ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಗಾಯಕಿ, ನಾಯಕಿ ಕರಾವಳಿಯ ಈ ಬೆಡಗಿ

ಮಾಡೆಲಿಂಗ್​ ನಲ್ಲಿ ರೂಪದರ್ಶಿಯಾಗಿ ಮಿಂಚಿ ಫ್ಯಾಷನ್ ಲೋಕದಲ್ಲಿ ತಮ್ಮದೇ ಹವಾ ಸೃಷ್ಠಿಮಾಡಿರುವ ಲಲನೆಯರು ಇದೀಗ ನಟನಾ ಲೋಕಕ್ಕೆ ಬರುತ್ತಲೇ ಇದ್ದಾರೆ. ಇದೀಗ ನಿಮಿಕಾ ರತ್ನಾಕರ್ ಸರದಿ. 2017ರಲ್ಲಿ ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ಕಿರೀಟ ಮುಡಿಗೇರಿಸಿಕೊಂಡಿದ್ದ ನಿಮಿಕಾ ರತ್ನಾಕರ್ ಚಂದನವನಕ್ಕೆ ಕಾಲಿಟ್ಟಿದ್ದಾರೆ.

ಮೂಲತಃ ಮಂಗಳೂರು ಬೆಡಗಿಯಾಗಿರುವ ನಿಮಿಕಾರಿಗೆ ತುಳು ಸಿನಿಮಾದಲ್ಲಿ ನಟಿಸಿದ ಅನುಭವವಿದೆ. ಕನ್ನಡದಲ್ಲಿ ‘ರಾಮಧಾನ್ಯ’, ‘ಬಿಂದಾಸ್ ಗೂಗ್ಲಿ’ ಜೊತೆಗೆ ಇನ್ನೂ ಹೆಸರಿಡದ ಚಿತ್ರ ಸೇರಿ ಒಟ್ಟು ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟನಾ ಲೋಕಕ್ಕೆ ಕಾಲಿಡುವ ಮೊದಲು ತರಬೇತಿ ಪಡೆದುಕೊಂಡು ಕ್ಯಾಮೆರಾ ಎದುರಿಸುವುದು ಸಹಜ. ಆದರೆ ಕರಾವಳಿ ಕುವರಿ ನಿಮಿಕಾ ಮಾತ್ರ ಕೊಂಚ ಭಿನ್ನ. ಹೌದು, ಮುದ್ದು ಮುಖದ ಕುಡ್ಲದ ಕುವರಿ ನಟನೆಗಿಂತಲೂ ಗಾಯನದ ಮೂಲಕವೇ ಹೆಚ್ಚು ಗುರುತಿಸಿಕೊಂಡವರು. ನಿಮಿಕಾ ರತ್ನಾಕರ್ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವರು. ರಾಜ್ಯಪ್ರಶಸ್ತಿ ಪಡೆದ ತುಳು ಚಿತ್ರ ‘ಮದಿಪು’ದಲ್ಲಿನ ಎರಡು ಜಾನಪದ ಶೈಲಿಯ ಹಾಡುಗಳಿಗೆ ನಿಮಿಕಾ  ‘ಪಿಲಿಬೈಲು ಯಮನಕ್ಕ’ ಹಾಗೂ ಕನ್ನಡದ ‘ಬಿಂದಾಸ್ ಗೂಗ್ಲಿ’ ಚಿತ್ರಗಳಲ್ಲೂ ಒಂದೊಂದು ಹಾಡನ್ನು ಹಾಡಿದ್ದಾರೆ.

Image may contain: 1 person, smiling, sitting and shoes

ಟಿ.ಎನ್. ನಾಗೇಶ್ ನಿರ್ದೇಶನದ ‘ರಾಮಧಾನ್ಯ’ ಚಿತ್ರದಲ್ಲಿ ಮೂರು ಭಿನ್ನ ಪಾತ್ರಗಳನ್ನು ಪೋಷಿಸಿದ ಹೆಗ್ಗಳಿಕೆಗೆ ನಿಮಿಕಾ ಪಾತ್ರರಾಗಿದ್ದಾರೆ.  ‘ಪೌರಾಣಿಕ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ‘ರಾಮಧಾನ್ಯ’. ಸೀತೆ, ಕನಕದಾಸ ಅವರ ಪತ್ನಿ ಹಾಗೂ ಮಾರ್ಡನ್ ಹುಡುಗಿ ರೀತಿಯ ಮೂರುಭಿನ್ನ ಶೇಡ್ ​ನಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುವ ನಿಮಿಕಾ ಮೊದಲ ಸಿನಿಮಾದಲ್ಲಿ ಈ ರೀತಿಯ ಭಿನ್ನ ಪಾತ್ರಗಳನ್ನು ನಿಭಾಯಿಸುವ ಪಾತ್ರ ಸಿಗುವುದು ತುಂಬ ಅಪರೂಪ. ಅದು ಮೂರು ಪಾತ್ರಗಳು!  ಆ ವಿಷಯದಲ್ಲಿ ನಾನು ಲಕ್ಕಿ’ ಎಂದು ತಮ್ಮ ಪಯಣವನ್ನು ವಿವರಿಸುತ್ತಾರೆ.

ಇನ್ನು ‘ಬಿಂದಾಸ್ ಗೂಗ್ಲಿ’ ಚಿತ್ರದಲ್ಲಿ ನಿಮಿಕಾ, ವಿಧವೆಯ ಪಾತ್ರವನ್ನು ನಿಭಾಯಿಸಿದ್ದಾರೆ. ಡಾನ್ಸ್ ​ಗೆ ಸಂಬಂಧಿಸಿದ ಈ ಸಿನಿಮಾದಲ್ಲಿ ಅವರಿಗೆ ಧರ್ಮ ಕೀರ್ತಿರಾಜ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

Image may contain: 1 person, smiling, standing and outdoor

ಅಷ್ಟೇ ಅಲ್ಲದೇ ಕೊರಿಯಾದಲ್ಲಿ ನಡೆದಿರುವ ‘ಮಿಸ್‌ ಇಂಡಿಯಾ ಸೂಪರ್‌ ಟ್ಯಾಲೆಂಟ್‌ ಆಫ್‌ ದಿ ವರ್ಲ್ಡ್‌’ ಸ್ಪರ್ಧೆಯಲ್ಲಿ ‘ಬೆಸ್ಟ್‌ ಮ್ಯೂಜಿಷಿಯನ್‌’ ಟೈಟಲ್‌ ಪಡೆದಿದ್ದಾರೆ. “ಗಾಯಕಿಯಾಗಿ ಹೆಸರು ಮಾಡಿದ್ದ ನನಗೆ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿನ ಗೆಲುವು ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಮಾತ್ರವಲ್ಲ ಸ್ಪರ್ಧೆಯನ್ನು ಮುಗಿಸಿ ಬಂದ ನಂತರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಮೊದಲು ಮಾಡೆಲಿಂಗ್‌, ಕಾರ್ಯಕ್ರಮ ನಿರೂಪಣೆ ಸಂದರ್ಭದಲ್ಲಿ ಕ್ಯಾಮೆರಾ ಎದುರಿಸಿದ್ದೆ. ಆದರೆ ನನಗೆ ನಟನೆಯ ನಂಟು ಇರಲಿಲ್ಲ. ರಾಮ ಧಾನ್ಯ ದಲ್ಲಿ ನಾನು ನಟಿಸಿದ್ದೇನೆ. ಅದರಲ್ಲಿ ನಟಿಸುವ ಸಮಯದಲ್ಲಿ ನಟನೆಯ ಬಗ್ಗೆ ಸುವಿವರವಾಗಿ ಕಲಿತೆ. ಒಳ್ಳೆಯ ಕತೆ, ಬ್ಯಾನರ್ ಸಿಕ್ಕರೆ ತುಳು ಚಿತ್ರಗಳಲ್ಲೂ ನಟಿಸುತ್ತೇನೆ’ ಎನ್ನುವ ನಿಮಿಕಾನಟಿಸುವ ಮೋಹದಿಂದ ಎಂಜಿನಿಯರಿಂಗ್‌ ವೃತ್ತಿ ಬಿಟ್ಟು ಚಿತ್ರೋದ್ಯಮಕ್ಕೆ ಕಾಲಿಟ್ಟವರು.  ಕಡಲನಗರಿ ಮಂಗಳೂರಿನ ಕುವರಿ ನಿಮಿಕಾ ರತ್ನಾಕರ್ ಅವರಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

– ಅನಿತಾ ಬನಾರಿ

Image may contain: 1 person, smiling, standing and indoor

Image may contain: 4 people, people smiling, sunglasses and eyeglasses

ಏಕಕಾಲದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಪಾತ್ರದಲ್ಲಿ ಮಿಂಚುತ್ತಿರುವ ಮಾನ್ಸಿ ಜೋಷಿ

#balkaninews #nimikaratnakar #interview #nimikaratnakarmovies

Tags