ಬಾಲ್ಕನಿಯಿಂದ

ಬಾಲ್ಕನಿ ವಾರ ಭವಿಷ್ಯ-1

ಈ  ವಾರದ  ಆಗು-ಹೋಗು ನಿಮ್ಮ ಕೈಲಿ


                                                          ಬಾಲ್ಕನಿ ವಾರ ಭವಿಷ್ಯ

                                      12-8-2018 ಭಾನುವಾರ ದಿಂದ 18-8-2018 ಶನಿವಾರ

ಮೇಷ  ಉತ್ತರಾರ್ಧದಲ್ಲಿ ಆರೋಗ್ಯ ವೃದ್ದಿ. ಸರ್ಕಾರದ ಕೆಲಸಗಳಲ್ಲಿ ಪ್ರಗತಿ ಹಾಗು ಕ್ರಿಯಾಶೀಲರಾಗುವಿರಿ. ಹೆಚ್ಚು ಚಟುವಟಿಕೆಯಿಂದ ಓಡಾಡುವಿರಿ. ಕರಾರು ಹಾಗು ಒಪ್ಪಂದಗಳಿಗೆ ಸಂಬಂಧಿಸಿದಂತೆ ಜಾಗರೂಕರಾಗಿರಿ.
ವೃಷಭ ಪೂವಾರ್ಧದಲ್ಲಿ ಸಂಬಂಧಗಳ ವಿಷಯದಲ್ಲಿ ಅಸಮಾಧಾನವಿದ್ದರೂ, ಉತ್ತರಾರ್ಧದಲ್ಲಿ ಹೆಮ್ಮೆ ಪಡುವಂತಹ ವಾರ.  ವಾರಾಂತ್ಯಕ್ಕೆ ದೇವಸ್ಥಾನ ಅಥವಾ ಧಾರ್ಮಿಕ ಕಾರ್ಯಗಳು ಅಥವಾ ಗುರು ಹಿರಿಯರ ಭೇಟಿಗಾಗಿ ಓಡಾಟ.
Image result for mithun rashiಮಿಥುನ ಆರೋಗ್ಯದಲ್ಲಿ ಕಿರಿಕಿರಿ, ಊಟದ ಅಥವಾ ನೀರಿನ ವಿಚಾರದಲ್ಲಿ ಜಾಗರೂಕರಾಗಿರಿ. ಮಾತಿನ ಬಗ್ಗೆ ಗಮನವಿರಲಿ. ವಿನಾಕಾರಣ ಕಲಹ. ಉತ್ತರಾರ್ಧದಲ್ಲಿ ಧೈರ್ಯ ಹಾಗು ಹುಮ್ಮಸ್ಸು ಹೆಚ್ಚಾಗುವುದು.
ಕಟಕ ಪತಿ ಅಥವಾ ಪತ್ನಿಯ ಆರೋಗ್ಯದ ಕಾಳಜಿ ಇರಲಿ. ಕಲಹ ಸಾಧ್ಯತೆ ಹೆಚ್ಚು. ಉತ್ತರಾರ್ಧದಲ್ಲಿ ಮಕ್ಕಳ ವಿಚಾರದಲ್ಲಿ ಸಂತಸ ಹಾಗು ನೆಮ್ಮದಿ. ಸಂಬಂಧದಲ್ಲಿ ವ್ಯವಹರಿಸುವಾಗ ಎಚ್ಚರವಿರಲಿ.
ಸಿಂಹ ಹಿರಿಯರೊಂದಿಗೆ ಪೂವಾರ್ಧದಲ್ಲಿ ವಿನಾಕಾರಣ ವಾಗ್ವಾದ.  ಉತ್ತರಾರ್ಧದಲ್ಲಿ ಕೊಂಚ ಮಟ್ಟಿಗೆ ದಿನನಿತ್ಯದ ಚಟುವಟಿಕೆಗಳಲ್ಲಿ ಹೆಚ್ಚಿನ ಶಿಸ್ತು. ಹಿತ ಶತ್ರುಗಳಿಂದ ಎಚ್ಚರ. ವ್ಯವಹಾರದಲ್ಲಿ ಯಾವುದೇ ನಿರ್ಧಿಷ್ಠ ನಿರ್ಧಾರ ಬೇಡ.
ಕನ್ಯಾ ಪೂವಾರ್ಧದಲ್ಲಿ ಕೊಂಚ ಮಟ್ಟಿಗೆ ಆಸಕ್ತಿ ಕಮ್ಮಿ ಇದ್ದರೆ, ಉತ್ತರಾರ್ಧದಲ್ಲಿ ಹೆಚ್ಚಿನ ಲವಲವಿಕೆ ಬರುವುದು. ಯಾವುದಾದರೂ ದಂಡದ ರೂಪದಲ್ಲಿ ಸಣ್ಣ ಪ್ರಮಾಣದ ಹಣ ವ್ಯಯವಾಗಬಹುದು.
ತುಲಾ ಪೂವಾರ್ಧದಲ್ಲಿ ಹೆಚ್ಚಿನ ಕೆಲಸದ ಒತ್ತಡವಿದ್ದರೂ, ಜ್ಞಾನ ವೃದ್ಧಿಯಾಗುವುದು ಅಥವಾ ಕಲಿಕೆಯಲ್ಲಿ ಮನ್ನಣೆ. ಸಿಹಿ ಸುದ್ದಿಯ ನಿರೀಕ್ಷೆಯಲ್ಲಿ ವಾರ ಕಳೆಯುವಿರಿ.
ವೃಶ್ಚಿಕ ಪೂವಾರ್ಧದಲ್ಲಿ ಇದ್ದ ಕೆಲಸದ ಒತ್ತಡ ಹಾಗು ಕಿರಿಕಿರಿ , ಉತ್ತರಾರ್ಧದಲ್ಲಿ ನಿವಾರಣೆಯಾಗಿ ತಕ್ಕಮಟ್ಟಿಗೆ ಸಮಾಧಾನ ತರುವುದು. ವಾರಾಂತ್ಯದಲ್ಲಿ ಹೆಚ್ಚಿನ ಖರ್ಚು.
ಧನಸ್ಸು – ಎಂದಿನಂತೆ ಎಲ್ಲಾ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಉತ್ತರಾರ್ಧದಲ್ಲಿ ತಂದೆಯ ಆರೋಗ್ಯದಲ್ಲಿ ಚೇತರಿಕೆ ಅಥವಾ ಬಾಂಧವ್ಯ ವೃದ್ಧಿ. ಉದ್ಯೋಗ ಅಥವಾ ವ್ಯವಹಾರದಲ್ಲಿ ಸ್ತ್ರೀಯಿಂದ ಕಿರಿಕಿರಿ.
ಮಕರ ದಂತ  ವೈದ್ಯರನ್ನು ಭೇಟಿ ಮಾಡಬಹುದು. ಪೂವಾರ್ಧದಲ್ಲಿ ಮನಸ್ಸಿಗೆ ಕಿರಿಕಿರಿ ಅಥವಾ ಅಶಾಂತಿ ಅಥವಾ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.  ಉತ್ತರಾರ್ಧದಲ್ಲಿ ತಕ್ಕಮಟ್ಟಿಗಿನ ಸಮಾಧಾನ. ವಾರಾಂತ್ಯದಲ್ಲಿ ದೇವಸ್ಥಾನಗಳಿಗೆ ಭೇಟಿ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ.
Image result for kumbh rashiಕುಂಭ ಎಂದಿನಂತೆ ಹೊಸ ಹುರುಪಿನೊಂದಿಗೆ ವಾರವನ್ನು ಆರಂಭಿಸುವಿರಿ. ಕುಟುಂಬದಲ್ಲಿ ಸಂತಸದ ವಾರ್ತೆ, ಸಂಬಂಧಿಕರಲ್ಲಿ ಯಾರಿಗಾದರೂ ಆನಾರೋಗ್ಯ ಸಂಭವ. ಉತ್ತರಾರ್ಧದಲ್ಲಿ ಹೆಚ್ಚಿನ ಶಿಸ್ತು ಕಂಡರೂ ಉದ್ಯೋಗ ಅಥವಾ ವ್ಯವಹಾರದ ಒತ್ತಡ.
ಮೀನ ಹೆಚ್ಚಿನ ಆಸಕ್ತಿದಾಯಕ ವಾರವಲ್ಲವಾದರೂ ತಾಳ್ಮೆ ಇರಲಿ. ಹೊಟ್ಟೆ ಅಥವಾ ಕೆಳಭಾಗದಲ್ಲಿ ಸಮಸ್ಯೆ ಕಾಣಿಸಿ ಅನಾರೋಗ್ಯ. ಕಾರಣವಿಲ್ಲದೆ ಕುಟುಂಬದಲ್ಲಿ ಕೂಗಾಟ ಬೇಡ. ಮುಂಗೋಪ ಹತೋಟಿಯಲ್ಲಿಡಿ.

 

ಬಾಲ್ಕನಿ  ಭವಿಷ್ಯ ವಾಣಿ                                                            ಬ್ರೇಕಿಂಗ್  ಬುಲೆಟಿನ್

ಗ್ರಹಗಳು ಜಲರಾಶಿಯಲ್ಲಿ ಸ್ಥಿತವಾಗಿರುವುದರಿಂದ ಚಿತ್ರಗಳು ಗಳಿಕೆಯಲ್ಲಿ ತುಸು ಹಿಂದೆ ಬೀಳಲು ಮಳೆಯೇ ಕಾರಣವಾದೀತು.ಆಗಸ್ಟ್ 16 ನಂತರ ಸೂರ್ಯ ಸಂಕ್ರಮಣದ ತರುವಾಯ  ಗಳಿಕೆಯಲ್ಲಿ ಕೊಂಚ ಚೇತರಿಕೆ ಕಂಡುಬರಬಹುದು.
ಸೆಪ್ಟೆಂಬರ್ 2 ತನಕ ದೊಡ್ಡ ಬಜೆಟ್ ಸಿನಿಮಾಗಳನ್ನು ಆರಂಭಿಸಲು ಮತ್ತು ಬಿಡುಗಡೆ ಮಾಡಲು ಸೂಕ್ತ ಸಮಯವಲ್ಲ.ಜೂನ್ 27 ಗ್ರಹಣದ ಪ್ರಭಾವದಿಂದ ಮುಂಬರುವ 2 ಅಥವಾ 3 ತಿಂಗಳ ಒಳಗೆ ದಕ್ಷಿಣ ಭಾರತದ ಚಿತ್ರಗಳ ಚಿತ್ರೀಕರಣದ ವೇಳೆ ಕೆಲವು ಅವಗಢಗಳು (ಸಾಹಸ ಚಿತ್ರೀಕರಣ ಅಥವಾ ಸೆಟ್ನಲ್ಲಿಸಂಭವಿಸಬಹುದು.
ಅಕ್ಟೋಬರ್, ನವೆಂಬರ್ ವೇಳೆಗೆ ಎರಡು ದೊಡ್ಡ ಬಜೆಟ್ ಸಿನಿಮಾಗಳ ಬಿಡುಗಡೆ ವೇಳೆ ಪೈಪೋಟಿಗೆ ಬೀಳುವ ಸಾಧ್ಯತೆಗಳಿವೆ.                   ಜ್ಯೋತಿಷ  – ರವೀ. ಕೃ., ಬೆಂ.

 

 

Tags