ಉದಯೋನ್ಮುಖರುಬಾಲ್ಕನಿಯಿಂದ

ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕಿರುತೆರೆಯ ಸತಿ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಿವ ಮತ್ತು ಭವಾನಿ ದಂಪತಿಗಳ ಮುದ್ದು ಮಗಳ ಹೆಸರು ಸಂಗೀತಾ. ಕಾಲೇಜು ದಿನಗಳಲ್ಲಿ ಕ್ರೀಡೆ ಮತ್ತು ಎನ್‌.ಸಿ.ಸಿ ಬಗ್ಗೆ ಹೆಚ್ಚು ಒಲವು ಮೂಡಿಸಿಕೊಂಡಿದ್ದ ಸಂಗೀತಾ ಕ್ರೀಡೆಯಲ್ಲಿ ಸದಾ ಮುಂದು. ಕೊ ಕೊ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಡಿ ಚಿನ್ನ ಗೆದ್ದಿರುವ ಇವರು ಎನ್‌.ಸಿ.ಸಿಯಲ್ಲಿ ಭಾಗವಹಿಸಿ ‘ಸೀನಿಯರ್‌ ಅಂಡರ್‌ ಆಫೀಸರ್‌’ ಎಂಬ ಹೆಸರು ಪಡೆದುಕೊಂಡಿದ್ದಾರೆ.

Related image

ಇಂತಿಪ್ಪ ಚೆಂದುಳ್ಳಿ ಚೆಲುವೆ ಸಂಗೀತಾ ಮುಂದೆ ರೂಪದರ್ಶಿಯಾಗಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಮಾತ್ರವಲ್ಲ ಪ್ರಶಸ್ತಿಯ ಸರಮಾಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ನಟನೆಯ ಕುರಿತಾದ ಯಾವುದೇ ತರಬೇತಿಯನ್ನು ಪಡೆಯದ ಸಂಗೀತಾಗೆ ಇದ್ದಕ್ಕಿದ್ದಂತೆ ನಟಿಸುವ ಆಫರ್ ಬಂತು. ಕರ್ಮ ಎಂಬ ಕಿರುಚಿತ್ರದಲ್ಲಿ ಬಣ್ಣ ಹಚ್ಚಿರುವ ಸಂಗೀತಾ ಹೆಸರು ಗಳಸಿದ್ದು ಕಿರುತೆರೆ ಮೂಲಕ! 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಪೌರಾಣಿಕ ಧಾರಾವಾಹಿ ಹರಹರ ಮಹಾದೇವ ಧಾರಾವಾಹಿಯ ಸತಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದು ಬಿಟ್ಟಿದ್ದಾರೆ. ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡ ಸಂಗೀತಾ   “ಪೌರಾಣಿಕ ಪಾತ್ರ ನಿಜಕ್ಕೂ ಸವಾಲಿನ ಪಾತ್ರ. ಅದರಲ್ಲೂ ದೇವರ ಪಾತ್ರ ನಿರ್ವಹಿಸುವುದು ಸುಲಭವಲ್ಲ. ಯಾಕೆಂದರೆ ದೇವರ ಪಾತ್ರದಲ್ಲಿ ನಟಿಸುವಾಗ ಭಾಷೆ ಮೇಲೆ ಅಪಾರ ಹಿಡಿತವಿರಬೇಕು. ಅದಕ್ಕಾಗಿ ಸಾಕಷ್ಟು ಅಧ್ಯಯನ ಮಾಡಬೇಕು. ಜೊತೆಗೆ ಪಾತ್ರವನ್ನು ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರವೇ ಸರಾಗ ಅಭಿನಯ ಸಾಧ್ಯ ಎನ್ನುತ್ತಾರೆ ಸಂಗೀತಾ.

ಕಿರುತೆರೆಯ ಸತಿಯಾಗಿ ಅಭಿನಯಿಸಿ ಮನೆ ಮಾತಾಗಿರುವ ಸಂಗೀತಾಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಬಯಕೆಯಿತ್ತು. ಎ+ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಮುದ್ದು ಮುಖದ ಚೆಲುವೆ ಇದೀಗ ಚಾರ್ಲಿ 777 ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡದ ಜೊತೆಗೆ ತೆಲುಗು ಧಾರಾವಾಹಿಯಲ್ಲಿ ಅಭಿನಯಿಸಿರುವ ಸಂಗೀತಾ ಅವರಿಗೆ ಕಿರುತೆರೆಗಿಂತ ಬೆಳ್ಳಿತೆರೆಯಲ್ಲೇ ಮಿಂಚುವ ಬಯಕೆ. ಅವರ ಬಯಕೆ ಆದಷ್ಟು ಬೇಗ ಈಡೇರಲಿ ಎಂಬುದೇ ನಮ್ಮ ಹಾರೈಕೆ.

– ಅನಿತಾ ಬನಾರಿ

Related image

ಟ್ರೆಂಡ್ ಆಯ್ತು ಬಣ್ಣದ ಬಣ್ಣದ ಗುಲಾಬಿ ಹೂವಿನ ಜಡೆ

#sangeethasringeri  #sangeethasringerimovies #sangeethasringeriinstagram #sangeethasringerifacebook #sangeethasringeriserials

Tags