ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನ ಭವಿಷ್ಯ : 6 ನವಂಬರ್ 2018 ಮಂಗಳವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…..

ಮೇಷಈ ದಿನ ತುಸು ಅನಾರೋಗ್ಯ ಕಾಡುವ ಸ್ಥಿತಿ ಇದೆ. ಆದರೆ ರೋಗ ನಿರೋಧಕ ಶಕ್ತಿ ನಿಮ್ಮಲ್ಲಿರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ. ಇದರ ಹೊರತಾಗಿ ನೀವು ಇಂದು ಹೊಸ ಗೆಳೆಯನ ಭೇಟಿ ಮಾಡುವಿರಿ. ಆತನಿಂದ ನಿಮಗೆ ಅನುಕೂಲವಾಗುವುದು.ನಿಶ್ಚಿತವಾದ ಧೋರಣೆಯನ್ನು ರೂಪಿಸಿಕೊಳ್ಳುವ ಹಾಗೂ ಸಮತೋಲನ ಕಾಯ್ದುಕೊಳ್ಳುವುದರಿಂದ ಇಂದು ನೀವು ಸೋಲಿನ ದವಡೆಯಿಂದ ಹೊರಬರುವಿರಿ. ಇದಕ್ಕೆ ಪೂರಕವಾಗಿ ನಿಮ್ಮ ಗೆಳೆಯರು ಸಹಾಯ ಮಾಡುವರು.ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವವು. ಹಳೆಯ ಗೆಳೆಯರ ಅಥವಾ ಆತ್ಮೀಯ ಬಂಧುಗಳ ಭೇಟಿಯು ನಿಮ್ಮಲ್ಲಿ ನವಚೈತನ್ಯವನ್ನು ತುಂಬುವುದು.

ಅದೃಷ್ಟ ಸಂಖ್ಯೆ:2

ವೃಷಭಕೋರ್ಟು ಕಚೇರಿಯ ಕೆಲಸಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರುವುದು. ಆದರೆ ಅದಕ್ಕಾಗಿ ಇಂದು ನೀವು ಖರ್ಚು ಮಾಡಬೇಕಾಗುವುದು. ನಗದು ಹಣವನ್ನು ಒಯ್ಯುವಾಗ ಎಚ್ಚರಿಕೆಯಿಂದ ಇರಿ. ವಿನಾಕಾರಣ ಮತ್ತೊಬ್ಬರ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಡಿ. ಹಾಸಿಗೆ ಇದ್ದಷ್ಟೆ ಕಾಲು ಚಾಚುವುದು ಸದಾ ಕ್ಷೇಮ. ಹಾಗಾಗಿ ಇಂದು ನೀವು ನಿಮ್ಮ ಇತಿಮಿತಿಗಳನ್ನು ಅರಿತು ಕುಟುಂಬದ ಸದಸ್ಯರೊಡನೆ ಸಮಾಲೋಚಿಸಿ. ಬಾಯಿ ತಪ್ಪಿ ಆಡಿದ ಮಾತು ನಿಮ್ಮ ಗೌರವಕ್ಕೆ ಚ್ಯುತಿ ತರುವುದು. ಈ ಹಿಂದೆ ಘಟಿಸಿದ ಘಟನೆಗಳು ಪುನರಾವರ್ತನೆ ಆಗುವುದೆಂಬ ಭಯಬೇಡ. ಗುರುವಿನ ಶ್ರೀರಕ್ಷೆ ಇರುವುದರಿಂದ ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ.

ಅದೃಷ್ಟ ಸಂಖ್ಯೆ:1

 

ಮಿಥುನನಯವಾದ ಮಾತುಗಳಿಂದಲೇ ನಿಮ್ಮ ಗೆಳೆಯರು ಇಂದು ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ. ಆದರೆ ಗುರುವಿನ ಕೃಪೆ ಇರುವುದರಿಂದ ಈ ಬಗ್ಗೆ ನಿಮಗೆ ಮೊದಲೇ ಸುಳಿವು ದೊರೆಯುವುದು. ಗುರು ಸ್ತೋತ್ರವನ್ನು ಪಠಿಸಿ. ಮಾತು ಮಾತಿಗೂ ನಿಮ್ಮ ಯಶಸ್ಸಿನ ಬಗ್ಗೆ ಜಂಭ ಕೊಚ್ಚಿಕೊಳ್ಳುವುದು ಬೇಡ. ಅತಿಯಾದದ್ದು ಎಲ್ಲವೂ ವಿಷವಾಗುವ ಸಂದರ್ಭವಿರುವುದು. ನಿಮ್ಮ ಜಾಣ್ಮೆಯ ಬಗ್ಗೆ ಜನರಿಗೆ ಅರಿವಿದೆ. ಅದನ್ನು ಪದೇ ಪದೇ ನಿರೂಪಿಸುವ ಅಗತ್ಯವಿಲ್ಲ.ನಿಮ್ಮ ಬುದ್ಧಿಮತ್ತೆಯನ್ನು ಯಾರೂ ಕಸಿದುಕೊಳ್ಳುವುದಿಲ್ಲ. ಆದರೆ ನೀವಾಡುವ ಮಾತುಗಳಿಂದ ಜನರು ನಿಮ್ಮಿಂದ ದೂರವಾಗುವರು. ಹಣ ಗಳಿಕೆಗಿಂತ ಜನಗಳಿಕೆಯು ಇಂದಿನ ತುರ್ತು ಕೆಲಸವಾಗಿದೆ.

ಅದೃಷ್ಟ ಸಂಖ್ಯೆ:2

 

ಕಟಕನಿಮ್ಮ ಕೆಲಸಕಾರ್ಯದ ಬದಲಾವಣೆಯ ಬಗ್ಗೆ ಅತಿಯಾದ ಆತ್ಮವಿಶ್ವಾಸ ಬೇಡ. ತಾಳ್ಮೆಯ ನಡೆಯು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ. ಈ ದಿನ ಹರ್ಷದಾಯಕ ವಾರ್ತೆಯನ್ನು ಕೇಳುವಿರಿ. ವಿದ್ಯಾಬುದ್ಧಿಯಲ್ಲಿ ಯಶಸ್ಸನ್ನು ಹೊಂದುವಿರಿ. ಜನರನ್ನು ಪ್ರೀತಿಸಲು ಕಲಿಯಿರಿ. ಇದು ನಿಮಗೆ ಕಷ್ಟದ ವಿಷಯವಂತೂ ಅಲ್ಲ. ಇದರಿಂದ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ನೀವು ಗುರುತಿಸುಲ್ಪಡುವಿರಿ. ನೆರೆಹೊರೆಯವರೊಡನೆ ಜಗಳ ಮನಸ್ತಾಪಗಳು ಬೇಡ. ಆಹಾರ-ವಿಹಾರದಲ್ಲಿ ಕ್ರಮತೆಯನ್ನು ಕಾಪಾಡಿಕೊಂಡಲ್ಲಿ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ. ಜಂಕ್‌ಫುಡ್‌ ಮತ್ತು ಕರಿದ ಪದಾರ್ಥಗಳನ್ನು ಸೇವನೆ ಮಾಡದಿರುವುದೇ ಒಳ್ಳೆಯದು. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಅದೃಷ್ಟ ಸಂಖ್ಯೆ:4

 

ಸಿಂಹಎದುರಾಳಿಯ ಬಲಾಬಲ ತಿಳಿದು ಹೋರಾಡಿದಲ್ಲಿ ನೀವು ಯಶಸ್ಸನ್ನು ಹೊಂದುವಿರಿ. ಈ ಬಗ್ಗೆ ಸ್ವಲ್ಪ ಉದಾಸೀನ ತೋರಿದರೂ ಸಹ ಶತ್ರುವಿನ ಪ್ರಾಬಲ್ಯ ಜಾಸ್ತಿ ಆಗುವುದು. ಕೌಟುಂಬಿಕ ಜೀವನದಲ್ಲಿನ ಸಮಸ್ಯೆ ನಿವಾರಣೆಗಾಗಿ ಈಶ್ವರ ದೇವರ ಧ್ಯಾನ ಮಾಡಿ. ಅತಿಶಯವಾದ ಮೇಧಾಶಕ್ತಿಯಿಂದ ಜನರು ನಿಮ್ಮತ್ತ ಆಕರ್ಷಿತರಾಗಲಿರುವರು. ನಾಯಕನಾಗುವ ಎಲ್ಲಾ ಗುಣಗಳು ನಿಮ್ಮಲ್ಲಿವೆ. ಆದರೆ ಸಣ್ಣತನ ಮಾತು ಮತ್ತು ದ್ವಂದ್ವಾರ್ಥದ ಮಾತುಗಳಿಂದ ಟೀಕೆಗೆ ಒಳಗಾಗುವಿರಿ. ಆರ್ಥಿಕವಾಗಿ ಏರಿಕೆಯಾಗುವ ಸಾಧ್ಯತೆ ಇರುವುದು. ನಿಮ್ಮ ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುವುದು ಮತ್ತು ಕೆಲಸ ಕಾರ್ಯಗಳಲ್ಲಿ ಮಡದಿ ಮಕ್ಕಳು ಸಹಕಾರ ನೀಡುವರು. ಸಾಮಾಜಿಕವಾಗಿ ನಿಮ್ಮ ಪ್ರತಿಷ್ಠೆ ಹೆಚ್ಚುವುದು

ಅದೃಷ್ಟ ಸಂಖ್ಯೆ:4

 

ಕನ್ಯಾಈ ದಿನ ಮಂಗಳ ಕಾರ್ಯದಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಬೇಕಾಗುವುದು. ದೂರದಿಂದ ಬರುವ ವಾರ್ತೆಯು ನಿಮ್ಮ ಸಂತೋಷವನ್ನು ಹೆಚ್ಚಿಸುವುದು. ಕಚೇರಿ ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಪಡೆಯುವಿರಿ. ಎಲ್ಲಾ ವಿಚಾರಗಳಲ್ಲೂ ಗೆಲ್ಲುವ ಕ್ರಿಯಾಶೀಲತೆ ನಿಮ್ಮಲ್ಲಿ ಅಧಿಕ. ಆದರೂ ಎದುರಾಳಿಗಳನ್ನು ಲಘುವಾಗಿ ಪರಿಗಣಿಸಬೇಡಿ. ನೀವು ಬಿಟ್ಟ ಬಾಣ ನಿಮಗೆ ತಿರುಗು ಬಾಣವಾಗಿ ಬರುವ ಸಾಧ್ಯತೆ ಇದೆ. ಕುಲದೇವರನ್ನು ಸ್ಮರಿಸಿಕೊಳ್ಳಿ.ನಿಮ್ಮದೇ ಆದ ದಾರಿಯಲ್ಲಿ ಸಾಗುತ್ತಿರುವಿರಿ. ಆದರೆ ಅದಕ್ಕಾಗಿ ಕಟ್ಟುನಿಟ್ಟಿನ ಅಡೆತಡೆಗಳನ್ನು ಹಾಕಿಕೊಂಡು ಒದ್ದಾಡದಿರಿ. ನಿಮ್ಮ ಯೋಜನೆಗಳಲ್ಲಿ ಇತರೆಯವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಿ. ಇಲ್ಲವೆ ಇತರರ ಸಲಹೆಯನ್ನು ಸ್ವೀಕರಿಸಿ.

ಅದೃಷ್ಟ ಸಂಖ್ಯೆ:6

ತುಲಾ ‘ಮಾತು ಬಲ್ಲವನಿಗೆ ಜಗಳವಿಲ್ಲ’ ಎಂದರು ಹಿರಿಯರು. ಅಂತೆಯೆ ಮನೋಕಾರಕ ಚಂದ್ರ ದ್ವಿತೀಯ ವಾಕ್‌ಸ್ಥಾನದಲ್ಲಿ ಸಂಚರಿಸುವ ಮೂಲಕ ಈ ದಿನ ನಿಮಗೆ ಶುಭವನ್ನುಂಟು ಮಾಡುವರು. ಆ ಮೂಲಕ ಹಣಕಾಸಿನ ನೆರವು ದೊರೆಯುವುದು. ಹಠಮಾರಿ ಸ್ವಭಾವ. ಮತ್ತೊಬ್ಬರ ಮಾತನ್ನು ಗೌರವಿಸದೆ ಇರುವ ಕಾರಣ ನೀವು ತೊಂದರೆಗೆ ಸಿಲುಕಿಕೊಳ್ಳುವಿರಿ. ನಿಮ್ಮ ಸುತ್ತಲಿನ ಪರಿಸರವನ್ನು ಜಾಣತನದಿಂದ ಎದುರಿಸಿದಲ್ಲಿ ಒಳಿತಾಗುವುದು. ನಾಳೆಗಾಗಿನ ಚಿಂತೆಗೆ ಇಂದೇ ದಾರಿ ಮಾಡಿಕೊಂಡು ಬಳಲುವಿರಿ. ನೀವೇ ಮಾಡಿಕೊಂಡ ಸ್ವಯಂಕೃತ ಅಪರಾಧಕ್ಕಾಗಿ ಇಂದು ಪಶ್ಚಾತ್ತಾಪ ಪಡಬೇಕಾಗುವುದು. ಗುರು-ಹಿರಿಯರ ಮಾತಿಗೆ ಬೆಲೆ ಕೊಡುವುದನ್ನು ಕಲಿಯಿರಿ.

ಅದೃಷ್ಟ ಸಂಖ್ಯೆ:9

 

ವೃಶ್ಚಿಕಚಂಚಲ ಸ್ವಭಾವವು ಈ ದಿನದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುವುದು. ದ್ವಿತೀಯ ವಾಕ್‌ ಸ್ಥಾನದಲ್ಲಿನ ಶನಿಯು ಮಾತಿನ ಮೂಲಕ ಅಪಶಬ್ದಗಳನ್ನು ನುಡಿಸಿ ಸಾರ್ವಜನಿಕವಾಗಿ ಅಪಮಾನಕ್ಕೆ ಒಳಗಾಗುವ ಸಂಭವವಿರುತ್ತದೆ. ಈಶ್ವರ ದೇವರನ್ನು ಪ್ರಾರ್ಥಿಸಿ. ನಿಮ್ಮನ್ನು ನೀವು ಮಾತಿನ ಬಲದಿಂದ ಗೆಲ್ಲಿಸಿಕೊಳ್ಳಬಹುದಾದರು ಅತಿಯಾದ ಮಾತು ಸಮಸ್ಯೆಯನ್ನು ತಂದೊಡ್ಡುವುದು. ಅತಿಯಾದ ಮಾತಿನಿಂದ ಸ್ನೇಹಿತರೊಂದಿಗೆ ವಿರಸ ಉಂಟಾಗುವುದು. ಆಂಜನೇಯ ಸ್ತೋತ್ರ ಪಠಿಸಿ. ನಾನು ಮಾಡಿದ್ದೆಲ್ಲವೂ ಸರಿ ಎಂಬ ಅಹಂಗೆ ಇಂದು ಒಳಗಾಗುವಿರಿ. ಇದರಿಂದ ನೀವು ಹಮ್ಮಿಕೊಳ್ಳಬಹುದಾದ ಕೆಲಸಗಳಿಗೆ ಪೆಟ್ಟು ಕೊಡುವುದು. ಸೌಜನ್ಯತೆಯನ್ನು ಪ್ರದರ್ಶಿಸಿ ಕೆಲಸವನ್ನು ಸಾಧಿಸಿ. ಕುಲದೇವತಾ ಪ್ರಾರ್ಥನೆ ಮಾಡಿ.

ಅದೃಷ್ಟ ಸಂಖ್ಯೆ:4

ಧನಸ್ಸುದೇಹಾಲಸ್ಯದಿಂದ ಹಮ್ಮಿಕೊಂಡ ಕಾರ್ಯಗಳು ಮುಂದೂಡಲ್ಪಡುವುದು. ಮನೆಯ ಸದಸ್ಯರೊಡನೆ ವಿನಾಕಾರಣ ಮನಃಸ್ತಾಪಗಳು ಉಂಟಾಗುವುದು. ಗುರುವಿನ ಅನುಗ್ರಹದಿಂದ ಹಿರಿಯರೊಬ್ಬರ ಮಾರ್ಗದರ್ಶನ ದೊರೆತು ಮನಸ್ಸು ನಿರಾಳವಾಗುವುದು. ಮೇಲಧಿಕಾರಿಗಳು ಕೂಗಾಡಬಹುದು. ಆದರೆ ಇಂದು ನೀವು ತಾಳ್ಮೆಯಿಂದ ಇರಿ. ನಿಮ್ಮ ವಿಚಾರಧಾರೆಗಳನ್ನು ತಿಳಿದ ಮೇಲೆ ನಿಮ್ಮ ಸಲಹೆ ಪಡೆಯಲು ಅವರೇ ನಿಮ್ಮನ್ನು ಖುದ್ದಾಗಿ ಛೇಂಬರಿಗೆ ಕರೆಸಿಕೊಳ್ಳುವರು.ನಿಮ್ಮ ವಿರೋಧಿಗಳ ಮಾತು ಮೊನಚಾಗಿರುತ್ತದೆ. ಹಾಗಂತ ಮೈ ಪರಚಿಕೊಳ್ಳಬೇಡಿ. ಮುಗುಳು ನಗುವೇ ವಿರೋಧಿಗಳನ್ನು ಕಂಗೆಡಿಸುವುದು. ಹನುಮಾನ್‌ ಚಾಲೀಸ್‌ ಪಠಣ ಮಾಡಿ ಮತ್ತು ವಿಷ್ಣು ದೇವಾಲಯಕ್ಕೆ ತುಳಸಿಮಾಲೆಯನ್ನು ನೀಡಿ.

ಅದೃಷ್ಟ ಸಂಖ್ಯೆ:4

 

ಮಕರಮನೋಕಾಮನೆಗಳು ಪೂರ್ಣಗೊಳ್ಳುವ ಸಮಯ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಉಂಟಾದರೆ ಕೆಲವರು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹಿರಿಯರೊಬ್ಬರು ನಿಮ್ಮ ಬೌದ್ಧಿಕತೆಯಿಂದ ಆಕರ್ಷಿತರಾಗುವರು. ಅವರ ಒಡನಾಟದಿಂದ ನಿಮಗೂ ಹೊಸ ಶಕ್ತಿ ಸಂಚಯವಾಗಲಿದೆ ಮತ್ತು ಮಹತ್ತರವಾದ ಸೂಚನೆಗಳು ನಿಮಗೆ ದೊರೆಯುವವು. ಸಿನಿಮಾ ಕ್ಷೇತ್ರ, ನಾಟಕ, ನೃತ್ಯ ಈ ಕ್ಷೇತ್ರದ ಮಂದಿಗೆ ಇಂದು ಹೆಚ್ಚಿನ ಮನ್ನಣೆ ದೊರೆಯುವುದು. ಸಣ್ಣಪುಟ್ಟ ಗೃಹ ಕೈಗಾರಿಕೆಗಳ ವಸ್ತುಗಳ ಮಾರಾಟಗಾರರಿಗೂ ಇಂದು ಶುಭವನ್ನುಂಟು ಮಾಡುವುದು. ಆಂಜನೇಯ ಸ್ತೋತ್ರ ಪಠಿಸಿ.

ಅದೃಷ್ಟ ಸಂಖ್ಯೆ:9

 

ಕುಂಭ ಕೌಟುಂಬಿಕ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ಕಂಡುಬರುವುದು. ಆದರೆ ನಿಮ್ಮವರೇ ಆದ ಹತ್ತಿರದ ಜನರು ನಿಮಗೆ ತಿಳಿಯದಂತೆ ಅಡ್ಡಗಾಲು ಹಾಕುವರು. ಅಂತಹವರ ಬಗ್ಗೆ ಜಾಗ್ರತೆಯಿಂದ ಇರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ನೀವು ಹಿಡಿದ ಹಾದಿ ಸತ್ಯವಾದುದು. ಈ ಬಗ್ಗೆ ಯಾರೂ ನಿಮ್ಮ ಬಗ್ಗೆ ದೂರುವುದಿಲ್ಲ. ನ್ಯಾಯೋಚಿತವಾದ ಮಾರ್ಗವು ಯಾವಾಗಲು ಪ್ರಶಂಸೆಗೆ ಒಳಗಾಗುವುದು. ಎಲ್ಲವೂ ನೀವು ನಂಬಿದ ದೈವದ ಕೃಪೆಯಾಗಿರುವುದು.ನಿಮ್ಮ ಮುಗ್ಧತೆಯು ನಿಮಗೆ ತೊಂದರೆಯನ್ನುಂಟು ಮಾಡುವುದು. ಹಾಗಾಗಿ ಕೆಲವು ವಿಷಯಗಳಲ್ಲಿ ನಿಷ್ಟುರತೆಯನ್ನು ಪ್ರದರ್ಶಿಸಬೇಕಾಗುವುದು. ನೀವು ಮಾಡುವ ಕಾರ್ಯ ಸರಿಯಾಗಿ ಇರುವುದರಿಂದ ಯಾರಿಗೂ ಅಂಜುವ ಪ್ರಮೇಯವಿಲ್ಲ.

ಅದೃಷ್ಟ ಸಂಖ್ಯೆ:2

 

ಮೀನನಿಮ್ಮಲ್ಲಿ ಅನೇಕ ರೀತಿಯ ಯೋಜನೆಗಳಿವೆ. ಅದಕ್ಕೆ ತಕ್ಕ ಬುದ್ಧಿಶಕ್ತಿಯು ಇದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುವಿರಿ. ಗುರುವಿನ ಸ್ತೋತ್ರವನ್ನು ಪಠಿಸಿ. ಹಣಕಾಸಿನ ತೊಂದರೆ ಸ್ವಲ್ಪಮಟ್ಟಿಗೆ ಕಾಡುವುದು. ಇಂದು ನಿಮಗೆ ಸಂಭ್ರಮದ ದಿನವಾಗಿ ಹೊಸ ಪರಿವರ್ತನೆಯ ಬಾಗಿಲು ತೆರೆಯಲಿದೆ. ಬರುವ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಿ. ಗುರು-ಹಿರಿಯರ ಆಶೀರ್ವಾದವು ಇಂದು ನಿಮ್ಮ ಮೇಲಿರುತ್ತದೆ. ಹಳೆಯ ಸೋಲಿನ ನೆನಪುಗಳಿಂದ ಅಥವಾ ದುಃಖಗಳಿಂದ ಹೊರಬನ್ನಿ. ಜಗತ್ತು ವಿಶಾಲವಾಗಿದೆ. ಆತ್ಮೀಯರೊಡನೆ ವಿಚಾರ ವಿನಿಮಯ ಮಾಡಿಕೊಳ್ಳಿ. ದೈವಕೃಪೆಯಿಂದ ಬಾಳಿಗೊಂದು ಹೊಸ ಬೆಳಕು ಮೂಡುವುದು.

ಅದೃಷ್ಟ ಸಂಖ್ಯೆ:1

……………………………………………………………………………………………………………………………………

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ, ದೈವಜ್ಞ ಜ್ಯೋತಿಷ್ಯರು 9845743807

Tags