ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಮಂಜಿನ ನಗರಿಯ ಬೆಡಗಿ ಲತಾ ಗಿರೀಶ್ ರ ನಟನಾ ಪುರಾಣ

ಬೆಂಗಳೂರು, ಏ.18:

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕ್ಷಮಾ  ಧಾರಾವಾಹಿಯಲ್ಲಿ ‘ಕ್ಷಮಾ’ ಳ ಮಗಳ ಪಾತ್ರದಲ್ಲಿ ಮಿಂಚುತ್ತಿರುವ ಮಂಜಿನ ನಗರಿಯ ಚೆಲುವೆಯ ಹೆಸರು ಲತಾ ಗಿರೀಶ್.

ಮಂಜಿನ ನಗರಿಯ ಈ ಚೆಲುವೆಗೆ ನಟಿಯಾಗಬೇಕು ಎಂಬ ಮಹದಾಸೆ ಇತ್ತು. ಮನೆದೇವ್ರು ಧಾರಾವಾಹಿಯ ಪೂರ್ವಿ ಪಾತ್ರಧಾರಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆಗೆ ಮಾಡೆಲಿಂಗ್ ಎಂದರೆ ಪ್ರೀತಿ.  ಮಿಸ್ ಕರ್ನಾಟಕ ಆಗಿ ಲತಾ ಆಯ್ಕೆ ಆದದ್ದು ಅವರ ಮಾಡೆಲಿಂಗ್ ಪ್ರೀತಿಗೆ ಸಾಕ್ಷಿ.

ಬಾಲ್ಯದಿಂದಲೂ ನನಗೆ ನಟಿಯಾಗಬೇಕು ಎಂಬ ಆಸೆ ತುಂಬಾನೇ ಇತ್ತು. ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೆ. ಮನೆದೇವ್ರು ಧಾರಾವಾಹಿಯ ಮೂಲಕ ನನ್ನ ಆಸೆ ಇಂದು ನೇರವೇರಿತು. ಮನೆದೇವ್ರು ಧಾರಾವಾಹಿಯಲ್ಲಿ ಪಾತ್ರ ಚಿಕ್ಕದಾಗಿದ್ದರೂ ಅದಕ್ಕೆ ತುಂಬಾ ತೂಕವಿತ್ತು. ಮನೆದೇವ್ರು ಧಾರಾವಾಹಿಯಿಂದ ನಾನು ನಟನೆಯ ಬಗ್ಗೆ ತುಂಬಾನೇ ಕಲಿತೆ. ಹಿರಿಯ ಕಲಾವಿದರಿಂದಲೂ ಉತ್ತಮ ಪ್ರೋತ್ಸಾಹ ದೊರೆಯಿತು‌. ಮಾತ್ರವಲ್ಲ ನಾನು ನಟಿಸುವಾಗ ತಪ್ಪುಗಳಾದರೆ ಅವರು ಸರಿ ಮಾಡುತ್ತಿದ್ದರು. ಇಂದು ನಾನು ಕ್ಷಮಾ ಧಾರಾವಾಹಿಯಲ್ಲಿ ನಟಿಸಿದ್ದರೂ ಜನರು ನನ್ನನ್ನು ಪೂರ್ವಿ ಎಂದು ಗುರುತಿಸುವಾಗ ಬಹಳ ಸಂತೋಷವಾಗುತ್ತದೆ ಎನ್ನುತ್ತಾರೆ ಲತಾ.

ನಟನೆಯ ಹೊರತಾಗಿ ಲತಾ ನೃತ್ಯಪ್ರಿಯರೂ ಹೌದು. ಈಗಾಗಲೇ ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಲತಾ ಓದಿನಲ್ಲೂ ಮುಂದಿದ್ದಾರೆ. ನಟನೆಯ ಜೊತೆಗೆ ಓದನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ಲತಾ ಬಿಸಿಎ ಪದವಿ ಪಡೆದಿದ್ದಾರೆ.

“ನಟನೆಯ ಜೊತೆಗೆ ಶಿಕ್ಷಣ ಕೂಡಾ ಮುಖ್ಯ. ನಟನೆ ಮತ್ತು ಶಿಕ್ಷಣ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಹೆಚ್ಚಿನವರು ನಟನೆಯ ಅವಕಾಶ ಬಂದಾಗ ಓದನ್ನು ಅರ್ಧಕ್ಕೆ ಬಿಡುತ್ತಾರೆ. ಹಾಗೆ ಮಾಡಬಾರದು. ನಾನು ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದಿದ್ದರೂ ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ ಎನ್ನುವ ಕೊಡಗಿನ ಸುಂದರಿ ಇದೀಗ ಉನ್ನತ ವ್ಯಾಸಂಗದ ತಯಾರಿಯಲ್ಲಿದ್ದಾರೆ.

ಇಂದು ನಾನು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ಅಪ್ಪ ಅಮ್ಮ. ಅವರ ಬೆಂಬಲದಿಂದಲೇ ಇದೆಲ್ಲಾ ಸಾಧ್ಯವಾದುದು ಎನ್ನುವ ಲತಾ ನಟನಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ ಅದಕ್ಕೆ ಪರಿಶ್ರಮ ಬೇಕು. ಇಲ್ಲ ಎಂದಾದರೆ ತುಂಬಾ ಕಷ್ಟ ಎನ್ನುತ್ತಾರೆ. ಬಣ್ಣದ ಲೋಕಕ್ಕೆ ಈಗ ತಾನೇ ಕಾಲಿಟ್ಟಿರುವ ಮಂಜಿನ ನಗರಿಯ ಬೆಡಗಿಗೆ ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

– ಅನಿತಾ ಬನಾರಿ

ಶೃಂಗಾರದ ಹೂವು ಸೋನಲ್ ಮೊಂಥೆರೋ

#manedevrukannadaserial #sandalwood #kannadaserials #lathagirish #actresslathagirish

Tags