ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಭೃಂಗದ ಬೆನ್ನೇರಿ ನಾಲ್ಕುತಂತಿ ಮೀಟಿದ ಸುಜಾತಾ

ಬೆಂಗಳೂರು, ಮೇ.01:

ಸುಜಾತಾ ಅಕ್ಷಯಾ ಎಂದರೆ ಗೊತ್ತಿಲ್ಲದವರಾರು ಹೇಳಿ? ನಿರೂಪಣೆ, ರೇಡಿಯೋ ಜಾಕಿ, ಸಿನಿಮಾ, ಕಿರುತೆರೆ ಕಲಾವಿದೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಸುಜಾತಾ ಸದ್ಯಕ್ಕೆ ಲೇಡಿ ವಿಲನ್ ಆಗಿ ಬದಲಾಗಿದ್ದಾರೆ.

ಹೌದು.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಧಾ ರಮಣ’ ಧಾರಾವಾಹಿಯಲ್ಲಿ “ಸಿತಾರ ದೇವಿ” ಎಂಬ ನೆಗೆಟಿವ್ ಶೇಡ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಹಿಂದೆ ಬಹಳಷ್ಟು ಪಾಸಿಟಿವ್ ಪಾತ್ರ ಮತ್ತು ಮುಗ್ಧ ಪಾತ್ರಗಳ ಮೂಲಕವೇ ಜನರಿಗೆ ಚಿರಪರಿಚಿತವಾಗಿದ್ದ ಸುಜಾತಾ ಮೊದಲ ಬಾರಿಗೆ ಸಂಪೂರ್ಣ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಾ ರಮಣದಲ್ಲಿ ನಾಯಕ ರಮಣನ ಅತ್ತೆ ಸಿತಾರಾ ದೇವಿಯಾಗಿ ನಟಿಸುತ್ತಿದ್ದಾರೆ.

Image may contain: 1 person, closeupಸುಜಾತಾ ಅವರು ನಿರೂಪಣೆ ಕ್ಷೇತ್ರಕ್ಕೆ ಕಾಲಿಟ್ಟದ್ದು ತೀರಾ ಆಕಸ್ಮಿಕವಾಗಿ. ಕಾಲೇಜಿಗೆ ಹೋಗುವ ಸಮಯದಲ್ಲಿ ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾ ನಡೆಸಿಕೊಡುತ್ತಿದ್ದ ದಾಳತಾಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು. ಮುಂದೆ ಫಣಿ ರಾಮಚಂದ್ರ ನಿರ್ದೇಶನದ ಪ್ರೇಮ ಪಿಶಾಚಿಗಳು ಧಾರಾವಾಹಿಯಲ್ಲಿ ರಾಮಚಂದ್ರ ಅವರು ಹೇಳುವ ಕಥೆಯನ್ನು ಕೇಳುವ ಪಾತ್ರ ದೊರೆಯಿತು.

ಹಾಗೆ ಆ್ಯಂಕರಿಂಗ್ ಜಗತ್ತಿಗೆ ಕಾಲಿಟ್ಟ ಸುಜಾತಾರನ್ನು ಜನ ಗುರುತಿಸಿದ್ದು ಕಾಮಿಡಿ ಟೈಮ್ ಮೂಲಕ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸುಜಾತಾ ಸೇರಿ ನಡೆಸಿಕೊಂಡು ಬರುತ್ತಿದ್ದ ಕಾಮಿಡಿ ಟೈಮ್ ಎಂಬ ಹಾಸ್ಯ ಕಾರ್ಯಕ್ರಮದ ಮೂಲಕ ಸುಜಾತಾ ಜನರ ಮನ ಸೆಳೆದಾಗಿತ್ತು. ನಿರೂಪಣೆಯಲ್ಲಿ ಸಾಕಷ್ಟು ಪಳಗಿರುವ ಸುಜಾತಾ ಅಕ್ಷಯಾ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ ಧಾರಾವಾಹಿ ‘ನಾಲ್ಕುತಂತಿ’.

Image may contain: 4 people, people smiling, sunglasses

ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ನಟನೆಯ ರೀತಿ ನೀತಿಗಳನ್ನು ಕರಗತಮಾಡಿಕೊಂಡ ಸುಜಾತಾಗೆ ಹೆಸರು ತಂದು ಕೊಟ್ಟದ್ದು ಕೂಡಾ ನಾಲ್ಕುತಂತಿಯ ಮೇಘ ಮಲ್ಹಾರ ಪಾತ್ರ. ಮುಂದೆ ಮನೆಯೊಂದು ಮೂರು ಬಾಗಿಲು, ಭೃಂಗದ ಬೆನ್ನೇರಿ, ಬದುಕು, ಎಲ್ಲಾ ಮರೆತಿರುವಾಗ, ಸ್ವಾಭಿಮಾನ, ರಾಧಾ, ಸೃಷ್ಟಿ, ಪ್ರೀತಿ ಎಂದರೇನು, ಅರಮನೆ, ಮುಗಿಲು ಮುಂತಾದ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಸುಜಾತಾ ಈಗಾಗಲೇ ಬೆಳ್ಳಿ ತೆರೆಯ ಮೇಲೂ ಮಿಂಚಿಯಾಗಿದೆ.

ಬುದ್ಧಿವಂತ, ಮದನ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸುಜಾತಾ ಚೈತನ್ಯ ಕರೆಹಳ್ಳಿ ನಿರ್ದೇಶನದ ಆಕೆ ಸಿನಿಮಾದಲ್ಲಿ ಕೌನ್ಸಿಲರ್ ಪಾತ್ರದಲ್ಲಿ ಮಿಂಚಿದ್ದಾರೆ.

ರಾಧಾ ರಮಣ ಧಾರಾವಾಹಿಯ ಹೊರತಾಗಿ ಸುಜಾತಾ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿರುವ ಅಡುಗೆ ಕಾರ್ಯಕ್ರಮ ಪಾಕಶಾಲೆಯ ನಿರೂಪಣೆ ಮಾಡುತ್ತಿದ್ದರು‌.

ಅನಿತಾ ಬನಾರಿ

Image may contain: 1 person, smiling, standing

“ಶ್ವೇತ” ಸುಂದರಿ…

#balkaninews #radharamanaserial #kannadaserials#sujathakshaya #sujathaakshayamovies #sujathaakshayaserails

Tags