ಉದಯೋನ್ಮುಖರುಬಾಲ್ಕನಿಯಿಂದವಿಡಿಯೋಗಳುಸಂದರ್ಶನ

ಬಾಲ್ಕನಿ ಹೀರೋ: ಇದು ತೆರೆಮರೆಯ ಸಾಧಕರ ಯಶೋಗಾಥೆ

ಇಂದಿನ ಸಂಚಿಕೆಯಲ್ಲಿ ನಮ್ಮ ಜೊತೆಗಿರುವವರು ಸಮೀರ್ ಹಾಸನ್

ಬೆಂಗಳೂರು.ಜ.14: ಎಲೆಮರೆಯ ಕಾಯಿಯಂತೆ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಸಾಧಕರಿಗೆ ಹಾಗೂ ಎಲ್ಲಿಯೂ ಪ್ರಚಾರಕ್ಕೆ ಬಾರದೇ ದೇಶದ ಕೀರ್ತಿ ಪತಾಕೆಯನ್ನು ಜಗದಗಲ ಹರಡಿದ ಸಾಧಕರನ್ನು ತೆರೆಯ ಮೇಲೆ ಪರಿಚಯಿಸುವ ಕಾರ್ಯಕ್ರಮವೇ ‘ಬಾಲ್ಕನಿ ಹೀರೋ’.

ಒಬ್ಬ ಸಿನಿಮಾ ನಾಯಕನ ಪರಿಚಯ ನಮಗೆ ಒಮ್ಮೆಲೆ ತಿಳಿದು ಬಿಡುತ್ತದೆ. ಆದರೆ ಎಷ್ಟೋ ಸಾಧಕರು ಕಣ್ಣಿಗೆ ಕಾಣದೇ ಹಾಗೆಯೇ ತೆರೆಯಿಂದಾಚೆ ಎಲೆಮರೆಯ ಕಾಯಿಯಂತೆ ಉಳಿದು ಬಿಡುತ್ತಾರೆ. ಅಂತವರನ್ನು ಗುರುತಿಸಿ, ಪರಿಚಯಿಸುವ ಕಾರ್ಯಕ್ರಮವೇ ಬಾಲ್ಕನಿ ಹೀರೋ.

ಈ ಕಾರ್ಯಕ್ರಮವು ಬಾಲ್ಕನಿ ಯುಟ್ಯೂಬ್ ಚಾನಲ್ ನಲ್ಲಿ ಪ್ರತಿ ಸೋಮವಾರ ಪ್ರಸಾರವಾಗಲಿದ್ದು, ಇದರ ಪರಿಕಲ್ಪನೆ ಹಾಗೂ ನಿರೂಪಣೆಯನ್ನು ಡಾ. ಕಿರಣ್ ಹೆಬ್ಬಾಲೆಯವರು ವಹಿಸಿಕೊಂಡಿದ್ದು, ಅವರೇ ತೆರೆ ಮರೆಯ ಸಾಧಕರ ಯಶೋಗಾಥೆಯನ್ನು ಪ್ರಸ್ತುತ ಪಡಿಸಿಕೊಡುತ್ತಿದ್ದಾರೆ.

ಈ ಸಂಚಿಕೆಯಲ್ಲಿ ಸಮೀರ್ ಹಾಸನ್ ಭಾಗವಹಿಸಿದ್ದು, ಅವರು ತಮ್ಮ ಮನದಾಳದ ಮಾತುಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ.

ಸಮೀರ್ ಹಾಸನ್ ಅವರನ್ನು ಸಂಪರ್ಕಿಸಬೇಕಾದರೆ ಈ ಕೆಳಗಿನ ಫೇಸ್ಬುಕ್ ಲಿಂಕ್ ಕ್ಲಿಕ್ ಮಾಡಿ, ಅವರನ್ನು ಸಂಪರ್ಕಿಸಿ

https://www.facebook.com/Share-a-SMILE-1752654115008202/

Tags