ಬಾಲ್ಕನಿಯಿಂದಸಂದರ್ಶನ

ಕುಂದಾಪುರದ ಬೆಡಗಿಯ ಬಣ್ಣದ ಲೋಕ

ಬೆಂಗಳೂರು, ಏ.15:

ಕುಂದಾಪುರದ ಚೆಲುವೆ ರಕ್ಷಾ ಹೊಳ್ಳ ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಸ್ನೇಹಿತರ ಒತ್ತಾಯಕ್ಕೆ ಮಣಿದು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ರಕ್ಷಾ ಮೊದಲ ಬಾರಿಗೆ ತಿರುಪತಿಯಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗವಹಿಸಿದರು. ಮುಂದೆ ಮಿಸ್ ಬೆಂಗಳೂರು ಕ್ವೀನ್ ನಲ್ಲಿ ಗೆದ್ದ ಅವರು ಮಿಸ್ ಆ್ಯಕಿ ಇವೆಂಟ್ ಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಗೊಂಡರು.

Image may contain: 1 person, standing

ತಿರುಪುರ ಫ್ಯಾಷನ್ ವೀಕ್, ಟೈಡಲ್ ಶ್ಯಾಂಪೂ, ತಮನ್ನಾ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಕೇರಳ, ತಮಿಳುನಾಡು, ಬೆಂಗಳೂರು ಹೀಗೆ ಅನೇಕ ಕಡೆಗಳಲ್ಲಿ ಸೌಂದರ್ಯ ಸ್ಫರ್ಧೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಕಾ ಜ್ಯುವೆಲರ್ಸ್, ಆರ್.ಕೆ ಗುಲಾಬ್ ಜಾಮೂನ್, ಮಯ್ಯ ಕೋಡುಬಳೆ ಹೀಗೆ ಅನೇಕ ಜಾಹೀರಾತುಗಳಲ್ಲಿ ಮಿಂಚಿರುವ ಈ ಬೆಡಗಿ ಕಿರುತೆರೆಗೆ ಕಾಲಿಟ್ಟದ್ದು ಪಲ್ಲವಿ ಅನುಪಲ್ಲವಿ ಧಾರಾವಾಹಿ ಮೂಲಕ.

ಮೊದಲ ಧಾರಾವಾಹಿಯಲ್ಲಿ ಹಠಮಾರಿ ಹುಡುಗಿಯ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮುಂದೆ ಕೋಗಿಲೆ ಮತ್ತು ಮಿಲನ, ಮಾಯಾ, ಹರಹರ ಮಹಾದೇವ ಧಾರಾವಾಹಿಯಲ್ಲಿ ಮನೋಜ್ಞವಾಗಿ ಅಭಿನಯಿಸಿದ ರಕ್ಷಾರನ್ನು ತೆಲುಗು ಭಾಷೆ ಕೈ ಬೀಸಿ ಕರೆಯಿತು. ಮಾ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಿಂಟಿ ಪಟ್ಟಿಚ್ಚರ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

Image may contain: 1 person

ರಿಷಬ್ ಶೆಟ್ಟಿ ನಿರ್ದೇಶನದ ರಿಕ್ಕಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ತಂಗಿ ಪಾತ್ರಕ್ಕೆ ಜೀವ ತುಂಬುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ ಈ ಕುಂದಾಪುರದ ಬೆಡಗಿ. ವಿನೋದ್ ನಿರ್ದೇಶನದ ಸೈಕೋ ಜಯಶಂಕರ ಟೆಲಿ ಫಿಲಂನಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಆ ಎರಡು ವರುಷಗಳು ಸಿನಿಮಾದಲ್ಲಿ ಸಪೋರ್ಟಿಂಗ್ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.

ಅವಕಾಶವಿದ್ದರೆ ಕಂಠದಾನ ಮಾಡುವ ರಕ್ಷಾ ನಮ್ಮೂರ ಯುವರಾಣಿ, ಸುವರ್ಣ ಸೂಪರ್ ಜೋಡಿ, ಉದಯ ಸೂಪರ್ ಕುಟುಂಬ ಹೀಗೆ ಅನೇಕ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ, ನೃತ್ಯ ಮತ್ತು ನಿರೂಪಣೆ ನನ್ನ ಇಷ್ಟದ ಕ್ಷೇತ್ರಗಳು ಎನ್ನುವ ರಕ್ಷಾ ಹೊಳ್ಳ ಇದೀಗ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್ 15ರಂದ ಆರಂಭವಾಗಲಿರುವ ಹೊಸ ಧಾರಾವಾಹಿ “ಬಯಸದೇ ಬಳಿ ಬಂದೆ” ಯಲ್ಲಿ ಕಾವ್ಯ ಪಾತ್ರಧಾರಿಯಾಗಿ ಮತ್ತೊಮ್ಮೆ ನಿಮ್ಮ ಮುಂದೆ ಬರಲಿರುವ ರಕ್ಷಾ ಹೊಳ್ಳ ಕುಂದಾಪುರದ ರಮೇಶ್ ಹೊಳ್ಳ ಮತ್ತು ವಾರಿಜ ಹೊಳ್ಳ ದಂಪತಿಗಳ ಪುತ್ರಿ.

–  ಅನಿತಾ ಬನಾರಿ

Image may contain: 1 person, closeup

ಬಣ್ಣದ ಲೋಕದಲ್ಲಿ ‘ಶೋಭಾ’ಯಮಾನ

#balkaninews #rakshaholla #rakshahollamovies #rakshahollainstagram #rakshahollafacebook

Tags