ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನಭವಿಷ್ಯ: 12 ಅಕ್ಟೋಬರ್ 2019 ಶನಿವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…

ಮೇಷ

ಮನದಾಳದ ಚಿಂತನೆಗಳನ್ನು ದೂರಮಾಡಿ ಒಳಿತುಗಳನ್ನು ಪಡೆಯುವ ಸಿದ್ದಿಯನ್ನು ಕಂಡುಕೊಳ್ಳುವಿರಿ. ಇದಕ್ಕೆ ಪೂರಕವಾಗಿ ಬಂಧುಗಳು ಮತ್ತು ಸ್ನೇಹಿತರು ಸಹಾಯಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಠ ಯಾರಿಗೂ ಒಳ್ಳೆಯದಲ್ಲ. ನಿಮ್ಮ ಹಠದಿಂದ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಬರುವುದು. ಒಂದು ವೇಳೆ ಕೋಪ, ಹಠವನ್ನು ನಿಯಂತ್ರಿಸಿಕೊಳ್ಳದೆ ಇದ್ದಲ್ಲಿ ತೊಂದರೆ ಅನುಭವಿಸುವಿರಿ. ಬಾಳಸಂಗಾತಿ ಸಲಹೆ ಸಹಕಾರಗಳನ್ನು ಸ್ವೀಕರಿಸಿ. ಅಂತೆಯೇ ಹೆತ್ತ ತಂದೆ ತಾಯಿಯ ಮಾತನ್ನು ನಡೆಸಿಕೊಡುವುದು ಒಳ್ಳೆಯದು. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ.

 

 

 

 

 

ವೃಷಭ

ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಯೋಜನೆಯನ್ನು ಸ್ವಲ್ಪ ದಿನ ಮುಂದೂಡಿ. ಇದರಿಂದ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯವಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧಾರಣ ಪ್ರಗತಿ ಇರುತ್ತದೆ.  ಮಾಡಿದ್ದುಣ್ಣೊ ಮಹರಾಯ ಎಂಬ ಸಂಗತಿ ನೆನಪಿಡಿ. ಇದರಿಂದ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಬೇಕಾಗುವುದು. ಆದಷ್ಟು ಉಡಾಫೆ ಮಾತುಗಳನ್ನು ಆಡದಿರಿ. ಇದರಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರುವುದು. ವ್ಯಕ್ತಿತ್ವದ ವಿಚಾರದಲ್ಲಿ ಹೊಸ ಎತ್ತರ ಪಡೆಯಲು ಸಂಬಂಧಿಕರು ಸಹಾಯ ಮಾಡುವರು. ಇದರಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಹೆಚ್ಚಲಿವೆ. ಆತ್ಮೀಯರು ನಿಮ್ಮನ್ನು ಸನ್ಮಾನಿಸುವ ಸಾಧ್ಯತೆ ಇದೆ.

 

 

 

 

 

 

ಮಿಥುನ

ಕಿರಿಕಿರಿಗಳಿಂದ ಪಾರಾಗಲು ಅಪಾರವಾದ ತಾಳ್ಮೆಯಿರಲಿ. ತಂತಾನೇ ಕೆಲವು ಪರಿಹಾರದ ಮಾರ್ಗೋಪಾಯಗಳು ಲಭಿಸುವವು. ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ಆರಾಧಿಸಿ. ಸಿಟ್ಟಿಗೆ ಬುದ್ಧಿ ಕೊಡದಿರಿ. ನಿಮ್ಮ ಮಾತುಕತೆಯಲ್ಲಿ ತಪ್ಪು ನುಸುಳದಂತೆ ಎಚ್ಚರ ವಹಿಸಿ. ಎದುರು ವ್ಯಕ್ತಿಯ ಜೊತೆ ವ್ಯವಹರಿಸುವಾಗ ಹುಷಾರಾಗಿರಿ. ಆಂಜನೇಯ ಸ್ವಾಮಿಯ ಸ್ಮರಣೆ ಮಾಡಿ. ಸ್ವಾಭಿಮಾನಿಗಳಾದ ನೀವು ಸಾಧಿಸಬೇಕಾದ ಕೆಲಸವನ್ನು ಪೂರ್ಣಗೊಳಿಸುವಿರಿ. ಇದರಿಂದ ನೀವಷ್ಟೇ ಅಲ್ಲದೆ ನಿಮ್ಮ ಕುಟುಂಬದ ಸದಸ್ಯರು ಸಂತೋಷಪಡುವರು. ಆದರೆ ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಇರಲಿ.

 

ಕಟಕ

ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ರೂಢಿಸಿಕೊಳ್ಳಿ. ಹಣಕಾಸಿನ ಮುಗ್ಗಟ್ಟನ್ನು ಅನುಭವಿಸುವಿರಿ ಮತ್ತು ನೀವು ಸಾಲ ಪಡೆದವರಿಂದ ನೋಟಿಸು ಜಾರಿ ಆಗುವ ಸಂದರ್ಭವಿರುತ್ತದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಒತ್ತಡದಲ್ಲಿ ಸಿಲುಕಿಕೊಳ್ಳುವ ಸಂಭವ ಜಾಸ್ತಿ ಇದೆ. ಯೋಚಿಸದೆ ಯಾರಿಗೂ ಹಣ ಅಥವಾ ಮಾತು ಕೊಡಲು ಮುಂದಾಗದಿರಿ. ಕೊಟ್ಟ ಹಣ ವಾಪಸ್ಸು ಬರದೆ ಇರುವ ಸಾಧ್ಯತೆ ಇದೆ. ನಿಮ್ಮ ಕುಲದೇವರನ್ನು ಸ್ಮರಿಸಿಕೊಳ್ಳಿ.  ರಸ್ತೆಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತೆ ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳುವಿರಿ. ಈ ಬಗ್ಗೆ ಜಾಗ್ರತೆಯಿಂದ ಇರಿ. ಶಿವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ.

 

 

 

 

 

ಸಿಂಹ

ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಿಸಿ. ಜಯವಿರುವವರೆಗೂ ಭಯವಿಲ್ಲ. ಧೈರ್ಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಯಶಸ್ಸು ನಿಮ್ಮದಾಗುವುದು.  ಆತ್ಮೀಯ ಬಂಧುಗಳು ತಗಾದೆ ಎಬ್ಬಿಸಬಹುದು. ಜಾಗ್ರತೆಯಿಂದ ಇರಿ. ಮನೆತನದ ಕೆಲವು ವಿಚಾರಗಳನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಇದ್ದದ್ದನ್ನು ಇದ್ದಂತೆ ಬೇರೆಯವರ ಮುಂದೆ ಹೇಳಿ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಕೆಲವು ಸಮಸ್ಯೆಗಳು ಎದುರಾಗುವವು. ಅವುಗಳನ್ನು ಹೆಚ್ಚಿನ ತೊಂದರೆಯಿಲ್ಲದೆ ಎದುರಿಸುವ ಶಕ್ತಿ ನಿಮಗೆ ಬರುವುದು. ಬರಬೇಕಾಗಿದ್ದ ಹಣಕಾಸು ಬರುವುದು.

 

 

ಕನ್ಯಾ

ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಕಾದಾಡದೆ ಮಾತುಕತೆ ಮುಂದುವರೆಸಿದರೆ ಒಳಿತಾಗುವುದು. ಆಸ್ತಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ. ದೂರದ ಊರಿನಿಂದ ಬರುವ ಬಂಧುಗಳ ಆಗಮನದಿಂದ ಅನಿರೀಕ್ಷಿತವಾಗಿ ನಿಮ್ಮ ಬಹುದಿನದ ಸಮಸ್ಯೆಗೆ ಪರಿಹಾರ ಸಿಗುವುದು. ಇದರಿಂದ ಮಗನ ಮದುವೆ ಮಾಡುವ ಆಸೆ ಚಿಗುರುವುದು. ಗ್ರಹಗಳ ಆಟ ಯಾವ ರೀತಿಯಲ್ಲಿಯೂ ಇರಬಹುದು. ಅದನ್ನು ಸ್ವೀಕರಿಸಿ. ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕೂಡಿಟ್ಟ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತಿರುವುದರಿಂದ ಹಣದ ಉಳಿತಾಯಕ್ಕೆ ಸಂಚಕಾರ ಬರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ.

 

 

ತುಲಾ

ಬಹುಮುಖ್ಯ ಕಡತವೊಂದು ಕಣ್ಮರೆಯಾಗುವುದರಿಂದ ಚಿಂತೆಗೆ ಒಳಗಾಗುವಿರಿ. ವ್ಯವಧಾನದಿಂದ ಹುಡುಕಿದರೆ ಸಂಜೆ ವೇಳೆ ಆ ಕಡತ ದೊರೆಯುವ ಸಾಧ್ಯತೆ ಇದೆ. ಕಾರ್ತವೀರ್ಯಾರ್ಜುನನ ಮಂತ್ರ ಪಠಿಸಿ.  ನೀವು ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ಈಚಲ ಮರದ ಅಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದಂತೆ ನಿಮ್ಮ ಕೆಲಸಗಳಲ್ಲಿ ಇಲ್ಲದ ತಪ್ಪುಗಳನ್ನು ತೋರಿಸಿ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದಿರಿ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯನ್ನು ತಿಳಿದು ಭ್ರಮೆಯಲ್ಲಿ ಚಡಪಡಿಸುವಂತಹ ಸಂದಿಗ್ಧ ಪರಿಸ್ಥಿತಿ ಎದುರಾಗುವುದು. ಶ್ರೀರಾಮ ರಕ್ಷಾ ಸ್ತೋತ್ರ ಪಠಿಸಿ. ವಿಷ್ಣುವಿನ ಆರಾಧನೆ ಮೂಲಕ ಶುಭ ಸಿಗುವುದು.

ವೃಶ್ಚಿಕ

ವೃತ್ತಿಯಲ್ಲಿ ಬೇಸರವುಂಟಾಗುವುದು ಮತ್ತು ಕೆಲಸ ಬದಲಾವಣೆ ಮಾಡುವ ಸಂದರ್ಭ ಬರುವುದು. ಹಾಗಂತ ಸದ್ಯದ ವೃತ್ತಿಗೆ ರಾಜೀನಾಮೆ ನೀಡುವುದು ಸೂಕ್ತವಲ್ಲ. ಇರುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ.  ವಿಷ್ಣು ಸಹಸ್ರನಾಮದ ಮಹಿಮೆ ಅಪಾರ. ಅಗತ್ಯವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಆಂಜನೇಯ ಗುಡಿಯಲ್ಲಿ ದೀಪಾರಾಧನೆ ಮಾಡಿ. ಸಾಧ್ಯವಾದರೆ ಹೆಸರುಕಾಳನ್ನು ದಾನ ಮಾಡಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.  ಮನೆ ಸದಸ್ಯರ ಮೇಲೆ ವಿನಾಕಾರಣ ಕೋಪಗೊಳ್ಳುವಿರಿ. ಎಷ್ಟೇ ಕೂಗಾಡಿದರೂ ನಿಮ್ಮ ಕೋಪ ಕೆಲಸಕ್ಕೆ ಬಾರದ ವಿಷಯ. ನೀವೇ ನಿಮ್ಮ ಕೋಪ ನಿಯಂತ್ರಿಸಿಕೊಳ್ಳಿ. ಇದರಿಂದ ಒಳಿತಾಗುವುದು.

 

 

 

ಧನುಸ್ಸು

ನಿಮ್ಮ ವಹಿವಾಟಿನ ತೊಂದರೆಗಳನ್ನು ದೂರ ಮಾಡಿಕೊಳ್ಳಲು ಪಾಲುದಾರರ ಜೊತೆ ಮುಕ್ತ ಮಾತುಕತೆಗಳನ್ನು ನಡೆಸಿ. ಇದರಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರುವುದಿಲ್ಲ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಸುಮ್ಮನೆ ಮತ್ತೊಬ್ಬರಿಗೆ ಅನುಕಂಪ ತೋರಿ ಹಣದ ಸಹಾಯ ಮಾಡದಿರಿ. ನಿಮ್ಮ ಹೃದಯ ವೈಶಾಲ್ಯವನ್ನು ಇತರರು ದುರುಪಯೋಗ ಪಡಿಸಿಕೊಳ್ಳುವರು. ಇದರಿಂದ ಮಾನಸಿಕ ಚಿಂತೆಗಳು ಹೆಚ್ಚು ಕಾಡುತ್ತವೆ.ದೂರದ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಜಾಸ್ತಿಯಾಗಿದೆ. ಬದಲಾವಣೆ ಈಗ ಅನಿವಾರ್ಯವಾಗಿರುತ್ತದೆ. ಬೇರೊಂದು ಕಡೆ ವರ್ಗ ಆಗುವ ಜಾಗ ಉತ್ತಮವಾಗಿರುತ್ತದೆ.

 

 

 

ಮಕರ

ಹಿರಿಯರು ನಡೆಸಿದ ಆದರ್ಶ ಜೀವನ, ನಿಮ್ಮ ಬದುಕಿಗೆ ದಾರಿದೀಪವಾಗಲಿದೆ. ಅಂತೆಯೇ ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ ಮತ್ತು ನಿಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಹರಿಸುವುದು ಉತ್ತಮ. ತಿಳಿದವರಿಗೆ ಹೆಚ್ಚಿನ ಸಲಹೆ ಸೂಚನೆಗಳು ಬೇಡ ಎಂಬುದು ಸರಿಯಾದರೂ ಮಕ್ಕಳಿಗೆ ಸೂಕ್ತ ಸಲಹೆಗಳನ್ನು ನೀಡಬಹುದಾಗಿದೆ. ಆಂಜನೇಯ ಸ್ತೋತ್ರವನ್ನು ಪಠಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ಗಾದೆ ಮಾತಿದೆ. ಅಂತೆಯೇ ನಿಮ್ಮ ಕಾರ್ಯಗಳು ನೆರವೇರಬೇಕೆಂದರೆ ನಿಮ್ಮ ಶತ್ರುಗಳ ಸಹಾಯವನ್ನು ಪಡೆಯಬೇಕಾಗುವುದು. ಈ ಬಗ್ಗೆ ಹಿಂಜರಿಕೆ ಬೇಡ.

 

 

 

 

 

ಕುಂಭ

ರಾಜಕೀಯ ನೇತಾರರು ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹು ಎಚ್ಚರಿಕೆಯಿಂದ ಇರಬೇಕು. ಅನವಶ್ಯಕವಾಗಿ ಅಪವಾದಗಳನ್ನು ಎದುರಿಸಬೇಕಾಗುವುದು.ಸರ್ವ ಶಕ್ತಳಾದ ದುರ್ಗಾಮಾತೆಯನ್ನು ಆರಾಧಿಸಿ. ದೇವಿ ದೇವಸ್ಥಾನಕ್ಕೆ ಹುರುಳಿಕಾಳನ್ನು ದಾನ ಮಾಡುವುದರಿಂದ ಕಾರ್ಯಗಳು ಸುಗಮವಾಗುವುವು. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.  ಬೆಟ್ಟಿಂಗ್‌, ಜೂಜು, ರೇಸು ಇತ್ಯಾದಿಗಳಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಾದು ನೋಡಿ, ಮುಂದಿನ ದಿನಗಳಲ್ಲಿ ಒಳಿತಾಗುವುದು. ಅಧಿಕ ಸುತ್ತಾಟದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿ.

 

 

ಮೀನ

ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಉಂಟಾಗುವುದು. ಸಂಬಂಧಿಕರೊಂದಿಗೆ ಸುದೀರ್ಘ ಸಮಾಲೋಚನೆಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು. ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವಿರಿ. ತಾಂತ್ರಿಕ ಇಲಾಖೆಯ ಕಂಪ್ಯೂಟರ್‌ ವಿಭಾಗದವರಿಗೆ ಭತ್ಯೆಯಲ್ಲಿ ಹೆಚ್ಚಳ ಕಂಡು ಬರುವುದು. ರಾಜಕೀಯದಲ್ಲಿರುವವರಿಗೆ ಉತ್ತಮ ಕಾಲ. ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲ ನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಹಾಯ, ಸಲಹೆ ಕೋರಿ ಬರುವವರಿಗೆ ಸಹಾಯ ಮಾಡಿ.

 

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಕ್ಯಾರೆಟ್ ನಿಂದ ನಿಮ್ಮ ತ್ವಚೆಗೆ ಇಷ್ಟಲ್ಲಾ ಲಾಭಗಳಿವೆ ಇಲ್ಲಿ ನೋಡಿ

#dinabhavishya #daily-horoscope-kannada #astrology #bhavishya

Tags