ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನಭವಿಷ್ಯ: 02 ಅಕ್ಟೋಬರ್ 2019, ಬುಧವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…

ಮೇಷ

ಅಪರೂಪದ ವಿಚಾರವೊಂದರ ಕಾರ್ಯವನ್ನು ಅನಿರೀಕ್ಷಿತವಾಗಿ ಮಾಡಿ ಮುಗಿಸುವಿರಿ. ಇದರಿಂದ ಹೆಚ್ಚಿನ ಲಾಭ ಕಂಡು ಬರುವುದು. ಮಡದಿ ಮಕ್ಕಳ ಜತೆ ಸಂತೋಷದ ಸಮಯ ಕಳೆಯುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಮನಸ್ಸಿಗೆ ಒಪ್ಪುವ ಕೆಲಸವನ್ನು ಮಾತ್ರ ಒಪ್ಪಿಕೊಳ್ಳಿ. ಅನವಶ್ಯಕವಾಗಿ ಎಲ್ಲಾ ಕೆಲಸಗಳನ್ನು ಒಪ್ಪಿಕೊಂಡು ಹೈರಾಣ ಆಗದಿರಿ. ನಿಮ್ಮ ಸ್ನೇಹಿತರು, ಬಂಧುಗಳು ನಿಮಗೆ ಸಹಾಯ ಮಾಡುವರು. ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಕೇವಲ ಹೊರ ಜಗತ್ತಿನ ವಿಚಾರಗಳ ಬಗ್ಗೆ ಗಮನ ಹರಿಸದೆ ಮಡದಿ, ಮಕ್ಕಳ ಕಡೆಗೂ ಗಮನ ಹರಿಸಬೇಕಾದ್ದು ನಿಮ್ಮ ಕರ್ತವ್ಯ. ಮನೆ ಜನರ ಪ್ರೀತಿ ವಿಶ್ವಾಸ ಸಂಪಾದಿಸಿ.

ಅದೃಷ್ಟ ಸಂಖ್ಯೆ:2

 

 

 

 

 

ವೃಷಭ

ಒಂದಿಷ್ಟು ಅನಿರೀಕ್ಷಿತವಾದ ಹೆಚ್ಚುವರಿ ಕೆಲಸ ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಗೊಣಗಾಟ ಮಾಡದೆ ಅದನ್ನು ಸ್ವೀಕರಿಸಿ ಮತ್ತು ವಿವೇಚನೆಯಿಂದ ಕಾರ್ಯವನ್ನು ಮುಗಿಸುವತ್ತ ಗಂಭೀರವಾಗಿ ಚಿಂತಿಸಿ.ನಿಮ್ಮ ಅಂತಃಸತ್ವ ಜಾಗೃತವಾಗಿದೆ ಮತ್ತು ಆತ್ಮಬಲವು ಹೆಚ್ಚಿರುವುದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸಂಗಾತಿಯ ಸಕಾಲಿಕ ಎಚ್ಚರಿಕೆ ಮಾತುಗಳನ್ನು ಆಲಿಸಿ. ಸುಖಾಸುಮ್ಮನೆ ಒಂದು ವ್ಯಾಜ್ಯದಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಹಾಗಾಗಿ ಅನವಶ್ಯಕವಾಗಿ ಪರರ ಕಾರ್ಯ ವೈಖರಿ ಬಗ್ಗೆ ಟೀಕೆ ಟಿಪ್ಪಣಿ ಮಾಡದಿರಿ. ಇದರಿಂದ ತೊಂದರೆ ಎದುರಿಸಬೇಕಾಗುತ್ತದೆ.

ಅದೃಷ್ಟ ಸಂಖ್ಯೆ:2

 

 

 

 

 

 

ಮಿಥುನ

ನಿಮ್ಮದೇ ಆದ ದಾರಿಯಲ್ಲಿ ಸಾಗುವ ನಿರ್ಧಾರದಿಂದ ಬಹುಪಾಲು ಶುಭಫಲ ಕಾಣುವಿರಿ ಮತ್ತು ನಿಮ್ಮ ಗೆಳೆಯರಿಗೂ ಸರಳ ಮಾರ್ಗವನ್ನು ತೋರಿಸುವುದರಿಂದ ಸಮಾಜದಲ್ಲಿ ಮನ್ನಣೆಗಳು ದೊರೆಯುವವು.ಕೆಲಸದ ಸ್ಥಳದಲ್ಲಿ ನಿಮಗೆ ವಿಶ್ವಾಸ, ಆದರೆ ಇರುವ ವ್ಯಕ್ತಿಗಳ ಕಡೆಯಿಂದ ಅನುಕೂಲವಾಗುವುದು. ಪೂರ್ವಪುಣ್ಯದ ಬಲದಿಂದ ನಿಮ್ಮ ಮನೋಕಾಮನೆಗಳು ಸುಲಲಿತವಾಗಿ ನಡೆಯುವವು. ಆರ್ಥಿಕ ಸದೃಢತೆ ಇರುವುದು. ಬಹು ದಿನಗಳ ನಿರೀಕ್ಷೆ ಫಲವಾಗಿ ಪ್ರಭಾವಿ ಜನರಿಂದ ನಿಮಗೆ ಅನುಕೂಲ ವಾಗುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಚುರುಕುತನ ತೋರುವರು. ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ:1

 

 

ಕಟಕ

ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು ಎಂಬ ಗಾದೆ ಮಾತಿನಂತೆ ಕೆಲಸ ಕಾರ್ಯಗಳು ಮಂದವಾಗಿ ನೆರವೇರುವುದರಿಂದ ಅಧಿಕ ದೈಹಿಕ ಶ್ರಮವುಂಟಾಗುವುದು. ಮಧ್ಯಾಹ್ನದ ನಂತರ ವಿಶ್ರಾಂತಿ ಪಡೆಯಿರಿ. ಬೇಗನೆ ಮುಗಿಯಬೇಕಾದ ಕೆಲಸ ಇಂದಿನ ಗ್ರಹಸ್ಥಿತಿಯಿಂದಾಗಿ ವಿಳಂಬವಾಗುವುದು. ವಿಳಂಬವಾದರೂ ಕಾರ್ಯವು ಪೂರ್ಣಗೊಳ್ಳುವುದೆಂಬ ಆಶಾಭಾವನೆ ಇರಲಿ. ಸ್ಥಿರಾಸ್ಥಿ ಖರೀದಿ ಬಗ್ಗೆ ಚಿಂತನೆ ಮಾಡುವಿರಿ.ದೂರದ ಜನರಿಂದ ಮಾತ್ರ ನಿಮಗೆ ಕಿರಿಕಿರಿಗಳು ಉಂಟಾಗುವುದಿಲ್ಲ. ನಿಮ್ಮ ಹತ್ತಿರದವರೂ ನಿಮ್ಮ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಮಾಡುವುದರಿಂದ ಮನಸ್ಸಿಗೆ ಘಾಸಿಯಾಗುವುದು. ಇದಕ್ಕೆ ನೊಂದುಕೊಳ್ಳದೆ ಭಗವಂತನನ್ನು ಅನನ್ಯತೆಯಿಂದ ಪ್ರಾರ್ಥಿಸಿ.

ಅದೃಷ್ಟ ಸಂಖ್ಯೆ:1

 

 

 

 

 

ಸಿಂಹ

ಲಾಗಾಯ್ತಿನಿಂದ ಜಗಳ ಸಾಧಿಸಿಕೊಂಡು ಬಂದ ವ್ಯಕ್ತಿ ನಿಮ್ಮ ಸ್ನೇಹಹಸ್ತಕ್ಕಾಗಿ ಹಾತೊರೆಯುತ್ತಿರುವರು. ಆತನಿಗೆ ಸಹಾಯ ಹಸ್ತ ಮತ್ತು ಅಲ್ಪಮಟ್ಟಿನ ಧನ ಸಹಾಯ ಮಾಡಿ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಇಮ್ಮಡಿ ಆಗುವುದು. ಅಲ್ಪರು ಬಂದು ಮನದ ಶಾಂತಿ ಕೆಡಿಸುವ ಸಾಧ್ಯತೆ ಇದೆ. ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಅವರ ಸಂಗ ಮಾಡದಿರುವುದೇ ಕ್ಷೇಮ. ಮಾನಸಿಕ ಸದೃಢತೆಗಾಗಿ ಲಕ್ಷ್ಮೀನಾರಾಯಣ ಸ್ವಾಮಿಯನ್ನು ಪ್ರಾರ್ಥಿಸಿ. ವ್ಯಾಪಾರ ವ್ಯವಹಾರಗಳ ಒತ್ತಡವನ್ನು ಮನೆಯ ಒಳಗೂ ತಂದು ಕೂಗಾಡದಿರಿ. ಇದರಿಂದ ಮನೆಯ ವಾತಾವರಣ ಕಲುಷಿತವಾಗುವುದು ಮತ್ತು ಮನೆಯ ಇತರ ಸದಸ್ಯರ ಮನಸ್ಸಿಗೂ ನೋವಾಗುವುದು. ಗುರುರಾಯರ ನೆನೆದು ಮನಸ್ಸು ಹಗುರ ಮಾಡಿಕೊಳ್ಳಿ.

ಅದೃಷ್ಟ ಸಂಖ್ಯೆ:4

 

 

 

 

ಕನ್ಯಾ

ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದವರು ಸುಮ್ಮನಿರುತ್ತಾರೆ. ನಿಮ್ಮ ಕಾರ್ಯ ಆಗಬೇಕೆಂದರೆ ನೀವೇ ಕೆಲಸವನ್ನು ಮಾಡಲು ಮುಂದಾಗಬೇಕಿದೆ. ಇದರಿಂದ ಕಾರ್ಯವೂ ಮುಗಿಯುವುದು ಮತ್ತು ಹೊಸ ಅನುಭವವೂ ನಿಮಗಾಗುವುದು. ತಲೆ ತಿನ್ನುವ ಜನ ಎದುರಾಗುವರು. ಅವರು ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡುವ ಸಾಧ್ಯತೆ ಇದೆ. ಹಾಗಾಗಿ ಅವರನ್ನು ಜಾಣ್ಮೆಯಿಂದ ಹೊರಗಿಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದಿನದಿಂದ ದಿನಕ್ಕೆ ನಿಮ್ಮ ವ್ಯಕ್ತಿತ್ವ ಮತ್ತು ಕೀರ್ತಿ ಬೆಳೆಯುತ್ತಿದೆ. ಈ ಸಂಭ್ರಮದ ಸಮಯದಲ್ಲಿ ಜನರು ಕೇಳುವ ಪ್ರತಿಯೊಂದಕ್ಕೂ ಆಶ್ವಾಸನೆ ನೀಡದೆ ಆಯ್ತು, ಪರಿಶೀಲಿಸೋಣ ಎಂಬ ಮಾತುಗಳನ್ನು ಅಭ್ಯಾಸ ಮಾಡಿ.

ಅದೃಷ್ಟ ಸಂಖ್ಯೆ:4

 

 

 

ತುಲಾ

ಶುಭ ಕಾರ್ಯ ನಡೆಸುವ ಸುಸಂದರ್ಭ ನಿಮಗೆ ಎದುರಾಗುವುದು. ಇದನ್ನು ಮನಃಪೂರ್ವಕವಾಗಿ ಮಾಡಿ. ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಉಂಟಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಪರರ ಹಿತವಚನವನ್ನು ಗಮನಕೊಟ್ಟು ಆಲಿಸುವುದನ್ನು ಕಲಿಯಿರಿ. ಇದರಿಂದ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುವುದು. ಆದರೆ ನನಗೆ ಎಲ್ಲವೂ ಗೊತ್ತು ಎಂಬ ಅಹಂನಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಮಕ್ಕಳ ಉನ್ನತ ವ್ಯಾಸಂಗದ ಬಗ್ಗೆ ಚಿಂತಿಸಬೇಕಾದ ಸಮಯ. ಅದಕ್ಕೆ ಪೂರಕವಾದ ಹಣಕಾಸು ಹೊಂದಿಸಲು ಪರದಾಡುವಿರಿ. ದಿನ ನಿತ್ಯ ಸಾಮಾನುಗಳ ದರ ಏರಿಕೆ ಸಮಸ್ಯೆ ಅದರ ಜತೆಯಲ್ಲಿ ಅನಿವಾರ್ಯವಾಗಿ ಕೆಲವೊಂದು ಕೆಲಸಗಳನ್ನು ಮಾಡಲೇಬೇಕಿದೆ.

ಅದೃಷ್ಟ ಸಂಖ್ಯೆ:8

 

ವೃಶ್ಚಿಕ

ನಿಮ್ಮನ್ನು ಸುಮ್ಮನೆ ನಿಂದನೆಗೆ ಗುರಿ ಮಾಡುವ ಪ್ರಯತ್ನ ನಡೆಯುವುದು. ಹೆಚ್ಚಿನ ಜಾಗರೂಕತೆಯಿಂದ ಇರಿ. ಪ್ರಯಾಣ ಕಾಲದಲ್ಲಿ ನಿಮ್ಮ ಬಳಿ ಉದ್ದಿನಕಾಳನ್ನು ಇಟ್ಟುಕೊಳ್ಳಿ. ನಿಮ್ಮ ಕುಲ ಗುರುಗಳ ಸ್ಮರಣೆ ಮಾಡಿ. ಹಣಕಾಸಿನ ವ್ಯವಹಾರದಲ್ಲಿ ತಪ್ಪು ಅಭಿಪ್ರಾಯದಿಂದ ಬರಬೇಕಾದ ಹಣ ಮೇಲಧಿಕಾರಿಗಳಿಂದ ತಡೆ ಹಿಡಿಯಲ್ಪಡುವುದು. ಆದರೆ ಸಂಜೆಯ ವೇಳೆಗೆ ತಪ್ಪು ಅಭಿಪ್ರಾಯ ಮಾಯವಾಗಿ ನಿಮ್ಮ ಬಗ್ಗೆ ಗೌರವ ಆದರ ಉಂಟಾಗುವುದು. ಮಾತಾ ದುರ್ಗಾದೇವಿ ತನ್ನಲ್ಲಿ ಬಂದ ಶರಣಾಗತರನ್ನು ರಕ್ಷಿಸುವಳು. ಅಂತೆಯೆ ದುರ್ಗೆಯ ಸ್ಮರಣೆ ಮಾಡುತ್ತಾ ಕಾರ್ಯವನ್ನು ಆರಂಭ ಮಾಡಿ. ನೀವು ಊಹಿಸದೆ ಇದ್ದ ಪ್ರಸಂಗಗಳು ನಿಮ್ಮ ಪರವಾಗಿ ಆಗುವವು.

ಅದೃಷ್ಟ ಸಂಖ್ಯೆ:2

 

 

 

 

ಧನುಸ್ಸು

ಹಣಕಾಸಿನ ಬಗ್ಗೆ ಹೆಚ್ಚಿನ ಎಚ್ಚರವಿರಲಿ. ಸರಿಯಾಗಿ ಎಣಿಸಿದ ಹಣದಲ್ಲಿ ಕೆಲವು ನೋಟುಗಳು ಕಣ್ಮರೆ ಆಗುವ ಸಾಧ್ಯತೆ ಇರುವುದು. ಹಣಕಾಸಿನ ವ್ಯವಹಾರ 3ನೇ ವ್ಯಕ್ತಿಗೆ ತಿಳಿಯದಂತೆ ಮಾಡಿ. ಗುರುವಿನ ಆಶೀರ್ವಾದ ಪಡೆಯಿರಿ. ನಿಮಗೆ ಯಾವುದೂ ಕಷ್ಟವಲ್ಲ ಎಂಬುದು ಮೇಲ್ನೋಟಕ್ಕೆ ವಾಸ್ತವವೇ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗಳು ನಿಮ್ಮ ವಿರುದ್ಧ ಇರುವುದರಿಂದ ಆಪ್ತರ ಸಲಹೆ ಪಡೆದು ಕಾರ್ಯ ಪ್ರವೃತ್ತರಾಗುವುದು ಒಳ್ಳೆಯದು. ಜನ್ಮಸ್ಥ ಶನಿಯು ಆಲಸ್ಯವನ್ನು ಉಂಟು ಮಾಡುವನು. ತೂಕಡಿಸುವ ವ್ಯಕ್ತಿಗೆ ಹಾಸಿಗೆ ಹಾಸಿಕೊಟ್ಟಂತೆ ನಿಮ್ಮ ಆಲಸ್ಯ ಹೆಚ್ಚಿಸಲು ಕೆಲವು ಗೆಳೆಯರು ನಿಮ್ಮನ್ನು ಸುತ್ತುವರೆಯುವರು. ಹಾಗಾಗಿ ಮಹತ್ತರ ಕೆಲಸ ಅರ್ಧಕ್ಕೆ ನಿಲ್ಲುವುದು.

ಅದೃಷ್ಟ ಸಂಖ್ಯೆ:8

 

 

 

 

ಮಕರ

ನೀವು ಹಮ್ಮಿಕೊಂಡಿರುವ ಪ್ರವಾಸದ ಬಗ್ಗೆ ಒಂದು ನಿರ್ದಿಷ್ಟ ನಿಲುವು ತಳೆಯುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಪ್ರವಾಸವು ಮೊಟಕುಗೊಳ್ಳುವ ಸಾಧ್ಯತೆ ಇರುವುದು. ದೇಹದ ಎಡಭಾಗದಲ್ಲಿ ನೋವು ಸಂಕಟ ಕಾಣಿಸಿಕೊಳ್ಳುವುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಸಮಾಧಾನ ಉಂಟಾಗುವುದು. ಅವರು ತೆಗೆದ ಅಂಕಗಳ ವೈಪರೀತ್ಯದಿಂದ ಮುಂದಿನ ವ್ಯಾಸಂಗಕ್ಕೆ ಅಡೆ ತಡೆ ಆಗುತ್ತಿರುವುದು ನಿಮ್ಮ ಚಿಂತೆಗೆ ಕಾರಣವಾಗಿದೆ. ಅದಕ್ಕಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ವಿನಾಕಾರಣ ನಿಮ್ಮ ಮೇಲೆ ಜಗಳ ಕಾಯುವ ಜನ, ನಿಮ್ಮನ್ನೆ ಜಗಳಗಂಟ ಎಂದು ದೂರುವ ಸಾಧ್ಯತೆ ಇದೆ. ಆದಷ್ಟು ಯಾರ ಜತೆಯಲ್ಲಿಯೂ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳದಿರಿ. ಕುಲದೇವರನ್ನು ಮನಸಾ ಸ್ಮರಿಸಿ.

ಅದೃಷ್ಟ ಸಂಖ್ಯೆ:6

 

 

 

 

 

ಕುಂಭ

ನೀವು ಶ್ರಮಪಟ್ಟು ಶ್ರದ್ಧೆಯಿಂದ ದುಡಿದ ಕಾಸು ನಿಮ್ಮ ಉಪಯೋಗಕ್ಕೆ ಬರುವುದು. ಕೆಲವು ಸಮಸ್ಯೆಗಳು ಗುರುಕೃಪೆಯಿಂದ ಕರಗಿ ನೀರಾಗುವುದು. ವೃತ್ತಿಯಲ್ಲಿ ಇರುವವರಿಗೆ ಮೇಲಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಟೀಕೆಗಳು ಬಂದಾಗ ಕುಗ್ಗಲೇಬೇಡಿ. ಎದುರಿಸುವ ಛಲವನ್ನು ತೋರಿ. ಬರುವ ಸವಾಲುಗಳನ್ನು ಸ್ವೀಕರಿಸಿ ಅದರಲ್ಲಿ ಗೆಲ್ಲುವ ಸಾಧ್ಯತೆ ಅಧಿಕವಾಗಿರುತ್ತದೆ. ಸ್ನೇಹಿತರು ಹಿತೈಷಿಗಳು ನಿಮ್ಮ ಬೆಂಬಲಕ್ಕೆ ಬರುವರು. ನಯವಾದ ಮಾತುಗಳ ಮೂಲಕ ನಿಮ್ಮ ಅಂತರಂಗದ ವಿಚಾರಗಳನ್ನು ಬಹಿರಂಗ ಪಡಿಸಲು ಕೆಲವರು ಹವಣಿಸುವರು. ಇದರ ಸೂಕ್ಷ್ಮತೆ ಅರಿತು ನೀವು ಅವರಿಗೆ ಸರಿಯಾದ ಬುದ್ಧಿ ಕಲಿಸುವಿರಿ.

ಅದೃಷ್ಟ ಸಂಖ್ಯೆ:2

 

 

ಮೀನ

ಮಾಡುತ್ತಿರುವ ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುವುದು. ನವದಂಪತಿಗಳಿಗೆ ತಾಳ್ಮೆ ಇರಬೇಕು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಮಡದಿಯ ಆರೋಗ್ಯದ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿ. ಯಾವುದನ್ನು ಮತ್ತು ಯಾರನ್ನೂ ಅಲಕ್ಷಿಸದಿರುವುದೇ ಒಳ್ಳೆಯದು. ನೀವು ಈ ಹಿಂದೆ ಅಲಕ್ಷಿಸಿದ ವ್ಯಕ್ತಿಯೇ ನಿಮಗೆ ನೆರವಿನ ಹಸ್ತ ಚಾಚುವರು. ಹಮ್ಮು, ಬಿಮ್ಮು ತೊರೆದು ಅವರೊಡನೆ ವ್ಯವಹರಿಸಿ ಅನುಕೂಲವಾಗುವುದು. ವಿವಾಹ ಯೋಗ್ಯ ವಧು ವರರಿಗೆ ಕಂಕಣಭಾಗ್ಯ ಕೂಡಿಬರುವ ಸಂಭವವಿದೆ. ಆದರೆ ಅದಕ್ಕಾಗಿ ಕೆಲವು ಪೂಜಾ ವ್ರತಗಳನ್ನು ಅವಶ್ಯವಾಗಿ ಮಾಡಬೇಕಾಗುವುದು. ಒಟ್ಟಿನಲ್ಲಿ ಈ ದಿನ ಆಶಾದಾಯಕವಾಗಿರುತ್ತದೆ.

ಅದೃಷ್ಟ ಸಂಖ್ಯೆ:1

 

 

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?

#dinabhavishya #daily-horoscope-kannada #astrology #bhavishya

Tags