ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನಭವಿಷ್ಯ: 02 ನವೆಂಬರ್ 2019 ಶನಿವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ……

ಮೇಷ

ಕುಟುಂಬದವರೊಂದಿಗೆ ಹೆಚ್ಚಾಗಿ ಕಾಲಕಳೆಯಿರಿ. ಈ ದಿನ ಉತ್ಸಾಹದಿಂದ ಇರುವಿರಿ. ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ. ವಿದೇಶ ಪ್ರವಾಸ ಭಾಗ್ಯವಿದೆ. ಹಾಸಿಗೆ ಇದ್ದಷ್ಟೂ ಕಾಲು ಚಾಚಿ. ಅನವಶ್ಯಕವಾಗಿ ಬೇಡದ ವಿಷಯಕ್ಕೆ ತಲೆ ಕೆಡಿಸಿಕೊಳ್ಳಬೇಡಿ.

 

 

 

 

 

 

ವೃಷಭ

 

‘ಧೈರ್ಯಂ ಸರ್ವತ್ರ ಸಾಧನಂ’ ಎನ್ನುವ ಹಾಗೆ ಸದಾ ಕಾಲ ಧೈರ್ಯದಿಂದ ಮುನ್ನುಗ್ಗುವಿರಿ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯಕಳೆಯಿರಿ.

 

 

 

 

 

ಮಿಥುನ

 

ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಮಾನಸಿಕವಾಗಿ ಕೊಂಚ ಬೇಸರವಾಗಿರುವಿರಿ. ಆಸ್ತಿ ವಿಚಾರಗಳ ಬಗ್ಗೆ ಚರ್ಚೆ. ಸರ್ಕಾರಿ ಉದ್ಯೋಗ ಸಿಗುವ ಸಂಭವವಿದೆ. ಕೆಲಸದ ನಿಮಿತ್ತ ಪ್ರಯಾಣ ಬೆಳೆಸುವಿರಿ.

 

 

ಕಟಕ

ನೀರಿನ ಜೊತೆ ಸರಸ ಒಳ್ಳೆಯದಲ್ಲ. ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆಯಿದೆ. ಇಂದು ನಿಮ್ಮ ಧೈರ್ಯ ಹಿಮ್ಮಡಿಯಾಗುವುದು. ಸಂತಸದ ಸುದ್ದಿಯೊಂದು ನಿಮ್ಮ ಕಿವಿಗೆ ಬೀಳಲಿದೆ. ಈ ದಿನ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವಿರಿ.

 

 

 

 

 

ಸಿಂಹ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರಕುತ್ತದೆ. ಯಾವುದೇ ಕೆಲಸ ಮಾಡುವ ಮುನ್ನ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಮಾತುಕತೆ ನಡೆಸಿ. ಅಲಂಕಾರಿಕ ವಸ್ತುಗಳ ಖರೀದಿಸುವಿರಿ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ನಿಷ್ಠುರ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ.

 

 

ಕನ್ಯಾ

ಆಸ್ತಿ ವಿಚಾರದಲ್ಲಿ ಗಲಿಬಿಲಿ. ತಾಳ್ಮೆಯಿಂದ ವ್ಯವಹಾರ ಮಾಡಿ. ಅನವಶ್ಯಕ ಮಾತುಗಳನ್ನು ಆಡಿದಿರಿ. ನಿಮ್ಮ ಕೆಲಸದ ಸಲುವಾಗಿ ಹೆಚ್ಚಿನ ಪರಿಶ್ರಮ ಹಾಕುವುದು ಉತ್ತಮ. ನೀವು ನಿರೀಕ್ಷಿಸದ ಕಡೆಗಳಿಂದ ಲಾಭ ದೊರೆಯುವುದು.

 

 

 

ತುಲಾ

ಉದ್ಯೋಗದಲ್ಲಿ ಸ್ವಲ್ಪ ಮನಸ್ತಾಪ ಅನುಭವಿಸುವಿರಿ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಂಭವ. ವ್ಯವಸಾಯದಲ್ಲಿ ಹೆಚ್ಚಿನ ಲಾಭ. ಶುಭ ಸಮಾರಂಭಗಳಿಗೆ ಆಭರಣಗಳನ್ನು ಕೊಂಡುಕೊಳ್ಳುವಿರಿ. ಸದಾ ಕಾಲ ಒಳ್ಳೆಯದನ್ನೇ ಯೋಚಿಸಿ.

ವೃಶ್ಚಿಕ

ಮನೆಕಟ್ಟುವವರಿಗೆ ಸೂಕ್ತವಾದ ಜಾಗ ದೊರೆಯಲಿದೆ. ಕುಟುಂಬದವರ ಜೊತೆ ಹೆಚ್ಚಿನ ಸಮಯ ಕಳೆಯಿರಿ. ನಿಮಗೆ ಅವಕಾಶವೊಂದು ಹುಡುಕಿಕೊಂಡು ಬರುತ್ತದೆ. ಅತಿಯಾದ ವೇಗದಿಂದ ದಂಡ ಕಟ್ಟುವ ಸಂಭವವಿದೆ.ಉದ್ಯೋಗದಲ್ಲಿ ಮುನ್ನಡೆ.

 

ಧನುಸ್ಸು

ವ್ಯವಹಾರದಲ್ಲಿ ಲಾಭ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಗುರು ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿದೆ. ಕೆಲಸದಲ್ಲಿ ಒತ್ತಡವಿರಲಿದೆ. ವಿವಾಹಕ್ಕಾಗಿ ವಧು ವರರ ಹುಡುಕಾಡುವುದು. ಹೊಟ್ಟೆಗೆ ಸಂಬಂಧಿಸಿದ ತೊಂದರೆಯಿರುವವರು ಶೀಘ್ರವೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.

 

 

 

ಮಕರ

 

ಸಂಗಾತಿಯೊಂದಿಗೆ ಕಿರಿ ಕಿರಿ. ಅನವಶ್ಯಕವಾಗಿ ಯಾವುದೇ ವಿಚಾರದಲ್ಲಿ ಮೂಗುತೂರಿಸಬೇಡಿ. ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ. ಮನೆಗೆ ಆತ್ಮೀಯ ಬಂಧುಗಳ ಆಗಮನದಿಂದ ಸಂತಸ. ವಿವಾಹದಲ್ಲಿ ವಿಘ್ನ. ಬಹಳ ದಿನಗಳಿಂದ ಕಾದಿದ್ದ ಹಣ ನಿಮಗೆ ಇಂದು ಸಿಗಲಿದೆ.

 

 

 

 

 

 

ಕುಂಭ

ಹೊಸ ವ್ಯವಹಾರವನ್ನು ಶುರುಮಾಡಲು ಉತ್ತಮವಾದ ಸಮಯ. ಕೆಲವರು ನಿಮ್ಮ ಬಗ್ಗೆ ಹೊಗಳುವರು. ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ. ಉದ್ಯೋಗದಲ್ಲಿ ಸಂತಸ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ.

 

ಮೀನ

ನಿಮ್ಮ ಬಹಳ ವರ್ಷಗಳ ಪ್ರೀತಿ ಇಂದು ನಿಮಗೆ ಸಿಗಲಿದೆ. ನಿಮ್ಮಲ್ಲಿರುವ ಒಳ್ಳೆಯತನವನ್ನು ಕೊಂಡಾಡುವರು. ಕುಟುಂಬದಲ್ಲಿ ಮನಸ್ತಾಪ. ಯಾರಿಗೂ ಈ ದಿನ ಸಾಲಕೊಡಬೇಡಿ.

 

ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳಿಗೆ ಪ್ರೀತಿ ವ್ಯಕ್ತಪಡಿಸುವ ಲವ್ ಟ್ಯಾಟೂಸ್

#dinabhavishya #daily-horoscope-kannada #astrology #bhavishya

Tags