ಬಾಲ್ಕನಿ ವಾರ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯವಾರ ಭವಿಷ್ಯ

ಬಾಲ್ಕನಿ ವಾರ ಭವಿಷ್ಯ: 21-10-2018 ರ ಭಾನುವಾರ ದಿಂದ 27-10-2018 ಶನಿವಾರದ ತನಕ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

ಬಾಲ್ಕನಿ ವಾರ ಭವಿಷ್ಯ: 21-10-2018 ರ ಭಾನುವಾರ ದಿಂದ 27-10-2018 ಶನಿವಾರದ ತನಕ

ಮೇಷ – ಈ ವಾರ ಪ್ರತಿಯೊಂದನ್ನು ಲೆಕ್ಕಚಾರದಲ್ಲಿ ನೋಡುವಿರಿ. ವಾರದ ಆರಂಭ ಮತ್ತು ಮಧ್ಯದಲ್ಲಿ ಶುಭವೆನಿಸುವುದು. ನಿಮ್ಮ ಅತಿಯಾದ ಲೆಕ್ಕಾಚಾರದಿಂದ ವಾರಾಂತ್ಯಕ್ಕೆ ಕೊಂಚ ಮೆಟ್ಟಿಗೆ ಬೇಸರ ತಂದುಕೊಳ್ಳುವಿರಿ. ಕಣ್ಣಿನ ಸಮಸ್ಯೆ ಹಾಗು ಮೂಳೆಗಳಿಗೆ ಸಂಬಂಧಪಟ್ಟಂತೆ ಅನಾರೋಗ್ಯ ಕಾಡಬಹುದು. ಸರ್ಕಾರಿ ಮಟ್ಟದ ಕೆಲಸಗಳು ಆಗದಿರುವುದು. ಅಥವಾ ದಂಡ ರೂಪದಲ್ಲಿ ಹಣವ್ಯಯ. ತಂದೆ ಮಕ್ಕಳ ನಡುವೆ ಭಿನ್ನಾಭಿಪ್ರಾಯ. ಆತ್ಮಬಲವನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಅಗತ್ಯ.

ವೃಷಭ – ಅಶಿಸ್ತಿನಿಂದ ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ನಿಮಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಕಾಡಬಹುದು. ಕೊಂಚ ಮಟ್ಟಿಗೆ ಸೋಮಾರಿತನ. ಕುಟುಂಬ ಹಾಗು ಸ್ನೇಹಿತರೊಡನೆ ಉತ್ತಮ ಬಾಂದವ್ಯ. ಪತಿ-ಪತ್ನಿಯಲ್ಲಿ ಭಿನ್ನಾಭಿಪ್ರಾಯ. ಉತ್ತಮ ಧನಾರ್ಜನೆಯಾದರೂ ಓಡಾಟವು. ಈ ವಾರವೂ ಮುಂದುವರೆದು ಹಣ ವ್ಯಯ. ಸಂಗಾತಿ ಮಾರ್ಗದರ್ಶಕರಾಗಿ ನಿಲ್ಲುವಿರಿ ಹಾಗೂ ಇತರರೂ ನಿಮ್ಮ ಸಲಹೆಯನ್ನು ಪಡೆಯಬಹುದು. ವಾರಾಂತ್ಯದಲ್ಲಿ ಪ್ರವಾಸದ ಲೆಕ್ಕಚಾರಕ್ಕೆ ಇಳಿಯುವಿರಿ. ಗೌರವ ಹಾಗೂ ಪ್ರತಿಷ್ಠೆ ಹೆಚ್ಚುವುದು. ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಆಸಕ್ತಿ ಕಮ್ಮಿ ಮಾಡಿ ಇತರ ವಿಷಯಗಳತ್ತ ಗಮನ ಹರಿಸುವಿರಿ.

ಮಿಥುನ – ವಾರದ ಆರಂಭ ಅತ್ಯಂತ ಉತ್ಸಾಹದಾಯಕವಾಗಿ ಪ್ರಾರಂಭವಾಗಿ ಇದ್ದರೂ ವಾರದ ಮಧ್ಯದಲ್ಲಿ ಅಶಿಸ್ತಿನಿಂದ ತೊಂದರೆ/ಪೇಚಿಗೆ ಸಿಲುಕುವಿರಿ. ಇತರರನ್ನು ನಿಗ್ರಹಿಸಲು ನಿಮ್ಮಿಂದಾಗದು. ಸಂಗಾತಿಯ ತಂದೆಗೆ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಧನ ವ್ಯಯ. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳಿಗೆ ಅನುಕೂಲ. ಬಂಧುಗಳು ಹಾಗು ಸ್ನೇಹಿತರೊಂದಿಗೆ ಕೂಡಿ ಕಾಲ ಕಳೆವ ವಾರ. ಉದ್ಯೋಗಸ್ಥರಿಗೆ ಅಧಿಕಾರಿಗಳಿಂದ ಕಿರಿಕಿರಿ, ಅಶಾಂತಿ. ತಂದೆಯೊಂದಿಗೆ ಮಾತಿನ ಚಕಮಕಿ ನಡೆಯುವ ಸಂಭವ ಅಥವಾ ಅನಾರೋಗ್ಯ. ನಿಮ್ಮ ಆಲಸ್ಯದಿಂದ, ಬರುವ ಅವಕಾಶಗಳಿಂದ ವಂಚಿತರಾಗುವಿರಿ.ಕಟಕ – ವಾರದ ಆರಂಭದಲ್ಲಿ ಕೊಂಚ ವಿಚಲಿತರಾಗುವಿರಿ ಹಾಗು ಕೆಲಸದ ಒತ್ತಡಗಳು ಹೆಚ್ಚುತ್ತವೆ. ಧೃತಿಗೆಡದಿರಿ. ಇದು ತಾತ್ಕಲಿಕ. ವಾರದ ಮಧ್ಯ ಹಾಗೂ ಕೊನೆಯಲ್ಲಿ ಸ್ನೇಹಿತರಿಗೆ ಅಥವಾ ಕುಟುಂಬದವರಿಗೊಸ್ಕರ ಖರ್ಚು ಮಾಡುವಿರಿ. ಹಾಗು ಅವರೊಂದಿಗೆ ಕಾಲ ಕಳೆಯುವಿರಿ. ಶಿಸ್ತಿಗೆ ಪ್ರಾಧಾನ್ಯ ಕೊಟ್ಟರೆ ಒಳಿತು ಇಲ್ಲವಾದಲ್ಲಿ ತಂದೆಯೊಂದಿಗೆ ಸುಖಾಸುಮ್ಮನೆ ಮುನಿಸು. ಗಡಿಯಾರಗಳು ಹಾಳಾಗಬಹುದು ಹಾಗಾಗಿ ಖರ್ಚು. ಮಳೆಯಿಂದಾಗಿ ಕೆಲಸಗಳು ವಿಳಂಬ ಅಥವಾ ನಷ್ಟಗಳು. ಮೀನು, ಹಾಲು , ಎಣ್ಣೆ, ದ್ರವ್ಯದ ವ್ಯಾಪಾರಿಗಳಿಗೆ ಹಾಗೂ ವೈದ್ಯರು, ಲಾಯರ್ ಗಳಿಗೆ ಉತ್ತಮವಲ್ಲ.ಸಿಂಹ – ವಾರದ ಆರಂಭದಲ್ಲಿ ಜಾಣ್ಮೆ ಹಾಗೂ ಚುರುಕುತನದ ಅವಶ್ಯಕತೆ ಇದೆ. ವೃತ ಅಲೆದಾಟ ಹಾಗೂ ಖರ್ಚು. ಆದರೂ ವಾರಾಂತ್ಯಕ್ಕೆ ನಿಮ್ಮ ಶ್ರಮಕ್ಕೆ ಪ್ರತಿಫಲ ದೊರಕುವುದು. ಗೃಹೋಪಯೋಗಿ ವಸ್ತು ಒಂದನ್ನು ಖರೀದಿಸುವ ಆಲೋಚನೆಯಲ್ಲಿ ಇರುವಿರಿ. ಮುಂದುವರೆಯಬಹುದು. ಅಥವಾ ಹಳೆಯ ವಾಹನ ಖರೀದಿಸುವ ಪ್ರಯತ್ನಕ್ಕೆ ಹಿನ್ನೆಡೆ. ಅನಿವಾರ್ಯವಾದಲ್ಲಿ ಕುಲಂಕುಶವಾಗಿ ಪರಿಶೀಲಿಸಿ ನಂತರ ಮುಂದುವರೆಯುವುದು. ಕೋರ್ಟ್ ಕೆಲಸಗಳಲ್ಲಿ ಹಿನ್ನಡೆ ಹಾಗೂ ಅದರಿಂದ ಹಣ ವ್ಯಯ. ಆತ್ಮಬಲ ಕುಗ್ಗ ಬಹುದು. ಸೂರ್ಯನ ಆರಾಧನೆ ಹಾಗು ದತ್ತಾತ್ರೇಯನ ದರ್ಶನದಿಂದ ಒಳಿತಾಗುವುದು.ಕನ್ಯಾ – ಎಡಗಣ್ಣು, ಎಡಕಾಲಿನ ಸಮಸ್ಯೆ ಭಾದಿಸಬಹುದು. ಸಿಎ ,ಆಡಿಟಿಂಗ್, ಕಂಪನಿ ಸೆಕ್ರೆಟರಿ, ಅಕೌಂಟಿಂಗ್, ಹಣಕಾಸಿನ ಉದ್ಯೋಗಸ್ಥರಿಗೆ ಉದ್ಯೋಗದಲ್ಲಿ ತೊಂದರೆ ಅಥವಾ ನಷ್ಟ. ಸರ್ಕಾರ ಅಥವಾ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ವಾರಾಂತ್ಯಕ್ಕೆ ಮದುವೆ ಮಾತುಕತೆ ಚುರುಕುಗೊಳ್ಳಬಹುದು. ಅನಿವಾರ್ಯವಾಗಿ ಮನೆಯಲ್ಲಿರುವ ನಿರುಪಯುಕ್ತ ವಸ್ತುಗಳಿಗೆ ಮರುಜೀವ ನೀಡುವಿರಿ ಅಥವಾ ಮನೆಗೆ ಸುಣ್ಣ-ಬಣ್ಣ ಬಳಿಸುವ ಬಗ್ಗೆ ಚರ್ಚೆ. ವಾರಾಂತ್ಯದಲ್ಲಿ ಸಹೋದರ ಅಥವಾ ಸಹೋದರಿಯರಿಗೆ ತೊಂದರೆ. ಅದಕ್ಕಾಗಿ ಓಡಾಟ ಮತ್ತು ಖರ್ಚು. ನಿಮ್ಮನ್ನು ಮೈಗ್ರೆನ್ ಭಾದಿಸಬಹುದು.

ತುಲಾ – ಆತ್ಮಬಲ ಕಮ್ಮಿಯಾಗಿ ಮಾಡುವ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಕಮ್ಮಿ ಮತ್ತು ದ್ವಂದ್ವ ನಿಲುವುಗಳಿಂದಾಗಿ ಉದ್ಯೋಗದಲ್ಲಿ ಕಿರಿಕಿರಿ ಮತ್ತು ತೊಂದರೆಗೆ ಈಡಾಗುವಿರಿ. ಹಾಗಾಗಿಯೂ ಗುರುಬಲದಿಂದ ಕೊನೆಯಲ್ಲಿ ಎಲ್ಲವೂ ಒಳಿತಾಗುವುದು. ಬೆಂಬಿಡದೆ ಕಾಡುತ್ತಿರುವ ಖರ್ಚುಗಳಿಗೆ ಧನಾದಾಯದ ಮೂಲವನ್ನು ಹುಡುಕುವಿರಿ. ಈ ರಾಶಿಯ ನ್ಯಾಯವಾದಿಗಳು, ಕಲಾವಿದರೂ ಹಾಗು ಸರ್ಕಾರಿ ಉದ್ಯೋಗಸ್ಥರಿಗೆ ತೊಂದರೆ. ಮಳೆಯಿಂದಾಗಿ ಕಿರಿಕಿರಿ ಅನುಭವಿಸುವಿರಿ. ವೈಯಕ್ತಿಕ ವಲಯದಲ್ಲಿ ಪ್ರತಿಷ್ಠೆ ಹೆಚ್ಚೆಸಿಕೊಳ್ಳಲು ಪ್ರಯತ್ನಿಸುವಿರಿ. ಬಟ್ಟೆಗಳಿಗಾಗಿ ಹಣ ಖರ್ಚು. ಸ್ತೀಯರಿಂದ ಕಿರಿಕಿರಿ ಅನುಭವಿಸುವ ವಾರ.ವೃಶ್ಚಿಕ – ನಿಮ್ಮಲ್ಲಿರುವ ತೀಕ್ಷ್ಣತೆ ಹಾಗು ಸೂಕ್ಷ್ಮತೆ ಎರಡೂ ಈ ವಾರ ಕಳೆಗುಂದುವುದು. ಮೂಳೆಗಳ ಸಮಸ್ಯೆ ಕಾಣಿಸಿಕೊಳ್ಳುವುದು. ಕುಟುಂಬದಲ್ಲಿ ರಹಸ್ಯ ವಿಚಾರವೊಂದು ಚರ್ಚೆಯಾಗಲಿದೆ. ವಾರದ ಮಧ್ಯಬಾಗದಲ್ಲಿ ಸೋಮಾರಿತನ ನಿಮ್ಮನ್ನು ಕಾಡುವುದು. ಉದ್ಯೋಗಸ್ಥರಿಗೆ ಸ್ಥಾನದ ಅಭದ್ರತೆ ಕಾಡಲಿದೆ. ನಿಮ್ಮಲಿರುವ ನಾಯಕತ್ವ ಗುಣಗಳಿಂದ ಇತರರು ನಿಮ್ಮನ್ನು ಯಾವುದಾದರು ಒಂದು ಪದವಿಗೆ ನಿಮ್ಮ ಹೆಸರನ್ನು ಸೂಚಿಸುವರು. ಎಲ್ಲಾ ರೀತಿಯಲ್ಲೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ದ್ವಿಚಕ್ರ ವಾಹನದಿಂದ ಕಿರಿಕಿರಿ ಅಥವಾ ವಾಹನದ ನಿಲಿಗಡೆ ಜಾಗದಲ್ಲಿ ಕಿರಿಕಿರಿ. ಬಂಧು ಒಬ್ಬರು ಅನಾರೋಗ್ಯಕ್ಕೆ ಇಡಾಗುವರು. ವಾರಾಂತ್ಯದಲ್ಲಿ ಯಾವುದಾದರೂ ರಾಜಿ ಸಂಧಾನಕ್ಕೆ ಇಳಿಯಬೇಕಾದೀತು.ಧನಸ್ಸು – ಬಹುದಿನಗಳಿಂದ ಪ್ರಯತ್ನಿಸಿದ ಅಥವಾ ಚಿಂತಿಸಿದ ಕೆಲಸ ಕಾರ್ಯಗಳು ಕೈಗೂಡುವವು. ಸರ್ಕಾರ – ಸರ್ಕಾರಕ್ಕೆ ಸಂಭಂದಿಸಿದ ಅಥವಾ ಸರ್ಕಾರಿ ಅಧಿಕಾರಿಗಳಿಂದ ಲಾಭ. ಅಥವಾ ಕೆಲಸ ಕಾರ್ಯಗಳು ಕೈಗೂಡುವುದು. ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚುವುದು. ವಾರಾಂತ್ಯಕ್ಕೆ ದೇವಾಸ್ಥಾನಕ್ಕೆ ಭೇಟಿ. ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಡನೆ ಕಾಲ ಕಳೆಯುವಿರಿ. ಹಳೆಯ ವಸ್ತುಗಳ ಮಾರಾಟದ ಚರ್ಚೆಯಲ್ಲಿ ಪಾಲುಗೊಳ್ಳುವಿರಿ. ತಾಯಿಯ ಮೂಳೆ ಸಂಭಂಧಿ ಕಾಯಿಲೆ ಉಲ್ಬಣಿಸುವ ವಾರ. ಕ್ರಿಡಾಪಟುಗಳು, ಲಾಯರ್ ಗಳು, ವೈದ್ಯರು ಹಾಗೂ ಕಂಟ್ರಾಕ್ಟರ್ ಗಳಿಗೆ ಉತ್ತಮ ವಾರ. ಉದ್ಯೋಗಸ್ಥರಿಗೆ ಕಛೇರಿಯಲ್ಲಿ ಕೊಂಚ ಕಿರಿಕಿರಿ.

ಮಕರ – ವಾರದ ಆರಂಭದಲ್ಲಿ ಕುಟುಂಬ ವರ್ಗ ಮತ್ತು ಸ್ನೇಹಿತರೊಂದಿಗೆ ಆರಾಮಾವಾಗಿ ಉಲ್ಲಾಸ ಭರಿತವಾಗಿ ಕಾಲ ಕಳೆಯುವಿರಿ. ಆದರೆ ದಿನಕಳೆದಂತೆ ಉದ್ಯೋಗದಲ್ಲಿ ಸ್ಥಾನ ಭದ್ರತೆಯ ವಿಷಯವಾಗಿ ಚಿಂತೆ ಕಾಡುವುದು. ದೃಷ್ಠಿ ಸಮಸ್ಯೆ ಉಲ್ಬಣಿಸುವುದು. ನೇತ್ರ ವೈದ್ಯರನ್ನು ಕಾಣಬೇಕಾಗುವುದು. ಸಹೋದರ ಅಥವಾ ಸಹೋದರಿಗೆ ಪ್ರಯಾಣ ಸೌಖ್ಯ, ಆಸ್ತಿ ಕೊಳ್ಳುವ ಅಥವಾ ಮಾರುವ ವಿಷಯವಾಗಿ ಚರ್ಚೆಗಳು ನಡೆಯುವುದು. ಈ ವಾರದಲ್ಲಿ ನಿಮ್ಮಲ್ಲಿರುವ ದ್ವಂದ್ವಗಳಿಗೆ ಉತ್ತರ ಹುಡುಕಲು ಹೋಗಿ ವಿಫಲ ಪ್ರಯತ್ನ ನಿಮ್ಮದಾಗುವುದು. ಕುಟುಂಬದ ಸ್ರೀಯರಿಗಾಗಿ ಖರ್ಚು.ಕುಂಭ – ವ್ಯಾಪಾರಸ್ಥರಿಗೆ ಬರಬೇಕಾಗಿರುವ ಹೊಸ ಆರ್ಡರ್ ಅಥವಾ ಹಣಕಾಸಿನ ವಿಳಂಬವಾಗುವುದು. ಯಾವುದಾದರು ಲೈಸೈನ್ಸ್ ಗಾಗಿ ಪ್ರಯತ್ನ ಪಡುವಿರಿ ಅಥವಾ ಅದರ ಸಂಬಂಧಿ ವಿಷಯಗಳು ಚರ್ಚೆಯಾಗುವುದು. ವಾರದ ಮಧ್ಯ ಭಾಗ ಮತ್ತು ವಾರಾಂತ್ಯಕ್ಕೆ ಅಪನಂಬಿಕೆಗಳು ಹಾಗು ಸಂಶಯಗಳು ಹೆಚ್ಚುವುದು. ಉದ್ಯೋಗಸ್ಥರಿಗೆ ಶುಭ. ಹೋಮೆಯೋಪತಿ, ಆಯುರ್ವೇದದ ವೈದ್ಯರಿಗೆ ಶುಭ. ಕಬ್ಬಿಣದ ವ್ಯಾಪಾರ, ಕಂಟ್ರಾಟ್ಕರ್, ಶಿಕ್ಷಕರಿಗೆ ಹಾಗೂ ಮಾಧ್ಯಮದವರಿಗೆ ಶುಭ. ಮಕ್ಕಳ ಉನ್ನತ ವಿದ್ಯಾಭ್ಯಾಸದ ಚರ್ಚೆ ಆಗಲಿದೆ. ಅಥವಾ ಪ್ರಯತ್ನದಲ್ಲಿ ಇದ್ದರೆ ಅದಕ್ಕೆ ಪೂರಕವಾಗಿ ಸಹಾಯವೊಂದು ಒದಗಿ ಬರಲಿದೆ.ಮೀನ- ವಾರದ ಆರಂಭದಲ್ಲಿ ಹೆಚ್ಚಿನ ಕೆಲಸದ ಒತ್ತಡ ಹಾಗೂ ವೃಥಾ ವ್ಯರ್ಥ ಪ್ರಯಾಣ. ಸೊಂಕಿನಿಂದಾಗಿ ಹರಡುವ ಜ್ವರದಿಂದಾಗಿ ಬಳಲುವಿರಿ. ದೇವಾಸ್ಥಾನ ಅಥವಾ ಧಾರ್ಮಿಕ ಕಾರ್ಯಕ್ರಮ ಒಂದಕ್ಕೆ ಭೇಟಿ ಕೊಡುವಿರಿ. ಡೊನೆಷೆನ್ ರೂಪದಲ್ಲಿ ಏನ್ನಾನಾದರು ಕೊಡುವಿರಿ. ಇಲ್ಲವೇ ಸಂಕಲ್ಪ ಮಾಡಿವಿರಿ. ವೈದ್ಯರಿಂದ ಕೊಲೆಸ್ಟ್ರಾಲ್ ಪರಿಕ್ಷಿಸಿಕೊಳ್ಳಲು ಸಲಹೆ ಬರಬಹುದು. ಕಿಡ್ನಿಯಲ್ಲಿ ಕಲ್ಲು ಇಲ್ಲವೆ ಚಿಕನ್ ಗೂನ್ಯದಿಂದ ಅನಾರೋಗ್ಯಕ್ಕೆ ಇಡಾಗಬಹುದು. ಬಹುದಿನಗಳಿಂದ ವರ್ಗಾವಣೆಗಾಗಿ ಪ್ರಯತ್ನ ಪಡುತ್ತಿದ್ದವರಿಗೆ ಸಿಹಿಸುದ್ದಿಯೊಂದು ಮುಟ್ಟಲಿದೆ. ಮಕ್ಕಳ ವಿಚಾರವಾಗಿ ಮನೆಯಲ್ಲಿ ಮನಸ್ಥಾಪ. ಸುಬ್ರಮಣ್ಯನ ಆರಾಧನೆಯಿಂದ ಒಳಿತು.

 

  • ಹಣಕಾಸು ಸಂಸ್ಥೆಗಳ ವಂಚನೆ ಪ್ರಕರಣಗಳು ಬೆಳಕಿಗೆ ಬರುವುದು.
  • ಅನಿಲ ಅಥವಾ ಎಣ್ಣೆ ಸೋರಿಕೆಯ(ಜಲದಲ್ಲಿ) ಕಾರಣ ಜಲಚರಗಳಿಗೆ ಹಾನಿ.

ಜ್ಯೋತಿಷ: ರವಿ ಕೃ, ಬೆಂಗಳೂರು

Tags

Related Articles