ಬಾಲ್ಕನಿ ವಾರ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯವಾರ ಭವಿಷ್ಯ

ಬಾಲ್ಕನಿ ವಾರ ಭವಿಷ್ಯ: 07-10-2018 ರ ಭಾನುವಾರ ದಿಂದ 13-10-2018 ಶನಿವಾರದ ತನಕ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

ಬಾಲ್ಕನಿ ವಾರ ಭವಿಷ್ಯ

07-10-2018 ರ ಭಾನುವಾರ ದಿಂದ 13-10-2018 ಶನಿವಾರದ ತನಕ

 ಮೇಷಪೂರ್ವಾರ್ಧದಲ್ಲಿ ಋಣಗಳ ಚಿಂತೆ ನಿಮ್ಮನ್ನು ಭಾದಿಸುವುದು. ಆರೋಗ್ಯದಲ್ಲಿ ಏರುಪೇರು ಆದರೂ ವೈದ್ಯರ ಭೇಟಿಯನ್ನು ಮುಂದುಡುವಿರಿ. ವಾರದ ಮಧ್ಯ ಭಾಗದಲ್ಲಿ ಹಾಗೂ ಉತ್ತರಾರ್ಧದಲ್ಲಿ ಸ್ವಲ್ವ ಮಟ್ಟಿಗೆ ಕುಟುಂಬ, ಗುರು ಹಿರಿಯರು, ನೆರೆಹೊರೆಯವರೊಂದಿಗೆ ಕಿರಿಕಿರಿ ಅನುಭವಿಸುವಿರಿ. ಮಕ್ಕಳಿಂದ ಕೊಂಚ ಕಿರಿಕಿರಿಯಾದರೂ ತಾಳ್ಮೆಯಿಂದಿರಿ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಇನ್ನೂ ಮೂರುನಾಲ್ಕು ತಿಂಗಳು ಹಣದ ಮುಗ್ಗಟ್ಟು ಎದುರಿಸುವಿರಿ. ವಿದ್ಯಾರ್ಥಿಗಳಿಗೆ ಹಿನ್ನಡೆಯ ವಾರ. ಸ್ಪಾಡಿಲೈಟಿಸ್ ಸಮಸ್ಯೆ ಬಾಧಿಸುವುದು.
 ವೃಷಭವಾರದ ಮೊದಲಾರ್ಧದಲ್ಲಿ ಆತ್ಮವಾಲೋಕನಕ್ಕೆ ಇಡಾಗುವಿರಿ. ಮಕ್ಕಳಿಂದ ಸಂತಸವಾದರೂ ಅವರ ಮುಂದಿನ ಜೀವನದ ಕುರಿತು ಚಿಂತೆಗೊಳಗಾಗಗುವಿರಿ. ತಂದೆಯ ತಾಯಿಗೆ (ಅಜ್ಜಿ) ಅರೋಗ್ಯದಲ್ಲಿ ವ್ಯತ್ಯಾಸವಾಗುವ ವಾರ. ಕೆಲಸದ ಒತ್ತಡ ಹೆಚ್ಚಿರುವ ವಾರವಾದರೂ ವಾರಾಂತ್ಯಕ್ಕೆ ಹೊಸ ಹುಮ್ಮಸ್ಸು ಬರುವುದು. ಅಕ್ಟೋಬರ್ 11 ಗುರು ಪರಿವರ್ತನೆಯಿಂದ ಒಳಿತಾಗಲಿದೆ. ಗಂಡ/ಹೆಂಡತಿಯ ಕುಟುಂಬದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಹಾಗಿದ್ದರೂ ಮೂರ್ನಾಲ್ಕು ತಿಂಗಳು ಆರೋಗ್ಯದ ಬಗ್ಗೆ ಗಮನವಿರಲಿ. ದೇವಿ ದರ್ಶನದಿಂದ ಒಲಿತಾಗುವುದು. ಅತಿಯಾದ ಲೆಕ್ಕಾಚಾರ ಬೇಡ.
 ಮಿಥುನತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ಅವರೊಡನೆ ಮಾತಿನ ಚಕಮಕಿ. ವಾರದ ಮಧ್ಯಬಾಗದಲ್ಲಿ ಉಲ್ಲಾಸದಾಯಕವಾಗಿ ಕೂಡಿದ್ದರೂ ಖರ್ಚುಗಳ ಬಗ್ಗೆ ನೆನೆದು ಚಿಂತಿತರಾಗುವಿರಿ ಮಳೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ಅಡೆತಡೆ. ಇಲ್ಲವೆ ಅಧಿಕ ಖರ್ಚು ಆಗುವುದು. ಇನ್ನುಮುಂದೆ ಕೊಟ್ಟಮಾತನ್ನು ನಿಭಾಯಿಸಲೂ ಹೆಣಗಾಡುವಿರಿ. ನಿಮ್ಮ ಸುತ್ತಮುತ್ತಲಿರುವ ಜನರ ಬಗ್ಗೆ ಗಮನವಿರಲಿ. ಮಾತನ್ನು ಹಿಡಿತದಲ್ಲಿಡಿ. ನಿದ್ರಾಹಿನತೆಯ ಸಮಸ್ಯೆಗೆ ಇಡಾಗಿವಿರಿ. ಹಗಲು ಮಲಗುವುದನ್ನು ಕಡಿಮೆ ಮಾಡಿ. ದೇವಿ ಹಾಗೂ ಕುಲದೇವರ ಆರಾಧನೆಯಿಂದ ಒಳಿತು. ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಹಿನ್ನಡೆ ಹಾಗು ಸೋಮಾರಿತನ. ವ್ಯಾಪಾರಸ್ಥರಿಗೆ ಇರುವ ವ್ಯವಹಾರಗಳು ಕೈತಪ್ಪಬಹುದು.
 ಕಟಕಅತಿಯಾದ ಆತ್ಮವಿಶ್ವಾಸದಿಂದ ಭೀಗುವ ವಾರವಾದರೂ ಅದರಿಂದ ತೊಂದರೆ ಹೆಚ್ಚು. ಸಂಗೀತ, ಕಲಾ ಆರಾಧಕರಿಗೆ ಉತ್ತಮ ವಾರ. ನ್ಯಾಯವಾಧಿಗಳು, ಧರ್ಮದರ್ಶಿಗಳು, ಶಿಕ್ಷಕರಿಗೆ ಹುರುಪಿನಿಂದ ಕೂಡಿದ ವಾರ. ವೈದ್ಯರಿಗೆ ಕೊಂಚ ಮಟ್ಟಿನ ಹಿನ್ನಡೆ. ಮನೆಗೆ ಸಂಬಂಧಿಗಳು, ಸ್ನೇಹಿತರು ಭೇಟಿನೀಡುವ ವಾರ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೈದ್ಯರಿಂದ ಉತ್ತಮ ಸಲಹೆ ದೊರೆಯಲಿದೆ. ಮನೆಗೆ ಪಿಠೋಪಕರಣ ಖರೀದಿ. ನಿಮ್ಮದೇ ಮಾತು ನಡೆಯಬೇಕು ಎಂಬ ಅಪವಾದಕ್ಕೆ ಸಿಲುಕುವಿರಿ.
 ಸಿಂಹಜೀವನದಲ್ಲಿ ಹಲವಾರು ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿರುವ ನಿಮಗೆ ಅಕ್ಟೋಬರ್ 11 ಗುರು ಪರಿವರ್ತನೆಯಿಂದ ಕೊಂಚ ಮಟ್ಟಿಗೆ ಒಳ್ಳೆಯ ಬದಲಾವಣೆ ತರಲಿದೆ. ಸಂತಾನದ ಅಪೇಕ್ಷೆ ಉಳ್ಳವರಿಗೆ ಶುಭ ಸುದ್ದಿ. ಸೈಟು ಅಥವಾ ಮನೆ ಕೊಳ್ಳಲು ಆಲೋಚಿಸುತ್ತಿರುವವರಿಗೆ ಶುಭ. ಆದರೆ ನಿರ್ಮಿಸಲು ಶುಭವಲ್ಲ. ವಸ್ತುಗಳನ್ನು ಇಟ್ಟು ಮರೆತು ವೃತ ಹುಡುಕಾಡುವಿರಿ. ಅಥವಾ ಕಳೆದು ಕೊಳ್ಳುವಿರಿ. ವೈಯಕ್ತಿಕವಾಗಿ ಸಂಚರಿಸುವ ಬದಲು ಸಮೂಹ ಸಾರಿಗೆ ಬಳಸುವ ಆಲೋಚನೆ ಬರುವುದು. ಮಾತಿನಲ್ಲಿ ಸೂಕ್ಷ್ಮತೆ ಹಾಗೂ ಜಾಣ್ಮೆ ಇರಲಿ. ಅತಿಯಾದ ಒರಟುತನ ಸಲ್ಲದು. ಹನುಮನ ಪ್ರಾರ್ಥನೆ ಒಳಿತು ತರುವುದು.
 ಕನ್ಯಾವಾರದ ಆರಂಭದಲ್ಲಿ ತಾಳ್ಮೆಯಿಂದಿರಿ. ನಿಮ್ಮ ಅತಿಯಾದ ಶಿಸ್ತು ಇತರರಿಗೆ ಕಿರಿಕಿರಿ ಉಂಟುಮಾಡುತ್ತದೆ. ಮನೆಯ ರಿಪೇರಿಗಾಗಿ ಹಣ ವ್ಯಯಿಸುವಿರಿ ಅಥವಾ ಅದರ ಚರ್ಚೆ ಮಾಡುವಿರಿ. ಸೋದರ ಮಾವನ ಮನೆಯಲ್ಲಿ ಶುಭ ಸಮಾರಂಭವೊಂದು ಜರುಗಲಿದೆ. ನಿಮ್ಮ ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಮಧುಮೇಹವನ್ನು ನಿಯಂತ್ರಣದಲ್ಲಿಡಿ. ಕುತ್ತಿಗೆ ಹಾಗೂ ಕಾಲುಗಳ ಬೇನೆ ಬಾದಿಸುವುದು. ಪ್ರಯಾಣಕ್ಕೆ ಸೂಕ್ತವಾದ ವಾರವಾದರೂ ಖರ್ಚು ಹೆಚ್ಚು. ಅತೀವ ಉಷ್ಣ ಬಾಧೆಯಿಂದ ಬಳಲುವಿರಿ. ಹೊರಗಿನ ಆಹಾರ ಇಷ್ಟಪಡುವ ನೀವು ಸ್ವಲ್ಪ ಸಮಯಕ್ಕೆ ಹೊರಗಿನ ಊಟ ಕಡಿಮೆ ಮಾಡಿದರೆ ಒಳಿತು. ವಾಹನಗಳಿಂದ ಕಿರಿಕಿರಿ. ಹನುಮನ ಪ್ರಾರ್ಥನೆಯಿಂದ ಒಳಿತು.
 ತುಲಾವಾರದ ಆರಂಭದಲ್ಲಿ ನೀವೆಣಿಸಿದ ಕಾರ್ಯಗಳು ನಡೆಯುವುದಿಲ್ಲವಿಶೇಷವಾಗಿ ಉದ್ಯೋಗಾಸಕ್ತರಿಗೆ ತಾಳ್ಮೆ ಇರಲಿ. ವಾರಾಂತ್ಯದ ವೇಳೆಗೆ ಗುರುಪರಿವರ್ಥನೆಯಿಂದ ಒಳಿತಾಗಲಿದೆ. ಇಷ್ಟುದಿನದ ನಿಮ್ಮ ಪರಿಶ್ರಮಕ್ಕೆ ಉತ್ತಮ ಸಮಯ ಒಂದು ಕೂಡಿಬರಲಿದೆ. ವಾರಂತ್ಯದ ವೇಳೆಗೆ ಶುಭ ಸುದ್ದಿಯೊಂದು ಬರಲಿದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ದೂರವಿರಿ. ಇಲ್ಲವೆ ಸಂಯಮದಿಂದ ವರ್ತಿಸಿ. ವ್ಯಾಪಾರಸ್ಥರಿಗೆ ತೆರಿಗೆಗಳ ಹೊರೆ ಬೀಳಬಹುದು. ಎಡಗಣ್ಣಿಗೆ ಸಮಸ್ಯೆಯಾಗಿ ವೈದ್ಯರನ್ನು ಬೇಟಿಮಾಡುವಿರಿ ಹೋದ ಹಳೆಯ ಸಂಧಂದಗಳು ಮರುಕಳಿಸಬಹುದು. ಮನೆಯ ರಿಪೇರಿಗಾಗಿ ಖರ್ಚು. ನಿಮ್ಮ ಅತಿಯಾದ ಶಿಸ್ತು ಇಕ್ಕಟ್ಟಿಗೆ ಸಿಲುಕಿಸುವವಾರ.
 ವೃಶ್ಚಿಕವಾರದ ಆರಂಭದಲ್ಲಿ ಅತೀವ ಚಿಂತೆಯಿಂದಾಗಿ ರಕ್ತದ ಒತ್ತಡ ಏರುಪೇರು. ಕುಲ ಬಾಂದವರಿಗಾಗಿ ಖರ್ಚು. ನಿಮ್ಮ ಮಾತಿನಿಂದ ಇತರರಿಗೆ ನೋವುಂಟಾಗಬಹುದು. ಥೈರಾಯ್ಡ್, ಕಿಡ್ನಿಯಲ್ಲಿ ಕಲ್ಲು, ಸ್ಲಿಪ್ ಡಿಸ್ಕ್ ಸಮಸ್ಯೆ ಇದ್ದವರಿಗೆ ಉಲ್ಬಣಿಸಬಹುದು. ಹಲ್ಲುಗಳಲ್ಲಿ ಅಥವಾ ದೇಹದ ಇನ್ನಿತರ ಬಾಗದಲ್ಲಿ ಮೂಳೆಗಳು ಸವೆಯುತ್ತಿವೆ, ವೈದ್ಯರನ್ನು ಕಾಣಿ. ಉದ್ಯೋಗದಲ್ಲಿ ನಿಮಗೆ ವಹಿಸಿದ ಕಾರ್ಯಗಳನ್ನು ಮುಗಿಸಿ ಅಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಕುಂಟುಂಬದ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಪತ್ರಕರ್ತರು, ಸಾಹಿತಿಗಳು ಹಾಗು ಸುದ್ದಿ ಮಾಧ್ಯಮದವರಿಗೆ ಗುರು ಪರಿವರ್ತನೆಯಿಂದ ಒಳಿತು. ಹಳೆಯ ವಸ್ತುಗಳ ರಿಪೇರಿಗಾಗಿ ಖರ್ಚು.
 ಧನಸ್ಸುವಾರದ ಆರಂಭದಲ್ಲಿ ಇದ್ದ ಚುರುಕುತನ ವಾರಾಂತ್ಯಕ್ಕೆ ಕಾಣದು. ಕೊಂಚ ಮಟ್ಟಿಗೆ ಸೋಮಾರಿತನ ನಿಮ್ಮನ್ನು ಅವರಿಸಲಿದೆ. ಅದಾಗಿಯೂ ತೀರ್ಥ ಕ್ಷೇತ್ರ, ದೇವಾಲಯ ಬೇಟಿ ಮುಂದುವರೆಯಲಿದೆ. ಭೂಮಿಗೆ ಸಂಬಂಧ ಪಟ್ಟ ವ್ಯಾಜ್ಯಗಳು ಹುಡುಕಿಕೊಂಡು ಬರಲಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪರದಾಡುವಿರಿ. ಇಷ್ಟುದಿನ ಇದ್ದ ಗುರುಬಲ ಇಲ್ಲದಿರುವುದರಿಂದ ಹಣದ ವಿಷಯವಾಗಿ ಜಾಗರುಕಾರಿಯಾಗಿರಿ. ಅತಿಯಾಗಿ ಯಾರನ್ನು ನಂಬದಿರಿ. ಕೆಲಸ ಬದಲಿಸುವ ಆಲೋಚನೆ ಇದ್ದವರಿಗೆ ಸೂಕ್ತವಲ್ಲ. ಹಾಗು ಕೆಲವರಿಗೆ ವರ್ಗಾವಣೆಯ ಸುದ್ದಿ ಮುಟ್ಟಬಹುದು, ವಿಶೇಷವಾಗಿ ಸರ್ಕಾರಿ ಉದ್ಯೋಗಸ್ಥರಿಗೆ.
 ಮಕರಮುಂಬರುವ ವಿದೇಶ ಪ್ರಯಾಣಕ್ಕೆ ನಿಮಗೆ ತಿಳಿಯದ ಕಾರ್ಯಗಳು ಚುರುಕುಗೊಳ್ಳುವುದು. ಹಿರಿಯರೊಬ್ಬರು ಅಥವಾ ಉನ್ನತ ಸ್ಥಾನದಲ್ಲಿ ಇರುವವರು ನಿಮ್ಮ ಮಾರ್ಗದರ್ಶನಕ್ಕಾಗಿ ಹುಡುಕಿಕೊಂಡು ಬರಬಹುದು. ನಿಮ್ಮ ಜ್ಞಾನಾಕ್ಕೆ ಅರ್ಥ ದೊರೆಯುವ ದಿನ ಬಹಳ ಹತ್ತಿರದಲ್ಲಿದೆ. ಧನಾಗಮನ ಸೂಚನೆ ಕಾಣಲಿದೆ. ವ್ಯಾಪಾರಸ್ಥರಿಗೆ ವ್ಯಾಪಾರವನ್ನು ಬೆಳೆಸುವಲ್ಲಿ ಮಾರ್ಗದರ್ಶನ ದೊರೆಯಲಿದೆ. ರಿಯಲ್ ಎಸ್ಟೇಟ್ ವ್ಯವಹಾರದವರಿಗೆ. ಪ್ರಿಂಟಿಂಗ್, ಆಮದು, ರಫ್ತು, ಲೆದರ್ ವ್ಯಾಪಾರಸ್ಥರಿಗೆ ಉತ್ತಮ ಅಡಿಪಾಯ ಬೀಳುವ ವಾರ. ಗಂಡ/ಹೆಂಡತಿಯಿಂದ ಮಾನಸಿಕ ಅಶಾಂತಿ. ಕಾಲುಗಳ ನೋವು ಉಲ್ಬಣಿಸುವುದು.
 ಕುಂಭಅನಾರೋಗ್ಯದ ಸಮಸ್ಯೆ ಮುಂದುವರೆಯುವವಾರ. ತೆರಿಗೆ ವಿಷಯದಲ್ಲಿ ಉದಾಸೀನ ಮಾಡಿರುವವರಿಗೆ ತೊಂದರೆ. ವ್ಯಾಯಾಮ,ಜಿಮ್ ವರ್ಕ್  ಮಾಡುವಾಗ ಸಮಸ್ಯೆಗಳಾಗಬಹುದು. ಸ್ಲಿಪ್ ಡಿಸ್ಕ್, ಮಂಡಿನೋವಿನ ಸಮಸ್ಯೆ ಕಾಡಬಹುದು. ಸರ್ಕಾರಿ ಅಧಿಕಾರಿಗಳಿಗೆ ಕಿರಿಕಿರಿಯ ವಾರ. ಕುಟುಂಬದೊಂದಿಗೆ ಕಾಲಕಳೆಯಲು ಪ್ರಯತ್ನಿಸುವಿರಿ ಆದರೆ ಅದು ಫಲಿಸದು ಅದೃಷ್ಟ ಹಾಗು ಹೆಚ್ಚಿನ ಪರಿಶ್ರಮವಿಲ್ಲದ ಕೆಲಸಕ್ಕೆ ಕಾಯುವಿರಿ. ಆದರೆ ಅದರಿಂದ ತೊಂದರೆ ಹೆಚ್ಚು. ಕಾರು ಖರೀದಿಸುವ ಆಲೋಚನೆಯಲ್ಲಿರುವ ನಿಮಗೆ ಇದು ಸಕಾಲ ಹಣಕಾಸಿನ ವ್ಯವಸ್ಥೆ ಆಗುವುದು.
 ಮೀನಇತರರೂ ನಿಮ್ಮ ಮೇಲೆ ಒತ್ತಡ ಹೇರುವ ವಾರವಾದರೂ ವಾರಾಂತ್ಯಕ್ಕೆ ಅದನ್ನು ನಿಭಾಯಿಸುವ ಜಾಣ್ಮೆ ಗುರುವಿನಿಂದ ಪಡೆಯುವಿರಿ. ತಂದೆಯ ಜೊತೆಗೆ ಮಾತಿನ ಚಕಮಕಿ ಇಲ್ಲವೆ ತಂದೆಯ ಕೆಲಸ ಕಾರ್ಯಗಳಿಗೆ ಒಡಾಟ. ನಿಮ್ಮ ಚಿಂತನೆ ಮತ್ತು ಆಲೋಚನೆಯಲ್ಲಿ ವ್ಯತ್ಯಾಸ ಕಾಣುವ ವಾರ. ಮನೆಯಲ್ಲಿ ಅಥವಾ ವಾಹನದಲ್ಲಿನ ವಸ್ತುಗಳು ಕಳುವಾಗುವುದು. ಕೊಲೆಸ್ಟ್ರಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ ವಾರ್ಯಾಂತ್ಯಕ್ಕೆ ಸ್ನೇಹಿತರ/ಬಂಧುಗಳ ಜೊತೆ ಸಂತೋಷದಿಂದ ಸಮಯ ಕಳೆಯುವಿರಿ.

ಅಕ್ಟೋಬರ್ 11ರ ನಂತರ ಗುರು ವೃಶ್ಚಿಕ ರಾಶಿಗೆ ಪ್ರವೇಶ

ನವೆಂಬರ್ 15ದ ಒಳಗೆ ದಕ್ಷಿಣ ಭಾರತದ ಯಾವುದಾದರೂ ಎರಡು ರಾಜ್ಯಗಳಿಗೆ ಮಳೆಯಿಂದ ತೊಂದರೆ. (ವಿಶೇಷವಾಗಿ ಆಂಧ್ರ ಪ್ರದೇಶ ಮತ್ತು ತಮಿಳು ನಾಡು)

ಇನ್ನಾರು ತಿಂಗಳಲ್ಲಿ ಯಾವುದಾದರು ವೈರಸ್ ಜ್ವರ ಅಥವಾ ಕಾಯಿಲೆಗಳು ಹರಡಬಹುದು.

ಧರ್ಮಗುರುಗಳಿಬ್ಬರಿಗೆ ತೊಂದರೆ ಅಥವಾ ಇಕ್ಕಟ್ಟಿಗೆ ಸಿಲುಕುವರು.

ಜ್ಯೋತಿಷ  – ರವೀಕೃ., ಬೆಂಗಳೂರು,

 

Tags

Related Articles