ್ತಾರೆ ಕಾವ್ಯ.

Image may contain: 1 person, smiling

“ಮೊದಲ ಬಾರಿ ಕ್ಯಾಮರಾ ಎದುರಿಸಿದಾಗ ಕೊಂಚ ಭಯ ಆಗಿತ್ತೇನೋ! ಏನೇ ಡೈಲಾಗ್ ಕೊಟ್ಟರೂ ಕ್ಯಾಮರಾ ನೋಡಿಯೇ ಹೇಳುತ್ತಿದ್ದೆ. ನನ್ನ ಅವತಾರವನ್ನು ನೋಡಿ ಶೂಟಿಂಗ್ ನಲ್ಲಿ ಇದ್ದವರೆಲ್ಲಾ ನಗಾಡಿದ್ದರು. ಆದರೆ ನಿರ್ದೇಶಕ ಪ್ರೀತಂ ಶೆಟ್ಟಿ ಅವರ ಸಹನೆ ಮೆಚ್ಚಲೇಬೇಕು. ಇದೆಲ್ಲವನ್ನೂ ಸಹಿಸಿಕೊಂಡ ಅವರು ನನಗೆ ನಟನೆಯ ರೀತಿ ನೀತಿಗಳನ್ನು ಹೇಳಿ ಕೊಟ್ಟರು‌. ಬರುಬರುತ್ತಾ ನಟನೆ ಅಭ್ಯಾಸವಾಯಿತು ಎನ್ನುವ ಕಾವ್ಯಾ  ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ.

ಆರ್ ಜೆ ರೋಹಿತ್ ಅಭಿನಯದ ಬಕಾಸುರ ಚಿತ್ರದಲ್ಲಿ ನಟಿಸಿರುವ ಕಾವ್ಯ ಅಕ್ಕಿನೇನಿ ನಾಗಾರ್ಜುನ ಅವರೊಂದಿಗೆ ಜಾಹೀರಾತೊಂದರಲ್ಲಿ ನಟಿಸಿದ್ದಾರೆ. ಸದ್ಯ ಮುದ್ದು ಮುಖದ ಚೆಲುವೆ ರಾಧಾ ಮಿಸ್ ಆಗಿ ಬದಲಾಗಿದ್ದಾರೆ! ಹೌದು. ಮಾಧವನ ಮೀರಾಳಾಗಿ ಮಿಂಚಿದ್ದ ಕಾವ್ಯ ಇಂದು ರಮಣನ ಆರಾಧನಾ ಆಗಿ ಬದಲಾಗಿದ್ದಾರೆ. ರಾಧಾ ರಮಣ ಧಾರಾವಾಹಿಯ ರಾಧಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇಷ್ಟು ದಿನ ಶ್ವೇತಾ ಪ್ರಸಾದ್ ರಾಧಾ ಪಾತ್ರಕ್ಕೆ ಜೀವ ತುಂಬಿದ್ದರು ನಿಜ! ಆದರೆ ಇದೀಗ ಕಾವ್ಯಾ ಸರದಿ. ‘ಗಾಂಧಾರಿ’ಯಾಗಿ ಮಿಂಚಿದ್ದ ಮಾಧವನ ಮೀರಾ ಇದೀಗ ರಮಣನ ಆರಾಧನಾಳೂ ಹೌದು‌.

ಭಿಕ್ಷುಕಿ ಪಾತ್ರ, ಕುರುಡಿ ಪಾತ್ರ ಮಾಡಬೇಕೆಂದಿರುವ ಕಾವ್ಯಾರಿಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಕ್ಕೆ ಒಂಚೂರು ಇಷ್ಟ ಇಲ್ಲ‌.  ಕಿಚ್ಚ ಸುದೀಪ್ ತನ್ನ ನೆಚ್ಚಿನ ನಟ ಎಂದು ಹೇಳಿಕೊಳ್ಳುವ ಕಾವ್ಯಾಗೆ ಸುದೀಪ್  ಅವರೊಂದಿಗೆ ನಟಿಸಬೇಕೆಂಬ ಆಸೆ.

– ಅನಿತಾ ಬನಾರಿ

Image may contain: 6 people, people smiling, beard

Image may contain: 6 people, people smiling

Image may contain: 2 people, people smiling, indoor and closeup

Image may contain: 2 people, people smiling, people standing and indoor

Image may contain: 1 person

Image may contain: 2 people, people smiling, people sitting

Image may contain: 1 person, smiling, sitting and indoor

ಕಿರುತೆರೆಯ ಚಾಕಲೇಟ್ ಹುಡುಗ ಚಂದನ್ ಕುಮಾರ್ !!

#kavyagowda #actresskavyagowda #kavyagowdamovies #kavyagowdaserials

Tags