ಬಾಲ್ಕನಿಯಿಂದ

ಪರಿಸರ ಮಾಲಿನ್ಯ ನಿವಾರಕ ತುಳಸಿ

ತುಳಸಿ ಗಿಡದಲ್ಲಿ ಎಲ್ಲಾ ಭಾಗಗಳೂ ಒಂದಲ್ಲ ಒಂದು ಔಷಧೀಯ ಗುಣ ಹೊಂದಿರುವಂತೆಯೇ ತುಳಸಿ ಎಲೆಗಳಲ್ಲಿರುವ ಒಂದು ಬಗೆಯ ವಿಶಿಷ್ಟ ಸುವಾಸನೆಯು ಕ್ರಿಮಿಕೀಟಗಳನ್ನು ವಿಕರ್ಷಣಗೊಳಿಸುವಂತಹ ಗುಣ ಹೊಂದಿದೆ.

ಆದ್ದರಿಂದ ತುಳಸಿ ಗಿಡಗಳು ಮನೆಯ ಸುತ್ತಮುತ್ತಲೂ ಹೆಚ್ಚಿನ ಪ್ರಮಾಣದಲ್ಲಿದ್ದರೆ ಸೊಳ್ಳೆಗಳ ಕಾಟ ಗಣನೀಯವಾಗಿ ಕಡಿಮೆಯಾಗುತ್ತದೆ.

ಪರಿಸರದಲ್ಲಿರುವ ಅನೇಕ ಬಗೆಯ ಸೂಕ್ಷ್ಮ ರೋಗಾಣುಗಳನ್ನು ನಾಶಗೊಳಿಸಿ ಪರಿಸರವನ್ನು ಶುದ್ಧೀಕರಿಸುವಲ್ಲಿ ತುಳಸಿ ಬಹಳಷ್ಟು ಸಹಕಾರಿಯಾಗಿದೆ.

ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ನೀರಿನಲ್ಲಿರುವ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತವೆ. ಗ್ರಹಣ ಕಾಲದಲ್ಲಿ ಮನೆಯೊಳಗೆ ಸಂಗ್ರಹಿಸಿದ ನೀರಿಗೆ ಹಿಂದಿನ ಕಾಲದಲ್ಲಿ ತುಳಸಿ ಎಲೆಗಳನ್ನು ಹಾಕಿಡುತ್ತಿದ್ದರು.

ಪಪ್ಪಾಯ ಬೀಜ ಗರ್ಭನಿರೋಧಕ ಗುಣ ಹೊಂದಿದೆಯಂತೆ!

#balkaninews #basil #environmentalpollution

Tags