ಬಾಲ್ಕನೀ ಭವಿಷ್ಯ

ಬಾಲ್ಕನಿ ವಾರಭವಿಷ್ಯ: 23-12-2018 ಭಾನುವಾರದಿಂದ 29-12-2018 ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ......

ಮೇಷನಿಮ್ಮ ಅತಿಯಾದ ಉತ್ಸಾಹವನ್ನು ನಿಯಂತ್ರಣದಲ್ಲಿಡಿ ಇಲ್ಲದೆಹೋದಲ್ಲಿ ಅನವಶ್ಯಕ ಮಾತಿಗೆ ನೀವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಮತ್ತು ಅದರಿಂದ ಕಿರಿಕಿರಿ ಅನುಭವಿಸುವಿರಿ. ಶಿಸ್ತನ್ನು ಪಾಲಿಸಿ. ನೀರಿನ ಇನ್ಫೆಕ್ಷನ್ ಆಗಬಹುದು. ತಾಯಿಗೆ ಅನಾರೋಗ್ಯ ಅಥವಾ ಮಾನಸಿಕ ಅಶಾಂತಿ. ವಾರದ ಮಧ್ಯಭಾಗದಿಂದ ಉತ್ತಮ. ರಿಯಲ್ ಎಸ್ಟೇಟ್ ಹಾಗು ಎಲೆಕ್ಟ್ರಿಕಲ್ ಉದ್ಯಮದವರಿಗೆ ಲಾಭದಾಯಕ. ವಿದ್ಯಾರ್ಥಿಗಳು ಅಧಿಕ ಶ್ರಮ ಪಡಬೇಕು. ಉಳಿದವರಿಗೂ ಶ್ರಮ ಹೆಚ್ಚು, ಆದಾಯ ಕಡಿಮೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ದಂಡ ತೆರುವಿರಿ. ಹಳೇಯ ವ್ಯಾಜ್ಯವೊಂದು ಉಲ್ಬಣಿಸಿ ಅವರ ಸನಿಹದವರಿಂದ/ಮಧ್ಯಮವರ್ತಿಗಳಿಂದ ಸಂಧಾನ.

ವೃಷಭ ಕುಟುಂಬದಲ್ಲಿ ಸಂತಸ, ಮಾತಿನ ಮೇಲೆ ಹಿಡಿತ ಇರಲಿ. ಕುಟುಂಬದ ಆರೋಗ್ಯ ವಿಷಯವಾಗಿ ಇಲ್ಲವೆ ಕುಟುಂಬ ಸದಸ್ಯರ ಅವಶ್ಯಕತೆಗಳಿಗೆ ಹಣ ಖರ್ಚು. ಮುಂದಿನ ಬಹು ದೊಡ್ಡ ಯೋಜನೆಗೆ ವಿಪರೀತ ಲೆಕ್ಕಾಚಾರ, ಚರ್ಚೆ ನಡೆಯುವುದು. ವಸ್ತ್ರಕ್ಕಾಗಿ ಖರ್ಚು. ದೇವಾಲಯ ಹಾಗು ಕುಟುಂಬದ ಸದಸ್ಯರ ಭೇಟಿ. ತಿನ್ನುವ ಆಹಾರದಿಂದ ವ್ಯತ್ಯಾಸವಾಗಿ ಅನಾರೋಗ್ಯವಾಗಬುಹುದು. ವಾರಾಂತ್ಯಕ್ಕೆ ಮಕ್ಕಳಿಂದ ಸಂತಸ. ಪ್ರಯಾಣಿಸುವ ವಾಹನಗಳಿಂದ ಕಿರಿಕಿರಿ ಇಲ್ಲವೆ ಚಾಲಕರಿಂದ ತೊಂದರೆ. ಸ್ವಚ್ಚತಾ ವಿಷಯವಾಗಿ ಇಲ್ಲವೆ ಖಾಲಿ ಪ್ರದೇಶಗಳಲ್ಲಿ ಮಾತಿನ ಚಕಮಕಿ ಇಲ್ಲವೆ ವ್ಯವಹಾರದಲ್ಲಿ ಮೋಸ ಹೋಗುವಿರಿ. ತಾಯಿ ನಿಮ್ಮ ಬೆಂಬಲಕ್ಕೆ ನಿಲ್ಲುವರು.

ಮಿಥುನ ಸಮಯ ಪಾಲನೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಶಿಸ್ತನ್ನು ಪಾಲಿಸುವಲ್ಲಿ ಹಿನ್ನಡೆ. ಹಿರಿಯರೊಂದಿಗೆ ಇಲ್ಲವೆ ಕೆಲ ಅಧಿಕಾರಿಗಳೊಂದಿಗೆ ಅನವಶ್ಯಕ ಮಾತುಕತೆ ಹಾಗು ಕಿರಿಕಿರಿ. ಆದರೂ ತಾಳ್ಮೆ ಕಳೆದುಕೊಳ್ಳದಿರಿ. ಬರಬೇಕಾಗಿರುವ ಹಣಕ್ಕಾಗಿ ಮಧ್ಯವರ್ತಿಗಳ ಮೋರೆ ಹೋಗುವಿರಿ. ತಿನ್ನುವ ಆಹಾರದಲ್ಲಿ ಏನ್ನಾದರೂ ಹುಡುಕುವಿರಿ ಹಾಗು ಊಟ ಅಥವಾ ಉಪಹಾರ ಸೇವಿಸುವಾಗ ಕುಟುಂಬದ ಸದಸ್ಯರೊಂದಿಗೆ ಮಾತಿನ ಚಕಮಕಿ. ವಿದ್ಯಾರ್ಥಿಗಳಿಗೆ ವಿದ್ಯೆಗಿಂತ ಈ ವಾರ ಇತರೆ ವಿಷಯಗಳ ಆಕರ್ಷಣೆಯಾಗುತ್ತದೆ.(ಸಿನೆಮಾ. ಶಾಪಿಂಗ್ ಇಲ್ಲವೆ ಪ್ರವಾಸ)  ವಾಹನ ಬದಲಾಯಿಸುವ ಚಿಂತನೆಯನ್ನು ಮುಂದೂಡುವಿರಿ. ನಿಮ್ಮ ಪ್ರಯತ್ನಗಳಿಗೆ ಅನೇಕ ಹೊಸ ಯೋಜನೆಗಳು ಹಾಗು ಐಡಿಯಾಗಳು ಇದ್ದರೂ ಕಾರ್ಯರೂಪಕ್ಕೆ ತರುವಲ್ಲಿ ವಿಳಂಬವಾಗುವ ವಾರ.

ಕಟಕ ಪ್ರಯಾಣದಿಂದ ಆಯಾಸವಾದೀತು. ವೃತಾ ಆರೋಪವೊಂದಕ್ಕೆ ಗುರಿಯಾಗುವಿರಿ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಹಾಗು ಆಟವಾಡುವಾಗ ಬಿದ್ದು ಪೆಟ್ಟಾಗಬಹುದು. ಸಹೋದರ/ಸಹೋದರಿಗೆ ನಷ್ಟ ಸೂಚಿತವಾರ(ಆರೋಗ್ಯ,ಹಣಕಾಸು) ಈ ವಾರ ಸಮಯಕ್ಕೆ ಸರಿಯಾಗಿ ಊಟಮಾಡಲು ಸಾಧ್ಯವಾಗದು. ಶುಭ ಸಮಾರಂಭವೊಂದಕ್ಕೆ  ಆಮಂತ್ರಣ ಇದ್ದರೂ ಹೋಗಲು ಹಿಂದೇಟು ಹಾಕುವಿರಿ. ಉದ್ಯಮಿಗಳಿಕಗೆ ಯಂತ್ರಗಳಿಂದ ತೊಂದರೆ. ಕೊಟ್ಟ ಮಾತಿಗೆ ಹಣ ಹಿಂದಿರುಗಿಸಲು ಪರದಾಡುವಿರಿ. ಸೋದರಮಾವನಿಂದ ಸುದ್ದಿ ಇಲ್ಲವೆ ಅವರನ್ನು ಭೇಟಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಈ ವಾರ ತರಗತಿಗಳಲ್ಲಿ ನಡೆದ ವಿಷಯವನ್ನು ಅರ್ಥೈಸಿಕೊಳ್ಳಲು ಪರೆದಾಡುವಿರಿ.

ಸಿಂಹ    ಈ ವಾರ ಕುಟುಂಬ ಸದಸ್ಯರ ಹಿರಿಯರೊಂದಿಗೆ ಶಿಸ್ತು ಹಾಗು ನೀತಿ ಭೋಧನೆಯ ಶಿಕ್ಷಣ ದೊರೆಯಲಿದೆ. ಇದರಿಂದ ಕೊಂಚ ಕಸಿವಿಸಿ ಅನುಭವಿಸುವಿರಿ. ತಂದೆಗೆ ಹಳೆಯ ಆರೋಗ್ಯ ಸಮಸ್ಯೆಯೊಂದು ಮರುಕಳಿಸಬಹುದು. ಎಲ್ಲರೊಂದಿಗೆ ತಾಳ್ಮೆಯಿಂದ ವರ್ತಿಸಿ. ಧನಾರ್ಜನೆಯ ವಾರವಾದರೂ ಖರ್ಚುಗಳು ನಿಮ್ಮನು ಹಿಂಬಾಲಿಸುತ್ತವೆ. ಉದ್ಯೋಗ ಕ್ಷೇತ್ರಗಳಲ್ಲಿ ನಿಮಗಿರುವ ಸ್ಥಾನ ಮಾನಗಳನ್ನು  ಹೆಚ್ಚಿಸಿಕೊಳ್ಳುವ ವಾರ. ಈ ವಾರ ತಾಯಿಯ ಮಾರ್ಗದರ್ಶನವನ್ನು ಪಾಲಿಸುವಿರಿ. ಹಳೆಯ ಸಾಲದ ಭಾದೆಗಳು ಈ ವಾರ ನಿಮ್ಮನ್ನು ಕಾಡಲಿದೆ. ವಿದ್ಯಾರ್ಥಿಗಳಿಗೆ ಎಂದಿನಂತೆ ಹಿನ್ನಡೆ ಹಾಗು ಆಲಸ್ಯ. ಶಿಕ್ಷಕರು ಹಾಗು ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆಯ ತಲೆ ಬಿಸಿ.

ಕನ್ಯಾವಾಹನ ಚಾಲನೆಯಲ್ಲಿ ಜಾಗರೂಕತೆ ವಹಿಸಿ,ರಾತ್ರಿ ಹೊತ್ತು ಈ ವಾರ ಪ್ರಯಾಣ ಬೇಡ. ಇಲ್ಲವೆ ಕೊಂಚ ಮಟ್ಟಿಗೆ ತೊಂದರೆ ಅನುಭವಿಸುವಿರಿ. ಭಾರಿ ವಾಹಾನಗಳಿಂದ ದೂರಯಿರಿ. ಕೋರ್ಟ್ ಕೇಸ್ ಗಳಲ್ಲಿ ಹಿನ್ನಡೆ ಇಲ್ಲವೆ ಹೊಸದೊಂದು ವಿಷಯವಾಗಿ ಕೋರ್ಟ್ ಮೆಟ್ಟಿಲು ಏರುವಿರಿ. ಮನೆಯ ಕೈ ತೋಟಕ್ಕೆ ಹಣ ಖರ್ಚು ಮಾಡುವಿರಿ. ಹಾಗು ಇತರರು ನಿಮ್ಮ ಕೈ ತೋಟ ಅಥವಾ ಕಲೆಯನ್ನು ಗುರುತಿಸಿ ಪ್ರಶಂಸಿಸುವರು. ಮಕ್ಕಳ ಬಗ್ಗೆ ವೃತಾ ಚಿಂತೆ. ಚೀಟಿ ವ್ಯವಹಾರ ಮಾಡುತ್ತಿದ್ದರೆ ಇಲ್ಲವೆ ಚೀಟಿ ಹಾಕಿದ್ದರೆ ಈ ವಾರ ಅದರಿಂದ ಮಾನಸಿಕ ನೆಮ್ಮದಿ ಹಾಳು. ವಾಹನವನ್ನು ಸರ್ವೀಸ್ ಗೆ ಕೊಟ್ಟಿದ್ದಲ್ಲಿ ಬಿಲ್ ನೋಡಿ ಹೌಹಾರುವಿರಿ.

ತುಲಾ ನಿಮ್ಮ ಸಂಗಾತಿಯ ಕುಟುಂಬದಿಂದ ಹಣಕಾಸಿನ ಸಹಾಯ ಅಥವಾ ಉಡುಗೊರೆಯೊಂದನ್ನು ನಿರೀಕ್ಷಿಸಬಹುದು. ಬಹುದೊಡ್ಡ ಪ್ರಯಾಣವೊಂದಕ್ಕೆ ಅಡಿಗಲ್ಲು ಹಾಕುವಿರಿ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಸಿಗುವ ವಾರ. ಧಾರ್ಮಿಕ ಕ್ಷೇತ್ರಗಳ ಭೇಟಿಗಾಗಿ ಖರ್ಚು. ಉದ್ಯೋಗದಲ್ಲಿ ಸ್ಪೂರ್ತಿದಾಯಕವಲ್ಲದ ವಾತಾವರಣ ನಿರ್ಮಾಣವಾಗಲಿದೆ. ನಿಮ್ಮ ಕಾರ್ಯಕ್ಷಮತೆ ಕಂಡು ಎಲ್ಲರೂ ನಿಮ್ಮ ವಿರುದ್ಧ ತಿರುಗಿ ಬಿಳಬಹುದು. ತಂದೆಗೂ ಸಹಾ ಅವರ ಕ್ಷೇತ್ರದಲ್ಲಿ ಕಿರಿಕಿರಿಯ ವಾರಾವರಣ. ಖುರ್ಚಿಯ ವಿಷಯವಾಗಿ ಚರ್ಚೆಯೊಂದು ನಡೆಯಲಿದೆ. ಸ್ತ್ರೀಯರಿಗಾಗಿ ಖರ್ಚು ಹಾಗು ಅವರೊಂದಿಗೆ ಕಾಲ ಕಳೆಯುವ ವಾರ.

ವೃಶ್ಚಿಕ ವಾರದ ಪ್ರಾರಂಭದಲ್ಲಿ ಇತರರ ಮಾತಿನಿಂದ ಘಾಸಿಯಾದೀತು ಇಲ್ಲವೆ ನಿಮ್ಮ ಮಾತಿನಿಂದ ಇತರರಿಗೆ ಘಾಸಿಮಾಡುವಿರಿ. ವಾರದ ಮಧ್ಯ ಭಾಗದಲ್ಲಿ ಯಾವುದಾದರೂ ಶಕ್ತಿ ಪೀಠದ ದರ್ಶನ ಲಭಿಸಲಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.  ವಾಹನ ಚಾಲನೆಯಲ್ಲಿ ಜಾಗರೂಕತೆ ವಹಿಸಿ. ವಾರದ ಮಧ್ಯ ಹಾಗು ವಾರಾಂತ್ಯಕ್ಕೆ ಉದ್ಯೋಗದಲ್ಲಿ ಕಾರ್ಯ ಕ್ಷಮತೆ ಹೆಚ್ಚುವುದು ಹಾಗು ಬರುವ ತೊಂದರೆಗಳನ್ನು ಸೂಕ್ಷ್ಮವಾಗಿ ನಿಭಾಯಿಸುವಿರಿ. ಮಕ್ಕಳಿಗೆ ಬುದ್ದಿಮಾತು ಇಲ್ಲವೆ ಜ್ವಾನವನ್ನು ಹಂಚುವಿರಿ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕಮ್ಮಿ. ಆಮದು – ರಫ್ತು ವ್ಯವಹಾರ ಮಾಡುತ್ತಿರುವವರಿಗೆ ಸರ್ಕಾರದ ಪಾಲಿಸಿಗಳಿಂದ ತೊಂದರೆ.

ಧನಸ್ಸು ಇತರರ ಇಬ್ಬಗೆಯ ನೀತಿಯಿಂದ ಅಥವಾ ನಿಮ್ಮ ದ್ವಂದ್ವ ನಿಲುವಿಗಳಿಂದ ವಾರದ ಆರಂಭದಲ್ಲಿ ಕಸಿವಿಸಿ ಅನುಭವಿಸುವಿರಿ. ದಂತ ಅಥವಾ ನೇತ್ರ ತಪಾಸಣೆಗೆ ಮುಂದಾಗುವಿರಿ. ಅತಿಯಾದ ಗ್ಯಾಸ್ಟ್ರಿಕ್ ಕಾಡಲಿದೆ. ದೇವಸ್ಥಾನದ ಭೇಟಿಯಿಂದ ನೆಮ್ಮದಿಕಾಣುವಿರಿ. ವ್ಯಾಪಾರ/ಉದ್ಯೋಗ ಸಂಬಂಧ ಹೊಸ ಪರಿಚಯ ಸಿಕ್ಕಿದರೂ ಆರಂಭಿಕ ಹಿನ್ನಡೆ ಅನುಭವಿಸುವಿರಿ. ಅಶಿಸ್ತಿನಿಂದ ಹೊರಬರಲು ಪ್ರಯತ್ನಿಸುವಿರಿ. ಈ ವಾರ ಷೇರು ಮಾರುಕಟ್ಟೆಯಿಂದ ದೂರವಿರಿ. ವಾಹನಗಳಿಂದ ಖರ್ಚು. ಇತರರ ವಾಹನ ನೀವು ಚಾಲನೆ ಮಾಡದಿರಿ ಹಾಗು ನಿಮ್ಮ ವಾಹನವನ್ನು ಈ ವಾರ ಇತರರಿಗೆ ಕೊಡದಿರಿ. ಹನುಮ ಮತ್ತು ಸೂರ್ಯನ ಪ್ರಾರ್ಥನೆ/ದರ್ಶನದಿಂದ ಒಳಿತು.

ಮಕರ ಈ ವಾರ ವಿಫುಲ ಅವಕಾಶಗಳು ಒದಗಿಬಂದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ವಿಫಲವಾಗುವಿರಿ. ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗು ಇತರರ ಮನೋರಂಜಾತ್ಮಕ ಚಟುವಟಿಕೆಗಳಿಗೆ ಹಣ ಖರ್ಚು. ವಿಶೇಷವಾಗಿ ಮಕ್ಕಳಿಗೆ ಪ್ರಯಾಣದಿಂದ ಅಧಿಕ ಖರ್ಚು. ಸಹೋದರ/ಸಹೋದರಿಯೊಂದಿಗೆ ಹೆಚ್ಚಿನ ಒಡನಾಟ. ನೀರಿನಿಂದ ಇನ್ಫೆಕ್ಷನ್ ಸೂಚಿತ. ನಿಮ್ಮ ಬಹುದೊಡ್ಡ ಯೋಜನೆಯೊಂದಕ್ಕೆ ವಾರಾಂತ್ಯದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ರಜಗಳಿಂದ ಕುಟುಂಬ ಹಾಗು ಸ್ನೇಹಿತವರ್ಗದೊಂದಿಗೆ ಸಂತಸದಿಂದ ಕಾಲಕಳೆಯುವಿರಿ. ವಸ್ತ್ರಗಳಿಗಾಗಿ ಹಣ ಖರ್ಚು ವಾಹನಗಳಿಗಾಗಿ ಹಣ ಖರ್ಚು. ಆದರೆ ನಿದ್ರಾಹೀನತೆಯಿಂದ ಬಳಲುವಿರಿ ಹಾಗು ಸಂಚಾರಿ ನಿಯಮ ಪಾಲನೆ ಮಾಡದೆ ಸರ್ಕಾರಕ್ಕೆ ದಂಡ ಕಟ್ಟುವಿರಿ.

ಕುಂಭ ವಾರದ ಆರಂಭದಲ್ಲಿ ಮಕ್ಕಳಿಂದ ಸಂತಸ. ವಾರದ ಮಧ್ಯಭಾಗದಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ ಹಾಗು ಹೊಸತೊಂದನ್ನು ಹುಡುಕುವಿರಿ. ಕಾನೂನಿನ ತೊಂದರೆಗಳನ್ನು ಎದುರಿಸುವ ವಾರ, ವಿಶೇಷವಾಗಿ ತೆರಿಗೆ ವಿಷಯವಾಗಿ. ರಾಜ-ಭೋಜನ. ರಾಜಮಾರ್ಯಾದೆ ಸೂಚಿತವಾದರೂ ವಾರಾಂತ್ಯಕ್ಕೆ ಕೊಂಚ ಕಸಿವಿಸಿಯಿಂದ ವಾಸ್ತವ ಬದುಕಿನಿಂದ ದೂರ ಉಳಿಯುವಿರಿ. ಸಂಗಾತಿಯೊಂದಿಗೆ ಶಿಸ್ತಿನವಿಷಯವಾಗಿ ಮಾತಿನ ಚಕಮಕಿ. ಅಲಂಕಾರಿಕ ವಸ್ತುಗಳನ್ನು(ಬಟ್ಟೆ) ಖರೀದಿಸುವಿರಿ. ಇಲ್ಲವೆ ಗಿಫ್ಟ್ ಪಡೆಯುವಿರಿ. ರಿಯಲ್ ಎಸ್ಟೇಟ್ ಉದ್ಯಮದವರಿಗೆ ಶುಭ. ಸಿ.ಎ. , ಮಧ್ಯಮವರ್ತಿಗಳು, ಅಕೌಂಟೆಂಟ್, ಕಲಾವಿದರೂ, ಲಾಯರ್ ಗಳಿಗೂ ಶುಭ. ಶಿಕ್ಷಕರಿಗೆ ಕೊಂಚ ಹಿನ್ನಡೆ.

ಮೀನ ವಾರದ ಆರಂಭದಲ್ಲಿ ಆಸ್ತಿ ವಿಷಯವಾಗಿ ಕೊಂಚ ಮಟ್ಟಿಗೆ ಆತಂಕ ಅಥವಾ ವಿಷಯದ ಚರ್ಚೆ ಇಲ್ಲವೆ ಕುಟುಂಬದ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು. ಮಕ್ಕಳ ವಿಷಯವಾಗಿ ಆತಂಕ ಹಾಗು ಮನಸ್ಸಿಗೆ ಬೇಸರ. ವಾರದ ಮಧ್ಯ ಹಾಗು ಕೊನೆಯಭಾಗದಲ್ಲಿ ಅತ್ಯಂತ ಲವಲವಿಕೆಯಿಂದ ಓಡಾಡುವಿರಿ. ತೀರ್ಥ ಕ್ಷೇತ್ರಗಳ ದರ್ಶನ. ಗುರುಹಿರಿಯರ ಭೇಟಿ. ಮಧುಮೇಹವನ್ನು ನಿಯಂತ್ರಣದಲ್ಲಿಡಿ. ಉದ್ಯೋಗಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ದೂರಯಿರಿ. ಯಾವುದೇ ಔತಣಕೂಟಕ್ಕೆ ಹೋಗುವ ಮುನ್ನ ಯೋಚಿಸಿ. ಇಲ್ಲವೆ ಮುಂಬರುವ ದಿನಗಳಲ್ಲಿ ಅದರಿಂದ ತೊಂದರೆ. ಮಕ್ಕಳ ಉನ್ನತ ವಿದ್ಯಾಭ್ಯಾಸದ ಸಲುವಾಗಿ ಆತಂಕ ಹಾಗು ಕಾನೂನಿನ ತೊಡಕು. ದುರ್ಗಿಯ ಆರಾಧನೆ/ದರ್ಶನದಿಂದ ಒಳಿತು.

——————————————————-******———————————————————————-

ಈ ತಿಂಗಳು(ಜನವರಿ 14ರ ತನಕ) ಸರ್ಕಾರ ಹಾಗು ನಾಡಿಗೆ ಶುಭದಾಯಕವಲ್ಲ.

ಇನ್ನು ಕೆಲವು ದಿನಗಳಲ್ಲಿ ಮೀನುಗಾರರಿಗೆ ಪ್ರಕೃತಿ ವಿಕೋಪ ಇಲ್ಲವೆ ಸರ್ಕಾರದ ನೀತಿಗಳಿಂದ ತೊಂದರೆ ಆಗಬಹುದು.

ಜ್ಯೋತಿಷರವಿ ಕೃಬೆಂಗಳೂರು

Tags