ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನ ಭವಿಷ್ಯ: 7 ನವಂಬರ್ 2018 ಬುಧವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ..........

ಮೇಷಮನದಾಳದ ಚಿಂತನೆಗಳನ್ನು ದೂರಮಾಡಿ ಒಳಿತುಗಳನ್ನು ಪಡೆಯುವ ಸಿದ್ದಿಯನ್ನು ಕಂಡುಕೊಳ್ಳುವಿರಿ. ಇದಕ್ಕೆ ಪೂರಕವಾಗಿ ಬಂಧುಗಳು ಮತ್ತು ಸ್ನೇಹಿತರು ಸಹಾಯಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಿಸಿ. ಜಯವಿರುವವರೆಗೂ ಭಯವಿಲ್ಲ. ಧೈರ್ಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಯಶಸ್ಸು ನಿಮ್ಮದಾಗುವುದು. ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ. ಇಂತಹ ಜನರನ್ನು ದೂರವಿಡುವುದು ಒಳಿತು. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತನ್ನು ಆಲಿಸಿ ಮತ್ತು ಪಾಲಿಸಿ. ಇದರಿಂದ ಶುಭವಾಗುವುದು.

ಅದೃಷ್ಟ ಸಂಖ್ಯೆ:2

ವೃಷಭಧೈರ್ಯ, ಸಾಹಸ ಪ್ರವೃತ್ತಿಯವರಾದ ನೀವು ಮುನ್ನುಗ್ಗುವುದರಲ್ಲಿ ಹಿಂದೆ ಬೀಳಬೇಡಿ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎನ್ನುವುದು ನಿಮ್ಮ ಘೋಷ ವಾಕ್ಯವಾಗಿರಲಿ. ಬಂಧುವರ್ಗದವರು ಅಥವಾ ಸಹೋದರ ಸಹೋದರಿಯರೇ ತಗಾದೆ ಎಬ್ಬಿಸಬಹುದು. ಜಾಗ್ರತೆಯಿಂದ ಇರಿ. ಮನೆತನದ ಕೆಲವು ವಿಚಾರಗಳನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಬೇರೆಯವರ ಮುಂದೆ ಇದ್ದದ್ದನ್ನು ಇದ್ದಂತೆ ಹೇಳಿ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಕೆಲವು ದಿನಗಳಿಂದಲೂ ಬರಲಿಲ್ಲವಲ್ಲ ಎಂದು ತಿಳಿದುಕೊಂಡ ಹಣದ ಬಾಬ್ತನ್ನು ನಿರಾಯಾಸವಾಗಿ ಸ್ವೀಕರಿಸುವಿರಿ. ಇದರಿಂದ ನೀವು ಮಾಡಿದ ಸಾಲ ತೀರುವಳಿಗೆ ಸಹಾಯ ಆಗುವುದು. ಗುರು ಕರುಣೆಯನ್ನು ಸ್ಮರಿಸಿ.

ಅದೃಷ್ಟ ಸಂಖ್ಯೆ:1

ಮಿಥುನಬಾಳಸಂಗಾತಿ ಸಲಹೆ ಸಹಕಾರಗಳನ್ನು ಸ್ವೀಕರಿಸಿ. ಅಂತೆಯೆ ತಂದೆ ತಾಯಿಯ ಮಾತನ್ನು ಪೂರ್ಣಗೊಳಿಸುವುದು ಒಳ್ಳೆಯದು. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕೆಲವು ಸಮಸ್ಯೆಗಳು ಎದುರಾಗುವವು. ಆದಾಗ್ಯೂ ಅವುಗಳನ್ನು ಎದುರಿಸುವ ಶಕ್ತಿಯನ್ನು ಗುರು ನಿಮಗೆ ನೀಡುವನು. ಗುರುವಿನ ಶುಭ ಆಶೀರ್ವಾದ ಇರುವುದರಿಂದ ಹೆಚ್ಚಿನ ತೊಂದರೆಯಿಲ್ಲ. ಬರಬೇಕಾಗಿದ್ದ ಹಣ ಬರುವುದು. ಮಕ್ಕಳ ಮೂಲಕ ಹೊಸ ಆಸ್ತಿ, ವಾಸ ಸ್ಥಳ, ನಿವೇಶನ ಇತ್ಯಾದಿ ಹೊಂದಲು ಕಾಲ ಕೂಡಿ ಬರುತ್ತದೆ. ಇದರಿಂದ ಮನೆ ಸದಸ್ಯರು ಖುಷಿಯಾಗುವರು. ಗೆಳೆಯರು ಅಥವಾ ಆತ್ಮೀಯರು ನಿಮಗೆ ಸಹಾಯ ನೀಡುವರು.

ಅದೃಷ್ಟ ಸಂಖ್ಯೆ:2

ಕಟಕಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಯೋಜನೆಯನ್ನು ಸ್ವಲ್ಪ ದಿನ ಮುಂದೂಡಿ. ಇದರಿಂದ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯವಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧಾರಣ ಪ್ರಗತಿ ಇರುತ್ತದೆ. ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಕಾದಾಡದೆ ಮಾತುಕತೆ ಮುಂದುವರೆಸಿ. ಇದರಿಂದ ಒಳಿತಾಗುವುದು. ಆಸ್ತಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ. ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಕಾಲ ಪಕ್ವವಾಗಿದೆ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ. ನಿಮ್ಮ ಮನಸ್ಸಿಗೆ ಒಪ್ಪುವ ವಾಹನ ಖರೀದಿ ಮಾಡುವಿರಿ.

ಅದೃಷ್ಟ ಸಂಖ್ಯೆ:4

ಸಿಂಹಮಾಡಿದ್ದುಣ್ಣೊ ಮಹಾರಾಯ ಎಂಬ ಸಂಗತಿ ನೆನಪಿಡಿ. ಇದರಿಂದ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಬೇಕಾಗುವುದು. ಆದಷ್ಟು ಉಡಾಫೆ ಮಾತುಗಳನ್ನು ಆಡದಿರಿ. ಇದರಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರುವುದು. ದೂರದ ಊರಿಂದ ಬರುವ ಬಂಧುಗಳಿಂದ ಅನಿರೀಕ್ಷಿತವಾಗಿ ನಿಮ್ಮ ಬಹುದಿನದ ಸಮಸ್ಯೆಗೆ ಪರಿಹಾರ ಸಿಗುವುದು. ಇದರಿಂದ ಮಗನ ಮದುವೆ ಮಾಡುವ ಆಸೆ ಚಿಗುರುವುದು. ಗ್ರಹಗಳ ಆಟವು ಯಾವ ರೀತಿಯಲ್ಲಿ ಆದರೂ ಇರಬಹುದು, ಸ್ವೀಕರಿಸಿ.ತೋಟಗಾರಿಕೆಗೆ ಚಟುವಟಿಕೆಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ಬಂಡವಾಳ ಸಫಲವಾಗುವವು. ಹಣಕಾಸಿನ ವಿಷಯದಲ್ಲಿ ಚಾಣಾಕ್ಷ ಮತಿಗಳಾದ ನೀವು ವ್ಯವಹಾರದಲ್ಲಿ ಕುಶಲತೆಯಿಂದ ಇರುವಿರಿ.

ಅದೃಷ್ಟ ಸಂಖ್ಯೆ:6

ಕನ್ಯಾವ್ಯಕ್ತಿತ್ವದ ವಿಚಾರದಲ್ಲಿ ಹೊಸ ಎತ್ತರ ಪಡೆಯಲು ಸಂಬಂಧಿಕರು ಸಹಾಯ ಮಾಡುವರು. ಇದರಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಹೆಚ್ಚಲಿವೆ. ಆತ್ಮೀಯರು ನಿಮ್ಮನ್ನು ಸನ್ಮಾನಿಸುವ ಸಾಧ್ಯತೆ ಇದೆ. ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕೂಡಿಟ್ಟ ಹಣವೆಲ್ಲಾ ನೀರಿನಂತೆ ಖರ್ಚಾಗುತ್ತಿರುವುದರಿಂದ ಹಣದ ಉಳಿತಾಯಕ್ಕೆ ಸಂಚಕಾರ ಬರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ. ನಿಮ್ಮ ಸೀದಾಸಾದಾ ಗುಣ ನಿಮ್ಮನ್ನು ಎಲ್ಲರೂ ಗೌರವಾದರಗಳಿಂದ ಕಾಣುವಂತೆ ಮಾಡುವುದು. ಒಂದು ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

ಅದೃಷ್ಟ ಸಂಖ್ಯೆ:4

ತುಲಾಕಿರಿಕಿರಿಗಳಿಂದ ಪಾರಾಗಲು ಅಪಾರವಾದ ತಾಳ್ಮೆಯಿರಲಿ. ತಂತಾನೇ ಕೆಲವು ಪರಿಹಾರದ ಮಾರ್ಗೋಪಾಯಗಳು ಲಭಿಸುವವು. ಬಹುಮುಖ್ಯವಾದ ಕಡತವೊಂದು ಕಣ್ಮರೆಯಾಗುವುದರಿಂದ ಚಿಂತೆಗೆ ಒಳಗಾಗುವಿರಿ. ಆದರೆ ವ್ಯವಧಾನದಿಂದ ಹುಡುಕಿದಲ್ಲಿ ಸಂಜೆ ವೇಳೆ ಆ ಕಡತವು ದೊರೆಯುವ ಸಾಧ್ಯತೆ ಇರುವುದು. ಕಾರ್ತವೀರ್ಯಾರ್ಜುನನ ಮಂತ್ರ ಪಠಿಸಿ.  ನೀವು ನಂಬಿದ್ದ ನಿಮ್ಮ ಹತ್ತಿರದವರು ನಿಮಗೆ ಬೇಸರವಾಗುವಂತೆ ನಿಮ್ಮ ವಿರುದ್ಧ ವೈರ ಸಾಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಮಕ್ಕಳ ಕಲರವ ನಿಮಗೆ ಹೆಚ್ಚಿನ ಸಂತೋಷ ಉಂಟು ಮಾಡುವುದು.

ಅದೃಷ್ಟ ಸಂಖ್ಯೆ:8

ವೃಶ್ಚಿಕಸಿಟ್ಟಿಗೆ ಬುದ್ಧಿ ಕೊಡದಿರಿ. ಶನಿ ಮಹಾರಾಜರು ದ್ವಿತೀಯ ವಾಕ್‌ ಸ್ಥಾನದಲ್ಲಿ ಸಂಚರಿಸುವ ಮೂಲಕ ನಿಮ್ಮ ಮಾತುಕತೆಯಲ್ಲಿ ತಪ್ಪು ನುಸುಳುವಂತೆ ಮಾಡುವರು. ಹಾಗಾಗಿ ಎದುರು ವ್ಯಕ್ತಿಯ ಜೊತೆ ವ್ಯವಹರಿಸುವಾಗ ಹುಷಾರಾಗಿರಿ. ನೀವು ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ಈಚಲ ಮರದ ಅಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದಂತೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಇಲ್ಲದ ತಪ್ಪುಗಳನ್ನು ತೋರಿಸಿ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದ ಇರಿ. ಸುಖಾಸುಮ್ಮನೆ ಹತ್ತಿರದವರೊಬ್ಬರನ್ನು ಎದುರು ಹಾಕಿಕೊಳ್ಳುವ ಭಯವಿರುತ್ತದೆ. ಹಾಗಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸದಿರುವುದು ಒಳ್ಳೆಯದು. ಆಂಜನೇಯ ಸ್ತೋತ್ರ ಪಠಿಸಿ. ಆಹಾರ ದಾನ ಮಾಡಿ.

ಅದೃಷ್ಟ ಸಂಖ್ಯೆ:9

ಧನಸ್ಸುಪರಮ ಸ್ವಾಭಿಮಾನಿಗಳಾದ ನೀವು ಸಾಧಿಸಬೇಕಾದ ಕೆಲಸವನ್ನು ಪೂರ್ಣಗೊಳಿಸುವಿರಿ. ಇದರಿಂದ ನೀವಷ್ಟೇ ಅಲ್ಲದೆ ನಿಮ್ಮ ಕುಟುಂಬದ ಸದಸ್ಯರು ಸಂತೋಷಪಡುವರು. ಆದರೆ ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ತಿಳಿದು ಭ್ರಮೆಯಲ್ಲಿ ಚಡಪಡಿಸುವಂತಹ ಸಂದಿಗ್ಧ ಪರಿಸ್ಥಿತಿ ಎದುರಾಗುವುದು. ಶ್ರೀರಾಮ ರಕ್ಷಾ ಸ್ತೋತ್ರ ಪಠಿಸಿ. ವಿಷ್ಣುವಿನ ಆರಾಧನೆ ಮೂಲಕ ಶುಭ ತಂದುಕೊಳ್ಳಬಹುದಾಗಿದೆ. ತುಂಬಾ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವೊಂದು ಅಲ್ಪ ಶ್ರಮಕ್ಕೆ ಸುಖಾಂತ್ಯವಾಗುವುದು. ಗುರು ಹಿರಿಯರ ಆಶೀರ್ವಾದ ಪಡೆದು ಕೆಲಸ ಆರಂಭಿಸಿ. ದಿನದ ಕೊನೆಗೆ ಸಿಹಿ ಸುದ್ದಿ ಕೇಳುವಿರಿ.

ಅದೃಷ್ಟ ಸಂಖ್ಯೆ:9

ಮಕರಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ರೂಢಿಸಿಕೊಳ್ಳಿ. ಶನಿ ಮಹಾರಾಜರು ನಿಮಗೆ ಆರ್ಥಿಕ ಮುಗ್ಗಟ್ಟನ್ನು ತರುವ ಸಾಧ್ಯತೆ ಇದೆ. ಆಂಜನೇಯ ಸ್ತೋತ್ರ ಇಲ್ಲವೆ ಶನಿ ಸ್ತೋತ್ರ ಪಠಿಸಿ. ದಶಮಸ್ಥಾನದ ಗುರು ವೃತ್ತಿಯಲ್ಲಿ ಬೇಸರವನ್ನುಂಟು ಮಾಡುವನು ಮತ್ತು ಕೆಲಸ ಬದಲಾವಣೆ ಮಾಡುವ ಸಂದರ್ಭ ಬರುವುದು. ಹಾಗಂತ ಮಾಡುವಂತಹ ವೃತ್ತಿಗೆ ರಾಜೀನಾಮೆ ನೀಡುವುದು ಸೂಕ್ತವಲ್ಲ. ಇರುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ. ವೃತ್ತಿಯಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹಾಗಾಗಿ ವೃತ್ತಿಯಲ್ಲಿ ಹೊಸ ರೀತಿಯ ಗಳಿಕೆ ಲಭ್ಯವಾಗಲಿದೆ. ಹೊಸ ಖರೀದಿ ಮಾಡಲು ನೂತನ ಅವಕಾಶ ಸಿಗುವುದು.

ಅದೃಷ್ಟ ಸಂಖ್ಯೆ:6

ಕುಂಭಒತ್ತಡದಲ್ಲಿ ಸಿಲುಕಿಕೊಳ್ಳುವ ಸಂಭವ ಜಾಸ್ತಿ ಇದೆ. ಯಾರಿಗೂ ಯೋಚಿಸದೆ ಹಣ ಅಥವಾ ಮಾತು ಕೊಡಲು ಮುಂದಾಗದಿರಿ. ಕೊಟ್ಟ ಹಣ ವಾಪಸ್ಸು ಬರದೆ ಇರುವ ಸಾಧ್ಯತೆ ಇದೆ. ನಿಮ್ಮ ಕುಲದೇವರನ್ನು ಸ್ಮರಿಸಿ. ವಿಷ್ಣು ಸಹಸ್ರನಾಮದ ಮಹಿಮೆ ಅಪಾರ. ಅವಶ್ಯಕವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಇಲ್ಲವೆ ಆಂಜನೇಯ ಗುಡಿಯಲ್ಲಿ ದೀಪಾರಾಧನೆ ಮಾಡಿ. ಸಾಧ್ಯವಾದರೆ ಹೆಸರುಕಾಳನ್ನು ದಾನ ಮಾಡಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.  ನಿಮ್ಮ ಸಾಧನೆಗೆ ತಕ್ಕ ಗೌರವ ಆದರಗಳು ಸಿಗುವ ಸಾಧ್ಯತೆಯಿದೆ. ಜನರನ್ನು ವಿಶ್ವಾಸಕ್ಕೆ ಪಡೆದು ಅವರಿಂದ ಕೆಲಸ ಮಾಡಿಸಿಕೊಳ್ಳುವಿರಿ. ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು.

ಅದೃಷ್ಟ ಸಂಖ್ಯೆ:2

ಮೀನರಸ್ತೆಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತೆ ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳುವಿರಿ. ಈ ಬಗ್ಗೆ ಜಾಗ್ರತೆಯಿಂದ ಇರಿ. ಮನೆ ಸದಸ್ಯರ ಮೇಲೆ ವಿನಾಕಾರಣ ಕೋಪಗೊಳ್ಳುವಿರಿ. ಆದರೆ ಎಷ್ಟೇ ಕೂಗಾಡಿದರೂ ನಿಮ್ಮ ಕೋಪ ಕೆಲಸಕ್ಕೆ ಬಾರದ ವಿಷಯ. ನೀವೇ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಇದರಿಂದ ಒಳಿತಾಗುವುದು. ನಿಮ್ಮ ನಿರೀಕ್ಷೆಗೆ ಸರಿಹೊಂದುವ ಬಾಳಸಂಗಾತಿಯ ಆಯ್ಕೆ ಬಗ್ಗೆ ಯಶಸ್ವಿಯಾಗುವ ಅವಕಾಶಗಳಿವೆ. ಹೆಚ್ಚಿನ ಲಾಭ ಪಡೆಯಲು ಗುರು ಸ್ತೋತ್ರ ಪಠಿಸಿ.

ಅದೃಷ್ಟ ಸಂಖ್ಯೆ:1

……………………………………………………………………………………………………………………………………….

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ, ದೈವಜ್ಞ ಜ್ಯೋತಿಷ್ಯರು 9845743807

Tags

Related Articles