ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನಭವಿಷ್ಯ: 20 ಅಕ್ಟೋಬರ್ 2019, ಭಾನುವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯಲಿ…..

 ಮೇಷ

 ಕಛೇರಿಯಲ್ಲಿ ನೀವು ಅಂದುಕೊಂಡಂತೆ  ನಡೆಯುವುದಿಲ್ಲ ಆದರೂ ತಾಳ್ಮೆಯಿಂದ ಇರಿ. ಇತರರೊಂದಿಗೆ ಅದರ ಚರ್ಚೆ ಸಲ್ಲದು ಹಾಗು ನಿಮ್ಮ ಅಧಿಕಾರಿಗಳ ಬಗ್ಗೆ ಇತರರೊಂದಿಗೆ ಚರ್ಚೆ ಸಲ್ಲದು. ಶಿಸ್ತು ಈ ದಿನ ನಿಮಗೆ ಕಿರಿಕಿರಿ ಎನಿಸುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆಯಾಗುವುದು.  ಅತ್ಯಂತ ಲವಲವಿಕೆ ಹಾಗು ಚಟುವಟಿಕೆಗಳಿಂದ ಕೂಡಿರಿ. ನಿಮ್ಮ ಕಲಾತ್ಮಕ ಶಕ್ತಿಗೆ ಕೊನೆಯೇ ಇಲ್ಲ. ಎಲ್ಲದರಲ್ಲೂ ಮನ್ನುಗ್ಗುವಿರಿ. ಎಲ್ಲಿದ್ದರೂ ಗುಂಪಿನಲ್ಲಿ ಕಾಣಿಸಿಕೊಳ್ಳುವಿರಿ.

 

 

 

 

 

 

 

ವೃಷಭ

ಜನರ ದೃಷ್ಟಿ ಹೆಚ್ಚಾಗಬಹುದು. ನಿಮ್ಮ ಮನೆಯಲ್ಲಿ ಸಾಮರಸ್ಯ ತರಲು ನಿಕಟ ಸಹಕಾರದೊಂದಿಗೆ ಕೆಲಸ ಮಾಡಬೇಕು. ನಿಮ್ಮ ಪ್ರೇಮಿಯ ಜೊತೆ ಹೊರಹೋದಾಗ ನಿಮ್ಮ ರೂಪ ಮತ್ತು ವರ್ತನೆಯಲ್ಲಿನೈಜತೆಯಿರಲಿ. ಇತರರು ನಿಮ್ಮ ತುಂಬಾ ಸಮಯ ತೆಗೆದುಕೊಳ್ಳಬಹುದು – ಅವರಿಗಾಗಿ ನೀವು ಯಾವುದೇ ಬದ್ಧತೆಯನ್ನು ಮಾಡುವ ಮೊದಲು ನಿಮ್ಮ ಕೆಲಸಕ್ಕೆ ತೊಂದರೆಯಾಗದು ಮತ್ತು ಅವರು ನಿಮ್ಮ ದಯೆ ಮತ್ತು ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. 

 

 

 

 

 

 

 

ಮಿಥುನ

ಯುವಕರನ್ನು ಹೊಂದಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಳ್ಳೆಯ ಸಮಯ. ಇಂದು ನೀವು ಕುರುಡು ಪ್ರೀತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಒಂದು ಹೊಸ ವ್ಯಾಪಾರ ಪಾಲುದಾರಿಕೆಯನ್ನು ಪರಿಗಣಿಸುತ್ತಿದ್ದಲ್ಲಿ – ನೀವು ಯಾವುದೇ ಬದ್ಧತೆಯನ್ನುಮಾಡುವ ಮೊದಲು ಎಲ್ಲಾ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳುವುದು ಅಗತ್ಯ. ಸಮಸ್ಯೆಗಳನ್ನು ಹತ್ತಿಕ್ಕುವ ಮನಸ್ಸಿರುವವರೆಗೂ ಯಾವುದೂ ಅಸಾಧ್ಯವಲ್ಲ. ಇದು ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನವಾಗಲಿದೆ. ನೀವು ನಿಜವಾದ ಭಾವಪರವಶತೆಯನ್ನು ಅನುಭವಿಸುತ್ತೀರಿ.

 

ಕಟಕ

ನಿಮ್ಮೆಲ್ಲಾ ಬದ್ಧತೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ನಿಮ್ಮ ಕುಟುಂಬದ ಸದಸ್ಯರು ಕಡ್ಡಿಯನ್ನು ಗುಡ್ಡ ಮಾಡುವ ಸಾಧ್ಯತೆಯಿದೆ. ಪ್ರಣಯ ಸಂಬಂಧದಲ್ಲಿ ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ. ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರುತ್ತದೆ. ನಿಮ್ಮ ಮನಸ್ಥಿತಿ ದಿನವಿಡೀಚೆನ್ನಾಗಿರುತ್ತದೆ. ಅನಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ನಿಮ್ಮ ಸಂಗಾತಿಯ ಕಳಪೆಆರೋಗ್ಯ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು, ಆದರೆ ನೀವು ಹೇಗಾದರೂ ಮಾಡಿ ಎಲ್ಲವನ್ನೂ ನಿರ್ವಹಿಸುತ್ತೀರಿ.

 

 

 

 

 

 

ಸಿಂಹ

ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ನಿಮ್ಮ ಹೆಚ್ಚುವರಿ ಹಣವನ್ನು ಒಂದು ಸುರಕ್ಷಿತ ಸ್ಥಳದಲ್ಲಿರಿಸಿ ಹಾಗೂ ಇದು ಮುಂದಿನ ಕಾಲದಲ್ಲಿ ನಿಮಗೆ ಒಳ್ಳೆಯ ಆದಾಯ ತರುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ಸಹಾಯ ಮಾಡಿದ ಸಂಬಂಧಿಗಳಿಗೆ ನಿಮ್ಮಕೃತಜ್ಞತೆಯನ್ನುವ್ಯಕ್ತಪಡಿಸಿ. ನಿಮ್ಮ ಸಣ್ಣ ಕೃತಜ್ಞತೆ ಅವರಿಗೆ ಚೈತನ್ಯ ನೀಡುತ್ತದೆ. ಕೃತಜ್ಞತೆ ಜೀವನದ ಸೊಗಸನ್ನು ಹೆಚ್ಚಿಸುತ್ತದೆ ಮತ್ತು ಕೃತಘ್ನತೆ ಅದಕ್ಕೆ ಕಲೆಗಳನ್ನು ಹಚ್ಚುತ್ತದೆ. ನಿಮ್ಮ ಸಂಬಂಧದ ಆ ಎಲ್ಲಾ ದೂರುಗಳು ಮತ್ತು ದ್ವೇಷಗಳು ಈ ಅದ್ಭುತವಾದ ದಿನದಂದು ಕಣ್ಮರೆಯಾಗುತ್ತವೆ. ಹೊಸ ಯೋಜನೆ ಮತ್ತು ವೆಚ್ಚಗಳನ್ನು ಮುಂದೂಡಿ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ನೀವು ನಿಮ್ಮ ಸಂಗಾತಿಯೊಡನೆ ಒಂದು ಒತ್ತಡದ ಸಂಬಂಧವನ್ನು ಹೊಂದಿರುತ್ತೀರಿ ಮತ್ತು ಮುಂದೆ ಇದು ಅಗತ್ಯಕ್ಕಿಂತ ಹೆಚ್ಚು ಕಾಲ ನಡೆಯುತ್ತದೆ.

 

 

 

ಕನ್ಯಾ

ಸ್ವಲ್ಪ ಮುಂಗೋಪಿಗಳಾದ ನೀವು ಹೆಚ್ಚು ಶಾಂತಿಯನ್ನು ಕಾಯ್ದುಕೊಳ್ಳಬೇಕಿದೆ. ಏಕೆಂದರೆ ಹೋಗುವ ದಾರಿಯಲ್ಲಿ ಅಪರಿಚಿತರು ಒರಟುತನದಿಂದ ವರ್ತಿಸಿ ನಿಮಗೆ ಕೋಪ ತರಿಸುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗದ ವಿಚಾರದಲ್ಲಿ ಮಕ್ಕಳಿಗೆ ಅನುಕೂಲಕರವಾದ ವಾತಾವರಣ ಮೂಡಿಬರಲಿದೆ. ಅವರ ಕಾಮನೆಗಳು ಪೂರ್ಣಗೊಳ್ಳುವ ಲಕ್ಷ ಣಗಳು ಗೋಚರಿಸುತ್ತವೆ. ಕುಲದೇವತಾ ಆರಾಧನೆಯಿಂದ ಹೆಚ್ಚು ಅನುಕೂಲವಾಗುವುದು.  ಆಕಾಶಕ್ಕೆ ಏಣಿ ಹಾಕುವ ದುಃಸಾಹಸಕ್ಕೆ ಇಳಿಯಬೇಡಿ. ಮನೆಗೆದ್ದು ಮಾರುಗೆಲ್ಲು ಎನ್ನುವಂತೆ ಮನೆಯ ಸದಸ್ಯರ ವಿಚಾರಧಾರೆಗಳನ್ನು ಗೌರವಿಸಿ. ಅವರು ಸಂತಸದಿಂದ ಇರುವಂತೆ ನೋಡಿಕೊಳ್ಳಿ. 

 

 

 

 

ತುಲಾ

ಹತ್ತಿರದವರಿಂದಲೇ ಮೋಸ ಹೋಗಿ ಮನಸ್ಸಿಗೆ ಆಘಾತವಾಗುವ ಸಂಭವವಿದೆ. ಈ ಬಗ್ಗೆ ಎಚ್ಚರದಿಂದ ಇರಿ. ಯಾರನ್ನೇ ಆಗಲಿ ದಿಢೀರನೇ ನಂಬದಿರಿ. ಗುರುವಿನ ಕೃಪೆಯಿಂದ ಹೆಚ್ಚಿನ ಹಾನಿ ಆಗುವುದಿಲ್ಲ. ವಂಶಪಾರಂಪರ‍್ಯದಿಂದ ಬಂದ ವೃತ್ತಿಯಲ್ಲಿ ಗೌರವ ಕೀರ್ತಿ ಪಡೆಯುವಿರಿ. ಸಾಮಾಜಿಕ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ. ಗುರುವಿನ ಸ್ತೋತ್ರ ಪಠಿಸಿ. ಗುರು ಹಿರಿಯರ ಅಶೀರ್ವಾದ ಪಡೆಯಿರಿ.
ನಿಮ್ಮನ್ನು ಬೆಸ್ತು ಬೀಳಿಸುವ ಸಾಧ್ಯತೆಗಳು ಹೇರಳವಾಗಿವೆ. ಹಾಗಾಗಿ ಅನಗತ್ಯ ವಿಷಯಗಳ ಬಗ್ಗೆ ಹೆಚ್ಚು ಕುತೂಹಲ ಬೆಳಸಿಕೊಳ್ಳದಿರಿ. ದಿನನಿತ್ಯದ ಕಾಯಕದಲ್ಲಿ ತಲ್ಲೀನರಾದಲ್ಲಿ ಹೆಚ್ಚಿನ ತೊಂದರೆ ಇಲ್ಲ. 

 

ವೃಶ್ಚಿಕ

ಸಾಫಲ್ಯತೆಗಳು ಒಂದೇ ಏಟಿಗೆ ಸಿಗಬೇಕೆಂಬ ನಿಮ್ಮ ಯೋಜನೆ ಸಾಧುವಾದರೂ ಅದಕ್ಕೆ ಪೂರಕವಾದ ಕ್ರಿಯಾಶೀಲತೆ ರೂಢಿಸಿಕೊಳ್ಳಿ. ಮಕ್ಕಳು ಮತ್ತು ಮಡದಿ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಕಷ್ಟದಲ್ಲಿರುವವರಿಗೆ ಪುಕ್ಕಟೆ ಸಲಹೆ ಕೊಡುವವರು ಅನೇಕ ಮಂದಿ. ಆದರೆ ನಿಮ್ಮ ಕಷ್ಟಕ್ಕೆ ಮರುಗಿ ಸಹಕಾರ ನೀಡುವ ಜನ ವಿರಳ. ಆದರೆ ದೈವದ ಅನುಗ್ರಹದಿಂದ ನಿಮಗೆ ಒಳಿತಾಗುವುದು.  ಕಷ್ಟ ಬಂದಾಗ ವೆಂಕಟರಮಣನನ್ನು ಧ್ಯಾನಿಸುವುದು ಸಹಜ. ಅಂತೆಯೆ ಭಗವಂತನು ಸಹ ತನ್ನ ಭಕ್ತರನ್ನು ಕೈಬಿಡುವುದಿಲ್ಲ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ವಿಷ್ಣು ಮಂದಿರಕ್ಕೆ ತುಳಸಿ ಮಾಲೆ ಅರ್ಪಿಸಿ. 

 

 

 

ಧನುಸ್ಸು

ಹೋರಾಟದಲ್ಲಿ ಗುರುತಿಸಿಕೊಳ್ಳುವ ಜವಾಬ್ದಾರಿ ಬರಬಹುದು. ಸಾಧಕ ಬಾಧಕಗಳನ್ನು ಚಿಂತಿಸಿ ಜವಾಬ್ದಾರಿಯನ್ನು ವಹಿಸಿಕೊಳ್ಳಿ ಮತ್ತು ವಹಿಸಿಕೊಂಡ ಕೆಲಸದಲ್ಲಿ ಯಶಸ್ಸು ಹೊಂದುವಿರಿ.  ಅತಿಥಿಗಳ ಆದರಾತಿಥ್ಯದಲ್ಲಿ ದಿನದ ಬಹುಪಾಲು ಕಳೆಯುವ ಸಾಧ್ಯತೆಗಳು ಇರುತ್ತದೆ. ಅದರ ಸಂಗಡ ನಿಮ್ಮ ವೈಯಕ್ತಿಕ ಆಗುಹೋಗುಗಳ ಕಡೆಯೂ ಲಕ್ಷ್ಯ ಕೊಡುವುದು ಒಳ್ಳೆಯದು. ಖರ್ಚು ಹೆಚ್ಚಾಗುವ ಸಂಭವವಿದೆ.  ಹೊಸ ಹೊಸ ಸಾಹಸಗಳಿಗೆ ಕೈಹಾಕುವುದರಿಂದ ಅದರಲ್ಲಿ ಯಶಸ್ಸನ್ನು ಕಾಣುವಿರಿ. ಬಂಧು ಬಾಂಧವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು. 

 

 

 

 

ಮಕರ

ಗೆಳೆಯನೊಬ್ಬನ ಸಹಾಯ ನಿಮಗೆ ದೊರೆಯಲಿರುವುದು ಮತ್ತು ಭಗವಂತ ನಿಮ್ಮ ಮೇಲೆ ಅಪಾರ ಕರುಣೆ ತೋರುವುದರಿಂದ ಆರಂಭಿಸಿದ ಕಾರ್ಯಗಳೆಲ್ಲವೂ ಕೈಗೂಡುವವು.  ಊರದೇವರ ನೋಡಬೇಕಣ್ಣ ಎಂದರು ಅನುಭಾವಿಗಳು. ಅಂತೆಯೆ ಇಂದಿನ ಸುಸ್ಥಿತಿಗೆ ಕುಲದೇವರ ಅನುಗ್ರಹವೇ ಕಾರಣ. ಹಾಗಾಗಿ ಕುಲದೇವರ ಸನ್ನಿಧಿಗೆ ಹೋಗಿ ಬನ್ನಿ . ಎಲ್ಲಾ ಕೆಲಸಗಳಲ್ಲೂ ಜಯ ಗಳಿಸುವಿರಿ. 

 

 

 

 

 

 

ಕುಂಭ

ನಿಮ್ಮ ತಾಂತ್ರಿಕ ಪರಿಜ್ಞಾನ ಪರಿಪಕ್ವವಾಗುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅದನ್ನು ನಿಭಾಯಿಸಲು ಹಣದ ಅಡಚಣೆ ಉಂಟಾಗುವುದು. ನಿಮ್ಮ ಆಪ್ತ ಗೆಳೆಯರೇ ನಿಮಗೆ ಸಹಾಯ ಮಾಡಲು ಹಿಂಜರಿಯುವರು.  ಆಳು ಮಾಡಿದ್ದು ಹಾಳು ಎನ್ನುವ ಗಾದೆ ಮಾತನ್ನು ನೆನಪಿಗೆ ತರುವ ಘಟನೆ ಜರುಗುವುದು. ಹಾಗಾಗುವ ಮುನ್ನ ನೀವೇ ಆ ಕೆಲಸ ಮಾಡಿದಲ್ಲಿ ಯಶಸ್ಸು ದೊರೆಯುವುದು. ಒತ್ತಡದಲ್ಲಿ ಪರರಿಗೆ ವಹಿಸಿದ ಕೆಲಸ ಪೂರ್ಣಗೊಳ್ಳುವುದಿಲ್ಲ.

 

 

 

ಮೀನ

ನಿಮ್ಮ ದ್ವಂದ್ವ ನಿಲುವಿನ ವಿಚಾರಧಾರೆಯಿಂದ ನಿಮ್ಮನ್ನು ಇತರರು ತಪ್ಪಾಗಿ ಅಥೈರ್‍ಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಪರಶಿವನ ಧ್ಯಾನ ಮಾಡಿ. ಯಾರೊಟ್ಟಿಗೂ ಅನವಶ್ಯಕ ಮಾತುಗಳನ್ನು ಆಡದಿರಿ.  ಕಾಲಚಕ್ರದ ಉರುಳುವಿಕೆಯ ದೆಸೆಯಿಂದ ಕೆಲವು ಕಾರ್ಯಗಳು ದಿಢೀರನೆ ಯಶಸ್ಸು ಹಾಗೂ ಬದಲಾವಣೆ ತಂದುಕೊಡುವುದು. ಇದರಿಂದ ಮಾನಸಿಕ ನೆಮ್ಮದಿ, ಸಂತೋಷವುಂಟಾಗುವುದು. ಮಡದಿ ಮಕ್ಕಳ ಸಂಭ್ರಮಕ್ಕೆ ಕಾರಣವಾಗುವುದು. 

 

 

ಹಳದಿ ಬಣ್ಣದ ಉಡುಪುಗಳಿಗೆ ಈಗ ಭಾರೀ ಡಿಮ್ಯಾಂಡ್…!!!

#dinabhavishya #daily-horoscope-kannada #astrology #bhavishya

Tags