ಬಾಲ್ಕನಿಯಿಂದಸಂದರ್ಶನ

ಬ್ರಹ್ಮಗಂಟು ಲಕ್ಕಿ ಈಸ್ ವೆರಿ ಲಕ್ಕಿ!!

ಮಲೆನಾಡಿನಲ್ಲಿ ಹುಟ್ಟಿ ಬೆಳೆದು ನಂತರ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, 2 ವರ್ಷ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡಿರುವ ಈ ಚಾಕ್ಲೆಟ್ ಬಾಯ್ ಹುಡುಗ ಭರತ್ ಬೋಪಣ‍್ಣ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಾಲೇಜ್ ಕನ್ಯೆಯರಿಂದ ಹಿಡಿದು ಎಲ್ಲಾ ಹೆಂಗೆಳೆಯರಿಗೂ ಫೆವರೀಟ್.

ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಕ್ಕಿ ಪಾತ್ರದಲ್ಲಿ ಮಿಂಚುತ್ತಿರುವ ಕೊಡಗಿನ ಚೆಲುವನಿಗೆ ಇದು ಎರಡನೇ ಧಾರವಾಹಿ. ಮೊದಲು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿರಿಜಾ ಕಲ್ಯಾಣ ಧಾರವಾಹಿಯಲ್ಲಿ ರಾಜಕುಮಾರ ಪಾತ್ರ ಮಾಡಿ ಸೈ ಅನಿಸಿಕೊಂಡಿದ್ದಾರೆ. ಮಾಡಲಿಂಗ್ ಕ್ಷೇತ್ರದಿಂದಲೇ ನನ್ನ ಪಯಣ ಶುರವಾಯಿತು, ನಟನೆ ಬಗ್ಗೆ ಆಸಕ್ತಿ ಇತ್ತು ಆದರೆ ನಾನೊಬ್ಬ ನಟ ಆಗುವೆನೆಂದು ಅಂದುಕೊಂಡಿರಲಿಲ್ಲ ಎನ್ನುವ ಭರತ್ ಗೆ ಅವರ ಗೆಳೆಯರು ತುಂಬಾ ಪ್ರೋತ್ಸಾಹ ನೀಡಿದ್ದರಂತೆ, ಹಾಗಾಗಿ ಅವರ ಮೂಲಕವೇ ನನಗೆ ಧಾರವಾಹಿ ಬಗ್ಗೆ ತಿಳಿಯಿತು ಆಮೇಲೆ ಆಡೀಷನ್ ನೀಡುವ ಮೂಲಕ ಆಯ್ಕೆಯಾದೆ ಎನ್ನುತ್ತಾರೆ.

ಶಾಲಾ ಕಾಲೇಜ್ ದಿನಗಳಲ್ಲಿ ಬ್ಯಾಡ್ಮಿಟನ್ ಹಾಗೂ ವಾಲಿಬಾಲ್ ಆಟವೆಂದರೆ ಭರತ್ ಗೆ ವಿಶೇಷ ಒಲವು ಅಷ್ಟೇ ಅಲ್ಲ ಹಲವಾರು ಡ್ಯಾನ್ಸ್ ಕಾರ್ಯಕ್ರಮಗಳನ್ನೂ ನೀಡಿದ್ದಾರೆ ಇಂಡಸ್ಟ್ರೀಗೆ ನನ್ನದು ಹೊಸ ಮುಖ ಆದರೂ ನನಗೆ ಗಿರಿಜಾ ಕಲ್ಯಾಣದಂತಹ ಪೌರಾಣಿಕ ಧಾರವಾಹಿ ಸಿಕ್ಕಿದ್ದು ಬಹಳ ಅಪರೂಪ ಮುಂದೆ ವಿಭಿನ್ನ ರೀತೀಯ ಪಾತ್ರ ಮಾಡಬೇಕೆಂಬ ಆಸೆಯಿದೆ ಎಂದು ಭರತ್ ತಮ್ಮ ಮನದಾಳದ ಮಾತನ್ನು ಹೇಳುವ ಮೂಲಕ ಭಾವುಕರಾದರು.

ಮೊದಲ ಬಾರಿ ಕ್ಯಾಮರಾ ಎದುರಿಸುವಾಗ ಫೈಟಿಂಗ್ ಸೀನ್ ಇತ್ತು, ತುಂಬಾ ಉತ್ಸುಕತೆಯಿತ್ತು ಅದಾದ ಮರುದಿನ ಕ್ಯಾಮರಾ ಎದುರಿಸುವಾಗ ನಾನು ಗಾಬರಿಗೊಂಡಿದ್ದೆ ಏನು ಮಾಡಬೇಕು ತೋಚುತ್ತಿರಲಿಲ್ಲ ಎನ್ನುವ ಭರತ್ ಗೆ ತಮಿಳು ಸಿನಿಮಾ ಆಫರ್ ಬಂದಿದೆಯಂತೆ ಆದರೆ ನಾನು ಅದರಲ್ಲಿ ನಟಿಸುತ್ತಿಲ್ಲ, ಈಗಾಗಲೇ ನಾನು ಧಾರವಾಹಿಯಲ್ಲಿ ಬ್ಯುಸಿಯಾಗಿದ್ದೇನೆ ಅದಲ್ಲದೆ ನನಗೆ ಮೊದಲು ಕನ್ನಡ ಸಿನಿಮಾದಲ್ಲೇ ನಟಿಸಬೇಕೆಂಬ ಹಂಬಲ ಎಂದು ತುಸು ನಗುವಿನೊಂದಿಗೆ ಹೇಳುತ್ತಾರೆ ಭರತ್. ಹಾಗಾಗಿ ಈಗ ಸ್ಪರ್ಶ ಚಿತ್ರದ ರೇಖಾ “ಡೆಮೋಪೀಸ್” ಚಿತ್ರಕ್ಕೆ ಹಣಹಾಕುತ್ತಿದ್ದು ಈ ಚಿತ್ರದಲ್ಲಿ ಭರತ್ ಬೋಪಣ್ಣ ನಾಯಕನಾಗಿ ಕಾಣಿಸಲಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕಾ ಮಲ್ನಾಡ್ ಹೀರೋಯಿನ್..

ಅಭಿನಯವೆಂದರೆ ಒಂದು ಪಾತ್ರವನ್ನು ಅರ್ಥ ಮಾಡಿಕೊಂಡು ನಟಿಸುವುದರ ಜೊತೆಗೆ ಆ ಪಾತ್ರಕ್ಕೆ ಜೀವ ತುಂಬುವುದು ಎನ್ನುವ ಭರತ್ ಗೆ ನಟನೆ ತುಂಬಾ ಕಲಿಸಿದೆಯಂತೆ, ನಟನೆ ನನ್ನಲ್ಲಿರುವ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಹಾಗೂ ಸಮಯಕ್ಕೆ ಬೆಲೆ ಕೊಡುವುದನ್ನು ಕಲಿಸಿದೆ ಇದರ ಜೊತೆಗೆ ತಾಳ್ಮೆಯನ್ನು ಕೂಡ ಕಲಿಸಿದೆ ಎಂದು ಹೇಳಲು ಮರೆಲಯಲಿಲ್ಲ. ಇವರಿಗೆ ಸುದೀಪ್, ದರ್ಶನ್, ಹಾಗೂ ಯಶ್ ಸ್ಪೂರ್ತಿ. ಭರತ್ ಹಾಗೂ ಲಕ್ಕಿಗೆ ತುಂಬಾ ವ್ಯತ್ಯಾಸವಿದೆಯಂತೆ. ಭರತ್ ತುಂಬಾ ಶಾಂತ ಹಾಗೂ ಮೌನ ಆದರೆ ಲಕ್ಕಿ ಅದಕ್ಕೆ ತದ್ವಿರುದ್ದ ಎನ್ನುವ ಇವರು ಬಿಡುವಿನ ಸಮಯದಲ್ಲಿ ಇವರು ಕುಟುಂಬದವರ ಜೊತೆ ಹಾಗೂ ಗೆಳೆಯರ ಜೊತೆ ಕಾಲ ಕಳೆಯಲು ಇಷ್ಟ ಪಡುತ್ತಾರೆ. ಭರತ್ ಅವರಿಗೆ ಅವರ ಕುಟುಂಬದವರು ಹಾಗೂ ಸ್ನೇಹಿತರೇ ಬೆನ್ನೆಲುಬು . ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಆಹಾರ ತಯಾರಿಸುವುದೆಂದರೆ ಭರತ್ ಗೆ ಬಲು ಇಷ್ಟ. ಈಗಷ್ಟೇ ಹೊಸ ಹೆಜ್ಜೆಯನಿಟ್ಟ ಭರತ್ ಬೋಪಣ‍್ಣ ಅವರಿಗೆ ಮುಂದೆ ಯಶಸ್ಸು ಸಿಗಲಿ.

ಸುಹಾನಿ. ಬಡೆಕ್ಕಿಲ

 

Tags

Related Articles

Leave a Reply

Your email address will not be published. Required fields are marked *