ಬಾಲ್ಕನಿಯಿಂದಸಂದರ್ಶನ

ಅದ್ವಿತಿ ಶೆಟ್ಟಿಯ ಕನಸು

ಮಿಸ್ಟರ್ & ಮಿಸಸ್ಸ್ ರಾಮಚಾರಿ ಸಿನಿಮಾದಲ್ಲಿ ಅವಳಿಜವಳಿಯವರಾದ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಖ‍್ಯಾತಿ ಪಡೆದಿದ್ದು ಸಿನಿಮಾ ಪ್ರಿಯರಿಗೆ ತಿಳಿದಿರುವ ವಿಷಯ.  ಆದರೆ ಈಗ ಆ ಅವಳಿ ಜವಳಿಯರಲ್ಲಿ ಒಬ್ಬಳಾದಂತಹ ಮಂಗಳೂರಿನ ಕುವರಿ ಅದ್ವಿತಿ ಶೆಟ್ಟಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಟೆಲಿ ಸೀರಿಯಲ್ ಗೂ ಪಾದಾರ್ಪಣೆ ಮಾಡಿದ್ದಾರೆ. ಅವರು ತಮ್ಮ ಊರಿಗೆ ಮರಳಿದಾಗ ನಮ್ಮೊಂದಿಗೆ ಮಾತಿಗೆ ಸಿಕ್ಕಿದಾಗ ..

 • ನಟನಾ ಕ್ಷೇತ್ರಕ್ಕೆ ಕಾಲಿಟಿದ್ದು ಹೇಗೆ?

ಡ್ಯಾನ್ಸ್ ನಲ್ಲಿ ತುಂಬಾ ಆಸಕ್ತಿ ಇತ್ತು. ಕರ್ನಾಟಕ, ಸಿಂಗಾಪುರ್, ಬಹರೈನ್ ಹೀಗೆ ವಿವಿಧೆಡೆ 50ಕ್ಕಿಂತಲೂ ಹೆಚ್ಚು ಶೋಗಳನ್ನು ನೀಡಿದ್ದೆ. ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದಾಗ ಮಾಡೆಲಿಂಗ್ ಕ್ಷೇತ್ರದಿಂದ ಕರೆಗಳು ಬರುತ್ತಿದ್ದವು. ಕಾಲೇಜಿನಲ್ಲಿರುವಾಗಲೂ ಸ್ನೇಹಿತರು ಹುರಿದುಂಬಿಸುತ್ತಿದ್ದರು. ರಾಂಪ್ ವಾಕ್ ಚೆನ್ನಾಗಿ ಮಾಡುತ್ತಿಯೆಂದು ಹಾಗಾಗಿ ಯಾಕೆ ಮಾಡೆಲಿಂಗ್ ಮಾಡಬಾರದೆಂದು ತಿಳಿಸಿದರು. ಹಾಗಾಗಿ ಅದರಲ್ಲೂ ಭಾಗವಹಿಸಿ ಪೇಜೆಂಟ್ ನಲ್ಲೂ ಗೆದ್ದೆ. ಯಶ್ ಮತ್ತು ರಾಧಿಕಾ ಸಿನಿಮಾಕ್ಕೆ ಅವಳಿಜವಳಿ ನಟಿಯರು ಬೇಕೆಂದಾಗ ನಾವೂ ಕೂಡ ಆಡಿಷನ್ ಗೆ ಹೋಗಿ ಒಂದು ಕೈ ನೋಡಿಯೇ ಬಿಟ್ಟೆವು . ಅದೃಷ್ಟವೆಂಬಂತೆ ನಮ್ಮನ್ನು ನೋಡಿದ ಕೂಡಲೇ ಆಯ್ಕೆ ಮಾಡಿಕೊಂಡರು.

 • ನೀವು ಎಷ್ಟು ಡ್ಯಾನ್ಸ್ ರಿಯಾಲಿಟಿ ಶೋಗಳನ್ನು ನೀಡಿದ್ದೀರಿ?

ಹಲವಾರು ರಿಯಾಲಿಟಿ ಶೋಗಳನ್ನು ನೀಡಿದ್ದೇನೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಚಾನೆಲ್ ಗಳಾದಂತಹ ಈಟೀವಿ ಸೂಪರ್, ಜೀ ಬ್ಯುಸಿನೆಸ್, ಕಲರ್ಸ್ ಹಿಂದಿಯಲ್ಲಿ ಇಂಡಿಯಸ್ಸ್ ಗಾಟ್ ಟ್ಯಾಲೆಂಟ್ ನಲ್ಲೂ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಭಾಜನರಾಗಿದ್ದೇವೆ.

 • ಡ್ಯಾನ್ಸ್ ಕಾಂಪಿಟೇಶನ್ ಗಳಲ್ಲಿ ನಿಮಗೆ ಪ್ರಶಸ್ತಿ ಲಭಿಸಿದೆಯಾ?

ರೋಟರಿ ಕ್ಲಬ್ ಹಾಗೂ ಬಹರೈನ್ನಿಗೆ ಹೋದಾಗ ಅವಾರ್ಡ್ ಸಿಕ್ಕಿದೆ.

 • ಮಿ‍ಸ್ಟರ್ & ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಯಶ್ ಹಾಗೂ ರಾಧಿಕಾ ಅವರೊಂದಿಗೆ ಅಭಿನಯಿಸಿದ ಅನುಭವ ಹೇಗಿತ್ತು?

ಅನುಭವ ತುಂಬಾ ಚೆನ್ನಾಗಿತ್ತು ಯಶ್ ಹಾಗೂ ರಾಧಿಕಾ ನಮ್ಮನ್ನು ಸ್ವಂತ ತಂಗಿಯರಂತೆ ನೋಡಿಕೊಳ‍್ಳುತ್ತಿದ್ದರು, ಹಾಗಾಗಿ ನಮಗೆ ರಾಧಿಕಾ ಅವರ ಜೊತೆ ಸ್ನೇಹವೂ ಬೆಳೆಯಿತು.

 • ಅದ್ವಿತಿ ಹಾಗೂ ಅಶ್ವಿತಿ ಅವಳಿಜವಳಿಯವರನ್ನು ಹೊರಗೆ ಜನರಿಗೆ  ಗುರುತಿಸುವಾಗ ಕನ್ಫ್ಯೂಷನ್ ಆಗಲ್ವೇ?

ಹೌದು. ಮೊದಲು ಎಲ್ಲರಿಗೂ ಗೊಂದಲ ಆಗುತಿತ್ತು. ಕಾಲೇಜಿನಲ್ಲಿ ಮೇಡಂನವರಿಗೆ ಸಿಕ್ಕಾಪಟ್ಟೆ ಗೊಂದಲ ಆಗಿ ನನಗೆ ಹೇಳಬೇಕಿದ್ದ ಮಾತನ್ನು ಅಶ್ವಿತಿಗೆ ಹೇಳುತ್ತಿದ್ದರು.  ಆದರೆ ಈಗ ಜನರು ಗುರುತಿಸುತ್ತಾರೆ.

 • ನಿಮ್ಮ ಕನಸಿನ ಪಾತ್ರ?

ಇಂತಹದ್ದೇ ಪಾತ್ರಗಳನ್ನು ಮಾಡಬೇಕೆಂಬ ಕನಸಿಲ್ಲ. ಕೊಟ್ಟ ಪಾತ್ರಗಳಿಗೆ ಜೀವತುಂಬಿಸಬೇಕೆಂಬ ಕನಸು.

 • ಬೇರೆ ಯಾವುದಾದರೂ ಸಿನಿಮಾ ಆಫರ್ ಗಳು ಬಂದಿದೆಯಾ?

ಬಂದಿದೆ.  ಸದ್ಯ ಭಗತ್ ಸಿಂಗ್ ಕಿರು ಚಿತ್ರದಲ್ಲಿ ದುರ್ಗಾ ಬಾಬಿ ಪಾತ್ರದಲ್ಲಿ ಕಾಣಿಸಲಿದ್ದೇನೆ. ಮುಂದೆ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ.

 • ನಿಮಗೆ ಸ್ಪೂರ್ತಿ?

ಡ್ಯಾನ್ಸ್ ನಲ್ಲಿ ನನಗೆ ಮಾಧುರಿ ದೀಕ್ಷಿತ್ , ಆದರೆ ನಟನೆಯಲ್ಲಿ ನನಗೆ ಹಿರಿಯ ಸಹ ಕಲಾವಿದರಾದಂತಹ ಪ್ರಣಯರಾಜ ಶ್ರೀನಾಥ್, ಸುಧಾ ಬೆಳ್ವಾಡಿ, ನಾಗೇಶ್ ಹೀಗೆ ಎಲ್ಲರೂ ಇದ್ದಾರೆ. ನಾನು ಬಣ‍್ಣದಲೋಕವನ್ನು ರಾಮಾಚಾರಿ ಸಿನಿಮಾದಿಂದ ಶುರು ಮಾಡಿದ್ದರಿಂದ ರಾಧಿಕಾ ಪಂಡಿತ್ ನನಗೆ ಸ್ಪೂರ್ತಿ ಅವರಲ್ಲಿ ಕಲಿಯುವಂತದು ತುಂಬಾ ಇದೆ.

 • ನಟನೆಯಿಂದ ಏನನ್ನು ಕಲಿತಿರಿ?

ತಾಳ್ಮೆ ತುಂಬಾ ಕಲಿಸಿದೆ. ಹಾಗೂ ಹೇಗೆ ಎಲ್ಲರಲ್ಲಿ ಬೆರೆತು ಮಾತನಾಡಬೇಕೆಂಬುದನ್ನು ಕಲಿಸಿದೆ.

 • ಧಾರಾವಾಹಿ ಅಥವಾ ಸಿನಿಮಾ ಯಾವುದು ಅಚ್ಚುಮೆಚ್ಚು?

ಅಯ್ಯೋ! ನನಗೆ ನಟನೆಯೇ ಎಲ್ಲವೂ ಆದ್ದರಿಂದ ಎರಡೂ ಅಚ್ಚುಮೆಚ್ಚು.

 • ನಿಮಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್?

ರಾಮಚಾರಿ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದೀರ ಎಂದು ಎಲ್ಲರೂ ಹೇಳಿದ್ದರು ಅದು ಬೆಸ್ಟ್ ಕಾಂಪ್ಲಿಮೆಂಟ್.

 • ನಿಮ್ಮನ್ನು ಜನರು ಏನೆಂದು ಗುರುತಿಸುತ್ತಾರೆ?

ರಾಮಚಾರಿ ಟ್ವಿನ್ಸ್ ಎಂದೇ ನಾವು ಖ್ಯಾತಿ ಪಡೆದಿದ್ದೆವು. ಆದರೆ ಈಗ ಸಾಮಾಜಿಕ ಜಾಲಾತಾಣಗಳಲ್ಲಿ ನನ್ನನ್ನು ಡಾಕ್ಟರ್ ಗುಬ್ಬಿ ಎಂದೇ ಕರೆಯುತ್ತಾರೆ.

 • ನಿಮ್ಮ ಈ ಯಶಸ್ಸು ನೋಡಿ ಕುಟುಂಬದವರು ಏನೆನ್ನುತ್ತಾರೆ?

ತುಂಬಾ ಖುಷಿ ಪಡುತ್ತಾರೆ. ಮನೆಲ್ಲಿ ಅಣ‍್ಣನೂ ತುಂಬಾ ಸಲಹೆ ಹಾಗೂ ಸಹಕಾರ ಕೊಡುತ್ತಾನೆ.

 ಸುಹಾನಿ.ಬಡೆಕ್ಕಿಲ

 

.

 

Tags