ಬಾಲ್ಕನಿಯಿಂದಸಂದರ್ಶನ

ಭದ್ರಾವತಿ ಹುಡುಗ ಅಶ್ವಿನ್ ದೇವಾಂಗ್ !!

ಆರ್ಜೆಯಾಗುವ ಕನಸನ್ನು ಹೊತ್ತು ಆರ್ಜೆ ತರಬೇತಿಯನ್ನು ಪಡೆದು ಮುಂದೆ ಅನಿರೀಕ್ಷಿತವಾಗಿ ಬಣ‍್ಣದ ಲೋಕದತ್ತ ಒಲವು ಮೂಡಿ ಸೇವಂತಿ ಸೇವಂತಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿನ್ನರಿ ಧಾರಾವಾಹಿಯಲ್ಲಿ ಆಕಾಶ್ ಪಾತ್ರದಲ್ಲಿ ಮಿಂಚುತ್ತಿರುವ ಈ ಸುಂದರ ಯುವಕ ಅಶ್ವಿನ್ ದೇವಾಂಗ್ ಓದಿದ್ದು ಇಂಜಿನಿಯರಿಂಗ್ ಬೆಂಗಳೂರಿನ ಮಹಾನಗರಿಯಲ್ಲಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಖ್ಯಾತಿ ಪಡೆದಿರುವ ಧಾರಾವಾಹಿಯ ಪಟ್ಟಿಯಲ್ಲಿ ಕಿನ್ನರಿಯೂ ಒಂದು. ಕಿನ್ನರಿ ಉಳಿದೆಲ್ಲಾ ಧಾರಾವಾಹಿಗಳಿಂತ ಕೊಂಚ ಭಿನ್ನ ಎಂದರೆ ತಪ್ಪಾಗಲಾರದು.

ಭದ್ರಾವತಿ ಹುಟ್ಟೂರಾದರೂ ಈಗ ವೃತ್ತಿ ಬದುಕು ಬೆಂಗಳೂರು. ದಿನೇಶ್ ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ನನಗಿಷ್ಟ ಎನ್ನುವ ಸಿನಿಮಾದಲ್ಲೂ ನಟಿಸಿದ್ದಲ್ಲದೆ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಎಂದೂ ವೇದಿಕೆ ಮೆಟ್ಟಿಲು ಹತ್ತದೆ ಇರುವುದರಿಂದ ಕ್ಯಾಮರಾವನ್ನು ಮೊದಲ ಬಾರಿ ಎದುರಿಸಿದಾಗ ತುಂಬಾ ಗಾಬರಿಗೊಂಡಿದ್ದರೂ ಆರ್ಜೆಯಲ್ಲಿ ತರಬೇತು ಪಡೆದಿದ್ದೇ ಇವರಿಗೆ ವರವಾಯಿತು. ಹಾಗಾಗಿ ವೇದಿಕೆ ಮುಂದೆ ಬಂದು ನಟಿಸಲು ಗಾಬರಿಗೊಳ‍್ಳದೆ ಸುಲಲಿತವಾಗಿ ನಿರ್ದೇಶಕರ ಸಹಾಯದಿಂದ ನಟನೆ ಕರಗತವಾಯಿತು ಅಲ್ಲದೆ ಬೆಳ‍್ಳಿ ಚುಕ್ಕಿಯಲ್ಲಿ ನಟನಾ ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ಇವರಿಗೆ ಇವರ ತಂದೆಯೇ ಸ್ಪೂರ್ತಿ. ನಟನಾ ಲೋಕ ತುಂಬಾ ಚೆನ್ನಾಗಿದೆ ನಾವು ಇಷ್ಟ ಪಟ್ಟು ಮಾಡುವುದರಲ್ಲಿ ನಮಗೆ ಖುಷಿ ಸಿಗುವುದರ ಜೊತೆಗೆ ಬಣ‍್ಣದ ಲೋಕ ತಾಳ್ಮೆ ಹಾಗೂ ಧೈರ್ಯವನ್ನು ಕಲಿಸಿದೆ ಎಂದು ತಮ್ಮ ಅಂತರಂಗದ ಮಾತುಗಳನ್ನು ಹಂಚಿಕೊಳ‍್ಳುತ್ತಾರೆ ಅಶ್ವಿನ್.

ಕಿರುತೆರೆಗಿಂತ ಇವರಿಗೆ ಹಿರಿತೆರೆಯಲ್ಲಿ ಮಿಂಚಲು ಬಲು ಇಷ್ಟ. ಅದಕ್ಕಾಗಿ ತುಂಬಾ ಶ್ರಮ ವಹಿಸುತ್ತಿದ್ದಾರೆ. ಸೇವಂತಿ ಸೇವಂತಿ ಧಾರಾವಾಹಿಯಲ್ಲಿ ಅಭಿನಯಿಸಿದ್ದು ಮರೆಯಲಾಗದ ಒಂದು ಸವಿ ನೆನಪಿನಲ್ಲಿ ಸೇರಿವೆ. ಸ್ಯಾಂಡಲ್ ವುಡ್ ನ ತಾರೆಯರ ಪಟ್ಟಿಯಲ್ಲಿ ಅಶ್ವಿನ್ ಗೆ ರಕ್ಷಿತ್ ಶೆಟ್ಟಿ ಅಚ್ಚುಮೆಚ್ಚಿನ ನಟ. ಎಲ್ಲಾ ತರಹದ ಪಾತ್ರಗಳಲ್ಲಿ ನಟಿಸಲು ಇಷ್ಟ ಪಡುವ ಅಶ್ವಿನ್ ಸೈಕೋ ಪಾತ್ರಗಳಲ್ಲಿ ನಟಿಸಬೇಕೆಂದು ಇವರ ಡ್ರೀಮ್ ರೋಲ್. ನಾನು ನಟನಾಗಿ ಇಂದು ಇರುತ್ತಿಲ್ಲದಿದ್ದರೆ ಬಹುಶಃ ಯಾವುದಾದರೂ ಕಂಪೆನಿಯಲ್ಲಿ ಐಡಿ ಹಾಕಿಕೊಂಡು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದೆ ಎಂದು ಮಂದಹಾಸದ ನಗುವಿನೊಂದಿಗೆ ಹೇಳಿ ತಮಗೆ ರಂಗಭೂಮಿಯ ಮೇಲಿರುವ ಅಪಾರವಾದ ಪ್ರೀತಿಯನ್ನು ತೋರಿಸುತ್ತಾರೆ.

ಸುಹಾನಿ.ಬಡೆಕ್ಕಿಲ

 

Tags