ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನ ಭವಿಷ್ಯ: 8 ನವಂಬರ್ 2018 ಗುರುವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ……

ಮೇಷ ಸದ್ಯದ ಪರಿಸ್ಥಿತಿ ತಣ್ಣೀರನ್ನು ಆರಿಸಿ ಕುಡಿಯುವ ಕಾಲವಾಗಿದೆ. ನೀವು ನಂಬಿದ ಜನರೇ ನಿಮ್ಮನ್ನು ತಿರಸ್ಕರಿಸುವುದರಿಂದ ನಿಮ್ಮ ಮನೋವೇಗದ ಕಾಮನೆಗಳು ಮಂದ ಪ್ರಗತಿಯಲ್ಲಿ ಸಾಗುವವು. ಗುರುವಿನ ಸ್ತೋತ್ರ ಪಠಿಸಿ. ಬೇರೆಯವರ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ಒಪ್ಪಿಕೊಳ್ಳುವುದು ಸೂಕ್ತವಲ್ಲ. ಗುರುವಿನ ಬಲವಿದೆ ಎಂದು ಕೈಲಾಗದ ಕೆಲಸಗಳನ್ನು ಹಮ್ಮಿಕೊಳ್ಳುವುದೂ ಒಳ್ಳೆಯದಲ್ಲ. ಆ ಕಾರ್ಯವನ್ನು ಜಾಣ್ಮೆಯಿಂದ ಮುಂದೆ ಹಾಕಿ. ಹಣದ ವಿಚಾರವಾಗಿ ಖಂಡಿತವಾಗಿಯೂ ಅಲಕ್ಷ್ಯ ಮಾಡದಿರಿ. ಬರಲಿರುವ ಸದಾವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಿ. ಇದರಿಂದ ನೀವು ಮಾಡಬೇಕೆಂದಿರುವ ಕಾರ್ಯಗಳು ಸುಲಲಿತವಾಗಿ ನಡೆಯುವವು.

ಅದೃಷ್ಟ ಸಂಖ್ಯೆ:2

ವೃಷಭನಿಮ್ಮ ಆಲೋಚನಾ ಶಕ್ತಿ, ತರ್ಕಗಳು ಅದ್ಭುತ ಆದರೆ ಪ್ರತಿ ಕ್ಷ ಣಕ್ಕೊಮ್ಮೆ ಬದಲಾಗುವ ನಿಮ್ಮ ಮನಸ್ಥಿತಿ ಬಗ್ಗೆ ನಿಮ್ಮ ಸಂಗಾತಿಯೇ ಸರಿಯಾಗಿ ಅರ್ಥ ಮಾಡಿಕೊಳ್ಳಲಾರರು. ಆದಾಗ್ಯೂ ನಿಮ್ಮ ಯೋಜನೆಗಳು ಸ್ವೀಕಾರ್ಹವಾಗಿರುತ್ತದೆ. ನಿಮ್ಮ ವ್ಯಾಪಾರ, ವ್ಯವಹಾರಗಳಲ್ಲಿ ಮಂದ ಪ್ರಗತಿ ಕಂಡುಬರುವುದು. ಹಾಗಂತ ಈ ವಿಚಾರದಲ್ಲಿ ಅವಸರ ತೋರಿ ಬೇರೆ ದಾರಿ ಹುಡುಕಲು ಹೊರಟರೆ ತೊಂದರೆ ಎದುರಾಗುವುದು. ಸಂಗಾತಿಯ ವಿಚಾರಧಾರೆಗಳಿಗೆ ಬೆಂಬಲ ಸೂಚಿಸಿ. ಬರೀ ಮಾತಿನಿಂದ ಮನೆ ಕಟ್ಟಲು ಆಗುವುದಿಲ್ಲ. ಅದಕ್ಕೆ ಪೂರಕವಾದ ಸಾಮಾನುಗಳನ್ನು ಸಂಗ್ರಹಿಸುವುದೂ ಅಷ್ಟೇ ಪ್ರಾಮುಖ್ಯವಾಗಿರುತ್ತದೆ. ನಿಮ್ಮ ವಿಚಾರಧಾರೆಗಳನ್ನು ಕೃತಿಯಲ್ಲಿ ತರುವ ಮೂಲಕ ಚಾಲನೆಗೆ ತನ್ನಿ.

ಅದೃಷ್ಟ ಸಂಖ್ಯೆ:1

ಮಿಥುನಒಣ ವಾದ, ವಿವಾದದಿಂದ ಜನರನ್ನು ಗೆಲ್ಲಲು ಆಗುವುದಿಲ್ಲ. ನಿಮ್ಮ ಬುದ್ಧಿಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ವ್ಯಯಿಸಿದರೆ ನೀವೊಬ್ಬ ಅದ್ಭುತ ವ್ಯಕ್ತಿ ಎನಿಸಿಕೊಳ್ಳುವಿರಿ ಮತ್ತು ಸಮಾಜದಲ್ಲಿ ಹೆಚ್ಚಿನ ಗೌರವಾದರಗಳು ಕಂಡುಬರುವವು. ಪರಿವರ್ತನೆ ಜಗದ ನಿಯಮ. ಅಂತೆಯೇ ಸದ್ಯದ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟವನ್ನು ಸ್ವೀಕರಿಸುವುದರಿಂದ ಮುಂದೆ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಒಂದೇ ಒಂದು ಕುಂಟು ನೆಪ ಮುಂದಿಟ್ಟುಕೊಂಡು ವೈರ ಸಾಧನೆ ಮಾಡದಿರಿ. ಹೃದಯ ವೈಶಾಲ್ಯದಿಂದ ವಿರಸ ಮರೆತು ಸ್ನೇಹ ಹಸ್ತ ಚಾಚಿ. ಇದರಿಂದ ನಿಮ್ಮ ಎಣಿಕೆಗೂ ಮೀರಿದ ಲಾಭಾಂಶವಾಗುವುದು.

ಅದೃಷ್ಟ ಸಂಖ್ಯೆ:2

ಕಟಕಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂಬಂತೆ ನಿಮ್ಮಲ್ಲಿರುವುದನ್ನು ಮತ್ತೊಬ್ಬರಿಗೆ ಹಂಚಿ ಸಂತಸ ಪಡುವಿರಿ. ಇದರಿಂದ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು. ನಿಮ್ಮ ಆಚಾರ, ವಿಚಾರಗಳೇ ಭಿನ್ನತೆಯಿಂದ ಕೂಡಿರುವುದು. ಊರಿನವರದು ಒಂದು ದಾರಿಯಾದರೇ ನಿಮ್ಮದೇ ಒಂದು ದಾರಿ. ಹಾಗಾಗಿ ಕೆಲವು ವಿಚಾರಗಳಲ್ಲಿ ಸಾಮ್ಯತೆ ಸಾಧಿಸುವುದು ಕಷ್ಟವಾಗುತ್ತದೆ. ಈ ಬಗ್ಗೆ ಎರಡು ಬಾರಿ ಚಿಂತಿಸಿ. ಕಾರ್ಯ ಪ್ರವೃತ್ತರಾಗಿ. ಬಾಳಸಂಗಾತಿ ಜತೆ ಕದನಕ್ಕೆ ಹೋಗದಿರುವುದೇ ಒಳ್ಳೆಯದು. ಇಲ್ಲದೆ ಇದ್ದಲ್ಲಿ ವಾರಾಂತ್ಯದ ರಜೆ ಸವಿಯಲು ಆಗುವುದಿಲ್ಲ. ಮನೆ ಗೆದ್ದು ಮಾರುಗೆಲ್ಲು ಎನ್ನುವಂತೆ ಮನೆ ಸದಸ್ಯರ ಒಲುಮೆ ಪಡೆದುಕೊಳ್ಳಿ.

ಅದೃಷ್ಟ ಸಂಖ್ಯೆ:4

ಸಿಂಹಅನನ್ಯ ಭಾವದಿಂದ ನಿಮ್ಮ ಕುಲದೇವರನ್ನು ಆರಾಧಿಸಿ. ನಿಮಗೆ ಎದುರಾಗಿರುವ ಅಪವಾದಗಳಿಂದ ದೂರ ಬರುವಿರಿ. ಸಂಕಲ್ಪಿತ ಕಾರ್ಯಗಳಿಂದ ಯಶಸ್ಸು ದೊರೆಯುವುದು. ಬಂಧುಬಾಂಧವರು ನಿಮ್ಮ ನಡೆ ನುಡಿಯನ್ನು ಕೊಂಡಾಡುವರು.ಅಧಿಕ ತಿರುಗಾಟ ಇರುವುದರಿಂದ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಸಂಗಾತಿಯ ಸಕಾಲಿಕ ಆರೈಕೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನಿಮ್ಮ ಹಿಂದಿನ ಅನುಭವಗಳೇ ಇಂದಿನ ಸುಖ ಸಾಧನೆಗೆ ಸಹಾಯ ಮಾಡುವವು. ಅಂತೆಯೆ ನಿಮ್ಮ ಹಳೆಯ ಗೆಳೆಯರು ಭೇಟಿ ಆಗುವರು. ಬಾಲ್ಯದ ನೆನಪುಗಳಲ್ಲಿ ತೇಲಿ ಹೋಗುವಿರಿ.

ಅದೃಷ್ಟ ಸಂಖ್ಯೆ:4

ಕನ್ಯಾನಿಮ್ಮ ಪ್ರಗತಿಯನ್ನು ಸಹಿಸದ ಕೆಲವರು ನಿಮ್ಮ ವಿರುದ್ಧ ಪಿತೂರಿ ನಡೆಸುವ ಸಂದರ್ಭವಿದೆ. ಆದರೆ ಗುರುವಿನ ಬಲ ಇರುವುದರಿಂದ ನೀವು ಯಾವುದಕ್ಕೂ ಅಂಜುವ ಅಗತ್ಯವಿಲ್ಲ. ಜಯವಿರುವವರೆಗೂ ಭಯದ ಸುಳಿವಿಲ್ಲ. ನಿಶ್ಚಿಂತರಾಗಿರಿ. ಮನೆಗೆ ಸಂಬಂಧಪಟ್ಟ ಕಾಗದ ಪತ್ರಗಳು ದೊರೆಯುವ ಸಾಧ್ಯತೆ ಇದೆ. ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸ ಒಡಂಬಡಿಕೆ ಉಂಟಾಗುವುದು. ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು. ಕಾಲವು ನಿಮ್ಮನ್ನು ಮೌನವಾಗಿರುವಂತೆ ಪ್ರೇರೇಪಿಸಿದೆ. ಅದಕ್ಕೆ ಹಲವಾರು ಕಾರಣಗಳು ಇವೆ. ಆದಾಗ್ಯೂ ನೀವು ಮೌನ ಮುರಿದು ಮಾತನಾಡುವ ಸಂದರ್ಭ ಇದೆ. ನಿಮ್ಮ ಬೆಂಬಲಿಗರು, ಅನುಯಾಯಿಗಳು ಇದರಿಂದ ಖುಷಿ ಹೊಂದುವರು.

ಅದೃಷ್ಟ ಸಂಖ್ಯೆ:6

ತುಲಾಬೆಲೆಬಾಳುವ ವಸ್ತುಗಳನ್ನು ಕೊಳ್ಳುವ ಒತ್ತಡ ನಿಮ್ಮೆದುರಿಗೆ ಬರುವ ಸಾಧ್ಯತೆ ಇದೆ. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಗಮನಿಸಿ ವ್ಯವಹಾರ ಮಾಡುವುದು ಒಳ್ಳೆಯದು. ಆಕಾಶಕ್ಕೆ ಏಣಿ ಹಾಕುವ ಸಾಹಸಕ್ಕೆ ಕೈಹಾಕದಿರಿ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುವುದು. ಮಗನ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಮಡದಿಯ ಸಲಹೆಗಳು ನಿಮ್ಮ ಯಶಸ್ಸಿಗೆ ಕಾರಣವಾಗುವವು. ಪಾಲುದಾರಿಕೆ ವ್ಯವಹಾರದಲ್ಲಿ ನಿಮ್ಮ ನಿಜವಾದ ಚಾತುರ್ಯವನ್ನು ವ್ಯಕ್ತಗೊಳಿಸುವಿರಿ. ಇದು ನಿಮ್ಮ ಮುಂದಿನ ಜೀವನಕ್ಕೆ ಭದ್ರ ಬುನಾದಿ ಆಗುವುದು. ಹಣಕಾಸಿನ ಸ್ಥಿತಿಯಲ್ಲಿ ಸ್ವಲ್ಪ ಬಿಕ್ಕಟ್ಟು ಎದುರಾಗುವ ಸಂದರ್ಭ ಇದೆ.

ಅದೃಷ್ಟ ಸಂಖ್ಯೆ:6

ವೃಶ್ಚಿಕ ನಂಬಿಕೆಗೆ ದ್ರೋಹ ಎದುರಾಗುವ ಸಂದರ್ಭವಿದ್ದು ಆತ್ಮೀಯರೊಡನೆ ವ್ಯವಹಾರಲ್ಲಿ ಎಚ್ಚರದಿಂದ ಇರಿ. ಪ್ರಯಾಣ ಕಾಲದಲ್ಲಿ ಸಹ ಜಾಗ್ರತೆಯಿಂದ ಇರಬೇಕು. ಪ್ರಮುಖ ಹಣಕಾಸಿನ ವ್ಯವಹಾರವನ್ನು ಮುಂದೂಡುವುದು ಒಳಿತು. ಮಕ್ಕಳ ವಿಚಾರವಾಗಿ ಚಿಂತಿತರಾಗಿರುವ ನಿಮಗೆ ಗುರುವಿನ ಕಾರುಣ್ಯದಿಂದ ಅವರಿಗೆ ಉತ್ತಮ ಕಾಲೇಜಿನಲ್ಲಿ ಸೀಟು ದೊರೆಯುವ ಮೂಲಕ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಸ್ನೇಹಿತರಿಂದ ಹಣಕಾಸಿನ ನೆರವು ದೊರೆಯುವವು.ರಾಜಕಾರಣಿಗಳಿಗೆ ಮಿಶ್ರಫಲವಿದೆ. ಕೆಳಗೆ ಬಿದ್ದರೂ ಪುಟಿದೇಳುವ ಚೆಂಡಿನಂತೆ ನಿಮ್ಮ ನಾಯಕನ ದೂರ ದೃಷ್ಟಿಯಿಂದ ಅಧಿಕಾರ ಗದ್ದುಗೆ ಹಿಡಿಯಲಿದ್ದೀರಿ.

ಅದೃಷ್ಟ ಸಂಖ್ಯೆ:9

ಧನುಸ್ಸುಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದು ಶ್ರೇಯಸ್ಸಲ್ಲ. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದು ದೃಢ ಮನಸ್ಸಿನಿಂದ ಕಾರ್ಯ ಪ್ರವೃತ್ತರಾಗಿ. ಎಲ್ಲವೂ ಒಳಿತಾಗುವುದು. ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಬಹುದು. ಈ ಬಗ್ಗೆ ಅನ್ಯಮಾರ್ಗ ಅನುಸರಿಸಬೇಕಾಗುವುದು. ಅಯೋಗ್ಯರಿಗೆ ಸಲುಗೆ ಕೊಡಬೇಡಿ ಮತ್ತು ಅಂತರಂಗದ ವಿಷಯಗಳನ್ನು ಬಹಿರಂಗ ಗೊಳಿಸದಿರಿ. ನಿಮ್ಮನ್ನು ಟೀಕಿಸುವ ಜನರನ್ನು ನೀವು ನಿಯಂತ್ರಿಸಲು ಮುಂದಾಗುವಿರಿ. ಇದರಲ್ಲಿ ನಿಮ್ಮ ತಾಯಿಯ ಪಾತ್ರ ಹಿರಿದು. ಅವರ ಸಲಹೆ ಸಹಕಾರಗಳನ್ನು ತಪ್ಪದೆ ಪಾಲಿಸಿ.

ಅದೃಷ್ಟ ಸಂಖ್ಯೆ:2

ಮಕರಒಂದು ವಿಷಯದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳದೆ ಕಾರ್ಯ ಪ್ರವೃತ್ತರಾದರೆ ಕೇವಲ ಗುಡ್ಡಕ್ಕೆ ಮಣ್ಣು ಹೊತ್ತಂತೆ ವ್ಯರ್ಥವಾಗುವುದು. ಹಾಗಾಗಿ ಒಂದು ಕೆಲಸದ ಪೂರ್ವಾಪರ ವಿಚಾರಗಳನ್ನು ತಿಳಿದು ಕಾರ್ಯಪ್ರವೃತ್ತರಾಗಿ. ನಿಮ್ಮ ಕಾರ್ಯಯೋಜನೆಗಳನ್ನು ಸಾಧಿಸಿ ಸಫಲತೆಗೆ ಮುಂದಾಗಲಿದ್ದೀರಿ. ಆದರೆ ಆತುರ ಬೇಡ. ಕೆಲವರಿಗೆ ತಾವು ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ ಆಗುವ ಸಂಭವವಿರುತ್ತದೆ. ಅರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ಮನಸ್ಸಿನ ಸಮತೋಲನ ಕಾಯ್ದುಕೊಳ್ಳಿ. ವಾದ ಪ್ರತಿವಾದಗಳಿಂದ ದೂರ ಉಳಿಯುವುದು ಒಳ್ಳೆಯದು. ಮಗನ ವಿವಾಹವು ನಿಮಗೆ ಕಗ್ಗಂಟಾಗಿ ಪರಿಣಮಿಸುವುದು. ಈ ವಿಚಾರವಾಗಿ ನೆಂಟರಿಷ್ಟದಿಂದ ಟೀಕೆಗೆ ಗುರಿ ಆಗುವಿರಿ.

ಅದೃಷ್ಟ ಸಂಖ್ಯೆ:5

ಕುಂಭಮೇಲೆ ನಯಗಾರಿಕೆ ಒಳಗೆ ಹಾವಿನ ವಿಷದ ಜನ ಸಿಗುತ್ತಾರೆ. ಸಮಾಜದಲ್ಲಿ ಎರಡು ತರಹದ ಜನ ಇದ್ದೇ ಇರುತ್ತಾರೆ. ನಾವು ಅವರನ್ನು ಬದಲಿಸಲು ಸಾಧ್ಯವಿಲ್ಲ. ನಾವೇ ಬದಲಾಗಬೇಕು. ಹಾಗಾಗಿ ಈ ದಿಶೆಯಲ್ಲಿ ಚಿಂತಿಸಿ. ವಿವಾಹ ಅಪೇಕ್ಷಿಗಳು ಮಂಗಳ ವಾರ್ತೆ ಕೇಳುವರು. ಮನೆಯಲ್ಲಿನ ಸಂಭ್ರಮದ ವಾತಾವರಣ ಮನಸ್ಸಿಗೆ ಮುದ ನೀಡುವುದು. ಬಂಧುಗಳು ನಿಮ್ಮ ಗುಣಗಾನ ಮಾಡುವರು.ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನ ನಾಮಸ್ಮರಣೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು. ಎಲ್ಲವನ್ನು ನಾನೇ ಮಾಡುತ್ತೇನೆ ಎನ್ನುವುದಕ್ಕಿಂತ ಕೆಲಸವನ್ನು ಪರರಿಗೆ ಹಂಚಿ ನಿಶ್ಚಿಂತರಾಗಿ.

ಅದೃಷ್ಟ ಸಂಖ್ಯೆ:2

ಮೀನಹಲ್ಲಿದ್ದಾಗ ಕಡಲೆಯಿಲ್ಲ. ಕಡಲೆ ಇದ್ದಾಗ ಹಲ್ಲು ಇಲ್ಲ ಎಂಬಂತೆ ಭಗವಂತ ಸಕಲ ಸವಲತ್ತನ್ನು ನೀಡಿದರೂ ಅನುಭವಿಸುವ ಯೋಗವಿಲ್ಲದಂತೆ ಆಗುವುದು. ಅದಕ್ಕಾಗಿ ಭಗವಂತನನ್ನೆ ಮೊರೆ ಹೋಗುವುದು ಒಳಿತು. ಹೆಚ್ಚು ಲವಲವಿಕೆಯಿಂದ ಇರಬಹುದಾಗಿದೆ. ಸದ್ಯದ ಗ್ರಹಸ್ಥಿತಿಗಳು ನಿಮ್ಮ ಬೆಂಗಾವಲಿಗೆ ಇರುವುದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಹಳೆ ಸ್ನೇಹಿತರೊಬ್ಬರು ಹೊಸ ವಿಚಾರವನ್ನು ನಿಮಗಿಂದು ತಿಳಿಸುವರು. ಇದನ್ನು ಕಾರ್ಯರೂಪಕ್ಕೆ ತರುವ ಮೂಲಕ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶ ಹೊಂದುವಿರಿ.

ಅದೃಷ್ಟ ಸಂಖ್ಯೆ:1

…………………………………………………………………………………………………………………………………………………

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ , ದೈವಜ್ಞ ಜ್ಯೋತಿಷ್ಯರು 9845743807

Tags

Related Articles