ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನ ಭವಿಷ್ಯ: 08 ನವೆಂಬರ್ 2019 ಶುಕ್ರವಾರ

ನಿಮ್ಮ ಭವಿಷ್ಯ, ನಿಮ್ಮ ಕೈಯಲ್ಲಿ

ಮೇಷ

ಸಾಮಾಜಿಕವಾಗಿ ವಿಶೇಷವಾದುದನ್ನು ಸಾಧಿಸಿ ಪ್ರಶಂಸೆಗಳಿಸಲು ಗ್ರಹಗಳು ಸಹಕಾರ ನೀಡುವವು. ಅಂತೆಯೇ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

ಹಣಕಾಸಿನ ನೆರವು ವಿವಿಧ ಮೂಲಗಳಿಂದ ಹರಿದು ಬರುವುದು. ಅವಸರದ ನಿರ್ಣಯ ತೆಗೆದುಕೊಂಡು ನಂತರ ಕೈ ಕೈ ಹಿಸುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರ್ಯ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ಅದೃಷ್ಟ ಸಂಖ್ಯೆ:2

ವೃಷಭ

ಅನ್ಯರ ಮಾತು ಕೇಳಿ ನಿಮಗೆ ತೊಂದರೆ ಕೊಡುತ್ತಿರುವ ಮೇಲಾಧಿಕಾರಿಗೆ ತಪ್ಪಿನ ಅರಿವಾಗಲಿದೆ. ಈ ಬಗ್ಗೆ ಅವರು ನಿಮ್ಮ ಬಳಿ ಕ್ಷ ಮೆಯಾಚಿಸುವ ಸಾಧ್ಯತೆ ಇದೆ. ಹಾಗಂತ ನೀವು ಅಹಂಕಾರ ಪಡುವುದು ಸೂಕ್ತವಲ್ಲ.

ಆಂಜನೇಯ ಸ್ವಾಮಿ ಮಂತ್ರ ಜಪಿಸಿ.ದೂರದ ಬೆಟ್ಟ ನುಣ್ಣಗೆ ಎಂಬುದು ತಿಳಿದಿದ್ದರೂ ಪುನಃ ಪುನಃ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಸೋಲನ್ನು ಅನುಭವಿಸುವಿರಿ. ಅದೃಷ್ಟ ಸಂಖ್ಯೆ:4

ಮಿಥುನ

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಕನ್ನಡಿಯ ಗಂಟಿನಂತೆ ತೋರುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಹಿರಿಯರ ಅಶೀರ್ವಾದ ಆಶೀರ್ವಾದ ಪಡೆದರೆ ಉತ್ತಮ ಫಲ ಕಾಣುವಿರಿ.

ನಿಮ್ಮಿಂದ ದೂರವಾಗಿದ್ದ ವ್ಯಕ್ತಿಗಳೇ ಪುನಃ ನಿಮ್ಮ ಬಳಿ ಬಂದು ಸ್ನೇಹದ ಹಸ್ತ ಚಾಚುವರು. ಅದೃಷ್ಟ ಸಂಖ್ಯೆ:4

ಕಟಕ

ಅಲೆದಾಡುವ ಶ್ರಮವೇ ಜಾಸ್ತಿ. ಆದರೂ ನಿರಾಶಾರಾಗದಿರಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುವುದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ನಿಮಗೆ ಅನುಕೂಲವಾಗುವುದು.

ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿದ್ದು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ. ಅದೃಷ್ಟ ಸಂಖ್ಯೆ:1

ಸಿಂಹ

ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕಚೇರಿಗೆ ಹೊರಡುವಾಗ ಐದು ಅಥವಾ ಹತ್ತು ನಿಮಿಷ ಮುಂಚೆಯೇ ಮನೆಯಿಂದ ಹೊರಡಿ.

ಅನಗತ್ಯ ಒತ್ತಡದಿಂದ ದೂರವಿರಿ. ಕೆಲಸಗಳು ಮನಸ್ಸಿಗೆ ನೆಮ್ಮದಿ ನೀಡುವವು. ಮೇಲಧಿಕಾರಿಗಳಿಂದ ಕಿರುಕುಳವಿದ್ದರೂ ತಾಳ್ಮೆ ಕಳೆದುಕೊಳ್ಳಬೇಡಿ.  ಅದೃಷ್ಟ ಸಂಖ್ಯೆ:1

ಕನ್ಯಾ

ಎಷ್ಟೇ ಹಣ ಇದ್ದರೂ ಸಾಲದು ಎಂಬ ಭಾವನೆ ಬರಬಹುದು. ಧನಕಾರಕ ಗುರು ಅಷ್ಟಮ ಸ್ಥಾನದಲ್ಲಿದ್ದು, ಹಣ ನೀರಿನಂತೆ ಖರ್ಚಾಗುವುದು.

ಗುರು ಸ್ತೋತ್ರ ಪಠಿಸಿ.ಗೆಳೆಯರನ್ನು ಪ್ರೀತಿಯಿಂದ ಕಾಣಬೇಕು. ಸ್ವಂತ ಮಕ್ಕಳನ್ನು ಸಹ ಸ್ನೇಹಿತರಂತೆ ಕಾಣಬೇಕು. ಅವರ ತಪ್ಪುಗಳನ್ನು ಕ್ಷ ಮಿಸುವ ಔದಾರ್ಯ ಇಟ್ಟುಕೊಂಡರೆ ಬಾಂಧವ್ಯ ಗಟ್ಟಿಗೊಳ್ಳುವುದು. ಅವರನ್ನು ನಗು ನಗುತ್ತಾ ತಿದ್ದುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:2

ತುಲಾ

ಬಂಧುಗಳ ಒಳ ಜಗಳಗಳು ನಿಮ್ಮನ್ನು ಹೈರಾಣ ಮಾಡುವವು. ಯಾರೊಬ್ಬರ ಪರವಾಗಿ ನಿಂತರೂ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಬಹು ವಿವೇಚನೆಯಿಂದ ಪರಿಸ್ಥಿತಿ ನಿಭಾಯಿಸುವಿರಿ. ಇದಕ್ಕೆ ಗುರುವಿನ ಬೆಂಬಲ ಪಡೆಯಿರಿ.

ವೃಥಾ ಮನೋವ್ಯಾಕುಲ, ಅಂಜಿಕೆ, ಅಭದ್ರತೆಗಳು ಬೇಡ. ದುರ್ಗಾದೇವಿಯನ್ನು ಪ್ರಾರ್ಥಿಸಿ. ಗುರುವಿನ ಶುಭ ಆಶೀರ್ವಾದದಿಂದ ಒಳಿತಾಗುವುದು. ಆಹಾರ ದಾನ ಮಾಡಿ. ಅಗತ್ಯಕ್ಕೆ ತಕ್ಕಷ್ಟು ಹಣ ವಿನಿಯೋಗಿಸಿ. ಅದೃಷ್ಟ ಸಂಖ್ಯೆ:4

ವೃಶ್ಚಿಕ

 ಕೆಲಸಗಳು ಮಂದಗತಿಯಲ್ಲಿ ಸಾಗುವವು. ಹಣಕಾಸಿನ ಮುಗ್ಗಟ್ಟು ನಿಮ್ಮ ಮನೋಧೈರ್ಯವನ್ನು ಕುಗ್ಗಿಸುವುದು. ಶಿವ ಪಂಚಾಕ್ಷ ರಿ ಮಂತ್ರ ಜಪಿಸಿ.

ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.ಪ್ರತಿಯೊಬ್ಬರ ಮನೆಯ ದೋಸೆಯೂ ತೂತೇ. ಆದರೆ ನಿಮ್ಮ ಮನೆಯ ಕಾವಲಿಯೇ ತೂತಾಗಿರುವುದರಿಂದ ಅನ್ಯರ ವಿಚಾರಧಾರೆಗಳ ಕುರಿತು ಟೀಕೆ ಮಾಡಬೇಡಿ. ಮಾಡಿದರೆ ಅಪಹಾಸ್ಯಕ್ಕೆ ಗುರಿಯಾಗುವಿರಿ.
ಅದೃಷ್ಟ ಸಂಖ್ಯೆ:2

ಧನುಸ್ಸು

ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಶಾಲಾ ಕಾಲೇಜುಗಳಿಂದ ಬರಬೇಕಾಗಿದ್ದ ಗೌರವ ಧನ ಸದ್ಯದಲ್ಲಿಯೇ ನಿಮ್ಮ ಕೈ ಸೇರುವುದು.

ವಿವಾಹಕ್ಕೆ ಇನ್ನೂ ಕೆಲಕಾಲ ಕಾಯಬೇಕಾಗುವುದು. ನೀವು ಆದರಿಸುವ ಜನರಿಂದಲೇ ವಿಶ್ವಾಸದ್ರೋಹ ಆಗುವ ಸಾಧ್ಯತೆ ಇದೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದನ್ನು ತಿಳಿಯಿರಿ. ಗುರು ಹಿರಿಯರ ಮಾರ್ಗದರ್ಶನದಂತೆ ಮುನ್ನಡೆಯಿರಿ. ಇದರಿಂದ ನಿಮ್ಮ ಕಾರ್ಯಗಳು ಕೈಗೂಡುವವು. ಅದೃಷ್ಟ ಸಂಖ್ಯೆ:1

ಮಕರ

ಯಾವುದೋ ಮಾತಿನ ಭರದಲ್ಲಿ ನಿಮ್ಮ ಸ್ನೇಹಿತರಿಗೆ ಆಡಿದ ಮಾತಿನಿಂದ ಆತನು ನಿಮ್ಮಿಂದ ವಿಮುಖನಾಗಿರುವನು. ಈ ಬಗ್ಗೆ ಆತನೊಟ್ಟಿಗೆ ಮಾತನಾಡಿ ಇದ್ದ ವಿಷಯವನ್ನು ತಿಳಿಸಿ.

ನಿಮ್ಮ ಮೇಲಿನ ತಪ್ಪು ಭಾವನೆಯನ್ನು ಹೋಗಲಾಡಿಸಿಕೊಳ್ಳಿ.  ಸತ್ಯವಾದುದು ಯಾವಾಗಲೂ ಕಠೋರವಾಗಿರುತ್ತದೆ. ಅದು ನಿಮ್ಮ ಗೌರವ ಘನತೆಯನ್ನು ಎತ್ತಿಹಿಡಿಯುವುದು ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಅದೃಷ್ಟ ಸಂಖ್ಯೆ:1

ಕುಂಭ

ಭಗವಂತನ ಸೃಷ್ಟಿಯಲ್ಲಿ ಯಾವುದೂ ಉಪಯೋಗಕ್ಕೆ ಬರುವುದಿಲ್ಲ ಎಂಬ ಭಾವನೆ ತರವಲ್ಲ. ಸಮಯ ಬಂದರೆ ಸಣ್ಣ ಹುಲ್ಲುಕಡ್ಡಿಯಿಂದಲೂ ಸಹಾಯ ದೊರೆಯುವುದು. ಹಾಗಾಗಿ ಯಾರನ್ನು ದೂರ ಮಾಡಿಕೊಳ್ಳದಿರಿ.

ಎಷ್ಟೇ ತಾಳ್ಮೆಯಿಂದ ಇರಲು ಪ್ರಯತ್ನಿಸಿದರೂ ಈ ದಿನದ ಸನ್ನಿವೇಶ ನಿಮ್ಮನ್ನು ಕೆರಳುವಂತೆ ಮಾಡುವುದು. ವಿನಾಕಾರಣ ಮನೆ ಸದಸ್ಯರ ಮೇಲೆ ಅಸಹನೆ, ಕೋಪ ಕೂಗಾಟಗಳನ್ನು ಮಾಡದಿರಿ. ಕುಲದೇವರನ್ನು ಮನಸಾ ಸ್ಮರಿಸಿ.  ಅದೃಷ್ಟ ಸಂಖ್ಯೆ:9

ಮೀನ

ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರುವುದು. ಹೊಸ ಕೆಲಸದ ಕಾರ್ಯ ಯೋಜನೆ ನೀವು ತಿಳಿದಷ್ಟು ಸುಲಭವಾಗಿರುವುದಿಲ್ಲ. ಹಾಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು.

ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. . ಮನೆಯ ಸದಸ್ಯರೊಡನೆ ಸೌಹಾರ್ದತೆಯಿಂದ ಇರುವುದು ಒಳ್ಳೆಯದು.  ಅದೃಷ್ಟ ಸಂಖ್ಯೆ:9

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.

ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?

#dinabhavishya #daily-horoscope-kannada #astrology #bhavishya

Tags