ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನಭವಿಷ್ಯ: 17 ಅಕ್ಟೋಬರ್ 2019, ಗುರುವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

ಮೇಷ

ಅಗತ್ಯಕ್ಕಿಂತ ಜಾಸ್ತಿ ಮಾತನಾಡಬೇಡಿ. ಹಿರಿಯರ ಸಹಾಯದಿಂದ ಅನೇಕ ರೀತಿಯ ಒಳಿತುಗಳಿಗೆ ದಾರಿ ಇದೆಯಾದರೂ ಆತ್ಮಶುದ್ಧಿಯ ಹಿರಿಯರನ್ನು ಹುಡುಕಬೇಕಾಗುವುದು. ಗುರು ಮಂತ್ರ ಪಠಿಸಿ. ಮನೆಯಲ್ಲಿ ಕಲಹ ನಿರ್ಮಾಣವಾಗದಿರಲು ಸರ್ವ ಪ್ರಯತ್ನ ನಡೆಯಬೇಕು. ಕೆಲಸದ ಸ್ಥಳದಲ್ಲಿ ಚಾಡಿ ಹೇಳುವವರು ಅಧಿಕವಾಗಿರುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮಿಂದ ಸಹಾಯ ಬಯಸಿ ಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡಿ.

ಅದೃಷ್ಟ ಸಂಖ್ಯೆ:2

 

 

 

 

 

 

ವೃಷಭ

ಮನಸ್ಸಿಗೆ ಬಂದದ್ದನ್ನು ಸರ್ರನೆ ತೆರೆದಿಡಬೇಡಿ. ಎಲ್ಲರನ್ನು ನಂಬಬೇಡಿ. ಕೇತು ನಿಮ್ಮ ಪರಿಪಕ್ವ ಬುದ್ಧಿಶಕ್ತಿಯನ್ನು ಮಂಕುಗೊಳಿಸುವ ಪರಿಣಾಮದಲ್ಲಿ ನಿಮಗೆ ವೈಫಲ್ಯ ಎದುರಾಗುವುದು. ಮನಸ್ಸಿನಲ್ಲಿ ಮಂಡಿಗೆ ತಿನ್ನುವ ಕೆಲಸ ಬೇಡ. ಗುರು ಅನುಗ್ರಹದಿಂದ ನಿಮ್ಮ ಕಾರ್ಯಗಳು ಕೈಗೂಡುವವು. ಸಂತೋಷ ಸಿಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಅದೃಷ್ಟ ಸಂಖ್ಯೆ:4

 

 

 

 

 

 

 

 

ಮಿಥುನ

ಬಾಳಸಂಗಾತಿಯನ್ನು ಅಲಕ್ಷಿಸಬೇಡಿ. ನಿಮ್ಮ ವ್ಯವಹಾರಕ್ಕೆ ಅವರ ಸಲಹೆ ಮುಖ್ಯವಾಗುವುದು. ಪಂಚಮ ಶನಿಯ ಪೀಡೆಯ ಪರಿಹಾರಕ್ಕಾಗಿ ಆಂಜನೇಯ ಸ್ತೋತ್ರ ಪಠಿಸಿ.ಅಭಿಮಾನ ಧನರಾದ ನಿಮ್ಮನ್ನು ಜನರು ಪ್ರಶಂಸಿಸುತ್ತಾರೆ. ಅವರಿಂದ ನೀವು ಗೌರವಿಸಲ್ಪಡುವಿರಿ. ಹೊಸ ಜವಾಬ್ದಾರಿಗೆ ದಾರಿಯಾಗುವ ಅದೃಷ್ಟ ನಿಮಗಿದೆ. ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಅದೃಷ್ಟ ಸಂಖ್ಯೆ:4

 

ಕಟಕ

ದೊಡ್ಡ ದೊಡ್ಡ ಮಾತುಗಳನ್ನಾಡಿ ಕೈ ಕೊಡುವ ಜನ ನಿಮ್ಮನ್ನು ಸಂಧಿಸುತ್ತಾರೆ. ಅವರೊಂದಿಗೆ ಹೆಚ್ಚಿನ ವಿಷಯಗಳನ್ನು ಚರ್ಚಿಸದೆ ಅವರನ್ನು ಸಾಗ ಹಾಕಿ. ನಿರಾಸೆಗಳ ನಡುವೆ ನಿಜವಾದ ಸತ್ವ ಪರೀಕ್ಷೆ ಎದುರಿಸಬೇಕಾಗುವುದು.ನಿಮ್ಮ ವಹಿವಾಟಿಗೆ ಸಾಲ ಅನಿವಾರ‍್ಯ. ಅದು ನಿಮಗೆ ನಿಮ್ಮ ವರ್ಚಸ್ಸಿಗೆ ತಕ್ಕಂತೆ ದೊರೆಯುವುದು. ಆದರೆ ಸಾಲ ಪಡೆದ ಉದ್ದೇಶ ಬಿಟ್ಟು ಬೇರೆಯದಕ್ಕೆ ಹಣ ತೊಡಗಿಸಬೇಡಿ. ನಿಮ್ಮ ಒಳಿತಿಗೆ ದಾರಿ ಇದೆ.

ಅದೃಷ್ಟ ಸಂಖ್ಯೆ:8

 

 

 

 

 

 

ಸಿಂಹ

ಮಂಗಳಮಯವಾದ ಬೆಳಗಿನ ಅಲೆಗಳು ನಿಮ್ಮ ಬಾಳಿನಲ್ಲಿ ಸಂತೋಷ ತರುವವು. ಆದರೆ ಆ ಸಂತೋಷವನ್ನು ಪೂರ್ಣವಾಗಿ ಅನುಭವಿಸಲು ಶನಿ ಬಿಡುವುದಿಲ್ಲ. ಹಾಗಾಗಿ ಶನಿಯನ್ನು ಆರಾಧಿಸಿ ಅವರ ಕೃಪಾಕಟಾಕ್ಷ ಪಡೆಯುವುದು ಒಳ್ಳೆಯದು. ಬಾಸ್‌ ಬಗ್ಗೆ ಗೌರವವಿರಲಿ. ಆದರೆ ಅವರ ಬಳಿ ನಿಮ್ಮ ಕಷ್ಟ ಸುಖ ಹಂಚಿಕೊಳ್ಳಬೇಡಿ. ನಿಮ್ಮ ದೌರ್ಬಲ್ಯವನ್ನು ಅವರು ಬಂಡವಾಳ ಮಾಡಿಕೊಂಡು ನಿಮ್ಮನ್ನು ಆಟ ಆಡಿಸುವ ಸಾಧ್ಯತೆ ಇದೆ. ಗುರು ಮಂತ್ರ ಪಠಿಸಿ. ಗುರು ಸರಿ ಮಾರ್ಗ ತೋರುವನು.

ಅದೃಷ್ಟ ಸಂಖ್ಯೆ:5

 

 

 

 

ಕನ್ಯಾ

ವಿಶೇಷ ಅಧ್ಯಯನ ನಡೆಸಬೇಕಾದ ನಿಮ್ಮ ಮನದಿಂಗಿತ ಸಫಲವಾಗಲು ಕಾಲ ಸೂಕ್ತವಾಗಿದೆ. ಹಿರಿಯ ಮಹಿಳೆಯೋರ್ವರಿಂದ ಆತಂಕಗಳೆಲ್ಲ ನಿವಾರಣೆಯಾಗಲಿದೆ. ವಿಷ್ಣು ಸಹಸ್ರನಾಮವನ್ನು ತಪ್ಪದೆ ಪಠಿಸಿ.ಮನದಲ್ಲಿರುವ ಯೋಜನೆಗಳಿಗೆ ವಿಶೇಷವಾದ ತಾರ್ಕಿಕ ಅಂತ್ಯ ಸಿಗಲಿದೆ. ನಿಮ್ಮ ಬಾಳಿನಲ್ಲಿ ಸಂತೋಷ ಉಂಟು ಮಾಡುವ ಘಟನೆಗಳು ನಡೆಯುವವು. ಗುರುವಿನ ಶುಭ ದೃಷ್ಟಿಯಿಂದ ಮನೋಕಾಮನೆಗಳು ಪೂರ್ಣಗೊಳ್ಳುವವು.

ಅದೃಷ್ಟ ಸಂಖ್ಯೆ:4

 

 

 

ತುಲಾ

ಎಲ್ಲ ಸಮಯ ಒಂದೇ ತೆರನಾಗಿರುವುದಿಲ್ಲ ಎನ್ನುವುದಕ್ಕೆ ಇಂದಿನ ಘಟನೆಗಳೇ ಸಾಕ್ಷಿಯಾಗಿ ನಿಲ್ಲುವವು. ಕೆಲವರು ನಿಮ್ಮ ಮೇಲೆ ದುಷ್ಟ ಶಕ್ತಿಯ ಪ್ರಯೋಗ ಮಾಡುವ ಹವಣಿಕೆಯಲ್ಲಿದ್ದಾರೆ. ಆದಷ್ಟು ಹೊರಗಡೆ ಆಹಾರ ಸೇವಿಸಬೇಡಿ. ನೀವು ಬಹಳ ಭಾವುಕ ಸ್ವಭಾವದವರು. ನಿಮ್ಮನ್ನು ಯಾರಾದರೂ ಹೊಗಳಿದರೆ ನಿಮ್ಮ ಅಂತರಂಗವನ್ನೆಲ್ಲಾ ಅವರ ಮುಂದೆ ತೋಡಿಕೊಳ್ಳುವಿರಿ. ಇದರಿಂದ ನೀವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಹೊರಗಿನ ಜನರೊಂದಿಗೆ ಮಾತನಾಡುವಾಗ ಎಚ್ಚರದಿಂದಿರಿ.

ಅದೃಷ್ಟ ಸಂಖ್ಯೆ:5

 

ವೃಶ್ಚಿಕ

ಆತ್ಮಸ್ಥೈರ್ಯವೇ ನಿಮ್ಮ ದಿವ್ಯಮಂತ್ರವಾಗಿರಲಿ. ಇನ್ನಷ್ಟು ಆತ್ಮಶಕ್ತಿ ವೃದ್ಧಿಸಿಕೊಂಡು ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಕುಟುಂಬದವರ ಅಸಹಕಾರ ಕಡಿಮೆ ಮಾಡಿಕೊಳ್ಳಲು ಶಿವ ಪಂಚಾಕ್ಷ ರಿ ಮಂತ್ರ ಪಠಿಸಿ. ಗುರುವಿನ ಕೃಪೆಯಿಂದ ಹಮ್ಮಿಕೊಂಡ ಕಾರ್ಯಗಳೆಲ್ಲವೂ ಯಶಸ್ಸಿನತ್ತ ಸಾಗುವವು. ಕೆಲಸದ ಒತ್ತಡದಲ್ಲಿ ಕೆಲವೊಮ್ಮೆ ಶಿರೋವೇದನೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಆ ಸಂದರ್ಭದಲ್ಲಿ ಒಂದೆಡೆ ಕುಳಿತು ದೀರ್ಘ ಉಸಿರಾಡಿ. ಒಳಿತಾಗುವುದು.

ಅದೃಷ್ಟ ಸಂಖ್ಯೆ:8

 

 

 

ಧನುಸ್ಸು

ನಿಮ್ಮ ಯಶಸ್ಸನ್ನು ಕಂಡ ನಿಮ್ಮ ವಿರೋಧಿಗಳು ನಿಮ್ಮ ಬಳಿ ಅನ್ಯೋನ್ಯತೆಯನ್ನು ಪ್ರದರ್ಶಿಸುತ್ತಲೆ ನಿಮ್ಮ ವಿರುದ್ಧ ಕೆಲಸ ಮಾಡುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಇರಿ. ಗುರು ರಾಘವೇಂದ್ರ ಸ್ವಾಮಿಯನ್ನು ಮನಸಾ ಭಜಿಸಿ ಒಳಿತಾಗುವುದು.ನೀವು ನಿರೀಕ್ಷಿಸಿದ ವರ್ತಮಾನ ನಿಮಗೆ ಬರುವುದು. ಬಹುದಿನದಿಂದ ತಾಕಲಾಟಕ್ಕೆ ಬಿದ್ದ ಮನಸ್ಸಿಗೆ ಕೊಂಚ ನೆಮ್ಮದಿ ದೊರೆಯುವುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.

ಅದೃಷ್ಟ ಸಂಖ್ಯೆ:9

 

 

 

 

ಮಕರ

ಸುಳಿಯ ವಿರುದ್ಧ ಈಜಾಟ ನಡೆಸಿ ಸುಸ್ತಾಗದಿರಿ. ಕುಲದೇವರನ್ನು ಮನಸಾ ಸ್ಮರಿಸಿ. ಮನೆಯ ಸದಸ್ಯರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿಕೊಂಡಲ್ಲಿ ಅನುಕೂಲವಾಗುವುದು. ಖರ್ಚು ಕಡಿಮೆ ಮಾಡಿಕೊಳ್ಳಿ.ಆಕರ್ಷಣೆಯ ಸೆಳೆತಕ್ಕೆ ಸಿಕ್ಕಿ ಬೀಳದಿರಿ. ದಾರಿ ತಪ್ಪಿಸುವ ಮಾಯೆ ನಿಮ್ಮನ್ನು ಬಹುವಾಗಿ ಕಾಡಲಿದೆ. ಆಂಜನೇಯ ದೇವರಲ್ಲಿ ಪ್ರಾರ್ಥನೆ ಮಾಡಿ ಮತ್ತು ಮನೆಯ ಸಮೀಪವಿರುವ ದುರ್ಗಾ ದೇವಿ ಮಂದಿರಕ್ಕೆ ಭೇಟಿ ನೀಡಿ.

ಅದೃಷ್ಟ ಸಂಖ್ಯೆ:7

 

 

 

 

 

ಕುಂಭ

ಭಾರಿ ನಿರೀಕ್ಷೆಯ ಯೋಜನೆಯನ್ನು ಅತುರದ ನಿರ್ಧಾರದಿಂದ ಆರಂಭಿಸದಿರಿ. ಸಾಡೇಸಾತ್‌ ಶನಿಯ ಪ್ರಭಾವವಿದ್ದು ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ನಿಮ್ಮ ಪ್ರಾಮಾಣಿಕತೆಯೇ ನಿಮಗೆ ದಾರಿದೀಪವಾಗುವುದು.ಗುರುವಿನ ಬಲವಿದೆ ಎಂದು ವರ್ಚಸ್ಸಿಗೆ ಧಕ್ಕೆ ತಂದುಕೊಳ್ಳುವ ಕೆಲಸ ಮಾಡದಿರಿ. ಹಣ ಇದ್ದಾಗ ಎಲ್ಲರೂ ನೆಂಟರು ಹಾಗಾಗಿ ನಿಮ್ಮಲ್ಲಿರುವ ಹಣ ಕೆಲವರಿಗೆ ಅಸೂಯೆಯನ್ನುಂಟು ಮಾಡಿದೆ. ಅದನ್ನು ಹೇಗಾದರೂ ಪಡೆಯಲು ನಿಮ್ಮನ್ನು ವಿವಿಧ ರೀತಿಯಲ್ಲಿ ಹೊಗಳುವರು. ಎಚ್ಚರದಿಂದ ಇರಿ.

ಅದೃಷ್ಟ ಸಂಖ್ಯೆ:2

 

ಮೀನ

ವಿರೋಧಿಯೊಬ್ಬರ ಕುತಂತ್ರ ಬಯಲಿಗೆ ಬರುವುದು. ಇದರಿಂದ ನಿಮ್ಮ ಒಳ್ಳೆಯತನಕ್ಕೆ ಹೆಚ್ಚು ಬೆಂಬಲ ಸಿಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸರಾಗವಾಗಿ ನಡೆಯುವವು.ಅನವಶ್ಯಕ ಗೊಂದಲಗಳನ್ನು ಸೃಷ್ಟಿಸಿ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಯುವುದು. ಮಾತಾ ದುರ್ಗಾ ದೇವಿಯನ್ನು ಪ್ರಾರ್ಥಿಸಿ. ದೇವಿ ನಿಮಗೆ ಅಭಯ ಹಸ್ತ ನೀಡುವಳು. ಹಣಕಾಸು ಕೂಡಾ ಬರುವುದು.

ಅದೃಷ್ಟ ಸಂಖ್ಯೆ:1

 

 

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?

#dinabhavishya #daily-horoscope-kannada #astrology #bhavishya

Tags