ಬಾಲ್ಕನಿ ವಾರ ಭವಿಷ್ಯಬಾಲ್ಕನಿಯಿಂದವಾರ ಭವಿಷ್ಯ

ಬಾಲ್ಕನಿ ವಾರ ಭವಿಷ್ಯ -5

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

09-09-2018 ಭಾನುವಾರ ದಿಂದ 15-09-2018 ಶನಿವಾರದ ತನಕ

 ಮೇಷ – ಪೂರ್ವಾರ್ಧದಲ್ಲಿ ಸೋಮಾರಿತನವು, ಮನಸ್ಸಿಗೆ ವ್ಯಥೆಯು, ಇಷ್ಟ ಕಾರ್ಯಗಳು ಉತ್ತಮ ಫಲಿತಾಂಶವನ್ನು ನೀಡದಿದ್ದರೂ ಉತ್ತರಾರ್ಧದಲ್ಲಿ ಮನಸ್ಸಿಗೆ ನೆಮ್ಮದಿ, ಸುಖ ಪ್ರಯಾಣ, ಧಾರ್ಮಿಕ ಉದ್ದೇಶಗಳಿಗಾಗಿ ಖರ್ಚು ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ, ಕ್ಷೀರಾನ್ನ ಭೋಜನ. ಕಲಾವಿದರಿಗೆ ಉತ್ತಮ ಅವಾಕಾಶಗಳು ಒದಗಿ ಗುರುತಿಸಲ್ಪಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ವಾರ. ಗೃಹ ಉಪಯೋಗಿ ವಸ್ತುಗಳಿಗಾಗಿ ಖರ್ಚು ಅಥವಾ ರಿಪೇರಿಗಾಗಿ ಖರ್ಚು.
 ವೃಷಭ – ಪೂರ್ವಾರ್ಧದಲ್ಲಿ ಚಂಚಲ ಬುದ್ಧಿಯಿಂದ ಕುಟುಂಬ, ಕಛೇರಿ ಅಥವಾ ನೆರೆಹೊರೆಯವರೊಂದಿಗೆ ಅನವಶ್ಯ ಚರ್ಚೆಗೆ ಗ್ರಾಸವಾಗುವಿರಿ. ಯಾವುದೋ ಸಂಕಲ್ಪಿತ ಕಾರ್ಯಕ್ಕೆ ಸಂಗಟನೆಯಲ್ಲಿ ತೊಡಗುವಿರಿ. ಆದರೆ ನಿರೀಕ್ಷಿತ ಫಲಿತಾಂಶ ದೊರಕದು. ಉತ್ತರಾರ್ಧದಲ್ಲಿ ನಿಮ್ಮ ತಾಳ್ಮೆಗೆ ಜಯ ಸಂದುವುದು. ನಿಮ್ಮ-ನಿಮ್ಮ ಕಾರ್ಯ ಕ್ಷೇತ್ರಗಳಲ್ಲಿ ನಿಮ್ಮ ಪ್ರಯತ್ನಕ್ಕೆ ಜಯ ಸಂದುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ತಾಯಿಯೊಂದಿಗೆ ವೈಮನಸ್ಸು ಸೋದರ ಮಾವನಿಂದ ವಾರ್ತೆ.

 

 ಮಿಥುನ – ಪೂರ್ವಾರ್ಧದಲ್ಲಿ ಸ್ವಲ್ಪ ಅಳುಕಿನಿಂದ ಪ್ರಾರಂಭವಾದರೂ ಧನಾರ್ಜನೆಯಾಗುವುದು. ವಸ್ತ್ರ ಅಥವಾ ಆಭರಣ ಅಥವಾ ಗೃಹ ಅಲಂಕಾರಿಕ ವಸ್ತುಗಳನ್ನು ಖರೀದಿಸುವ ವಾರ. ಉನ್ನತ ವ್ಯಾಸಂಗದ ಪ್ರಯತ್ನದಲ್ಲಿರುವ ವಿದ್ಯಾರ್ಥಿಗಳಿಗೆ ಸುವಾರ್ತೆ. ಮಾತನ್ನು ಹತೋಟಿಯಲ್ಲಿಟ್ಟರೆ ಉದ್ಯೋಗ ಅಥವಾ ವ್ಯಾಪಾರಸ್ಥರಿಗೆ ಮನ್ನಣೆ ಸಿಗುವ ವಾರ. ಒಟ್ಟಾರೆಯಾಗಿ ವಾಸ್ತವ ಬದುಕಿನಿಂದ ದೂರ ವಿಹರಿಸಿದರೂ ವಾರಾಂತ್ಯಕ್ಕೆ ವಾಸ್ತವ ಬದುಕಿಗೆ ಮರಳುವಿರಿ. ವಾರಾಂತ್ಯದಲ್ಲಿ ಯಾವುದೇ ಲೇವಾದೇವಿ, ವ್ಯವಹಾರ ಅಥವಾ ಕರಾರುಗಳಿಗೆ ಸಹಿ ಹಾಕದಿರಿ.

 

 ಕಟಕ – ಪೂರ್ವಾರ್ಧದಲ್ಲಿ ವಸ್ತುಗಳು ಎಲ್ಲೋ ಇಟ್ಟು ಮರೆತು ಹುಡುಕಾಡುವ ವಾರ.  ವಾಸ್ತವವಾಗಿ  ಆಲೋಚಿಸಿ ಕಾರ್ಯಗಳನ್ನು ಪೂರ್ಣಗೊಳಿಸುವ ವಾರ. ಸ್ನೇಹಿತರೊಡಗೂಡಿ ವಿನೋಧಗೋಷ್ಟಿ, ಸತ್ಸಂಗ ಅಥವಾ ಮೋಜು, ಮಸ್ತಿಯಿಂದ ಕಳೆಯುವ ವಾರವಾದರೂ ಸ್ದಬುದ್ದಿಯಿಂದ ಆಲೋಚಿಸಿ. ಯಾವುದೇ ಆತುರದ ನಿರ್ಧಾರಗಳು ಬೇಡ. ಉತ್ತರಾರ್ಧದಲ್ಲಿ ಪ್ರಯಾಣವಿದ್ದರೂ, ದಕ್ಷಿಣ ದಿಕ್ಕಿಗೆ ಪ್ರಯಾಣ ಬಳಸಿದ್ದಲ್ಲಿ ಪ್ರಯಾಣದಲ್ಲಿ ತೊಂದರೆ. ದುರ್ಗಿಯ ಆರಾಧನೆಯಿಂದ ಒಳಿತು ಕಾಣುವಿರಿ.

 

 ಸಿಂಹ – ಜೀವನವು ಆಮೆಗತಿಯಲ್ಲಿ ಸಾಗುತ್ತಿರುವಂತೆ  ಭಾವದಲ್ಲಿರುವ ನಿಮಗೆ, ಸ್ವಲ್ಪ ಮಟ್ಟಿಗೆ ಚೇತರಿಕೆ ತರುವ ದಿನಗಳು ಹತ್ತಿರದಲ್ಲಿದೆ. ಕುಂಟುಂಬ ಸಮಸ್ಯೆಗಳಿಗೆ ಪರಿಹಾರಗಳನ್ನು ಕಾಣುವಿರಿ. ಹೊಸ ಆಲೋಚನೆ, ಹುಮ್ಮಸ್ಸಿನಿಂದ ಮುನ್ನಡೆಯುವಿರಿ. ಮುಂಗೋಪವನ್ನು ಹತೋಟಿಯಲ್ಲಿಡಿ. ಬೇರೆಯವರಿಂದ ಅತಿಯಾದ ಶಿಸ್ತನ್ನು ನೀರಿಕ್ಷಿಸುವುದು ಒಳ್ಳೆಯದಲ್ಲ. ಬಹಳ ಹತ್ತಿರದವರನ್ನು ಅಥವಾ ಮಾರ್ಗದರ್ಶಕರನ್ನು ಭೇಟಿ ಮಾಡುವಿರಿ. ಸ್ಥಿರವಾದ ನೆಲೆ ಕಾಣುವ ದಿನಗಳು ಹತ್ತಿರದಲ್ಲಿದೆ. ಉತ್ತರಾಭಿಮುಖ ಹನುಮನ ದರ್ಶನದಿಂದ ಒಳಿತಾಗುವುದು.

 

 ಕನ್ಯಾ – ಪೂರ್ವಾರ್ಧದಲ್ಲಿ ದಂಡದ ರೂಪದಲ್ಲಿ ಅಥವಾ ಅಶಿಸ್ತಿನಿಂದ ಖರ್ಚು, ಕುಂಟುಂಬದಲ್ಲಿ ಸಂತೋಷದ ವಾರ್ತೆ. ಗೃಹ ಖರೀದಿ ಅಥವಾ ಗೃಹ ನಿರ್ಮಾಣದ ಚರ್ಚೆಯ ವಿಷಯವನ್ನು ಮುಂದೂಡುವುದು ಒಳಿತು. ಕನ್ಯೆ ಅಥವಾ ವರನ ಹುಡುಕಾಟದಲ್ಲಿರುವವರಿಗೆ ಸ್ವಲ್ಪ ದಿನಗಳಲ್ಲಿ ಶುಭ ಸುದ್ಧಿ ಲಭಿಸಲಿದೆ. ಕೋರ್ಟಿನ ವ್ಯವಹಾರದಲ್ಲಿ ದಿಡೀರ್ ಬೆಳವಣಿಗೆಯೊಂದು ಕಾಣಿಸುವುದು. ಗುರುಹಿರಿಯರನ್ನು ಅಥವಾ ಸ್ನೇಹಿತರನ್ನು ಕಾಣುವ ಆಲೋಚನೆಯಲ್ಲಿ ಬಹಳ ದಿನಗಳಿಂದ ಇದ್ದ ನಿಮಗೆ ಅವಕಾಶವು ಒದಗಿ ಬರುವುದು.

 

 ತುಲಾ – ಪೂರ್ವಾರ್ಧದಲ್ಲಿ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಅಥವಾ ಮೇಲಧಿಕಾರಿಗಳ ಸಮಸ್ಯೆ ಕಾಣಿಸಿಕೊಂಡರೂ ಉತ್ತರಾರ್ಧದಲ್ಲಿ ಇಲ್ಲವಾಗುವುದು. ವೃತಾ ಪ್ರಯಾಣ ಹಾಗೂ ಖರ್ಚು. ನಿಮ್ಮ ತಾಳ್ಮೆ ಹಾಗೂ ಧೈರ್ಯ ದೃತಿಗೆಡದಂತೆ ನೋಡಿಕೊಳ್ಳುವುದು. ಗೃಹೋಪಯೋಗಿ ವಸ್ತು ಅಥವಾ ಅಲಂಕಾರಿಕ ವಸ್ತುವನ್ನು ಖರೀದಿಸುವಿರಿ. ಯಾವುದಾದರು ಮಾತುಕತೆಗೆ ಮಧ್ಯಸ್ಥಿಕೆ ವಹಿಸುವಿರಿ. ರಕ್ತ ಪರೀಕ್ಷೆ ಮಾಡಿಸಿ ಮಧುಮೇಹದ ಪ್ರಮಾಣವನ್ನು ತಿಳಿಯುವುದು ಓಳಿತು. ಜ್ಞಾನಾರ್ಜನೆಗೆ ಉತ್ತಮ ಸಮಯ.

 

 ವೃಶ್ಚಿಕ – ಪೂರ್ವಾರ್ಧದಲ್ಲಿ ಆಲೋಚಿಸಿದ ಕಾರ್ಯಸಿದ್ಧಿ, ಆರೋಗ್ಯ, ಬಂಧುಗಳ ಭೇಟಿ, ಸುಖಭೋಜನ, ಪ್ರಯತ್ನಿಸಿದ ಕಾರ್ಯಗಳು ಕೈಗೂಡುವುದು. ತನ್ನ ಮನೆಯಲ್ಲಿ, ಉದ್ಯೋಗ, ವ್ಯಾಪಾರ ಸ್ಥಳಗಳಲ್ಲಿ ನಿಮ್ಮ ಮಾತು ನೆಡೆಯುವುದು. ದೇವಾಲಯಗಳು ಹಾಗು ಧಾರ್ಮಿಕ ಕ್ಷೇತ್ರಗಳ ಭೇಟಿ ಮುಂದುವರೆಯುವುದು. ನೀವು ಮಾಡುವ ದಾನ-ಧರ್ಮಗಳು ಇತರರಿಗೆ ತಿಳಿಯದಿದ್ದಲ್ಲಿ ಅತಿಯಾದ ತೋರುವಿಕೆಯಿಂದ ಧನವ್ಯಯವು ಆಗುವುದು. ಯಾವುದಾದರೂ ಹಳೆಯ ಸಮಸ್ಯೆ ಮರುಕಳಿಸಬಹುದು.

 

 ಧನಸ್ಸು – ಜೀವನವು ಆಮೆಗತಿಯಲ್ಲಿ ಸಾಗುತ್ತಿರುವ ಅನುಭವದಲ್ಲಿರುವ ನಿಮಗೆ ಸ್ವಲ್ಪ ತಂಗಾಳಿಯ ಹಿತ ಅನುಭವ ಆಗಲಿದೆ. ಉದ್ಯೋಗ,ವ್ಯಾಪಾರ ಸ್ಥಳಗಳಲ್ಲಿ ಮನ್ನಣೆ. ಹಿಂದಿನ ಅಧಿಕಾರಿಗಳು ಅಥವಾ ಹಿಂದಿನ ವ್ಯಾಪಾರಿ ಸಂಬಂಧವನ್ನು ಭೇಟಿ ಮಾಡುವ ವಾರವಾಗಲಿದೆ ಅಥವಾ ಸುದ್ದಿಯನ್ನು ಪಡೆಯುವಿರಿ. ದಂತ ಅಥವಾ ಕಣ್ಣಿನ ಪರೀಕ್ಷೆಗೆ ಒಳಪಡುವಿರಿ. ಯಾರಿಗಾದರೂ ಕಾಣಿಕೆಯನ್ನು ನೀಡಿದ್ದರೆ ಅಥವಾ ಕಾಣಿಕೆಯನ್ನು ಸ್ವೀಕರಿಸಿದ್ದರೆ, ಅದರಿಂದ ಕೊಂಚಮಟ್ಟಿಗೆ ಅಸಮಧಾನವಾಗುವ ವಾರ. ಹನುಮನ ಪ್ರಾರ್ಥನೆಯಿಂದ ಒಳಿತು.

 

 ಮಕರ – ಇಷ್ಟುದಿನ ನಿಮ್ಮ ವೇಗಕ್ಕೆ ತಡೆ ಒಡ್ಡುತ್ತಿದ್ದ ಸಂಗತಿಗಳು ಸ್ವಲ್ಪ ಮಟ್ಟಿಗೆ ದೂರಸರಿಯುವುದು. ನಿಮ್ಮ-ನಿಮ್ಮ ಕ್ಷೇತ್ರಗಳಲ್ಲಿ ನಿಮ್ಮ ಅನುಭವ ಮತ್ತು ಜ್ಞಾನಕ್ಕೆ ಮನ್ನಣೆ ಸಿಗುವ ವಾರವಾಗಲಿದೆಯಾದರೂ, ಯಾವುದೇ ಆತುರದ ನಿರ್ಧಾರಗಳು ಬೇಡ. ಯಾವುದೇ ದ್ವಂದ್ವ ಹೇಳಿಕೆಗಳು ಬೇಡ. ಸಂಗಾತಿಯೊಂದಿಗೆ ಮಧುರವಾದ ಬಾಂಧವ್ಯ. ನಿಮ್ಮ ಪ್ರೀತಿಯ ವಿಚಾರವನ್ನು ಕುಂಟುಂಬದಲ್ಲಿ ತಿಳಿಸಿ ಚರ್ಚಿಸುವ ವಾರ. ಕಲಾವಿದರು, ಸಾಹಿತಿಗಳಿಗೆ ಉತ್ತಮ ವಾರ. ವಿದ್ಯಾರ್ಥಿಗಳಿಗೆ ಹೆಚ್ಚಿನ ಏಕಾಗ್ರತೆ ಅವಶ್ಯಕ.

 

 ಕುಂಭ – ಮನಸ್ಸಿಗೆ ನೆಮ್ಮದಿ, ಯಶಸ್ಸು ವೃದ್ಧಿಸುವುದು, ಸೌಭಾಗ್ಯ ವೃದ್ಧಿ, ಧನಾರ್ಜನೆ, ಸ್ತ್ರೀ ಸೌಖ್ಯವು, ಶಾರೀರಿಕ ಸೌಖ್ಯವು ಲಭಿಸುವುದಾದರೂ, ಸರ್ಕಾರ, ಸರ್ಕಾರೇತರ ಸಂಸ್ಥೆಯಿಂದ ಅನವಶ್ಯಕ ಸಮಸ್ಯೆಗೆ ಸಿಲುಕುವಿರಿ. ನಿಮ್ಮ ವಾಣಿಜ್ಯ ವ್ಯವಹಾರಗಳ ದಾಖಲೆಯಲ್ಲಿ ದೋಷವಿದ್ದರೆ ಸರಿಪಡಿಸಿಕೊಳ್ಳಿ.(ವಾಣಿಜ್ಯ ತೆರಿಗೆ, ಆದಾಯ ತೆರಿಗೆ ) ವಸ್ತ್ರ, ಆಭರಣಗಳಿಗಾಗಿ ಖರ್ಚು. ಗುರುಭಕ್ತಿ, ದೇವಾಲಯ ಭೇಟಿ, ಶುದ್ಧ ಚಿತ್ತ. ಒಡಹುಟ್ಟಿದವರ ಜೊತೆ ಮಾತಿನ ಚಕಮಕಿ ಅಥವಾ ಅವರ ಆರೋಗ್ಯದಲ್ಲಿ ವ್ಯತ್ಯಾಸ.

 

 ಮೀನ – ಪೂರ್ವಾರ್ಧದಲ್ಲಿ ಸ್ಥಾನದ ಅಭದ್ರತೆ ಕಾಡುವುದು. ಉದ್ಯೋಗ, ವ್ಯಾಪಾರದಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ ಅನುಭವಿಸುವಿರಿ. ಆದರೂ ನೀವು ಕೈಗೊಂಡ ಕಾರ್ಯಗಳು ಸಫಲತೆ ಕಾಣುವುದು. ಚೋರ ಭಯ, ರಾಜ ಭಯ ಅಥವಾ ರಾಜ ಕೋಪದ ಭಯ ಮುಂದುವರೆಯುವುದು. ಕೆಲವೊಮ್ಮೆ ನಿಷ್ಠುರದ ಮಾತುಗಳನ್ನು ಕೇಳಬೇಕಾದೀತು. ಸರಿಯಾದ ಲೆಕ್ಕಾಚಾರವಿಲ್ಲದ ಕಾರ್ಯಕ್ಕೆ ಕೈ ಹಾಕದಿರಿ. ಕೋಪವನ್ನು ಹತೋಟಿಯಲ್ಲಿಡಿ. ಗುರುಗಳ ಆರಾಧನೆಯಿಂದ ಒಳಿತು.

 

ವರ್ಷಾಂತ್ಯಾದ ಒಳಗೆ ಸೆಲೆಬ್ರೆಟಿಯೊಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವ ಸೂಚನೆಗಳಿದೆ.

ಜ್ಯೋತಿಷ  – ರವೀಕೃ., ಬೆಂ.

 

Tags

Related Articles